ಕೋವಿಡ್ ೧೯ ಸಂಧಿಗ್ದ ಸಮಯದಲ್ಲಿ ಆಶಾ (ASHA) ಕಾರ್ಯಕರ್ತೆಯರು ಹಗಲಿರುಳು ನೀಡುತ್ತಿರುವ ಸೇವೆಯನ್ನು ಗುರುತಿಸಿ ಅವರಿಗೆ ಹಣ್ಣುಹಂಪಲು ಮತ್ತು ರೋಗನಿರೋಧಕ ಶಕ್ತಿ ವೃದ್ಧಿಸುವ ಪೌಷ್ಟಿಕ ಆಹಾರ ವಸ್ತುಗಳನ್ನು ವಿತರಿಸಿ ಗೌರವಿಸುವ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯವು ಹಮ್ಮಿಕೊಂಡಿತ್ತು.
ಕುಲಪತಿಗಳಾದ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಪೌಷ್ಟಿಕ ಆಹಾರ ಕಿಟ್ ಗಳನ್ನು ಕೊಣಾಜೆ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ವಿತರಿಸಿ “ಜನರ ಸೇವೆಯೇ ಜನಾರ್ದನ ಸೇವೆ; ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತರು ಸಮುದಾಯದಲ್ಲಿ ಮಾಡುತ್ತಿರುವ ಆರೋಗ್ಯ ಸೇವೆಯು ದೇವರು ಮೆಚ್ಚುವಂತದ್ದು. ಈ ಸಂದರ್ಭದಲ್ಲಿ ಅವರನ್ನು ಗುರುತಿಸಿ ಗೌರವಿಸುವುದು, ಅವರ ಕರ್ತವ್ಯಕ್ಕೆ ಬೆಂಬಲವಾಗಿ ನಿಲ್ಲುವುದು ನಮ್ಮ ಧರ್ಮ” ಎಂದು ನುಡಿದರು.
ಕುಲಸಚಿವರಾದ ಡಾ. ಕಿಶೋರ್ ಕುಮಾರ್ ಸಿ.ಕೆ. ಅವರು ಮಾತಾನಾಡಿ ಜನರ ಆರೋಗ್ಯಕ್ಕಾಗಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತರೆಯರು ತಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದು ಮುಖ್ಯ. ಈ ಹಿನ್ನೆಲೆಯಲ್ಲಿ ಅವರಿಗೆ ಪೌಷ್ಟಿಕ ಆಹಾರ ಕಿಟ್ ನ್ನು ನೀಡುತ್ತಿರುವುದು ನಮ್ಮ ಒಂದು ಅಳಿಲು ಸೇವೆ” ಹೇಳಿ ವಂದನಾರ್ಪಣೆ ಸಲ್ಲಿಸಿದರು.
.ಆಶಾ ಕಾರ್ಯಕರ್ತೆಯರ ಪರವಾಗಿ ಪೂರ್ಣಿಮ ಶೆಟ್ಟಿ ಮಾತಾನಾಡಿ ಕೋವಿಡ್ ವಾರಿಯರ್ ಆಗಿ ತಮ್ಮ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಪ್ರಶಾಂತ ನಾಯ್ಕ ಪ್ರಾಸ್ತಾವಿಕ ಮಾತಾನಾಡಿ ಸ್ವಾಗತಿಸಿದರು. ಮಂಗಳೂರು ವಿವಿ ಕೋವಿಡ್-೧೯ ಸೆಲ್ ಇದರ ನೋಡಲ್ ಅಧಿಕಾರಿ ಪ್ರೊ. ರಾಜು ಕೃಷ್ಣ ಚಲನಾನವರ್, ಮಂಗಳೂರು ವಿವಿ ಯ ಉದ್ಯೋಗಿಗಳ ಸಹಕಾರ ಸಂಘದ ನಿರ್ದೇಶಕರೊಬ್ಬರಲ್ಲಿ ಒಬ್ಬರಾದ . ಚನಿಯಪ್ಪ ನಾಯಕ್ ಬಿ., ಪ್ರೊ. ವೈ. ಸಂಗಪ್ಪ , ಕೊಣಾಜೆ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ವೇದಾವತಿ ಗಟ್ಟಿ, ಕೋವಿಯ್-೧೯ ಟಾಸ್ಕ್ ಫ಼ೋರ್ಸ್ ಸದಸ್ಯೆ ಶ್ರೀಮತಿ ರಾಜೇಶ್ವರಿ ಎಮ್ ಈ ಸಂದರ್ಭದಲ್ಲಿ ಉಪಸ್ಥಿತಿ ಇದ್ದರು.
ವಿಶ್ವವಿದ್ಯಾನಿಲಯದ ‘ವಾತ್ಸಲ್ಯ ನಿಧಿ’ ಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕೋವಿಡ್ ೧೯ ಸುರಕ್ಷತಾ ನಿಯಮಾವಳಿಯನ್ನು ಪಾಲಿಸಲಾಯಿತು.
A meaningful programme