ಕೊರೋನ ವೈರಸ್‌ನ ಪ್ರಭಾವ ನಮ್ಮ ದೇಶದಲ್ಲಿ ಕಡಿಮೆಯಾಗಿದ್ದು, ಹೊಸ ವರ್ಷಕ್ಕೆ ಎಲ್ಲವೂ ಮೊದಲಿನಂತಾಗುತ್ತದೆ ಎಂಬ ಆಶಾ ಭಾವನೆ ಮೂಡುತ್ತಿದೆ. ಮದುವೆ ಮತ್ತು ಹಬ್ಬದ ಸಂದರ್ಭಗಳು ಮೊದಲಿನ ರೀತಿಯಲ್ಲಿ ಮರುಕಳಿಸುತ್ತಿವೆ. ಶಾಲಾ ಕಾಲೇಜುಗಳು ಆರಂಭವಾಗುವ ಶುಭ ಸೂಚನೆ ದೊರೆತಿದೆ.ಇಂತಹ ಸಂದರ್ಭದಲ್ಲಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಕಂಡುಬಂದ ರೂಪಾಂತರ ತಳಿ (Mutated) ಎಲ್ಲರಲ್ಲೂ ಮತ್ತೆ ಆತಂಕ ಮೂಡಿಸಿದೆ.
2020 ರ ಮಧ್ಯಭಾಗದಲ್ಲಿ ಕೋವಿಡ್ ಉಂಟುಮಾಡಿದ ಅನಾಹುತಗಳು ಮತ್ತೆ ಮರುಕಳಿಸುತ್ತದೆ ಎಂಬ ಭಯ ಎಲ್ಲರಲ್ಲೂ ಉಂಟುಮಾಡಿದೆ.
ಈಗಾಗಲೇ ಲಂಡನ್‌ನಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ. ಯುರೋಪ್‌ನ ಎಲ್ಲಾ ದೇಶಗಳಲ್ಲಿ ಮತ್ತೆ ಲಾಕ್‌ಡೌನ್ ಘೋಷಿಸುವ ಸ್ಥಿತಿ ನಿರ್ಮಾಣವಾಗಿದೆ. ಲಂಡನ್‌ನಿಂದ ಬೇರೆ ದೇಶಗಳಿಗೆ ಹೋಗುವ ವಿಮಾನ ಹಾರಾಟವನ್ನು ನಿಷೇಧಿಸಿದೆ. ಭಾರತದ ಸ್ಟಾಕ್‌ಮಾರ್ಕೆಟ್‌ನಲ್ಲಿ ಗಣನೀಯ ಕುಸಿತ ಕಂಡಿದೆ. ಹಾಗೆಂದ ಮಾತ್ರಕ್ಕೆ ಪ್ಯಾನಿಕ್ ಆಗಬೇಕಿಲ್ಲ.
ವೈರಸ್ ರೂಪಾಂತರ ಸಹಜ ಪ್ರಕ್ರಿಯೆ
ಈ ರೂಪಾಂತರಕ್ಕೆ ಏನು ಕಾರಣ? ಇದರ ಪರಿಣಾಮಗಳಾವುವು? ಇದು ಪ್ರಪಂಚದ ಮತ್ತು ನಮ್ಮ ದೇಶದ ಮೇಲೆ ಮಾಡುವ ಅನಾಹುತ ಎಷ್ಟು ಎಂಬುವ ಭಯ ಸಹಜವಾಗಿ ಎಲ್ಲರನ್ನು ಕಾಡುತ್ತಿದೆ.
2019ರ ಅಂತ್ಯದಲ್ಲಿ ಕಾಣಿಸಿದ ಕೋವಿಡ್-19 ವೈರಸ್ ಈಗಾಗಲೇ 23 ಬಾರಿ ರೂಪಾಂತರಗೊಂಡಿದೆ. ಅದರಲ್ಲಿ UUI202012/01 ಎಂಬ ತಳಿಯು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಕಂಡುಬಂದಿದ್ದು ಅದು ಹೆಚ್ಚು ಪ್ರಸರಣ (spreading) ಹೊಂದುವ ಶಕ್ತಿ ಹೊಂದಿದೆ. ವೈರಸ್‌ಗಳು ರೂಪಾಂತರಗೊಳ್ಳುವುದು ಸಹಜ ಪ್ರಕ್ರಿಯೆ. ಮಾನವನ ದೇಹದಲ್ಲಿ ಪ್ರತಿಕಾಯಗಳು (Resistance) ಉತ್ಪಾದನೆಯಿಂದ ವೈರಸ್‌ನ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ. ವೈರಸ್ ತನ್ನ ಉಳಿವಿಗಾಗಿ ರೂಪಾಂತರಗೊಳ್ಳುತ್ತದೆ.
ವೈರಸ್ RNA ನ ಸ್ಪೈಕ್ ಪ್ರೋಟೀನ್‌ನ 69/70 ಮತ್ತು 149/150 ಸ್ಥಾನದಲ್ಲಿ ಅಳಿಸಿದ (deletion) ಪರಿಣಾಮದಿಂದಾಗಿ ಈ ರೂಪಾಂತರಗೊಂಡ ವೈರಸ್ ಜನ್ಮ ತಾಳಿದೆ.ಆದರೆ ಇದು ಹಳೆಯ ಕೋವಿಡ್-19 ಗಿಂತ ಹೆಚ್ಚು ಹಾನಿಕಾರಕ ಎಂದು ಕಂಡುಬಂದಿಲ್ಲ. ರೂಪಾಂತರ ಗೊಳ್ಳುವ ವೈರಸ್ ಗಳು ಹಿಂದಿನ ಅವತಾರದಷ್ಟು ಶಕ್ತಿಯುತವಾಗಿರುವುದು ಹಿಂದಿನ ಘಟನೆಗಳಲ್ಲಿ ಸಾಬೀತಾಗಿಲ್ಲ. ಆದರೆ ರೂಪಾಂತರಗೊಂಡಿರುವ ವೈರಸ್ ತನ್ನ ಹಳೆಯ ಅವತಾರಕ್ಕಿಂತ ಶೇಕಡ 75ರಷ್ಟು ಹೆಚ್ಚು ಪ್ರಸರಣ ವೇಗ ಹೊಂದಿದ್ದು, ಹಳೆಯ ವೈರಸ್‌ಗಿಂತ ಹೆಚ್ಚು ಸೌಮ್ಯ ಎಂದು ಅಂದಾಜಿಸಲಾಗಿದೆ. ರೋಗಿಗಳ ಮತ್ತು ವೈರಸ್ ಜಿನೋಮ್ ಡಾಟಾ ಅಧ್ಯಯನದ ಹೆಚ್ಚಿನ ವಿವರಗಳು ಈ ವಿಷಯದಲ್ಲಿ ಇನ್ನಷ್ಟೆ ದೊರಕಬೇಕಿದೆ.
ಆಟ ಮುಗಿದಿಲ್ಲ.ಹಾಗೆಂದು ಭೀತಿ ಪಡಬೇಕಿಲ್ಲ
ನಾವಂದುಕೊಂಡಂತೆ ಕೋವಿಡ್-19 ರ ಆಟ ಮುಗಿಯಿತು ಮತ್ತು ಎಲ್ಲವೂ ಮೊದಲಿನಂತಾಗುತ್ತದೆ ಎಂದು ಭಾವಿಸುವವರಿಗೆ ಇದು ಎಚ್ಚರಿಕೆಯ ಕರೆಗಂಟೆ.
ಒಟ್ಟಾರೆ ಈ ರೂಪಾಂತರಗೊಂಡ ವೈರಸ್‌ನ ಪರಿಣಾಮಗಳ ಸಾರಾಂಶ ಈ ಕೆಳಗಿನಂತಿದೆ.
ಹೊಸ ವೈರಸ್‌ನ ತಳಿಯು ಹಳೆಯ ವೈರಸ್‌ಗಿಂತ ಸೌಮ್ಯ ಎಂದು ಅಂದಾಜಿಸಲಾಗಿದೆ.
ಹೊಸ ತಳಿಯು ಹೆಚ್ಚು ಪ್ರಸರಣ ಶಕ್ತಿ ಹೊಂದಿದೆ.
ಈಗಾಗಲೇ ಕೋವಿಡ್-೧೯ ವೈರಸ್‌ನಿಂದ ಬಾಧೆಗೊಳಗಾಗಿರುವವರಿಗೆ ಈ ವೈರಸ್ ಯಾವುದೇ ತೊಂದರೆಯನ್ನುಂಟುಮಾಡುವುದಿಲ್ಲ ಎಂದು ಭಾವಿಸಲಾಗಿದೆ.
ಇನ್ನಷ್ಟು ಕಾಲ ನಿಯಮ ಪಾಲನೆ ಅಗತ್ಯ
ಲಾಕ್‌ಡೌನ್ ತಡೆಯುವಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಅನಿವಾರ್ಯ.2020ರಲ್ಲಿ ಅನುಸರಿಸಿದ ಜೀವನ ಶೈಲಿಯನ್ನು 2021ರಲ್ಲೂ ಇನ್ನೂ ಕೆಲ ಕಾಲ ಮತ್ತೆ ಮುಂದುವರೆಸುವುದು ಅತಿ ಅವಶ್ಯಕ.ಆದರೆ ಮತ್ತೊಮ್ಮೆ ಲಾಕ್‌ಡೌನ್ ಘೋಷಿಸುವುದು ಮತ್ತು ಶಾಲಾಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಂದರ್ಭ ಉದ್ಭವಿಸಲಾರದು.
ಸಮಯೋಚಿತ ಮಾಹಿತಿ….ವಂದನೆಗಳು Kannadapress….Thank you Sir.
Tq gp
Very informative.
Good information 👍
Very informative
Nice and true information. But people should follow strict preventive measures for still more time
Very educative and useful article. Thanks to the author for enlightenment.
Very informative sir, thank you..
Good information, Dr. Thanks 👍
ಕೋವಿಡ್ 19 ಕಾಟ ಮುಗಿದೇ ಹೋಯಿತು ಇನ್ನು ನಿರಾಳವಾಗಿ ಜೀವನ ನಡೆಸಬಹುದು ಅಂತ ಜನ ನೆಮ್ಮದಿಯ ನಿಟ್ಟುಸಿರು ಬಿಡುವಾಗ
ಮತ್ತೆ ಅದು ನಮ್ಮನ್ನು ಬೆಂಬಿಡದ ಭೂತ ವಾಗಿ ಕಾಡುತಿದೆ ಎನ್ನುವ ವಿಷಯ ಕೇಳಿ ಸ್ವಲ ಭಯದ ವಾತಾವರಣ ಸೃಷ್ಟಿ ಯಾದ ಈ ಸಮಯದಲ್ಲಿ ನಿಮ್ಮ ಲೇಖನ ತುಂಬಾ ಸಹಕಾರಿಯಾಗಿದೆ. ಸ್ಪಷ್ಟವಾಗಿ ಮಾಹಿತಿ ನೀಡಿ. ಸ್ವಲ್ಪ ನೆಮ್ಮದಿಯ ಪರಿಸ್ಥಿತಿ ಉಂಟಾಗುವಂತೆ ಮಾಡಿದಕ್ಕಾಗಿ ಧನ್ಯವಾದಗಳು. GP. ಸರ್. ಇನ್ನು ಇನ್ನು ಲೇಖನಗಳು ನಿಮ್ಮಿಂದ ಬರಲಿ. 🙏🙏🌹
ಧನ್ಯವಾದಗಳು.
ಮತ್ತೇನೋ ಅಂತ ಗಾಬರಿಯಾದ ಜನರಿಗೆ ಧೈರ್ಯದಿಂದ ಇರುವಂತೆ ಮಾಡುವ ಲೇಖನ. ಧೈರ್ಯದ ಜೊತೆಗೆ ಎಚ್ಚರಿಕೆಯನ್ನು ಹೇಳಿದ ಲೇಖನ. ಸೂಪರ್ ಜಿ.ಪಿ
ಉತ್ತಮ ಮಾಹಿತಿ..
ಧನ್ಯವಾದಗಳು ಸಾರ್.ಸರಿಯಾದ ಸಮಯಕ್ಕೆ ಜನರಿಗೆ ಭಯ ಪಡದೇ ಸರಿಯಾದ ಕ್ರಮಗಳನ್ನು ಪಾಲಿಸಲು ಅಗತ್ಯ ಸಲಹೆ ನೀಡಿದ್ದೀರಿ ನಿಜವಾಗಿಯೂ ಆತಂಕ ದೂರವಾಯಿತು ನಿಮ್ಮ ಲೇ ಖನ ಓದಿ. ಇದು ಎಲ್ಲ ಜನರು ತಿಳಿದುಕೊಳ್ಳುವುದು ಅತ್ಯವಶ್ಯ
This is not New in human history. It occur and recur at every 100 years. We have to adopt local traditional life style to control it.
First and foremost I’d to fast for two days a week on simple and satwic food.
Thanks for information.
G. Padma
Very good information. Helps a lot at this situation