ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಸಿ ಜಿ ಪ್ರಹ್ಲಾದ್ ರಾವ್ ಅವರದು ದೊಡ್ಡ ಹೆಸರು. ಮೈಸೂರಿನ ಜನಪ್ರಿಯ ವೈದ್ಯರಾಗಿರುವ ಪ್ರಹ್ಲಾದ್ ರಾವ್, ಕೋವಿಡ್ ಸಂಕಷ್ಟ ಕಾಲದಲ್ಲಿ ಒಂದು ದಿನವೂ ತಪ್ಪದೇ ರೋಗಿಗಳ ಸೇವೆ ಮಾಡಿಕೊಂಡು ಬಂದಿದ್ದಾರೆ. ಕೋವಿಡ್ ಬಗ್ಗೆ ಆಗುತ್ತಿರುವ ಹೊಸ ಸಂಶೋಧನೆಗಳು, ಮಾಹಿತಿಗಳನ್ನು ಸಾಮಾಜಿಕ ಜಾಲತಾಣ ಮೂಲಕ ಹಂಚಿಕೊಳ್ಳುತ್ತಲೇ ಇರುತ್ತಾರೆ.
ಮೈಸೂರಿನ ಸುಪ್ರಸಿದ್ಧ ಎಂಜಿನಿಯರ್ ಕಾಲೇಜುಗಳಲ್ಲಿ ಒಂದಾದ ವಿದ್ಯಾವರ್ಧಕ ಕಾಲೇಜ್ ಆಫ್ ಎಂಜಿನಿಯರಿಂಗ್ ನ ವಿದ್ಯಾರ್ಥಿಗಳೊಂದಿಗೆ ಆನ್ ಲೈನ್ ಸಂವಾದ ನಡೆಸಿದ ಡಾ. ಪ್ರಹ್ಲಾದ್ ಕೋವಿಡ್ ಬಗ್ಗೆ ಅನೇಕ ಅಂಶಗಳನ್ನು ಹಂಚಿಕೊಂಡಿದ್ದಾರೆ. ಕೋವಿಡ್ ಬಂದ ಕೂಡಲೇ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು? ಕೋವಿಡ್ ನಿಗ್ರಹಿಸುವಲ್ಲಿ ಯುವ ಜನರ ಪಾತ್ರವೇನು? ಲಸಿಕೆಯ ಮಹತ್ವ ಏನು?- ಇತ್ಯಾದಿ ಸಂಗತಿಗಳ ಬಗ್ಗೆ ವಿವರವಾಗಿ ಮಾತಾನಾಡಿದ್ದಾರೆ.
ನಮ್ಮ ಓದುಗರಿಗಾಗಿ ಆ ಸಂವಾದದ ವಿಡಿಯೋವನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ಆಲಿಸಿ. ಎಲ್ಲರೂ ಸೇರಿ ಕೋವಿಡ್ ಹಿಮ್ಮೆಟ್ಟಿಸೋಣ.