ದೀವಾರ್ ಎಂಬ ಹಿಂದಿ ಸಿನಿಮಾದ ಒಂದು ದೃಶ್ಯದಲ್ಲಿ ಅಮಿತಾಭ್ ಬಚ್ಚನ್ ಶಶಿಕಪೂರ್ ಗೆ ನನ್ ಹತ್ತಿರ ಕಾರಿದೆ ಬಂಗ್ಲೆ ಇದೆ ಬ್ಯಾಂಕ್ ಬ್ಯಾಲೆನ್ಸ್ ಇದೆ ನಿನ್ ಹತ್ರ ಏನಿದೆ ಅಂದಾಗ ಶಶಿಕಪೂರ್ ನನ್ ಹತ್ರ ತಾಯಿ ಇದಾರೆ ಅನ್ನುತ್ತಾರೆ .
ಮತ್ತೊಂದು ಸಿನಿಮಾದಲ್ಲಿ ಚಿತ್ರದ ನಾಯಕ ತನ್ನ ಕಡೆಯವನಿಗೆ ಇಂತಾ ಕಡೆ ಹೋಗು ಅಂತ ಹೇಳಿದಾಗ ಅವನು ಅಣ್ಣಾ ಅಲ್ಲಿ ವಿಲನ್ ಕಡೆಯವರು ನೂರು ಜನ ಇದಾರೆ ಅಂತ ಹೆದರಿ ಉತ್ತರಿಸುತ್ತಾನೆ ಆಗ ನಾಯಕ ಅವರ ಕಡೆ ನೂರು ಜನ ಇದ್ರೆ ಏನು ಹೋಗೋ ನಮ್ ಕಡೆ ದೇವರೇ ಇದಾನೆ ಎನ್ನುತ್ತಾನೆ . ಇಡೀ ಥಿಯೇಟರ್ ಕೇಕೇ ಶಿಳ್ಳೆ ಚಪ್ಪಾಳೆ ಹೊಡೆದು ಸಂಭ್ರಮಿಸುತ್ತದೆ.
ಸಿನಿಮಾದ ಕೆಲವೊಂದು ದೃಶ್ಯಗಳೇ ಹಾಗೆ ದಶಕಗಳು ಕಳೆದರೂ ಮನಸ್ಸಿನಲ್ಲುಳಿದುಬಿಡುತ್ತದೆ .
ಹೀಗೆ ಒಂದು ಸಿನಿಮಾದಲ್ಲಿ ರಘುರಾಮಯ್ಯ ಅಂತ ಒಬ್ಬ ವ್ಯಕ್ತಿ ಇರುತ್ತಾನೆ ಆ ವ್ಯಕ್ತಿ ಒಮ್ಮೆ ತನ್ನ ಸ್ನೇಹಿತನೊಂದಿಗೆ ಕುಂತಿದ್ದಾಗ ಒಬ್ಬ ಮಹಿಳೆ ತನ್ನ ಮಗುವನ್ನು ಎತ್ತಿಕೊಂಡು ಬಂದು ಅಣ್ಣಾ ನನ್ನ ಮಗುವಿಗೆ ಕ್ಯಾನ್ಸರ್ ಇದೆ ದಯಮಾಡಿ ಸಹಾಯ ಮಾಡಿ ಅಂತ ಕೇಳಿಕೊಳ್ಳುತ್ತಾಳೆ . ಸ್ನೇಹಿತ ಆಕೆಯ ಕಡೆ ಗಮನಕೊಡುವುದಿಲ್ಲ ಆದರೆ ರಘುರಾಮಯ್ಯ ತನ್ನ ಬಳಿ ಇದ್ದ ಮೂರು ಸಾವಿರ ರೂಗಳನ್ನೂ ಕೊಡುತ್ತಾನೆ ಆಕೆ ಧನ್ಯವಾದ ಹೇಳಿ ಅಲ್ಲಿಂದ ಹೊರಡುತ್ತಾಳೆ .
ಅಷ್ಟು ದುಡ್ಡು ಉದಾರ ಕೊಟ್ಟಿದ್ದನ್ನು ನೋಡಿ ಸಿಟ್ಟಾದ ಸ್ನೇಹಿತ ನಿನಗೇನಾದ್ರು ತಲೆಕೆಟ್ಟಿದ್ಯಾ ಅಂತ ಬಯ್ಯುತ್ತಾನೆ. ತಿಂಗಳು ಬಳಿಕ ಅದೇ ಸ್ಥಳದಲ್ಲಿ ರಘುರಾಮಯ್ಯ ಮತ್ತು ಸ್ನೇಹಿತ ಕುಳಿತಿರುತ್ತಾರೆ . ಸ್ನೇಹಿತ ಪತ್ರಿಕೆ ಓದುತ್ತಿರುತ್ತಾನೆ ಆ ಪತ್ರಿಕೆಯಲ್ಲಿ ಅದೇ ತಾಯಿ ಮಗುವಿನ ಫೋಟೋ ಪ್ರಕಟವಾಗಿರುತ್ತದೆ ಮತ್ತು ಅದರ ಕೆಳಗೆ ಈ ಚಿತ್ರದಲ್ಲಿನ ಹೆಂಗಸು ತನ್ನ ಮಗುವಿಗೆ ಖಾಯಿಲೆ ಇದೆಯೆಂದು ಸುಳ್ಳು ಹೇಳಿ ಹಣ ಬೇಡುತ್ತಿದ್ದಾಳೆ , ಸಾರ್ವಜನಿಕರು ಇದರ ಬಗ್ಗೆ ಜಾಗರೂಕರಾಗಿರಿ ಎಂದು ಬರೆದಿರುತ್ತಾರೆ .
ಸ್ನೇಹಿತ ಅದನ್ನು ರಘುರಾಮಯ್ಯರಿಗೆ ತೋರಿಸುತ್ತಾ ನೋಡಯ್ಯ ನೋಡು ಆವತ್ತು ನನ್ನ ಮಾತು ಕೇಳದೇ ಈ ಸುಳ್ಳು ಹೆಂಗಸಿಗೆ ದುಡ್ಡು ಕೊಟ್ಟಲ್ಲ ಅಂತ ತೋರಿಸುತ್ತಾನೆ. ಆಗ ರಘುರಾಮಯ್ಯ ಹೇಳುತ್ತಾರೆ ನನಗೆ ತುಂಬಾ ಖುಷಿಯಾಯ್ತು ಕಣಯ್ಯ ಆ ಮಗುವಿಗೆ ಕ್ಯಾನ್ಸರ್ ಇಲ್ವಲ್ಲ .
ಮತ್ತೊಂದು ದೃಶ್ಯದಲ್ಲಿ ಇದೇ ರಘುರಾಮಯ್ಯನವರಿಗೆ ತುಂಬಾನೇ ಹಣದ ಮುಗ್ಗಟ್ಟು ಉಂಟಾಗುತ್ತೆ, ಅವರು ಪರಿಚಯಸ್ಥರೊಬ್ಬರ ಮನೆಗೆ ಹೋಗುತ್ತಾರೆ . ಇವರನ್ನು ನೋಡಿದ ತಕ್ಷಣ ಅವರು ತನ್ನ ಹೆಂಡತಿ ಮಕ್ಕಳನ್ನು ಹತ್ತು ನಿಮಿಷ ಹೊರಗಿರುವಂತೆ ಹೇಳಿ , ಇವರನ್ನು ಬಂದ ವಿಷಯದ ಬಗ್ಗೆ ವಿಚಾರಿಸುತ್ತಾರೆ .
ರಘುರಾಮಯ್ಯ ತನಗೆ ತುರ್ತಾಗಿ ಐದು ಲಕ್ಷ ಹಣ ಸಾಲ ಬೇಕು ಎಂದು ಕೇಳುತ್ತಾರೆ . ವ್ಯಕ್ತಿ ತಕ್ಷಣ ಮನೆಯ ಬೀರುವಿನಿಂದ ಐದು ಲಕ್ಷ ತಂದು ಕೊಡುತ್ತಾರೆ . ಹಣ ಪಡೆ್ದ ರಘುರಾಮಯ್ಯ ‘ ನಾನು ಸಾಲ ಕೇಳಿದೆ ನೀವು ಇಲ್ಲ ಅನ್ನದೇ ಕೊಟ್ಟಿರಿ ‘ ಆದರೆ ನಿಮ್ಮ ಮನೆಯವರನ್ನು ಹೊರಗೆ ಯಾಕೆ ಕಳುಹಿಸಿದಿರಿ ಎಂದಾಗ , ವ್ಯಕ್ತಿ ಹೇಳುತ್ತಾರೆ ‘ ರಘುರಾಮಯ್ಯನವರೇ ನಿಮ್ಮನ್ನ ನಾನು ಯಾವತ್ತೂ ಈ ರೀತಿ ನೊಡಿರಲಿಲ್ಲ ನೀವು ಬಂದಾಗ್ಲೇ ನನಗೆ ಗೊತ್ತಾಯ್ತು ನೀವು ಹಣ ಕೇಳಕ್ಕೆ ಬಂದಿದೀರಿ ಅಂತ . ಮತ್ತೆ ನಾನು ಯಾಕೆ ಮನೆಯವರನ್ನ ಹೊರಗೆ ಕಳುಹಿಸಿದೆ ಅಂದ್ರೆ ನೀವು ಯಾವತ್ತೂ ಒಬ್ಬರ ಹತ್ತಿರ ಕೈ ಚಾಚಿಲ್ಲ . ಇಲ್ಲಿ ಯಾರೂ ಶಾಶ್ವತ ಅಲ್ಲ ಅಕಸ್ಮಾತ್ ನಾನು ಸತ್ತರೆ ನಾಳೆ ನನ್ನ ಹೆಂಡತಿ ಮಕ್ಕಳು ನಿಮ್ಮನ್ನ ದುಡ್ಡು ಕೇಳ್ಬಾರ್ದು ಅದಕ್ಕೆ ನಾನು ಅವರನ್ನು ಹೊರಗೆ ಕಳುಹಿಸಿ ನಿಮಗೆ ದುಡ್ಡು ಕೊಟ್ಟಿದ್ದು ಎನ್ನುತ್ತಾರೆ .
ನಿರ್ದೇಶಕರು ಸಿನಿಮಾಗೆ ಕತೆಯ ಜೊತೆ ಚಿತ್ರಕತೆ ರಚಿಸುವಾಗ ಈ ರೀತಿಯ ದೃಶ್ಯಗಳನ್ನು ಹೆಣೆಯುತ್ತಾರೆ. ಅವು ಚಿತ್ರರಸಿಕರನ್ನು ಸೀಟಿನಲ್ಲಿ ಹಿಡಿದಿಡುತ್ತವೆ ಮತ್ತು ಸಿನಿಮಾದ ಯಶಸ್ಸಿಗೆ ಕಾರಣವಾಗುತ್ತವೆ .

ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೇಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
ಅಂತಾ ವಿಶೇಷ ಬರಹ ಎಂದೇನೂ ಅನಿಸಲಿಲ್ಲ. ಓದು ಖುಷಿಯ ನ್ನೂ ಕೊಡಲಿಲ್ಲ…