21.5 C
Karnataka
Saturday, September 21, 2024

    ಜುಲೈ 7, 8ರಂದು ಸಿಇಟಿ ಪರೀಕ್ಷೆ

    Must read

    ಪ್ರಸಕ್ತ 2021ನೇ ಸಾಲಿನ ವೃತ್ತಿಪರ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಜುಲೈ 7 ಮತ್ತು 8ರಂದು ನಡೆಯಲಿದ್ದು, ಪರೀಕ್ಷಾ ವೇಳಾಪಟ್ಟಿಯನ್ನು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಶನಿವಾರ ಪ್ರಕಟಿಸಿದ್ದಾರೆ.

    ವೇಳಾಪಟ್ಟಿ ಹೀಗಿದೆ:

    7-7-2021 ಬುಧವಾರ ಬೆಳಗ್ಗೆ 10.30ರಿಂದ 11.50: ಜೀವವಿಜ್ಞಾನ
    7-7-2021 ಬುಧವಾರ ಮಧ್ಯಾಹ್ನ 2.30ರಿಂದ 3.50: ಗಣಿತ
    8-7-2021 ಗುರುವಾರ ಬೆಳಗ್ಗೆ 10.30ರಿಂದ 11.50: ಭೌತ ವಿಜ್ಞಾನ
    8-7-2021 ಗುರುವಾರ ಮಧ್ಯಾಹ್ನ 2.30ರಿಂದ 3.50: ರಸಾಯನವಿಜ್ಞಾನ
    9-7-2021 ಶುಕ್ರವಾರ ಬೆಳಗ್ಗೆ 11.30ರಿಂದ 12.30: ಕನ್ನಡ (ಬೆಂಗಳೂರಿನಲ್ಲಿ ಮಾತ್ರ)

    ಕನ್ನಡ ಪರೀಕ್ಷೆಯನ್ನು ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳು ಬರೆಯಲಿದ್ದಾರೆ ಎಂದ ಡಿಸಿಎಂ ಅವರು; ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಂಜಿನಿಯರಿಂಗ್‌, ಕೃಷಿ ವಿಜ್ಞಾನ, ಪಶುವೈದ್ಯ, ಯೋಗ ಮತ್ತು ನ್ಯಾಚುರೋಪಥಿ, ಬಿ ಫಾರ್ಮ, ಫಾರ್ಮ-ಡಿ ಸೇರಿ ಇನ್ನಿತರೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಆಯೋಜಿಸಿದೆ.

    ರಾಜ್ಯದಲ್ಲಿ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆ, ಸಿಬಿಎಸ್‌ಸಿ 12ನೇ ತರಗತಿ ಪರೀಕ್ಷೆ ಹಾಗೂ ಇತರೆ ರಾಜ್ಯಗಳ ಸಿಇಟಿ ಪರೀಕ್ಷೆಗಳ ವೇಳಾಪಟ್ಟಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಾಜ್ಯದ ಸಿಇಟಿ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

    ರಾಜ್ಯದ ದ್ವಿತೀಯ ಪಿಯಸಿ ಪರೀಕ್ಷೆ ಮೇ 24ರಿಂದ ಜೂನ್‌ 10ರವರೆಗೆ, ಸಿಬಿಎಸ್‌ಸಿ 12ರ ತರಗತಿ ಪರೀಕ್ಷೆ ಮೇ 4ರಿಂದ ಜೂನ್‌ 2ರವರೆಗೆ, ಪಶ್ಚಿಮ ಬಂಗಾಳದ ಸಿಇಟಿ ಜುಲೈ 11ರಂದು, ಜೆಇಇ (ಮೇನ್)‌ ಫೆಬ್ರವರಿ 23ರಿಂದ ಮೇ 28ರವರೆಗೆ, ನೀಟ್‌ ಪರೀಕ್ಷೆ ಜುಲೈನಲ್ಲಿ, ಜೆಇಇ (ಅಡ್ವಾನ್ಸ್)‌ ಜುಲೈ 3, ಗೋವಾ ಸಿಇಟಿ ಮೇ ನಾಲ್ಕನೇ ವಾರದಲ್ಲಿ, ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಜೂನ್‌ 14ರಿಂದ ಜೂನ್‌ 25ರವರೆಗೆ ನಡೆಯಲಿದೆ. ಈ ಎಲ್ಲ ವೇಳಾಪಟ್ಟಿಗಳನ್ನು ಗಣನೆಗೆ ತೆಗೆದುಕೊಂಡು ರಾಜ್ಯದ ಸಿಇಟಿ ಪರೀಕ್ಷೆ ವೇಳಾಪಟ್ಟಿ ತಯಾರಾಗಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!