ತಾವು ಕೆಲಸ ಮಾಡುವ ಆಸ್ಪತ್ರೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾದ ಕೋವಿಡ್ ಸೋಂಕಿತರ ಕೈಹಿಡಿದು ತಮ್ಮ ನೃತ್ಯದ ಮೂಲಕ ಧೈರ್ಯವಾಗಿರಲು ಹುರಿದುಂಬಿಸಿದ ಸಚಿವ ಸುರೇಶ್ ಕುಮಾರ್ ಅವರ ವೈದ್ಯೆ ಪುತ್ರಿ ಡಾ.ದಿಶಾ.ಎಸ್.ಕುಮಾರ್ ತಮ್ಮ ನಡೆಯಿಂದ ಮಾದರಿಯಾಗಿದ್ದಾರೆ.
ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಕೆಲ ಕೋವಿಡ್ ಸೋಂಕಿತರು ವೈದ್ಯಕೀಯ ಶುಶ್ರೂಶೆಯ ಬಳಿಕವೂ ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತಿದ್ದು, ಅವರಲ್ಲಿ ಆತ್ಮವಿಶ್ವಾಸ ತುಂಬಲು ಈ ರೀತಿ ಅಚಾನಕ್ಕಾದ ನಡೆಯನ್ನು ಅನುಸರಿಸಿದೆವು. ಸೋಂಕಿತರೊಬ್ಬರ ಕೈ ಹಿಡಿದು ಅವರ ಜೊತೆ ನಾವಿದ್ದೇವೆ ಎಂದು ಸ್ಥೈರ್ಯ ತುಂಬಿದೆವು. ನಾನು ಸತ್ತು ಹೋಗ್ತೇನೆ ಅಂತ ಭಯಭೀತನಾಗಿ ಮಲಗಿದ್ದ ಯುವಕನೊಬ್ಬ ನಮ್ಮೊಂದಿಗೆ ನೃತ್ಯ ಮಾಡಿದ್ದು, ತದನಂತರದಲ್ಲಿ ಆತ ತನ್ನ ಖಾಯಿಲೆಯಿಂದ ಚೇತರಿಸಿಕೊಂಡಿದ್ದು ಒಬ್ಬ ವೈದ್ಯೆಯಾಗಿ ನನಗೆ ಅತೀವ ತೃಪ್ತಿ ತಂದ ವಿಷಯ ಎಂದು ಡಾ.ದಿಶಾ.ಎಸ್.ಕುಮಾರ್ ಹೇಳಿದರು.
ವಾಹ್ ಶಹಬ್ಬಾಸ್ ಮೇಡಂ. ಇಂತಹ ವೈದ್ಯರು ಇರುವುದರಿಂದಲೇ ವೈದ್ಯೋ ನಾರಾಯಣೋ ಹರಿ ಅಂತ ಇನ್ನೂ ನಂಬಿಕೆಯಿಂದ ಹೇಳೋದು. ದೇವರು ನಿಮಗೆ ಒಳ್ಳೆಯದು ಮಾಡಲಿ. ಬೇರೆಯವರಿಗೆ ನೀವು ಮಾದರಿಯಾಗಿರುವಿರಿ. ನಿಮಗೆ ಒಳ್ಳೆಯದಾಗಲಿ