ಇಂದಿಗೆ ಸರಿಯಾಗಿ ಒಂದು ವಾರಕ್ಕೆ ಅಂದರೆ ಸಂಕ್ರಾಂತಿ ಹಬ್ಬ ಮುಗಿದ ಎರಡೇ ದಿನಕ್ಕೆ ಭಾರತದಲ್ಲಿ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ಕೆ ಚಾಲನೆ ಸಿಗಲಿದೆ. ಜನವರಿ 16ರಿಂದ ಭಾರತಾದ್ಯಂತ ಲಸಿಕೆ ಹಾಕುವ ಕೆಲಸ ಶುರು. ಇದು ವಿಶ್ವದ ಅತಿದೊಡ್ಡ ಲಸಿಕೆ ಹಾಕುವ ಕಾರ್ಯಕ್ರಮವಾಗಲಿದೆ.
ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಮೊದಲ ಹಂತದಲ್ಲಿ ಪೌರ ಕಾರ್ಮಿಕರು ಸೇರಿದಂತೆ ಆರೋಗ್ಯ, ಪೊಲೀಸ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿರುವ ಕೊರೋನಾ ಸೇನಾನಿಗಳು ವ್ಯಾಕ್ಸಿನ್ ಪಡೆಯಲಿದ್ದಾರೆ. ಇವರ ಸಂಖ್ಯೆ ಅಂದಾಜು 3ಕೋಟಿ. ಎರಡನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರು ಹಾಗೂ ಕೆಲವು ರೋಗದಿಂದ ಬಳತ್ತಿರುವವರಿಗೆ ಆದ್ಯತೆ ನೀಡಲಾಗುವುದು. ಇವರ ಸಂಖ್ಯೆ ಅಂದಾಜು 27 ಕೋಟಿ.
ಕಳೆದವಾರ ಕೋವಿಶಿಲ್ಡ್ ಮತ್ತು ಕೋ ವಾಕ್ಸಿನ್ ಬಳಕೆಗೆ ಭಾರತ ಅನುಮತಿ ನೀಡಿತ್ತು
👍
ಆದಷ್ಟು ಬೇಗ ಎಲ್ಲರಿಗೂ ಕೊವಿಡ್ ಲಸಿಕೆ ದೊರೆತು ಇಡೀ ದೇಶ ವೆ ರೋಗ ಮುಕ್ತ, ಭಯಮುಕ್ತ ವಾಗಲಿ.👍