ಫೈಜರ್ ಮತ್ತು ಬಯೋ ಎನ್ ಟೆಕ್ ಅಭಿವೃದ್ಧಿ ಪಡಿಸಿರುವ ಕೋವಿಡ್ ವ್ಯಾಕ್ಸಿನ್ ನ ಮೊದಲ ಬ್ಯಾಚ್ ಲಂಡನ್ ತಲುಪಿದ್ದು ಮಂಗಳವಾರದಿಂದ ಮೊದಲ ಸುತ್ತಿನ ವ್ಯಾಕ್ಸಿನ್ ನೀಡಿಕೆ ಆರಂಭವಾಗಲಿದೆ. ಮಹಾರಾಣಿ ಎಲಿಜಬೆತ್ (94) ಮತ್ತು ಅವರ ಪತಿ ಫಿಲಿಪ್ (99 ) ಮೊದಲಿಗರಾಗಿ ಲಸಿಕೆ ಪಡೆಯುವ ನಿರೀಕ್ಷೆ ಇದೆ. ಆದರೆ ಬಕ್ಕಿಂಗ್ ಹ್ಯಾಮ್ ಅರಮನೆ ಈ ಬಗ್ಗೆ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.
ಅಲ್ಲಿನ ಸರಕಾರ ಮೊದಲ ಹಂತದಲ್ಲಿ 80 ವರುಷ ಮೀರಿದವವರಿಗೆ ಲಸಿಕೆ ನೀಡುವುದಾಗಿ ಪ್ರಕಟಿಸಿದ್ದು ಬ್ರಿಟನ್ ರಾಣಿ ಈ ಸಾಲಿನಲ್ಲಿ ಬರುತ್ತಾರೆ.
ವ್ಯಾಕ್ಸಿನ್ ವಿರುದ್ಧವಾಗಿ ಕೆಲವರು ದನಿ ಎತ್ತಿರುವುದು ಅಲ್ಲಿನ ಸರಕಾರಕ್ಕೆ ತಲೆ ನೋವಾಗಿದೆ. ಮಹಾರಾಣಿ ಸೇರಿದಂತೆ ಪ್ರಮುಖರು ಮೊದಲ ಹಂತದಲ್ಲಿ ಲಸಿಕೆ ಸ್ವೀಕರಿಸಿದರೆ ಜನರಲ್ಲಿ ಇರುವ ಅನುಮಾನಗಳು ದೂರವಾಗಿ ಎಲ್ಲರೂ ಲಸಿಕೆ ಪಡೆಯಲು ಮುಂದೆ ಬರುತ್ತಾರೆಂದು ಸರಕಾರ ಭಾವಿಸಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಬೆಲ್ಜಿಯಮ್ ನಿಂದ 800000 ಡೋಸ್ ಗಳು ಬಂದಿದ್ದು ಇದರಿಂದ 20 ಮಿಲಿಯನ್ ಜನರಿಗೆ ಲಸಿಕೆ ಹಾಕಬಹುದಾಗಿದೆ .(ಚಿತ್ರ ಸೌಜನ್ಯ :ಟ್ವಿಟ್ಟರ್)