ತುಮಕೂರಿನ ಸ್ಟೂಡೆಂಟ್ ಬುಕ್ ಕಂಪನಿ ಎಂಬ ಪುಸ್ತಕ ಪ್ರಕಾಶನ ಕಂಪನಿಯಿಂದ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಸದಾಶಿವ ಮಂಗಳೂರು ಇದೀಗ ಸದಾ ಬಂಜನ್ ಎಂಬ ನಾಮಧೇಯದೊಂದಿಗೆ ಸಿನಿಮಾ ಕ್ಷೇತ್ರದಲ್ಲಿಯೂ ದೊಡ್ಡ ಕನಸುಗಳನ್ನು ಈಡೇರಿಸಿಕೊಳ್ಳಲು ಮನಸ್ಸು ಮಾಡಿದ್ದಾರೆ.
ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಿರುಚಿತ್ರ “ಯಮಸಂಧಿ” ಯೂಟ್ಯೂಬ್ ನಲ್ಲಿ ಜನಪ್ರಿಯವಾಗಿದೆ. ಈ ಕಿರು ಚಿತ್ರ ಸದಾಶಿವ ಅವರನ್ನೂ ಭರವಸೆಯ ನಟನನ್ನಾಗಿಸುವ ನಿರೀಕ್ಷೆ ಹುಟ್ಟಿಸಿದೆ. ಮರ್ಡರ್ ಮಿಸ್ಟರಿಯ ಈ ಚಿತ್ರದಲ್ಲಿ ನಿರ್ದೇಶಕ ಪ್ರಾಣ್ ಕೊಲೆಗಾರನು ಕೊನೆಗೆ ಪೊಲೀಸರಿಗೆ ಸಿಕ್ಕಿ ಬೀಳುತ್ತಾನಾ, ಅವನ ಅಂತ್ಯವಾಗುತ್ತದಾ? ನಂತರ ಏನು ಎನ್ನುವುದನ್ನು ಕುತೂಹಲಕಾರಿಯಾಗಿ ನಿರೂಪಿಸಿದ್ದಾರೆ. ಮುಂದೆ ಈ ಕಥೆಯನ್ನು ಮತ್ತಷ್ಟು ವಿಸ್ತರಿಸುವ ಅವಕಾಶವಿರುವಂತೆ ಕಥೆಯನ್ನು ಅಂತ್ಯಗೊಳಿಸಿದ್ದಾರೆ.
ಸದಾ ಬಂಜನ್ ಸ್ವತಃ ರಂಗಭೂಮಿ ಕಲಾವಿದರು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ತುಮಕೂರಿನ ಡಮರುಗ ರಂಗ ಸಂಪನ್ಮೂಲ ಕೇಂದ್ರದ ಸಂಸ್ಥಾಪಕ, ರಂಗಕರ್ಮಿ ಮೆಳೇಹಳ್ಳಿ ದೇವರಾಜ್ ಅವರ ಗರಡಿಯಲ್ಲಿ ಅಸಂಖ್ಯ ನಾಟಕಗಳಲ್ಲಿ ನಟಿಸಿದ್ದಾರೆ, ನಿರ್ದೇಶಿಸಿಯೂ ಇದ್ದಾರೆ. ಸ್ವತಃ ಲೇಖಕರೂ ಹೌದು. ಪ್ರಕಾಶಕರಾಗಿ ಒಂದು ಕೃತಿಯನ್ನು ಅದರ ಮೊದಲ ಪುಟದಲ್ಲಿಯೇ ಮೌಲ್ಯಮಾಪನ ಮಾಡುವ ಶಕ್ತಿ ಹೊಂದಿರುವ ಸದಾ ಬಂಜನ್ ಭವಿಷ್ಯದಲ್ಲಿ ಉತ್ತಮ ಚಿತ್ರಗಳನ್ನು ನೀಡುವ ನಿರೀಕ್ಷೆ ಹೊಂದಿದ್ದಾರೆ.
ಬರ್ಬರಿಕ ನಾಟಕದಲ್ಲಿ ಬರ್ಬರಿಕ, ಕರ್ವಾಲೋ ನಾಟಕದಲ್ಲಿ ಕರ್ವಾಲೋ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಕಳೆದ ಒಂದು ದಶಕದಿಂದ ಅಸಂಖ್ಯ ನಾಟಕಗಳಲ್ಲಿ ನಟಿಸಿದ್ದಾರೆ. ಜನರ ಮನಸ್ಸಿನಲ್ಲಿ ಉಳಿಯುವ ಪಾತ್ರಗಳಲ್ಲಿ ನಟಿಸಬೇಕು ಎನ್ನುವುದು ಅವರ ಬಯಕೆ. ಅದಕ್ಕಾಗಿ ಹಲವು ಕಥೆಗಳನ್ನು ಕೇಳುತ್ತಿದ್ದಾರೆ.
ಈ ಕಿರುಚಿತ್ರದಿಂದ ಬೆಳ್ಳಿತೆರೆಯ ಪ್ರಮುಖ ನಿರ್ದೇಶಕರ ಕಣ್ಣಿಗೆ ಬೀಳುವಂತಾದರೆ ಸಾಕು ಎನ್ನುವುದು ಚಿತ್ರಪ್ರಿಯರ ನಿರೀಕ್ಷೆ. ಈಗಾಗಲೇ ಮನಸಿನ ಮರೆಯಲಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರೀತಿ, ಲವ್, ಪ್ಯಾರ್ ಚಿತ್ರದ ಮೂವರು ನಾಯಕರಲ್ಲಿ ಒಬ್ಬರಾಗಿದ್ದರು. ಹಲವು ಕಾರಣಗಳಿಂದ ಆ ಚಿತ್ರ ಸ್ಥಗಿತಗೊಂಡಿತು. ಉತ್ತಮವಾದ ಹಾಗೂ ಸವಾಲಿನ ಪಾತ್ರಗಳಲ್ಲಿ ನಟಿಸಬೇಕೆನ್ನುವುದು ಸದಾ ಬಂಜನ್ ಅವರ ಬಯಕೆ. ಸ್ವತಃ ಪುಸ್ತಕ ಪ್ರಕಾಶಕ, ಬರಹಗಾರರೂ ಆಗಿರುವ ಅವರ ಬತ್ತಳಿಕೆಯಿಂದ ಉತ್ತಮ ಚಿತ್ರಗಳು ಮೂಡಿಬರಲಿ ಎನ್ನುವುದು ನಮ್ಮ ನಿರೀಕ್ಷೆ.ಮನಸಿನ ಮರೆಯಲಿ ಚಿತ್ರದ ನಾಯಕ ಕಿಶೋರ್ ಯಾದವ್, ರಘುನಂದನ್, ಪ್ರಕಾಶ್ ಮೆಳೇಹಳ್ಳಿ ಮುಂತಾದವರು ನಟಿಸಿದ್ದಾರೆ.
ಸದಾಶಿವ ಅವರ ಪ್ರತಿಭೆ ಪ್ರಕಾಶಿಸಿ ಅವರಿಗೆ ಯಶಸ್ ಸಿಗಲಿ. ಶುಭವಾಗಲಿ.
Wish you great future sir
ಸದಾಶಿವ ರವರು ಸಕಲ ಸದ್ಗುಣಗಳ ಜೀವಾತ್ಮ.ಇವರ ವಿದ್ವತ್ತು ಪುಸ್ತಕ ಪ್ರೇಮ,ಕಲಾವಂತಿಕೆ,ಅಭಿನಯ,ನಿರ್ದೇಶನ ಈ ಎಲ್ಲವನ್ನೂ ನೋಡಿದಾಗ ನಮಗನ್ನಿಸುವುದು ಸೋಜಿಗದ ಸೊಗಸುಗಾರ ಭವಿಷ್ಯದ ಕಲಾಕಾರ ರೆಂಬುದು.ಇವರು ಹುಟ್ಟಾ ಕನಸುಗಾರ ಅಷ್ಟೇ ಅಲ್ಲ ರಿಯಲ್ ಹೀರೋ..ಧೈರ್ಯಶಾಲಿ…ಇವರ ಕನಸುಗಳೆಲ್ಲ ನನಸಾಗಲಿ ಎಂಬುದೇ ನಮ್ಮ ಆಶಯ.ಬಾ. ನಂ. ಲೋಕೇಶ