19.9 C
Karnataka
Sunday, September 22, 2024

    ಬದುಕಿನೊಂದಿಗೆ ಬೆಸೆದುಕೊಂಡಿರುವ ಪ್ಲಾಸ್ಟಿಕ್‌ಗೆ ಪರ್ಯಾಯ ಮಾರ್ಗ ಹುಡುಕೋಣ

    Must read

    ಸುಮಾವೀಣಾ                              

    ಜೂನ್ ಐದು ಮತ್ತೆ ಬಂದಿದೆ. ವಿಶ್ವ ಪರಿಸರ ದಿನಾಚರಣೆಯ ಮಹೋತ್ಸವದ ಸಂದರ್ಭ. ಪರಿಸರ ಸಂರಕ್ಷಣೆಯ ಕುರಿತು ಅನೇಕ ಚಳವಳಿಗಳು ಕಾರ್ಯಕ್ರಮಗಳು ನಡೆಯುತ್ತವೆ.ನಾಗರಿಕ ಸಮಾಜದ ನಾವು ಅಭಿವೃದ್ಧಿಯ ಮಂತ್ರ ಜಪಿಸಿ ಉನ್ನತಿಯತ್ತ ಸಾಗುತ್ತಿವೆ ಎಂದುಕೊಂಡೇ ಅವನತಿಯ ಹಾದಿ ಹಿಡಿದಿದ್ದೇವೆ.  ಕೊರೊನಾ  ಸಂದರ್ಭದಲ್ಲಿ ಆಹಾರ ಪ್ಯಾಕೆಜ್, ಔಷಧಿ, ಸಂಸ್ಕಾರ    ಇತ್ಯಾದಿ ಕಾರಣಕ್ಕೆ   ಪ್ಲಾಸ್ಟಿಕ್ ಅನಿವಾರ್ಯವಾಗಿ ಬಳಕೆಯಾಗುತ್ತಿದೆ.ಪರಿಸರ ಸಂರಕ್ಷಣೆಯ ಸಂಬಂಧ ಆಧುನಿಕ ಸವಾಲುಗಳೇ ಎದುರಾಗಿವೆ.ಕಳೆದು ಹೋದದ್ದನ್ನು ಅಷ್ಟು ಸುಲಭವಾಗಿ ಗಳಿಸಲು ನಮ್ಮಿಂದ ಸಾಧ್ಯವಿಲ್ಲ ಇರುವುದನ್ನು ಹೇಗೆ ಜೋಪಾನ ಮಾಡಿಕೊಳ್ಳುವುದು ಎಂಬುದರ ಕಡೆಗೆ ನಮ್ಮ ಯೋಚನಾಲಹರಿ ಇರಬೇಕು.

    ಬಿರುಬೇಸಗೆಯ ಕಾಲ ಕಳೆದ ಸಾಲಿಗೆ ಹೋಲಿಸಿಕೊಂಡರೆ ಈ ಬಾರಿ ಮಳೆಯ ಪ್ರಮಾಣ ಕಡಿಮೆ ಇದೆ. ದೇಹವನ್ನು ತಂಪಾಗಿಡುವ ಎಳನೀರಿನಂತಹ ಪಾನೀಯದ ಕಡೆ ನಮ್ಮ ಗಮನ ಸ್ಟ್ರಾಇಲ್ಲದೆ ಕುಡಿಯಲಾರೆವು. ಸ್ಟ್ರಾ ಇಲ್ಲದೆಯೂ ಎಳನೀರಿನ ಸವಿ ಸವಿಯಬಹುದಲ್ಲವೇ ಹಾಗೆ ಬೇರೆ ಬೇರೆ ತಂಪು ಪಾನೀಯಗಳನ್ನು ಕುಡಿಯುವ ಸಂದರ್ಭದಲ್ಲಿಯೂ ಸ್ಟ್ರಾಗಳನ್ನೇ ಬಳಸುತ್ತೇವೆ. ಇವೂ ಪ್ಲಾಸ್ಟಿಕ್ ಅಲ್ಲವೇ ಇದನ್ನು ಬಿಟ್ಟರೆ ಪ್ರಕೃತಿಯ ಒಡಲಿಗೆ ನಾವು ನಿರಂತರವಾಗಿ ಸೇರಿಸುತ್ತಿರುವ ನಿಧಾನ ವಿಷ ಒಂದರ್ಥದಲ್ಲಿ ನಿಧನ ವಿಷವನ್ನು  ಸೇರಿಸುವುದನ್ನು ತಡೆಯಬಹುದಲ್ಲವೇ. ಸ್ಟಾçಗಳನ್ನು ಎಳನೀರು ಮಾರಾಟಗಾರರು ಧೂಳಿನ ನಡುವೆಯೇ ಇಟ್ಟಿರುತ್ತಾರೆ  ನಾವದರಲ್ಲಿ ಎಳನೀರು ಸೇವಿಸಿದರೆ ಹಣಕೊಟ್ಟು ಧೂಳನ್ನು ಸೇವಿಸಿದಂತಾಗುತ್ತದೆ. ಈ ರೀತಿಯ ಚಿಕ್ಕ ಚಿಕ್ಕ ಸಮಸ್ಯೆಗಳೇ ಬಹು ದೊಡ್ಡವಾಗಿ ಕಾಡುವುದು.ಹಾಗೆ ಚಾಕಲೇಟ್ ಪೊಟ್ಟಣ ಕೂಡ. ಚಾಕಲೇಟ್ ಬಹಳ ಚಿಕ್ಕವಾಗಿ ಉದರಕ್ಕೆ ಸಿಹಿಯನ್ನು ಕೊಟ್ಟರೂ ಅದನ್ನು ಪ್ಯಾಕ್ ಮಾ್ಡಿದ ಪ್ಲಾಸ್ಟಿಕ್ ಭೂಮಿಗೆ ನುಂಗಲಾರದ ತುತ್ತು. ವಿಷಕಾರಿ ಪ್ಲಾಸ್ಟಿಕ್ ಭೂಮಿಯ ಒಡಲನ್ನು ಸೇರಿರುವುದರಿಂದ ಬಿದ್ದ ಮಳೆ ನೀರು ಭೂಮಿಯಲ್ಲಿ ಇಂಗುತ್ತಿಲ್ಲ ಪೋಲಾಗಿ ಹೋಗುತ್ತಿದೆ.

    ಶುಭ ಸಮಾರಂಭಗಳಲ್ಲಿ ಮಾವಿನ ಎಲೆಯ ತೋರಣಗಳನ್ನು ನಾವು ಈಗ ಕಾಣುತ್ತಿಲ್ಲ. ಎಲ್ಲವೂ ಪ್ಲಾಸ್ಟಿಕ್ ಮಯ. ಅದರದ್ದೇ ತೋರಣಗಳನ್ನು ಇಳಿ ಬಿಟ್ಟಿರುತ್ತೇವೆ.ಹಬ್ಬ ಹರಿದಿನಗಳಲ್ಲಿ ಮಾವಿನ ಎಲೆ ಕಟ್ಟಲು ಹಂಚಿ ಕಡ್ಡಿಗಳನ್ನು ಬಳಸುತ್ತಿದ್ದೆವು ಆದರೆ ಈಗ ಸುಲಭ ಎಂದು ತಗಡಿನ ಸ್ಟಾಪ್ಲರ್ ಪಿನ್ಗಳನ್ನು ಹೊಡೆದು ತೋರಣ  ಕಟ್ಟಿ ಒಣಗಿದ ಮೇಲೆ ರಸ್ತೆಗೆ ಎಸೆಯುತ್ತೇವೆ.ಅಪ್ಪಿ ತಪ್ಪಿ ದನಕರುಗಳ ಶರೀರಕ್ಕೆ  ಸ್ಟಾಪ್ಲರ್ ಪಿನ್ಗಳು ಸೇರಿದರೆ ಅವುಗಳಿಗೆ ಯಮ ಯಾತನೆ. ಅದರ ಬದಲು ತೋರಣ ಚುಚ್ಚಲು ನಾವು ಊದು ಬತ್ತಿಯ ಕಡ್ಡಿಗಳನ್ನು ಬಳಸಬಹುದು. 

    ಐಸ್ಕ್ರೀಂಗಳು ಅವುಗಳ ಬೇರೆ ಬೇರೆ ವಿಧಗಳು ಚಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಆಕರ್ಷಿಸಿವೆ. ಆ ಕಪ್ಗಳೆಲ್ಲಾ ಪ್ಲಾಸ್ಟಿಕ್ಕೇ.   ಐದಾರುವರ್ಷಗಳ ಹಿಂದೆ   ಐಸ್ಕ್ರೀಂಗಳು ಖರೀದಿಸುವಾಗ ಮಟ್ಕ ಕುಲ್ಫಿ ಎಂಬ ಐಸ್ಕ್ರೀಂನ್ನು ಸಣ್ಣ ಕುಡಿಕೆಯಲ್ಲೇ ಪ್ಯಾಕ್ ಮಾಡಿರುತ್ತಿದ್ದರು. ಆದರೀಗ ಮಡಿಕೆ ಆಕಾರದ ಪ್ಲಾಸ್ಟಿಕ್ ಕಂಟೇನರ್ಳಲ್ಲಿ ಸಿಗುತ್ತಿದೆ. ನೀರು, ಕಾಫಿ, ಟೀ ಕಪ್ಗಳು ಪ್ಲಾಸ್ಟಿಕ್ ನವೇ ಇವುಗಳ ನಿಯಂತ್ರಣದ ಕುರಿತು ಯೋಚಿಸಬೇಕಾಗಿದೆ. ಇತ್ತೀಚೆಗೆ ಪತ್ರಿಕೆ ಓದುವಾಗ ಹರ್ಯಾಣದ ಐಸ್ಕ್ರೀಂಪಾರ್ಲರಿನ ಮಾಲೀಕರು ತೆಂಗಿನ ಚಿಪ್ಪಿನಿಂದ ವಿನ್ಯಾಸ ಗೊಳಿಸಿದ ಕಪ್ಗಳಲ್ಲಿ ಸರ್ವ್ ಮಾಡಿಸುತ್ತಾರೆ ಎಂದಿತ್ತು  ಇದಂತೂ ಒಳ್ಳೆಯ ಯೋಚನೆ ಅನ್ನಿಸಿತು.ಕಾರಣ ಮನೆಗಳಲ್ಲಿ ತೆಂಗಿನ ಕಾಯಿ ಬಳಸಿದ ನಂತರ ಚಿಪ್ಪನ್ನು ಎಸೆಯುತ್ತಾರೆ ಕಾರಣ ಒಲೆಗಳು ಇಲ್ಲ ಅನ್ನುವ ಕಾರಣಕ್ಕೆ. ನಗರ ಪ್ರದೇಶದ  ತೊಂಭತ್ತು ಪ್ರತಿಶತ ನಾಗರಿಕರೆಲ್ಲಾ ಸ್ನಾನದ ನೀರಿಗೆ ಸೋಲಾರ್, ಎಲೆಕ್ಟ್ರಿಕ್ ಗೀಝರ್, ಗ್ಯಾಸ್ ಗೀಝರ್ ಬಳಸುವುದು.

     ಕಾಗದಕ್ಕೆ ತತ್ವಾರವಿರುವಂತಹ ಕಾಲ ನಾವು ಬಳಸುವ ಪ್ರತಿಯೊಂದು ಕಾಗದವೂ ಅರಣ್ಯ ನಾಶದ ಸಂಕೇತವೇ ಆಗಿದೆ. ಅದರಲ್ಲೂ ಮದುವೆ ಆಮಂತ್ರಣ ಪತ್ರಿಕೆಗಳಿಗೆ ಬಳಸುವ ಕಾಗದ ವ್ಯರ್ಥ.ದುಬಾರಿ ಕಾಗದ ಬಾರಿ ಬೆಲೆ ಕೊಟ್ಟರೂ ಉಪಯೋಗ  ನೂರರಲ್ಲಿ ಎರಡು  ಭಾಗ ಮಾತ್ರ , ಅದರಲ್ಲಿ ಪ್ಲಾಸ್ಟಿಕ್ಕಿನ ತೆಳು ಹೊದಿಕೆಯಿರುತ್ತದೆ. ಅದರ ಬದಲು ಕರವಸ್ತ್ರ, ಟವಲ್ ಇತ್ಯಾದಿಗಳಲ್ಲಿ ಮುದ್ರಿಸಿಕೊಟ್ಟರೆ ಅನುಕೂಲ ಬಟ್ಟೆಯ ಮೇಲಿನ ಮುದ್ರಣ ಒಂದರೆರಡು ಬಗೆತದ ಬಳಿಕ ಹೋಗುತ್ತದೆ  ನಂತರ ಮನೆಯ ಉಪಯೋಗಕ್ಕೆ ಬರುತ್ತದೆ. ಈ ಪರಿಕಲ್ಪನೆ ಸಾಕಾರವಾದರೆ ಒಂದಷ್ಟು ಜನರಿಗೆ ಉದ್ಯೋಗ ದೊರೆತಂತಾಗುತ್ತದೆ. ಕಾಗದದ ಬಳಕೆಯನ್ನು ಸಲೀಸಾಗಿ ನಿರಾಕರಿಸಲು ಸಾಧ್ಯವಿಲ್ಲ ವ್ಯರ್ಥವಾಗುವ ಕಬ್ಬಿನ ಸಿಪ್ಪೆಯನ್ನು  ಕಾಗದದ ತಯಾರಿಕೆಯಲ್ಲಿ ಯಥೇಚ್ಚವಾಗಿ ಬಳಸಿಕೊಳ್ಳಬಹುದು.

    ಅತ್ಯಂತ ಪಾಯಕಾರಿ  ಬೆಳವಣಿಗೆ ಎಂದರೆ ಟಿಶ್ಯು ಪೇಪರ್ ಬಳಕೆ. ಇವುಗಳು ಮರದ ಇರುಳಿನಿಂದಲೇ ಮಾಡುವುದು ಹಾಗೆ ಮರದ ತಿರುಳಿನಿಂದ ಬಿಳಿಯ ಬಣ್ಣಕ್ಕೆ ತರಬೇಕೆಂದರೆ ಹೈಡ್ರೋಜನ್  ಪೆರಾಕ್ಸ್ಐಡ್, ಸೋಡಿಯಂ ಕ್ಲೋರೈಡ್, ಕ್ಯಾಲ್ಸಿಯಂ ಹೈಪೋಕ್ಲೋರೈಡ್ಗಳನ್ನು ಬಳಸಿತುತ್ತಾರೆ. ಇವುಗಳು ಆರೋಗ್ಯಕ್ಕೆ ಮಾರಕ . ಇದೇ ಟಿಶ್ಯು ಪೇಪರ್ಗಳನ್ನು ಚಂಪಾಕಲಿಯಂತಹ ಸಿಹಿ ತಿಂಡಿಗಳಲ್ಲಿ ಕಲಬೆರಕೆಯಾಗಿ ಬಳಸುವುದಿದೆ. ಇಂತಹ ಟಿಶ್ಯು ಪೇಪರ್ ಬದಲಿಗೆ ಕರವಸ್ತ್ರ,ಟವಲ್ ಬಳಸಬಹುದಲ್ಲವೇ. ಗಣೇಶನ ಹಬ್ಬದ ಸಂದರ್ಭದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳ ಬದಲು, ರಾಸಾಯನಿಕ ಬಣ್ಣಗಳ ಮೂರ್ತಿಗಳ ಬದಲು      ಮಣ್ಣಿನಸ್ವಾಭಾವಿಕ ಮೂರ್ತಿಗಳನ್ನು ಮಾಡಿ ಪೂಜಿಸಿದರೆ ಪರಿಸರ ಜಾಗೃತಿ ವಹಿಸಿದಂತೆ ಆಗುತ್ತದೆ.

    ಮಳೆ ಬಾರದೆ ಬೆಳೆ ಇಲ್ಲ ಅಂತರ್ಜಲದ ಮಟ್ಟ ತೀರಾ ಕುಸಿದಿರುತ್ತದೆ ಹಾಗಾಗಿ ಕುಡಿಯುವ ನೀರನ್ನು ಹಣ ಕೊಟ್ಟು ವ್ಯರ್ಥ ಮಾಡುವುದು ಬದಲಾಗಬೇಕು. ಮದುವೆ,ಮುಂಜಿ ಗೃಹಪ್ರವೇಶ,ಯಾವುದೇ ಸಮಾರಂಭವಾಗಲಿ  ಕುಡಿಯುವ ನೀರಿನ ಬಾಟಲಿಗಳನ್ನು ಕೊಡುತ್ತಾರೆ ಇದರಲ್ಲಿ ಎರಡು ದುರುಪಯೋಗ ಒಟ್ಟಿಗೆ ಇದೆ ಒಂದು ಪ್ಲಾಸ್ಡಿಕ್ ದುರುಪಯೋಗ ಇನ್ನೊಂದು ಕುಡಿಯುವ ನೀರಿನ ದುಂದು ವೆಚ್ಚ. ನೀರು ಕುಡಿದು ಎಸೆಯುವ ಬಾಟಲಿಗಳ ಕತ್ತಿನ ಭಾಗ ಕತ್ತರಿಸಿ ತಳಭಾಗದಲ್ಲಿ ರಂಧ್ರ ಕೊರೆದು ಮಣ್ಣು ತುಂಬಿಸಿ ಬೀಜ ಹಾಕಿ ಖಾಲಿ ಇರುವ ಜಾಗಗಳಿಗೆ ಹಾಕಿದರೆ ಶೇಕಡಾ ನೂರರಷ್ಟು ಅಲ್ಲದೇ ಇದ್ದರೂ ನಲವತ್ತು –ಐವತ್ತು ಭಾಗವಾದರೂ ಬೀಜವೊಡೆದು ಸಸಿಗಳಾಗಿ ಮರಗಳಾಗಬಹುದು.

    ಶಾಲಾ ಕಾಲೇಜಿನ ಮಕ್ಕಳು ಬಳಸುವ ಲೇಖನ ಸಾಮಾಗ್ರಿಗಳೂ ಸಂಪೂರ್ಣ ಪ್ಲಾಸ್ಟಿಕ್ ಮಯವೇ ಎಲ್ಲಾ ಉಪಯೋಗಿಸಿ ಎಸೆಯುವ ಸಾಧನೆಗಳೇ ಉದಾಹರಣೆಗೆ ಪುಸ್ತಕಗಳಿಗೆ ಹಾಕುವ ರ್ಯಾಪರ್, ಪೆನ್,ಸ್ಕೇಲ್, ಶಾರ್ಪನರ್,ಕ್ಲಚ್ ಪೆನ್ಸಿಲ್ ಇತ್ಯಾದಿ. ಬಳಸಿ ಎಸೆಯಬಹುದಾದ ಪೆನ್ಗಳು ಮಕ್ಕಳ ಬರವಣಿಗೆಯ ಸೌಂದರ್ಯ ಕಸಿದಿದೆ ಎನ್ನುವುದು ನನ್ನ ಅನಿಸಿಕೆ.  ಅದರ ಬದಲು ಇಂಕ್ ಪೆನ್ಗಳಲ್ಲಿ ಬರೆಯವ ಅಭ್ಯಾಸಕ್ಕೆ ಮರುಚಾಲನೆ ದೊರೆತರೆ ಮಕ್ಕಳ ಅಕ್ಷರವೂ ದುಂಡಾಗುತ್ತದೆ ವಿಷಕಾರಿ ಪ್ಲಾಸ್ಟಿಕ್ ಬಳಕೆ ತುಸು ತಪ್ಪಿದಂತಾಗುತ್ತದೆ.

    ಆಹಾರ ಪದಾರ್ಥಗಳನ್ನು ಹೋಟೆಲ್ಗಳಲ್ಲಿ ಪ್ಲಾಸ್ಟಿಕನಲ್ಲೇ ಸುತ್ತಿ ಕೊಡುವುದು ಸಾಮಾನ್ಯವಾಗಿದೆ ಅದರಲ್ಲೂ ಕಪ್ಪಬಣ್ಣದ ಪ್ಲಾಸ್ಟಿಕ್ನಲ್ಲಿ ನ್ಯೂಸ್ ಪೇಪರಗಳಲ್ಲಿ ತಿನ್ನುವ ತಿಂಡಿಗಳನ್ನು ಕೊಡುವುದು ಅತ್ಯಂತ ಅಪಾಯಕಾರಿ ಹಾಗೆ ಮನೆಗಳಲ್ಲಿ ಬೇಳೆ ಕಾಳುಗಳನ್ನು ತುಂಬಿಸಿಡುವ ಪ್ಲಾಸ್ಟಿಕ್ ಡಬ್ಬಿಗಳು ಇದರ ಬಗ್ಗೆ ಗೃಹಿಣಿಯರು ಎಚ್ಚರ ವಹಿಸಬೇಕು.ಹಿಂದೆ ಬಾಳೆ ಎಲೆ, ಮುತ್ತುಗದ ಎಲೆ, ಅಡಿಕೆ ಹಾಳೆಗಳಲ್ಲಿ  ಕಟ್ಟುತ್ತ ಇದ್ದರು.  ನ್ಯೂಸ್ ಪೇಪರಗಳಲ್ಲಿ ಸುತ್ತಿದ ಬಜ್ಜಿ, ಬೋಂಡಾಗಳು ಕ್ಯಾನ್ಸರನ ರಹದಾರಿ ಎಂದು ತಮಿಳುನಾಡಿನ ಸರಕಾರ ಈ ಕುರಿತು ಬೀದಿ ಬದಿ ತಿಂಡಿ ತಿನಿಸು ವ್ಯಾಪಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದನ್ನು ಇಲ್ಲಿ ನೆನೆಯ ಬಹುದು. ಹಾಗೆ ಹೋಟಲ್ಗಳ ಇಡ್ಲಿ ಪ್ಲಾಸ್ಟಿಕ್ ಸಹಿತ ಬೆಂದಿರುತ್ತದೆ ಅದೂ ಕ್ಯಾನ್ಸರ್ ಕಾರಕ ಎಂಬುದು ಈಗ ಜಗಜ್ಜಾಹೀರಾಗಿದೆ. ಈ ಬಗ್ಗೆ ಗ್ರಾಹಕರು ಜಾಗೃತವಾಗಬೇಕು.

    ಮಣ್ಣಿನ  ಪಾತ್ರೆಗಳ ಉಪಯೋಗವನ್ನು ಮಾಡಿದಷ್ಟೂ ನಮಗೇ ಅನುಕೂಲ.ಇದು ಅಗತ್ಯ ಅಲಂಕಾರ ಎರಡಕ್ಕೂ ಉಪಯೋಗಕ್ಕೆ ಬರುತ್ತದೆ. ಅಲ್ಲುಮಿನಿಯಂ, ಸ್ಟೇನ್ಲೆಸ್ ಸ್ಟೀಲ್, ಕೋಟೆಡ್ ಪಾತ್ರೆಗಳು , ನಾನ್ಸ್ಟಿಕ್  ಕುಕ್ ವೇರ್ಗಳು ಆರೋಗ್ಯಕ್ಕೆ ಅಪಾಯಕಾರಿ.ಐಷಾರಾಮಿ ಹೋಟೆಲ್ಗಳಲ್ಲಿ ಮಣ್ಣಿನ ಪಾತ್ರೆ, ತಾಮ್ರದ ಬಡಿಸುವ ಪಾತ್ರೆಗಳೇ ಹೆಚ್ಚಾಗಿವೆ.ಇವುಗಳಲಿ ಆಹಾರದ ಪೋಷಕಾಂಶ ನಾಶವಾಗುವುದಿಲ್ಲ. ಅದರಲ್ಲೂ ಮಣ್ಣಿನಲ್ಲಿರುವ ಲವಣಗಳು ಆಮ್ಲೀಯ ಆಂಶಗಳನ್ನಿ ಹೀರಿಕೊಳ್ಳುತ್ತವೆ. ನಮ್ಮ ಹಿರಿಯರಿಗೆ ಇವುಗಳ ಉಪಯೋಗ ತಿಳಿದಿದ್ದ ಕಾರಣದಿಂದಲೇ ತುಪ್ಪದ ಕುಡಿಕೆ, ಸುಣ್ಣದ ಕುಡಿಕೆ, ನೀರಿನ ಗಡಿಗೆ,ಸಾರಿನ ಮಡಿಕೆ,ಮೊಸರಿನ ಮಡಿಕೆ, ಸಾಮಾನ್ಯವಾಗಿದ್ದವು.

    ತ್ರಿಪದಿ ಕವಿ ಸರ್ವಜ್ಞನ ಭಾವ ಚಿತ್ರವನ್ನು ನೋಡಿದರೆ,ಆತನ ಕೈಯಲ್ಲಿ ಮಣ್ಣಿನ ಪಾತ್ರೆಇರುವುದನ್ನು ಕಾಣಬಹುದು ಅದನ್ನೇ ಆತ “ಕರದಿ ಕಪ್ಪರವುಂಟು” ಎಂದಿರುವುದು. ಹಾಗೆ ಋಷಿಮುನಿಗಳ ಕೈಯಲ್ಲಿ ಹಿತ್ತಾಳೆಯ ಕಮಂಡಲು ಕಾಣ ಬಹುದು ಇವುಗಳ ನೀರು ಅರೋಗ್ಯಕ್ಕೆ ಅನುಕೂಲವಿತ್ತು  ಆದರೀಗ ಹಳೆ ಕಾಲದ ತಾಮ್ರ ಹಿತ್ತಾಳೆ ಪಾತ್ರೆ . ಕಂಚಿನ ಪಾತ್ರೆಗಳನ್ನು ತೂಕಕ್ಕೆ ಹಾಕಿ  ಕೈತೊಳೆದುಕೊಳ್ಲುತ್ತದ್ದೇವೆ. ಕುಡಿಯುವ ನೀರಿನ ಶೇಖರಣೆಯೂ ಪ್ಲಾಸ್ಟಿಕ್ನಲ್ಲಾಗುತ್ತಿದೆ.

    ಹಿರಿಯರು ಅಡುಗೆ ಮಾಡುವಾಗ, ಬಾಳೆ, ಅರಿಶಿಣ.ಹಲಸು ಇತ್ಯಾದಿ ಎಲೆಗಳನ್ನು ಬಳಸುತ್ತಿದ್ದರು ಅದರಲ್ಲೂ ಕಡುಬು ಮಾಡುವಾಗ ಈಗೆಲ್ಲ ಪ್ಲಾಸ್ಟಿಕ್ ಮೌಲ್ಡ್ ಬಂದಿವೆ .ಹಿಂದೆ ಊಟಕ್ಕೆ ಹಾಗು ಅಡುಗೆಗಳಲ್ಲಿ ಬಾಳೆ ಎಲೆಗಳನ್ನು, ಅಡಿಕೆ ಹಾಳೆಗಳನ್ನು,ಮುತ್ತುಗದ ಎಲೆ ಇತ್ಯಾದಿಗಳನ್ನು ಬಳಕೆ ಮಾಡುತ್ತಿದ್ದವು. ಈಗ ಅದೆಲ್ಲವನ್ನು ಕಳೆದು ಬಾಳೆ ಎಲೆಯ ಆಕಾರವನ್ನು ಹೋಲುವ ಪೇಪರ್ ಮೇಲೆ ತಿನ್ನುವಂತಾಗಿದೆ. ಒಂದು ಕಾಲದಲ್ಲಿ ಬಾಳೆ ಎಲೆ ಆಹಾರವನ್ನು ಸುತ್ತುವ ಪರಿಕರವಾಗಿತ್ತು. ಆದರೆ ಈಗ ಫುಡ್  ರ್ಯಾಪರ್ಗಗಳು ಸಿಗುತ್ತದೆ. ಪರ್ಚ್ಮೆಂಟ್ ಪೇಪರ್, ಅಲ್ಯುಮಿನಿಯಂ ಫಾಯಿಲ್ ರೀತಿಯಲ್ಲಿ ಆಹಾರ ಒಣಗಿಸಲು ಅಂಟಿಸಲು ಮತ್ತು ಬಿಸಿಯನ್ನು ಕಾಯ್ದಿಡಲು ಬಳಸುತ್ತಿದ್ದೇವೆ.

    Photo by Kenneth Carpina from Pexels

    ಬಾಳೆ ಎಲೆಯ ಮೇಲೆ ಬಿಸಿ ಊಟ ಬಡಿಸಿದಾಗ ಅದರಲ್ಲಿರುವ ಪೋಷಕಾಂಶಗಳು ನಮ್ಮ ಶರೀರವನ್ನು ಸೇರುತ್ತಿದ್ದವು, ಜೀರ್ಣ ಕ್ರಿಯೆ ಸುಲಭವಾಗಿ ಆಗುತ್ತಿತ್ತು. ಇದರಿಂದ ಬಿಳಿ ಕೂದಲಿನ ಪ್ರಮಾಣ ಕಡಿಮೆಯಾಗುತ್ತಿತ್ತು. ಬಾಳೆ ಎಲೆಯಲ್ಲಿ  ಇರುವ ಎಪಿಗ್ಯಾಲೊಕೋಟ್ಟಟಿನ್ ಪಾಲಿಫೆನೇಲ್‌ಗಳು ಪ್ರಕೃತಿದತ್ತವಾದ ಆಂಟಿ ಆಕ್ಸಿಡೆಂಟ್‌ಗಳು ಇದು ತ್ವಚೆಗೆ ಉತ್ತಮ ಪೋಷಕಾಂಶ ನೀಡುತ್ತಿದ್ದವು. ಇದೆಲ್ಲವನ್ನು ಬಿಟ್ಟು ನಾವು ಆಧುನಿಕತೆಯ ಹೆಸರಿನಲ್ಲಿ ವಿಷ ಆಹಾರವನ್ನೇ ಸೇವನೆ ಮಾಡುತ್ತಿದ್ದೇವೆ. ಥಾಯ್ಲೆಂಡ್ ಸರ್ಕಾರ ಆಹಾರ ಪದಾರ್ಥಗಳು ಹಣ್ಣು ತರಕಾರಿಗಳನ್ನು ಸುತ್ತಲು ಕಡ್ಡಾಯವಾಗಿ ಬಾಳೆ ಎಲೆಗಳನ್ನೇ ಬಳಸಬೇಕು ಎಂದು ನಿಯಮ ಜಾರಿ ಮಾಡಿರುವಂತೆ ನಮ್ಮ ಸರಕಾರವೂ ನಿಯಮ ತರಬೇಕು. ಸಾಧ್ಯ ಆದಷ್ಟೂ ಬಟ್ಟೆ ಬ್ಯಾಗ್ ಗಳ ಉಪಯೋಗ ಬಂದರೆ ಚೆನಾಗಿರುತ್ತದೆ. ಸರಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಆದರೆ ಈಗ ಸಿಗುತ್ತಿರುವ ಬಟ್ಟೆ ಬ್ಯಾಗಿನಲ್ಲೂ ಕಲಬೆರಕೆ ಇದೆ ಬಿಸಿಗೆ ಹಿಡಿದರೆ ಪ್ಲಾಸ್ಟಿಕ್ ಜಿನುಗಿದಂತೆ ಜಿನುಗುತ್ತದೆ.

    ಗೃಹಾಲಂಕಾರಕ್ಕೆ ನಾವೀಗ ಪ್ಲಾಸ್ಟಿಕ್ ಹೂಗಳನ್ನು ಬಳಸುತ್ತಿದ್ದೇವೆ.ಅದನ್ನು ಬಿಟ್ಟು ಮನೆಗಳಲ್ಲಿ ನಮಗೆ ಬೇಕಾದ ಹೂಗಳನ್ನು ಸಾಧ್ಯವಾದಷ್ಟೂ ಬೆಳೆಯಬಹುದು. ಹಾಗಾಗಿ ತಾರಸಿ ತೋಟಗಳ ಟ್ರೆಂಡ್ ಇತ್ತೀಚೆಗೆ ಬಹಳ ಮಾನ್ಯತೆ ಪಡೆಯುತ್ತಿದೆ.ಹಾಗಾಗಿ ಮನುಷ್ಯ ಯಾವುಕ್ಕೆ ಪ್ಲಾಸ್ಟಿಕ್ ಅನ್ನು ಪರ್ಯಾಯ ತೆಗೆದುಕೊಂಡಿದ್ದೇವೋ ಅವವೇ ಆಯ್ಕೆಗಳಿಗೆ ಮತ್ತೆ ಹಿಂದಿರುಗಿದರೆ ಪರಿಸರ ಹಾನಿ ಆರೋಗ್ಯ ಹಾನಿ ಎರಡೂ ತಪ್ಪುತ್ತದೆ. ಪರಿಸರ  ಹಾನಿಯಲ್ಲಿ ಪ್ಲಾಸ್ಡಿಕ್ದೇ ಸಿಂಹ ಪಾಲು ಇದರ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕಾದುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ.

    Photo by Tom Fisk from Pexels

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

     

    spot_img

    More articles

    1 COMMENT

    1. Good article. Even in malls if you buy a coffee there is cup straw and plastic spoon. It is western culture where they can dispose waste scientifically but here it leads to lots of problems

    LEAVE A REPLY

    Please enter your comment!
    Please enter your name here

    Latest article

    error: Content is protected !!