ನಾಗಶ್ರೀ ನಾರಾಯಣ್
ವಿಕಲಚೇತನರಿಗೆ ಡಿಸೆಂಬರ್ 3 ರಿಂದ ಪ್ರಾರಂಭವಾಗುವ ಒಂದು ತಿಂಗಳ ಅವಧಿಯ ಫಿಟ್‌ನೆಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವ ದೃಷ್ಟಿಯಿಂದ ಸ್ಪ್ಯಾಸ್ಟಿಕ್ಸ್ ಸೊಸೈಟಿ ಆಫ್ ಕರ್ನಾಟಕ (ಎಸ್‌ಎಸ್‌ಕೆ) ವಿಶ್ವ ವಿಕಲಚೇತನರ ದಿನವಾದ ಡಿಸೆಂಬರ್ 3 ರಂದು ‘ಯೂನಿಟಿ ಫಿಟ್‌ನೆಸ್ ತಿಂಗಳು’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ. ಕರ್ನಾಟಕ ಸರ್ಕಾರದ ವಿಕಲಚೇತನರ ಇಲಾಖೆಯ ಆಯಕ್ತ ವಿ. ಎಸ್. ಬಸವರಾಜು ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕರ್ನಾಟಕದ ಸ್ಪಾಸ್ಟಿಕ್ಸ್ ಸೊಸೈಟಿ 30 ವರ್ಷಗಳಿಂದ ವಿಕಲಚೇತನರ ಅಭಿವೃದ್ಧಿಯಲ್ಲಿ ಕಾರ್ಯಪ್ರವೃತ್ತವಾಗಿದ್ದು ವಿಶೇಷ ಸಾಮರ್ಥ್ಯವಿರುವ ಮಕ್ಕಳೊಂದಿಗೆ ವ್ಯವಹರಿಸುವ ಅನೇಕ ಪೋಷಕರಿಗೆ ತರಬೇತಿ ನೀಡುತ್ತಿದೆ.
ಫಿಟ್‌ನೆಸ್ ಅನ್ನು ಅವರ ಜೀವನದ ಒಂದು ಅಂತರ್ಗತ ಮತ್ತು ಅವಿಭಾಜ್ಯ ಅಂಗವಾಗಿಸವಂತೆ ಜನರನ್ನು ಪ್ರೋತ್ಸಾಹಿಸುಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಸ್‌ಎಸ್‌ಕೆ ಮಂಡಳಿಯ ಸದಸ್ಯರು ಸ್ವಯಂಸೇವಕರಿಗೆ ಯೂನಿಟಿ ಫಿಟ್‌ನೆಸ್ ತಿಂಗಳಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು ಮತ್ತು ಮನೆ ಚಿಕಿತ್ಸೆಗಳು ಮತ್ತು ಇತರ ಫಿಟ್‌ನೆಸ್ ಚಟುವಟಿಕೆಗಳಲ್ಲಿ ವಿಶೇಷ ಸಾಮರ್ಥ್ಯವಿರುವ ಮಕ್ಕಳ ಪ್ರಯತ್ನಗಳಿಗೆ ಬೆಂಬಲ ನೀಡಲು ಕರೆ ನೀಡಿದರು.
ಕರ್ನಾಟಕದ ಸ್ಪಾಸ್ಟಿಕ್ಸ್ ಸೊಸೈಟಿ ಗ್ರಾಮೀಣ ಪ್ರದೇಶಗಳನ್ನು ವ್ಯಾಪಕವಾಗಿ ತಲುಪುವ ಮೂಲಕ ವಿಶೇಷ ಸಾಮರ್ಥ್ಯವಿರುವ ಮಕ್ಕಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಸ್ಪೂರ್ತಿದಾಯಕ ಕೆಲಸವನ್ನು ಮಾಡುತ್ತಿದೆ. ಪೋಷಕರು ಈ ಸಂಸ್ಥೆಯ ಸೇವೆಯನ್ನು ಪೂರ್ಣವಾಗಿ ಬಳಸಬೇಕೆಂದು ಬಸವರಾಜು ಈ ಸಂದರ್ಭದಲ್ಲಿ ಹೇಳಿದರು.
ಎಸ್‌ಎಸ್‌ಕೆ ನಿರ್ದೇಶಕಿ ರುಕ್ಮಿಣಿ ಕೃಷ್ಣಸ್ವಾಮಿ ಅವರು ವಿಕಲಚೇತನ ವಿದ್ಯಾರ್ಥಿಗಳು ಬೇಗ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಕಾರಣ ಲಸಿಕೆಯನ್ನು ಆದ್ಯತೆಯ ಮೇರೆಗೆ ಲಭ್ಯವಾಗುವಂತೆ ಮಾಡಲು ಸರ್ಕಾರವನ್ನು ಕೋರಿದರು.ತಿಂಗಳಿಗೊಮ್ಮೆ ನಡೆಯುವ ಈವೆಂಟ್‌ನಲ್ಲಿ ಎಸ್‌ಎಸ್‌ಕೆ ಸಂಸ್ಥೆಯ 250 ವಿದ್ಯಾರ್ಥಿಗಳು, ಪೋಷಕರು, ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು ಮತ್ತು ಸುಮಾರು 500 ಇತರ ಭಾಗವಹಿಸುವವರು . ಮುಂದಿನ ದಿನಗಳಲ್ಲಿ ಫಿಟ್‌ನೆಸ್ ವೀಡಿಯೊಗಳು, ಸಂದೇಶಗಳು ಮತ್ತು ಆರೋಗ್ಯ ಸಲಹೆಗಳನ್ನು ಪೋಸ್ಟ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಸೇರಲಿದ್ದಾರೆ.
ರವಿಶಂಕರ್, ಡಾ. ಎಲ್. ಸುಬ್ರಮಣ್ಯಂ, ಸುಬ್ರೋಟೊ ಬಾಗ್ಚಿ ಈ ವರ್ಚುಯುಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಸ್‌ಎಸ್‌ಕೆ ವಿದ್ಯಾರ್ಥಿಗಳು ಹಾಡು ಮತ್ತು ನೃತ್ಯದ ಮೂಲಕ ಜಾಗೃತಿ ಮೂಡಿಸುವ ಸಾಂಸ್ಕೃತಿಕ ಪ್ರದರ್ಶನವನ್ನು ನೀಡಿದರು.