ಇಂದು ನಾಡಿನಾದ್ಯಂತ ಮಹಾ ಶಿವರಾತ್ರಿಯ ಸಂಭ್ರಮ. ಪರಮೇಶ್ವರನ ದರ್ಶನಕ್ಕೆ ಎಲ್ಲೆಲ್ಲೂ ಸರತಿ ಸಾಲು. ಇಡೀ ರಾತ್ರಿ ವಿಷಕಂಠನ ನಾಮ ಸ್ಮರಣೆ. ಭೋ ಶಂಭೋ ಶಿವ ಶಂಭೋ ಸ್ವಯಂಭೋ ಎಂಬ ಝೇಂಕಾರ.
ಮಹಾಶಿವರಾತ್ರಿಯನ್ನು ಮತ್ತಷ್ಟು ಭಕ್ತಿ ಪೂರ್ವಕವಾಗಿಸಲು ಶಿವನಾಮ ಸ್ಮರಣೆಯ ಈ ಪಾಡ್ಕಾಸ್ಟ್ ಅನ್ನು ಕನ್ನಡಪ್ರೆಸ್.ಕಾಮ್ ಪ್ರಸ್ತುತ ಪಡಿಸುತ್ತಿದೆ.
ನಂಜನಗೂಡಿನ ನಂಜುಂಡೇಶ್ವರನ ಪ್ರಾರ್ಥನೆಯೊಂದಿಗೆ ಆರಂಭವಾಗುವ ಶಿವನಾಮ ಸ್ಮರಣೆ ಸೋಜಿಗಾದ ಸೂಜು ಮಲ್ಲಿಗೆ ಹಾಡಿನ ಮೂಲಕ ಮಾದೇವನನ್ನು ಸ್ಮರಿಸಿ ಮುಂದುವರಿಯುತ್ತದೆ. ಚಂದ್ರಚೂಡ ಶಿವಶಂಕರನನನ್ನು ಧ್ಯಾನಿಸುತ್ತಾ ಭೋ ಶಂಭೋ ಶಿವ ಶಂಭೋ ಸ್ವಯಂಭೋ ಎಂಬ ಝೇಂಕಾರದೊಂದಿಗೆ ಮುಕ್ತಾಯ ಆಗುತ್ತದೆ.
ಮೈಸೂರಿನ ಅವನಿ ಹರ್ಷ, ಬೆಂಗಳೂರಿನ ಪ್ರಿಯಾಂಕ ಪದಕಿ, ಶ್ಯಾಮಲಾ ಮತ್ತು ಧರ್ಮಪುರಿಯಿಂದ ಐಶ್ವರ್ಯ ಮತ್ತು ಲಕ್ಷ್ಮಿ ಇಲ್ಲಿರುವ ಗೀತೆಗಳನ್ನು ಹಾಡಿದ್ದಾರೆ. ಭಾರತಿ ಎಸ್ ಎನ್ ಈ ಪಾಡ್ಕಾಸ್ಟ್ ನಿರೂಪಿಸಿದ್ದಾರೆ.
ಆಲಿಸಿ , ಶಿವನೊಲುಮಗೆ ಪಾತ್ರರಾಗಿ.
ಕಾರ್ಯಕ್ರಮ ಚೆನ್ನಾಗಿತ್ತು. ಹಾಡುಗಳೂ ಚೆನ್ನಾಗಿತ್ತು. ಭಾರತಿ ಅವರಿಂದ ಶಿವನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಿತು
Excellent singing by all the participants. Exposition by Smt. S N Bharati is super.
ಕಾರ್ಯಕ್ರಮ ತುಂಬಾ ಚೆನ್ನಾಗಿದೆ. ಹಾಡುಗಳೂ ಚೆನ್ನಾಗಿದೆ. ಭಾರತಿ ಅವರಿಂದ ಶಿವನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಿತು.
Excellent program…. Beautifully hosted by smt.bharathi….
Very nice 👌
ಸೊಗಸಾದ ಹಾಡು ಗಳು .ಶಿವನ ಕುರಿತಾದ ಮಾಹಿತಿ ಎಲ್ಲಾ ಚೆನ್ನಾಗಿತ್ತು.🙏👍👍