26.6 C
Karnataka
Friday, November 22, 2024

    ಶ್ವೇತ ಮೋಡಗಳ ಕಡಲೂ, Big Bang Theoryಯೂ

    Must read

    ಇತ್ತೀಚೆಗೆ ವಾರಣಾಸಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದೆ. ಎತ್ತಿ ಹಾಕುತ್ತಿಲ್ಲ, ಧಡ ಢದ ಶಬ್ದ ಇಲ್ಲ. ಟಿಕೆಟ್,ಟಿಕೆಟ್ ಅನ್ನುವ ನಿರ್ವಾಹಕ ಇಲ್ಲ. ಓಡುವ ಮರ ಗಿಡ ಇಲ್ಲ. ರೋಡ್ ಮೊದಲೇ ಇಲ್ಲ. ಕೂತ ಅರ್ಧ ಗಂಟೆಗೇ ಬೇಜಾರು. ಅಭ್ಯಾಸ ಬಲ, ಏನೂ ಇಲ್ಲ ಅಂತ ಗೊತ್ತಿದ್ದೂ ಮೋಹಕವಾಗಿದ್ದ ಕಿಟಕಿಯ ಮುಚ್ಚಳವನ್ನು ತೆಗೆದೆ. ನಮ್ಮ ಬಸ್ಸುಗಳ ಗ್ಲಾಸಿನ ಕಿಟಕಿಯ ಮುಚ್ಚಳ ತೆಗೆದ ಅಭ್ಯಾಸದಂತೆ ಶಕ್ತಿ ಎಲ್ಲಾ ಹಾಕಲು ಪ್ರಯತ್ನಿಸುತ್ತಿದ್ದಂತೆ,ಸರಾಗವಾಗಿ ಅಲ್ಲಿಯ ತನಕ ನುಲಿಯುತ್ತಿದ್ದ ಗಗನಸಖಿಯ ಧ್ವನಿಗಿಂತಲೂ ಇಂಪಾಗಿ ತೆರೆದುಗೊಂಡಿತು. ಬೆಳಗಿನ 11 ಘಂಟೆಯ ಸಮಯವಾದ್ದರಿಂದ ಸೂರ್ಯನ ಬೆಳಕು ಪ್ರಖರವಾಗಿದ್ದರ ಪರಿಣಾಮ ಇರಬೇಕು, ಕಣ್ಣು ಹಾಯ್ಸುವಷ್ಟು ದೂರಕ್ಕೆ ಶ್ವೇತವರ್ಣದ ಮೊಡಗಳೇ. ಪ್ರಾಥಮಿಕ ಶಾಲೆಯ ಸಿಂಪಿ ಲಿಂಗಣ್ಣ ಬರೆದಿದ್ದ ಹಿಂಜಿದ ಅರಳೆಯು ಚೂರುಗಳಾಗಿ ಮೊಡಗಳಾಗಿಹವೇ ಅನ್ನುವ ಪದ್ಯದ ಸಾಲು ನೆನಪಿಗೆ ಬಂತು. ಮೋಡ ಬಿಟ್ಟು ಸುಮಾರು ಅಡಿಗಳ ಮೇಲೆ ವಿಮಾನ ಹಾರುತ್ತಿದ್ದರೂ ಸುಮ್ಮನೆ ತೇಲಾಡುತ್ತಾ ಹಾಲ್ಕಡದಲ್ಲಿ ನಿಂತಿದೆಯೇನೂ ಅನ್ನುವ ಅನುಭವ. ಶುಭ್ರ ಮೋಡಗಳ ಸಮೂಹ ನನ್ನನ್ನು ಹಿಡಿದಿಟ್ಟು ಬಿಟ್ಟಿತು.

    ಕೈಲಾಸದ ವರ್ಣನೆ, ವೈಕುಂಠದ ವರ್ಣನೆಯನ್ನು ಕಥೆಗಳಲ್ಲಿ ಕೇಳಿದ್ದ, ಚಲನಚಿತ್ರ ಗಳಲ್ಲಿ ನೋಡಿದ್ದ ನೆನಪಾಯ್ತು. ಅಲ್ಲಿಯೇ ಕ್ಷೀರಸಾಗರದ ಶೇಷಶಾಯಿ ವಿಷ್ಣು ಲಕ್ಷ್ಮೀ ಸಮೇತ ನನ್ನ ಸ್ಮೃತಿಪಟಲವನ್ನು ತಾಕುತ್ತಿದ್ದರೆ, ಶಿವ ಪಾರ್ವತಿಯರ ತಾಂಡವ ನೃತ್ಯ ಕಣ್ಮುಂದೆ ಬರ್ತಿತ್ತು.

    ಅಷ್ಟರಲ್ಲೇ ನೀವು ಪ್ರಯಾಣಿಸುತ್ತಿರುವ ವಿಮಾನವು 37 ಸಾವಿರ ಅಡಿಗಳ ಎತ್ತರದಲ್ಲಿದ್ದು, ಘಂಟೆಗೆ 700 ಕಿ.ಮೀ. ವೇಗದಲ್ಲಿ ಪ್ರಯಾಣಿಸುತ್ತಿದೆ ಅನ್ನುವ ಅಶರೀರವಾಣಿ ವಿಮಾನದ ತುಂಬಾ ಪ್ರತಿದ್ವನಿಸಿತು.

    1670 ಕಿ.ಮೀ. ಪ್ರತಿಗಂಟೆಗೆ ತಿರುಗುವ ಭೂಮಿಯ ಮೇಲಿರುವ ಬೆಂಗಳೂರು, ನಾನು ಪ್ರಯಾಣಿಸುವ ಈ ವಿಮಾನ ವಾರಣಾಸಿಯಲ್ಲಿ ಭೂಮಿ ಬಿಟ್ಟು ಮೇಲೇರಿದೆ. ಮತ್ತೆ ಬೆಂಗಳೂರಲ್ಲಿ ಭೂಮಿ ತಾಕಲು 3,4 ತಾಸುಗಳು ಬೇಕು. ಈ ಸಮಯದಲ್ಲಿ ಬೆಂಗಳೂರು ತಿರುಗುವ ಭೂಮಿಯಲ್ಲಿ ಎಷ್ಟು ದೂರ ಹೋಗಬಹುದು? ಭೂಮಿಯ ಗುರುತ್ವಾಕರ್ಷಣೆ ಕಕ್ಷೆಯಲ್ಲೇ ವಿಮಾನ ಸಂಚರಿಸುತ್ತಿದ್ದು, ಬೆಂಗಳೂರನ್ನು ಹಿಡಿಯಲು 1670+700 =2370 ಕಿ.ಮೀ ವೇಗದಲ್ಲಿ ಗಂಟೆಗೆ ಈ ವಿಮಾನ ಸಂಚರಿಸುತ್ತಿರಬಹುದಾ, ಈ ಸಂಬಂಧದ ವೇಗದ ಬಗ್ಗೆ ಐನ್ ಸ್ಟೈನ್ ಹೇಗೆ ಕಂಡು ಹಿಡಿದ, ಮತ್ತು ಇದನ್ನು Relative Speed ಅಂತ ಹೆಸರಿಟ್ಟ ? ಅಂತ ಯೋಚಿಸುತ್ತಿದ್ದಂತೆ, ನನ್ನ ಆಲೋಚನೆಯನ್ನು ಸರಳಗೊಳಿಸಲು 120 ಕಿ.ಮೀ. ಗಂಟೆಗೆ ವೇಗದಲ್ಲಿ ಚಲಿಸುವ ರೈಲನ್ನು ಊಹಿಸಿಕೊಂಡೆ. ಸುಮಾರು 150 ಅಡಿ ಉದ್ದವಿರುವ ರೈಲಿನ ಡಬ್ಬಿಯ ಒಂದು ತುದಿಯಿಂದ ಮತ್ತೊಂದು ತುದಿಗೆ ಈ ಚಲಿಸುವ ರೈಲಿನಲ್ಲಿ ನಾನು ನಡೆದು ಹೋದರೆ, 5 ನಿಮಿಷಕ್ಕೆ ಆ ತುದಿಯನ್ನು ತಲುಪಬಹುದು ಅಂದುಕೊಳ್ಳುವ. ಈ 5 ನಿಮಿಷದಲ್ಲಿ ರೈಲು 10 ಕಿ.ಮೀ.ದೂರ ಚಲಿಸಿತು. ನಾನು 150 ಅಡಿ ಚಲಿಸಿದೆ. ರೈಲು ಮತ್ತು ನಾನು ಪ್ರತಿ ಗಂಟೆಗೆ 1670 ಕಿ.ಮೀ ವೇಗದಲ್ಲಿ ಸುತ್ತುವ ಭೂಮಿಯ ಮೇಲಿದ್ದೇವೆ!

    Relative speed!

    ಈ ಮೂರು ತೆರನಾದ ವೇಗಗಳು, ಒಂದಕ್ಕೊಂದು ಸಂಬಂಧ ಹೇಳುವುದೇ Relative speed!ಮೊದಲ ಬಾರಿಗೆ ಇಂತಹ ಅನುಮಾನಗಳ ಬಗ್ಗೆ ತಲೆ ಕೆಡಿಸಿಕೊಂಡವರೇ ಜ್ಞಾನಿಗಳೇನೋ ಅನ್ನಿಸಿತು. ಅದಕ್ಕಿಂತಲೂ ಸೋಜಿಗದ ಸಂಗತಿ ಒಂದು ನನ್ನ ಮೆದುಳನ್ನು ತಾಕಿತು! ಅದೆಂದರೆ ವಿಮಾನವೇ ಇರದಿದ್ದ ಸಾವಿರಾರು ವರ್ಷಗಳ ಹಿಂದೆ ಈ ಶ್ವೇತವರ್ಣದ ಮೋಡಗಳ ರಾಶಿಗಳಲ್ಲಿ ಅದು ಹೇಗೆ ನಮ್ಮ ದಾರ್ಶನಿಕರು ವೈಕುಂಠ,ಕೈಲಾಸ ಗಳನ್ನು ಕಲ್ಪಿಸಿಕೊಂಡರು?ಇದರ ಇರುವಿಕೆಯ ಕಲ್ಪನೆ ಅವರಿಗೆ ಹೇಗೆ ಬಂತು,ನೋಡದ ಹೊರತು? ಅಥವಾ ಈ ಶ್ವೇತವರ್ಣದ ಮೋಡಗಳನ್ನು ನೋಡಿದ್ದರಾ?…ಹೇಗೆ ನೋಡಿದ್ದರು? ಸಾಲು, ಸಾಲು ಪ್ರೆಶ್ನೆಗಳು ಮುತ್ತಿಕೊಂಡು ಬಿಟ್ಟವು. ನಾನು ಆ ಬಿಳೀ ಮೋಡಗಳ ಶ್ವೇತನಗರಿಗಳಲ್ಲಿ ರೆಕ್ಕೆ ಇಟ್ಟುಕೊಂಡವನ ಹಾಗೆ ಹಾರಾಡುತ್ತಿದ್ದೆ!

    ನಿರಂತರ ಧ್ಯಾನ ಮಾಡುವವರು ಸಮಾಧಿ ಸ್ಥಿತಿ ತಲುಪುವ ಮುನ್ನ ಅತಿಂದ್ರಿಯ ಶಕ್ತಿ ಹೊಂದುತ್ತಾರೆ. ದೇಹವನ್ನು ಎಷ್ಟು ಗಾತ್ರಕ್ಕೆ ಬೇಕಾದ್ರೂ ಹಿಗ್ಗಿಸಬಹುದು ಮತ್ತು ಕುಗ್ಗಿಸಬಹುದು. (ರಾಮಾಯಣದಲ್ಲಿ ಹನುಮಂತನು ಈ ಶಕ್ತಿ ಹೊಂದಿದ್ದನ್ನು ಅವನ ಮೊದಲ ಸೀಮೋಲ್ಲಂಘನ ವೇಳೆ ವಾಲ್ಮೀಕಿ ಹೇಳಿದ್ದಾನೆ. ಬೌದ್ಧರಲ್ಲಿ ಬೋಧಿಸತ್ವನು ಈ ಶಕ್ತಿ ಹೊಂದಿದ್ದನ್ನು ಹೇಳುತ್ತಾರೆ.) ಅಲ್ಲದೆ ಧ್ಯಾನಿಸುವ ಯೋಗಿಗಳು ಎಷ್ಟೇ ದೂರಕ್ಕೆ ಬೇಕಾದ್ರೂ ಪಯಣಿಸಿ, ಮತ್ತೊಬ್ಬ ವ್ಯಕ್ತಿಯೊಂದಿಗೆ ವ್ಯವಹರಿಸಬಲ್ಲರು, ತಮ್ಮ ದೇಹವನ್ನು ಇಲ್ಲಿಯೇ ಬಿಟ್ಟು. ಇದನ್ನು Telepathy ಅಂತಾರೆ ಈಗ. ಈ ಅಗೋಚರ ಶಕ್ತಿಯು ಅಂತಹ ಧ್ಯಾನಿಗಳು ಧ್ಯಾನಿಸುವ ಯಾವ ವಿಷಯದ ಬಗ್ಗೆ ಯೂ ಸಂಪೂರ್ಣ ಜ್ಞಾನ ನೀಡಬಲ್ಲದು ಅದನ್ನ ತಪಃ ಶಕ್ತಿ ಅಂತಾರೆ ಅಂತ ಮಲ್ಲಾಡಿಹಳ್ಳಿಯ ಯೋಗ ಶಿಬಿರದಲ್ಲಿ ಒಮ್ಮೆ ನಮ್ಮ ಶ್ರೀ ರಾಘವೇಂದ್ರ ಸ್ವಾಮಿಗಳು ಹೇಳಿದ್ದು ನೆನಪಿಗೆ ಬಂತು.

    ಇಂದಿಗೂ ನಿಲುಕದ ಜ್ಞಾನವನ್ನು ಅವರು ಕಂಡುಕೊಂಡರಾ?

    ಅಂತಹ ತಪಃ ಶಕ್ತಿಯಿಂದ ಯೋಗಿಗಳು ಸಂಚರಿಸಿ ಈ ಶ್ವೇತ ಮೋಡಗಳನ್ನು ನೋಡಿದ್ದರಾ?…ನಮಗೆ ಇಂದಿಗೂ ನಿಲುಕದ ಜ್ಞಾನವನ್ನು ಅವರು ಕಂಡುಕೊಂಡರಾ? ಅನ್ನುವಂತಹ ಪ್ರಶ್ನೆಗಳು ಏಳತೊಡಗಿದವು. ಯಾಕಂದ್ರೆ ಒಮ್ಮೆ ಐನ್ ಸ್ಟೈನ್ ತನ್ನೆಲ್ಲಾ ಜ್ಞಾನದ ಮೂಲ ಸೆಲೆ ಭಾರತೀಯ ಅಧ್ಯಾತ್ಮ ಚಿಂತನೆಗಳು ಅಂತ ಹೇಳಿದ್ದದು.

    The Cosmic Microwave Background 

    ಈ ಯೋಚನೆ ಬಂದದ್ದೇ ತಡ, ನಮ್ಮ ಯೋಗಿಗಳು ತಮ್ಮ ತಪಃ ಶಕ್ತಿಯಿಂದ ಇಡೀ ಸೃಷ್ಟಿಯನ್ನು ಸುತ್ತಿಬಿಟ್ಟರಾ? ಇತ್ತೀಚೆಗೆ ಕಂಡುಕೊಂಡು Milky way ಅಂತ ಹೆಸರಿಸಿದ ಈ ಬ್ರಹ್ಮಾಂಡವನ್ನು ಆಗಲೇ ನೋಡಿಯೇ ವಿಷ್ಣುವನ್ನು ಕ್ಷೀರ ಸಾಗರ (ಹಾಲ್ಗಡಲು) ದಲ್ಲಿ ಇರಿಸಿದರಾ? ಋಗ್ವೇದದ ಪುರುಷ ಸೂಕ್ತ ಸೃಷ್ಟಿಯ ರಹಸ್ಯ ಹೇಳಿದೆ ಅಂದಿದ್ದರು. ನಾವೆಲ್ಲಾ ಅದರಲ್ಲಿ ಬರುವ ಯಜ್ಞ,ಹವಿಸ್ಸು ಅನ್ನುವ ಶಬ್ದಗಳನ್ನು ಶಬ್ದಾರ್ಥದಲ್ಲಿ ಹುಡುಕಲು ಹೋಗಿ ದಾರಿ ತಪ್ಪಿದೆವಾ? ಒಮ್ಮೆ ಋಗ್ವೇದದ ಈ ಪುರುಷ ಸೂಕ್ತವನ್ನು ಇತ್ತೀಚೆಗೆ ಹೇಳಿದ Big Bang Theory ಗೆ ಹೋಲಿಸಿಕೊಂಡು ನೋಡಿದರೆ ಅರ್ಥವಾಗುತ್ತೆ. ಈ ಮಹಾಸ್ಫೋಟವನ್ನೇ ನಮ್ಮ ಯೋಗಿಗಳು ಯಜ್ಞಕುಂಡಕ್ಕೆ ಹೋಲಿಸಿ, ಅಲ್ಲಿಯ ತನಕ ಇದ್ದ ಸೃಷ್ಟಿಯನ್ನು ಹಿರಣ್ಯ ಗರ್ಭ, ಯಜ್ಞದಲ್ಲಿ ಬಲಿಯಾದ ಪುರುಷ ಅಂತ ಹೇಳಿದರಾ? ಅನ್ನುವಂತಹ ಯೋಚನೆಗಳು ತಲೆಯಲ್ಲಿ ಬಂದುಬಿಟ್ಟವು. ಯಜ್ಞಕ್ಕೆ ಮೊದಲೂ ಪುರುಷನಿದ್ದ, ಅವನನ್ನು ಯಜ್ಞದಲ್ಲಿ ಬಲಿ ಕೊಡಲಾಯ್ತು, ಮತ್ತೆ ಯಜ್ಞ ಕುಂಡ ದಿಂದ ಯಜ್ಞ ಮುಗಿದಮೇಲೆ ಪುರುಷ ಎದ್ದು ಬಂದ ಅಂತ ಹೇಳಿರುವ ಋಗ್ವೇದದ ಪುರುಷ ಸೂಕ್ತವೂ ಅದೆಷ್ಟು ದಿನಗಳವರೆಗೆ ನಮಗೆ ಬಾಲಿಶವಾಗಿ ಕಂಡಿತಲ್ಲ?

    Timeline of the metric expansion of space

    ಸೃಷ್ಠಿಯಲ್ಲಿ ಮೊದಲಿಗೆ ಏನೆಂದರೆ ಏನೂ ಇಲ್ಲ. ಕತ್ತಲೆ ಮಯ. ನೀರವತೆಯ ಶಬ್ದ. ಇದನ್ನೇ ಓಂಕಾರ ಅಂದರಾ? ಹಿಂದೆ ಇದ್ದ ಎಲ್ಲವೂ ಮಹಾಸ್ಫೋಟಕ್ಕೆ ಮುನ್ನ ಕುಸಿದು ಮತ್ತೆ ಬೆಳೆದು ಸ್ಪೋಟವಾಯ್ತು. ಈ ಮಹಾಸ್ಫೋಟವನ್ನೇ Big Bang ಅಂತ ಹೆಸರಿಸಿದೆ,ಈಗಿನ ವಿಜ್ಞಾನ. ಅಂತಹ ಏನೂ ಇಲ್ಲದಿರುವಾಗಲೂ,ಸ್ಪೋಟ ಆಗುವಾಗಲೂ, ಅದ ನಂತರವೂ ಕಾಲ ಅಥವಾ time ಇತ್ತು. ಆಕಾಶ ಇತ್ತು. ಈ ಕಾಲವನ್ನು ಶಿವ ಅಂದು ಅದರ ಆದಿ, ಅಂತ್ಯ, ಗೊತ್ತಿಲ್ಲ ಅಂತ ಕಥೆಗಳ ರೂಪಕಗಳಲ್ಲಿ ನಮಗೆ ಹೇಳಿದರಾ? ಆಕಾಶವನ್ನು ವಿಷ್ಣು ಅಂದು (milky way) ಹಾಲ್ಗಡಲಲ್ಲಿ ಮಲಗಿಸಿದರಾ? ಅರ್ಥವಾಗದ ನಾವು ಬಾಲಿಶ ಕಥೆಗಳು ಅಂದು ನಕ್ಕುಬಿಟ್ಟೆವಾ? ಅಲ್ಪ ಸ್ವಲ್ಪ ಅಲ್ಲಿ ಇಲ್ಲಿ ಕೇಳಿದ್ದ ವಿಷಯಗಳು ಒಂದರ ಮೇಲೊಂದರಂತೆ ಆ ಶ್ವೇತ ಮೋಡಗಳ ಕಡಲಿಂದ ತೇಲಿ ಬಂದ ಅನುಭವ ಆಯ್ತು.

    20ನೇ ಶತಮಾನದ ಐನ್ ಸ್ಟೈನ್ ರ ವೈಜ್ಞಾನಿಕವಾಗಿ ಪ್ರಯೋಗಗಳ ಮೂಲಕ ವಿವರಿಸಿದ ಸಾಪೇಕ್ಷ ವೇಗದ ಸಿದ್ದಾಂತವೇ ನಮಗೆ ಸರಿಯಾಗಿ ಅರ್ಥವಾಗಿಲ್ಲ, ಅಂತಹುದರಲ್ಲಿ ನಮ್ಮ ಯೋಗಿಗಳು ಕಂಡುಕೊಂಡದ್ದನ್ನು ಬುದ್ದಿಯೇ ತಿಳಿಯದ ಜನಗಳಿಗೆ ಹೇಳಲು ತೆಗೆದುಕೊಂಡಿರುವ ಪ್ರಯಾಸವನ್ನು ಒಮ್ಮೆ ಸುಮ್ಮನೆ ಊಹಿಸಿಕೊಂಡೆ! ತಲೆ ಕೆಟ್ಟು ಮೊಸರು ಗಡಿಗೆ ಆಯ್ತು. ಅರ್ಥ ಆಗಲಿ,ಬಿಡಲಿ ಸಾಪೇಕ್ಷ ವೇಗದ ಸಿದ್ದಾಂತದಿಂದಾಗಿಯೇ ಇಂದು ನಾವು ಉಪಗ್ರಹಗಳ ಉಡಾವಣೆ ಮಾಡುತ್ತಿರುವುದು,ಬ್ರಹ್ಮಾಂಡದಲ್ಲಿ ಮಾನವ ನಿರ್ಮಿತ ಉಪಗ್ರಹಗಳು ತಿರುಗುತ್ತಾ ಇಂದಿನ ಆಧುನಿಕ ಜಗತ್ತಿಗೆ ಸಹಕಾರಿಯಾಗಿ ನಿಂತಿರುವುದು. ಇದರ ಪ್ರಕಾರ ವೈಜ್ಞಾನಿಕವಾಗಿ ಯೋಚಿಸಿದರೆ ತಟಸ್ಥ ಅಥವಾ ಸೊನ್ನೆ ವೇಗ ಎಂಬುದು ಇರಲು ಭೂಮಿಯ ಮೇಲೆ ಸಾಧ್ಯವೇ ಇಲ್ಲ. ಯಾಕೆಂದರೆ 1670 ಕಿ.ಮೀ ಪ್ರತಿ ಗಂಟೆಗೆ ತಿರುಗುವ ಭೂಮಿಯ ಮೇಲೆ ಯಾವುದೂ ತಟಸ್ಥ ವಲ್ಲ! ನಾವು ತಟಸ್ಥ ಅಂದುಕೊಂಡಿರುವುದು ಭೂಮಿಯ ವೇಗದೊಂದಿಗೆ ತಿರುಗುತ್ತಿರುತ್ತದೆ! ಪ್ರತಿಗಂಟೆಗೆ 700 ಕಿ.ಮೀ ವೇಗದಲ್ಲಿ ಸಾಗುತ್ತಿರುವ ಈ ವಿಮಾನ ಸುಮ್ಮನೆ ನಿಂತಿದೆಯೇನೂ ಅಂತ ಅನ್ನಿಸುತ್ತಿದೆ! ಇದನ್ನೇ ಶಂಕರರು ಮಾಯೆ ಅಂದರಾ? ಕಾಣುವ, ನೋಡುವ ಈ ಭೌತ ಜಗತ್ತು ಸತ್ಯವಲ್ಲ ಅಂದದ್ದನ್ನು ನಾವು ತಪ್ಪಾಗಿ ಅರ್ಥೈಸಿಕೊಂಡೆವಾ?

    ಏನೇನೋ ಯೋಚನೆಗಳು ನನ್ನನ್ನು ಕುಬ್ಜನನ್ನಾಗಿ ಮಾಡಿದವು. ಪ್ರಪಂಚದ ಎಲ್ಲ ನಾಗರಿಕತೆಯ ಪ್ರಾಚೀನ ಗ್ರಂಥಗಳನ್ನು ಓದಬೇಕು ಅನ್ನುವ ಉತ್ಕಟ ಆಸೆ ಬಂತು. ಎರಡು ಹೊತ್ತಿನ ಊಟ ಮಾಡಲು ಅಭ್ಯಸಿಸಿದ್ದ ನನ್ನ ಓದು ಎನ್ನುವುದು ಮೊದಲ ಬಾರಿಗೆ ಕೆಲಸಕ್ಕೆ ಬಾರದ್ದು ಅನ್ನಿಸಿತು. ಹಿಂದೆ ಇಂತಹ ಉತ್ಕಟ ಆಸೆ ಹೊಂದಿರುವರನ್ನು ಮಾತ್ರ ಪರೀಕ್ಷಿಸಿ, ಜ್ಞಾನ ಹೇಳಲಾಗುತ್ತಿತ್ತು,ಎಲ್ಲರಿಗೂ ಅಲ್ಲ ಅನ್ನುವ ಅಂಶದ ಬಗ್ಗೆ ನಿರ್ಮಾನುಷತೆ, ಅಸಮಾನತೆ ಅನ್ನುವಂತಹ ಪದಗಳನ್ನು ಉಪಯೋಗಿಸಿ ಬೈದಿದ್ದೆ. ಈಗ ಅಂತಹ ಸೌಭಾಗ್ಯವೂ ಇಲ್ಲವಲ್ಲ ಅಂತ ಮನಸ್ಸು ಮರುಗಿತು. ವಿದ್ಯೆ ಎಂದರೇನು ಅಂತ ಪ್ರಪ್ರಥಮವಾಗಿ ಪ್ರಶ್ನೆಯೊಂದು ತಲೆಯಲ್ಲಿ ಮೂಡಿದಾಗ, ನಮ್ಮ ವಿಮಾನ ಬೆಂಗಳೂರು ತಲುಪುತ್ತಿದೆ, ನಮ್ಮ ವಿಮಾನದಲ್ಲಿ ಪ್ರಯಾಣ ಮಾಡಿದ ನಿಮಗೆಲ್ಲ ಧನ್ಯವಾದಗಳು,ಮತ್ತೆ ಪಯಣಿಸಲು ಬನ್ನಿ ಅನ್ನುವಂತಹ ಮೋಹಕ ಧ್ವನಿ ನನ್ನನ್ನು ಭೂಮಿಯ ಮೇಲೆ ಇಳಿಸಿತು. ಮತ್ತದೇ ಅರ್ಥವಿಲ್ಲದ ಬಲವಂತದ ಜೀವನ!

    Photo by  Pexels and Wikipedia

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    11 COMMENTS

    1. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಪೌರಾಣಿಕ ದೃಷ್ಟಿ ಹರಿಸಿ ತಪಸ್ಸಿನ ಫಲಪ್ರದ ಸಂಗತಿಯನ್ನು ಸಾಕ್ಷೀಕರಿಸಿ ಚಿಂತಿಸಿದ ಲೇಖನದ ವೈಚಾರಿಕ ನಿಲುವು ನಿನ್ನ ಅನನ್ಯತೆ

    2. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಉತ್ತಮ ಮಟ್ಟದ ನಿಮ್ಮ ತಿಳುವಳಿಕೆಗೆ ನನ್ನ ಅಭಿವಂದನೆಗಳು ಮತ್ತು ಅಭಿನಂದನೆಗಳು.
      ನೀವು ವಿಜ್ಞಾನ, ಪುರಾಣ, ಹಿಂದು ಸನಾತನ ಧರ್ಮ, ವೇದಗಳು…… ಇತ್ಯಾದಿ ಯಾವುದನ್ನು ಮರೆತಿಲ್ಲ.
      Great & hats off to your knowledge.

      👌👌👍🙏🙏🙏

    3. ಚೆನ್ನಾಗಿದೆ .ಇತ್ತ ನಾವು ವಿಜ್ಞಾನವನ್ನು ಪೂರ್ತಿ ತಿಳಿಯದ ಅತ್ತ ಶಾಸ್ತ್ರವನ್ನೂ ತಲಸ್ಪರ್ಶಿಯಾಗಿ ತಿಳಿಯದ ಎಡಬಿಡಂಗಿ ನಾವು…ಏನನ್ನು ಹೇಳಲಿ ?ಅದ್ಭುತ !ಎಂದುಉದ್ಗರಿಸಬಲ್ಲೆ !ಧನ್ಯವಾದಗಳು .ಶ್ರೇಯಸ್ಸಾಗಲಿ .ಅನ್ವೇಷಣೆಯ ಕುತೂಹಲ ಮುಂದುವರೆಯಲಿ .ಎಂದು ಹಾರೈಸುವೆ .

    4. ನಿಮ್ಮ ಈ ಲೇಖನ ಸಾಹಿತ್ಯದಿಂದ ಗೊತ್ತಿಲ್ಲದಂತೆ ವೈ ಜ್ಞಾನಿಕ ಚಿಂತನೆಯ ಕಡೆಗೆ ಕರೆದೊಯ್ಯುತ್ತದೆ ಇದು ಒಂದು ಉತ್ತಮವಾದ ವೈ ಜ್ಞಾನಿಕ ಲೇಖನ ತುಂಬಾ ಸಂತೋಷವಾಗಿದೆ

    5. ಅದ್ಭುತವಾದ ಸೃಷ್ಟಿಯಲ್ಲಿ ತಥ್ಯವನ್ನರಸುತ್ತಾ ಆದ
      ಅಮೂರ್ತ-ಮೋಹಕಾನುಭವ… ಸ್ಪಷ್ಚವಾಗಿ ಮೂಡಿಬಂದಿದೆ!

    6. ಚೆನ್ನಾಗಿದೆ. ಮನಸ್ಸಿನ ವೇಗ ಬೆಳಕಿನ ವೇಗಕ್ಕಿಂತ ತೀಕ್ಷ್ಣ ಎಂದು ಹೇಳುತ್ತಾರೆ. When imagining the distance of light year, ನೀನು ಹೇಳಿದ್ಹಾಗೆ ವಿಙ್ನಾನ ವಿಚಾರಗಳಲ್ಲಿ ಆದಿ ಅಂತ್ಯ ಸಿಕ್ಕುವುದೇ ಇಲ್ಲ. ಅಧ್ಭುತ.

    7. Super Sir….. As u told about clouds…. Please remember the the clouds being acted as messanger for Shakuntala and Dushyanta love ….. Further for most wonderful achievements we can see in book writen by RAM “” HIMALAYADA MADILALLI MAHATMARU”” “Overall your air journey was a wonderful .. simultaneously created scientific and spiritual thoughts….. saluting for your great knowledge

    8. 👌👌 simply *outstanding* sir 🙏👍

      I am very very happy sir – for your present state of being…..👏👏

      Invaluable writing sir.
      Please express yourself whenever you are in the special zone.

      Rarest amongst us can experience what are going through now ……

      Have a wonderful time sir. 🦚

    LEAVE A REPLY

    Please enter your comment!
    Please enter your name here

    Latest article

    error: Content is protected !!