ಇಂದು ನಾಡಿನಾದ್ಯಂತ ವೈಕುಂಠ ಏಕಾದಶಿಯ ಸಂಭ್ರಮ. ಮುಂಜಾನೆಯಿಂದಲೇ ಭಕ್ತರು ದೇವಾಲಯಗಳಿಗೆ ಆಗಮಿಸಿ ಗೋವಿಂದನ ದರ್ಶನ ಪಡೆಯುತ್ತಿದ್ದಾರೆ. ಎಲ್ಲಾ ದೇವಾಲಯಗಳಲ್ಲೂ ವೈಕುಂಠ ದ್ವಾರಗಳನ್ನು ನಿರ್ಮಿಸಲಾಗಿದೆ.
ಈ ಬಾರಿ ಕೋವಿಡ್ ಕಾರಣದಿಂದ ಎಲ್ಲೆಡೆಯೂ ವಿಶೇಷ ಎಚ್ಚರಿಕೆ ವಹಿಸಲಾಗಿದೆ. ಕೆಲವೆಡೆ ಉಚಿತ ಮಾಸ್ಕ್ ಗಳನ್ನು ವಿತರಿಸಲಾಗುತ್ತಿದೆ.ದೇಹದ ಉಷ್ಣತೆಯ ಪರೀಕ್ಷೆಯನ್ನು ನಡೆಸಲಾಗುತ್ತಿದೆ.
ಬೆಂಗಳೂರಿನ ಹೇಮಚಂದ್ರ ಸಾಗರ ಕಲ್ಯಾಣ ಮಂಟಪದ ಆವರಣದಲ್ಲಿರುವ ಶ್ರೀನಿವಾಸ ದೇವಾಲಯದಲ್ಲಿ ಬೆಳಿಗಿನ ಜಾವ 5 ಗಂಟೆಯಿಂದಲೆ ಭಕ್ತಾದಿಗಳು ಸಾಲು ಗಟ್ಟಿ ನಿಂತು ಭಗವಂತನ ದರ್ಶನ ಪಡೆದರು. ಕಳೆದ 40 ವರ್ಷಗಳಿಂದ ಈ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಧಾನ ಅರ್ಚಕ ವಾಸುದೇವ ಭಟ್ಟರ್ ಮತ್ತು ಅವರ ಪುತ್ರ ಕೃಷ್ಣ ಸೇರಿದಂತೆ ಇಡೀ ಕುಟುಂಬ ಈ ಆಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತದೆ. ಇಲ್ಲಿನ ವೈಕುಂಠ ಏಕಾದಶಿಯ ಫೋಟೋ ಆಲ್ಬಂ ಇಲ್ಲಿದೆ.
ಈ ವರ್ಷ ವೈಕುಂಠ ಏಕಾದಶಿಯ ದಿನವೆ ಕ್ರಿಸ್ ಮಸ್ ಕೂಡ ಬಂದಿದೆ. ಅಂದ ಹಾಗೆ 2020 ಎರಡು ವೈಕುಂಠ ಏಕಾದಶಿಗಳಿಗೆ ಸಾಕ್ಷಿ ಆಗಿದೆ. ಈ ವರುಷದ ಆರಂಭದಲ್ಲಿ ಅಂದರೆ ಜನವರಿ 5ರಂದು ವೈಕುಂಠ ಏಕಾದಶಿ ಆಚರಿಸಲಾಗಿತ್ತು.
ದರ್ಶನ ವಾಯ್ತು.
🙏🙏🙏🙏🙏
ಮನೆಯಲ್ಲಿ ಕುಳಿತ ನಮಗೆ ಗೋವಿಂದನ ದರ್ಶನ ಮಾಡಿಸಿದ ಲೇಖಕರಿಗೆ ಧನ್ಯವಾದಗಳು .
ಮನೆ ಯಿಂದಲೇ ಶ್ರೀ ನಿವಾಸನ ದರುಶನ ಮಾಡಿಸಿ ದ ನಿಮಗೆ ವಂದನೆಗಳು.