ಬ್ರಿಟನ್ ನಲ್ಲಿ ಇನ್ನೊಂದು ವಾರದಲ್ಲಿ ಕೋವಿಡ್ ವಿರುದ್ಧದ ಲಸಿಕೆ ಸಾರ್ವಜನಿಕವಾಗಿ ಲಭ್ಯವಾಗಲಿದೆ. ತರಾತುರಿಯಲ್ಲಿ ಅಲ್ಲಿನ ಸರಕಾರ ಫೈಜರ್ ಲಸಿಕೆಗೆ ಅನುಮತಿ ನೀಡಿದ್ದರ ಬಗ್ಗೆ ಟೀಕೆಗಳು ಕೇಳಿಬಂದಿವೆ. ಆದರೆ ಲಸಿಕೆಗೆ ಅನುಮತಿ ನೀಡುವ ನಿಟ್ಟಿನಲ್ಲಿ ಯಾವುದೇ ರೀತಿಯ ರಾಜಿಯನ್ನು ಮಾಡಿಕೊಂಡಿಲ್ಲ ಎಂದು ಅಲ್ಲಿನ ಸರಕಾರ ಹೇಳಿದೆ.
ಅಲ್ಟ್ರಾ ಕೋಲ್ಡ್ -70 ಡಿಗ್ರಿ ಸೆಲ್ಶಿಯಸ್ ಉಷ್ಣತೆಯಲ್ಲಿ ಇದನ್ನು ಸಂಗ್ರಹಿಸಿಡಬೇಕಾದ ಅಗತ್ಯ ಇರುವುದರಿಂದ ಇದರ ವಿತರಣೆಯೇ ಒಂದು ದೊಡ್ಡ ಸವಾಲು. (ಹೆಚ್ಚೂ ಕಡಿಮೆ ಅಂಟಾರ್ಟಿಕದ ಸರಾಸರಿ ಉಷ್ಣತೆ,-57 ರಿಂದ -93 ರ ಆಜೂಬಾಜೂ ) . ಫೈಜರ್ ಕಂಪೆನಿ ಈ ವರ್ಷ 50 ಮಿಲಿಯನ್ ಡೋಸ್ ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿರುವುದಾಗಿ ಹೇಳಿಕೊಂಡಿದೆ. 2021 ರ ವೇಳೆಗೆ 1.31 ಬಿಲಿಯನ್ ಡೋಸ್ ಲಭ್ಯವಾಗಲಿದೆ.
ಭಾರತಕ್ಕೆ ಬರುವುದೆಂದು
ಭಾರತದ ಮಟ್ಟಿಗೆ ಫೈಜರ್ ಲಸಿಕೆಯನ್ನು ಅತ್ಯಂತ ಕಡಿಮೆ ಉಷ್ಣತೆಯಲ್ಲಿ ಸಂಗ್ರಹಿಸಿ ರವಾನಿಸುವುದೇ ದೊಡ್ಡ ಸವಾಲುಗುತ್ತದೆ. ಹೀಗಾಗಿ ಉಳಿದ ಆಪ್ಶನ್ ಗಳತ್ತ ನೋಡಬೇಕಾಗುತ್ತದೆ.
ಸೆರಮ್ ಇನ್ಸ್ ಸ್ಟಿಟ್ಟೂಟ್ ಅಭಿವೃದ್ಧಿ ಪಡಿಸುತ್ತಿರುವ ಕೋವಿಶೀಲ್ಡ್ ವಾಕ್ಸಿನ್ ಇದೀಗ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ಈಗ ಅದು ತಿಂಗಳಿಗೆ 50 ರಿಂದ 60 ಮಿಲಿಯನ್ ಡೋಸ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು ಜನವರಿ ವೇಳೆಗೆ 100 ಮಿಲಿಯನ್ ಡೋಸ್ ಉತ್ಪಾದಿಸುವ ಗುರಿ ಹೊಂದಿದೆ.

ಭಾರತ್ ಬಯೋಟೆಕ್ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಆರಂಭಿಸಿದೆ.Zydus Cadila ಮೂರನೇ ಹಂತದ ಪ್ರಯೋಗಕ್ಕೆ ಅನುಮತಿ ಕೋರಿದೆ. ರಷ್ಯಾದ ಸ್ಪುಟ್ನಿಕ್ ಲಸಿಕೆ ಮುಂದಿನ ತಿಂಗಳು ಬಳಕೆಗೆ ಲಭ್ಯವಾಗಬಹುದು.