19.4 C
Karnataka
Sunday, November 24, 2024

    ವೃತ್ತಿಯಲ್ಲಿ ವೈದ್ಯ ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದ

    Must read

    ಬಳಕೂರು ವಿ.ಎಸ್ ನಾಯಕ

    ಎಲ್ಲೆಲ್ಲೂ ಸೊಬಗಿದೆ ಎಲ್ಲೆಲ್ಲೂ ಸೊಗಸಿದೆ …. ಯಕ್ಷಗಾನದ ಹಾಡನ್ನು ಕೇಳಿದರೆ ಸಾಕು ಒಂದು ಕ್ಷಣ ನಮ್ಮ ಮನಸ್ಸು ಅತ್ತ ಕಡೆಗೆ ಹೊರಳುತ್ತದೆ. ಹಲವಾರು ವ್ಯಕ್ತಿಗಳು ಯಕ್ಷಗಾನಕ್ಕೆ ಮನಸೋತಿದ್ದಾರೆ. ಕರಾವಳಿಯ ಯಕ್ಷಗಾನ ಕಲೆಯು ಸಾಮಾನ್ಯವಾಗಿ ಎಲ್ಲರನ್ನೂ ಆಕರ್ಷಿಸುತ್ತದೆ. ಇದರ ಬಗ್ಗೆ ಆಸಕ್ತಿ ಇರುವವರು ಸಾಮಾನ್ಯವಾಗಿ ಯಕ್ಷಗಾನವನ್ನು ನೋಡುತ್ತ ಕೇಳುತ್ತ ಸಾಗುತ್ತಿರುವುದು ಸಹಜ.

    ಇಲ್ಲೊಬ್ಬರು ವೃತ್ತಿಯಲ್ಲಿ ಹೋಮಿಯೋಪತಿ ಡಾಕ್ಟರ್ . ಆದರೆ ಅವರನ್ನು ಸೆಳೆದಿದ್ದು ಯಕ್ಷಗಾನ ಕಲೆ. ವೈದ್ಯ ಸೇವೆಯನ್ನು ಮಾಡುತ್ತಾ ಯಕ್ಷಗಾನದಲ್ಲಿ ಕರಗತರಾಗಿ ಹಲವು ವಿಭಿನ್ನ ವಿಶೇಷವಾದ ಪಾತ್ರಗಳನ್ನು ಮಾಡಿದ್ದಾರೆ. ಇವರ ರಂಗಪ್ರವೇಶ ಪ್ರೇಕ್ಷಕರನ್ನು ಒಂದು ಕ್ಷಣ ಭಾವಪರವಶರನ್ನಾಗಿಸುತ್ತದೆ. ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಕುಣಿಯುವ ದೃಶ್ಯ ಅದ್ಭುತ. ಯಕ್ಷಗಾನದಲ್ಲಿ ಬಹಳ ಆಸಕ್ತಿಯನ್ನು ಹೊಂದಿರುವ ಇವರು ಹಲವಾರು ರೀತಿಯ ಪಾತ್ರಗಳನ್ನು ವಹಿಸಿದ್ದಾರೆ ನಯವಾದ ಮಾತುಗಾರಿಕೆ ವಿಶೇಷವಾದ ಭಾವಾಭಿನಯ ಇವರ ವಿಶೇಷ.

    ಇವರೇ ಡಾಕ್ಟರ್ ಶ್ರೀಪಾದ ಹೆಗಡೆ . ವೃತ್ತಿಯಲ್ಲಿ ಹೋಮಿಯೋಪತಿ ವೈದ್ಯರು ಆದರೆ ಯಕ್ಷಗಾನದಲ್ಲಿ ಅಪಾರವಾದ ಆಸಕ್ತಿ. ಪ್ರತಿಯೊಬ್ಬರು ಒಂದೊಂದು ರೀತಿಯ ಹವ್ಯಾಸವನ್ನು ರೂಢಿಸಿಕೊಂಡ ಹಾಗೆ ಇವರು ಆಯ್ಕೆ ಮಾಡಿಕೊಂಡಿದ್ದು ಯಕ್ಷಗಾನ. ಬಾಲ್ಯದಿಂದಲೇ ಯಕ್ಷಗಾನದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿದ ಇವರಿಗೆ ಆಗಿನ ಕಾಲದ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಕೆರೆಮನೆ ಶಂಭು ಹೆಗಡೆ ಮಹಾಬಲ ಹೆಗಡೆ ಚಿಟ್ಟಾಣಿ ರಾಮಚಂದ್ರ ಹೆಗಡೆ ಇಂತಹ ಮಹೋನ್ನತ ಕಲಾವಿದರೇ ಸ್ಫೂರ್ತಿಯಾದರು.

    ಯಕ್ಷಗಾನದಲ್ಲಿ ಅಪರೂಪವೆನಿಸಿದ ತೆರೆಯ ಮರೆಯ ಪಾತ್ರವಾದ ತಟ್ಟಿ ವೀರಭದ್ರ ವೇಷವನ್ನು ಧರಿಸಿ ನಿಂತರೆಂದರೆ ಒಂದು ಕ್ಷಣ ಎಲ್ಲರೂ ಚಕಿತರಾಗಬೇಕು. ಆ ಪಾತ್ರದ ಅಬ್ಬರದ ಪ್ರವೇಶ ಆರ್ಭಟ ದೊಂದಿಗೆ ಸಭೆಯ ಮಧ್ಯದಲ್ಲಿ ನಡೆದು ಬರುವಾಗ ದೊಂದಿ ಬೀಸುತ್ತ ಪ್ರವೇಶಿಸುವ ವೈಖರಿಗೆ ಬೆರಗಾಗಲೇಬೇಕು. ರುದ್ರ ಮುಖವರ್ಣಿಕೆ, ಆರ್ಭಟ ಬೆರಗುಗೊಳಿಸುವ ವೇಷಭೂಷಣಗಳಿಂದ ಗಮನಸೆಳೆಯುವ ಶ್ರೀಪಾದ ಹೆಗಡೆ ಯವರು ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.

    ಬೆಂಗಳೂರಿನಲ್ಲಿ ತಮ್ಮ ಕೆಲಸದ ಒತ್ತಡದ ನಡುವೆ ತಮ್ಮ ಹವ್ಯಾಸದ ಮೂಲಕ ತಮ್ಮೂರಿನೊಂದಿಗೆ ಸಂಪರ್ಕವನ್ನು ಜೀವಂತ ಇರಿಸುವ ಇಂತಹ ಅನೇಕರು ನಮ್ಮ ನಡುವೆ ಇರುವುದು ನಮಗೆ ಸಂತೋಷವನ್ನು ತರುತ್ತದೆ. ಇವರು ನಿರ್ವಹಿಸಿದ ಹಲವಾರು ಯಕ್ಷಗಾನ ಪಾತ್ರಗಳು ಇವತ್ತಿಗೂ ಕೂಡ ಯಕ್ಷಗಾನ ಆಸಕ್ತರಿಗೆ ದೊಡ್ಡ ಉಡುಗೊರೆ. ಇವರ ಇಂತಹ ಉದಾತ್ತ ಸೇವೆಯನ್ನು ಪರಿಗಣಿಸಿ ಹಲವಾರು ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಇವರ ಯಕ್ಷಗಾನ ಸೇವೆಯನ್ನು ಗಮನಿಸಿದ ಹಲವಾರು ಸಂಘಸಂಸ್ಥೆಗಳು ಅವರನ್ನು ಗೌರವಿಸಿವೆ. ಇವರ ಇಂತಹ ಕಾಯಕ ಎಲ್ಲರಿಗೂ ಮಾದರಿಯಾಗಲಿ.

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

    spot_img

    More articles

    1 COMMENT

    1. Very interesting , It is not easy for a doctor to be a Yakshagana artist . Dedicated time for practising needs to be allocated . As explained in the article , when there is a will there is a way . Hats off to the doctor . thanks to Sri Nayak and to Kannada press for introduction of such a special personalities

    LEAVE A REPLY

    Please enter your comment!
    Please enter your name here

    Latest article

    error: Content is protected !!