ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,00,636 ಹೊಸ ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿವೆ. ಕಳೆದ ಎರಡು ತಿಂಗಳಲ್ಲಿ ಇದು ಅತ್ಯಂತ ಕಡಿಮೆ ಸಂಖ್ಯೆಯಾಗಿದೆ. ಸತತ 11 ದಿನಗಳಿಂದ 2 ಲಕ್ಷಕ್ಕೂ ಕಡಿಮೆ ದೈನಂದಿನ ಹೊಸ ಪ್ರಕರಣಗಳು ದಾಖಲಾಗಿವೆ.ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಭಾಗಿತ್ವ ಮತ್ತು ನಿರಂತರ ಪ್ರಯತ್ನಗಳ ಫಲ ಇದಾಗಿದೆ.
ಭಾರತದಲ್ಲಿ ನಿರಂತರವಾಗಿ ಸಕ್ರಿಯ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿದೆ. ಸತತ ಎರಡನೇ ದಿನ ಕೂಡ ಸಕ್ರಿಯ ಪ್ರಕರಣಗಳು 15 ಲಕ್ಷಕ್ಕಿಂತ ಕಡಿಮೆಯಾಗಿದ್ದು, ಇಂದು 14,01,609 ಪ್ರಕರಣಗಳು ದಾಖಲಾಗಿವೆ. ನಿರಂತರ ಏಳು ದಿನಗಳಿಂದ 20 ಲಕ್ಷಕ್ಕೂ ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ.
ಹೆಚ್ಚು ಮಂದಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದು 25 ದಿನಗಳಿಂದ ನಿರಂತರವಾಗಿ ಚೇತರಿಕೆಯಲ್ಲಿ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 1,74,399 ಮಂದಿ ಗುಣಮುಖರಾಗಿದ್ದಾರೆ. ದೈನಂದಿನ ಪ್ರಕರಣಗಳಿಗೆ ಹೋಲಿಸಿದರೆ 24 ಗಂಟೆಗಳಲ್ಲಿ 73,763 ಮಂದಿ ಗುಣಮುಖರಾಗಿದ್ದಾರೆ.
ಸಾಂಕ್ರಾಮಿಕ ಕಂಡು ಬಂದ ನಂತರದಿಂದ ಈ ತನಕ 2,71,59,180 ಮಂದಿ ಈಗಾಗಲೇ ಚೇತರಿಸಿಕೊಂಡಿದ್ದಾರೆ. ಚೇತರಿಕೆ ಪ್ರಮಾಣ ಹೆಚ್ಚುತ್ತಿರುವುದನ್ನು ಇದು ಸೂಚಿಸುತ್ತಿದ್ದು, ಒಟ್ಟಾರೆ ಗುಣಮುಖರಾಗಿರುವ ಪ್ರಮಾಣ ಶೇ 93.94 ರಷ್ಟಿದೆ.
ಕಳೆದ 24 ಗಂಟೆಗಳಲ್ಲಿ 15,87,589 ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದ್ದು, ಈವರೆಗೆ 36.6 ಕೋಟಿ (36,63,34,111) ಗೂ ಹೆಚ್ಚು ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ.
ಒಂದು ಕಡೆ ಸೋಂಕು ಪತ್ತೆ ಪರೀಕ್ಷೆಗಳನ್ನು ಹೆಚ್ಚಿಸಲಾಗಿದ್ದು, ಇನ್ನೊಂದೆಡೆ ನಿರಂತರವಾಗಿ ಪಾಸಿಟಿವಿಟಿ ದರದಲ್ಲಿ ಇಳಿಕೆಯಾಗುತ್ತಿದೆ. ದೈನಂದಿನ ಪಾಸಿಟಿವಿಟಿ ದರ ಇಂದು ಶೇ 6.34 ರಷ್ಟಿದ್ದು, ನಿರಂತರ 14 ದಿನಗಳಿಂದ ಶೇ 10 ಕ್ಕಿಂತ ಕಡಿಮೆ ಇದೆ.
ಲಸಿಕಾ ವಲಯದಲ್ಲಿ ಈತನ ದೇಶಾದ್ಯಂತ ನಡೆದ ರಾಷ್ಟ್ರೀಯ ಲಸಿಕಾ ಅಭಿಯಾನದಲ್ಲಿ 23.27 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ. ಇಂದು ಬೆಳಿಗ್ಗೆ 7 ಗಂಟೆವರೆಗೆ ದೊರೆತ ತಾತ್ಕಾಲಿಕ ಮಾಹಿತಿಯಂತೆ 23,27,86,482 ಡೋಸ್ ಲಸಿಕೆಯನ್ನು 32,68,969 ಅವಧಿಯಲ್ಲಿ ಹಾಕಲಾಗಿದೆ.
ಆರೋಗ್ಯ ಕಾರ್ಯಕರ್ತರು | ಮೊದಲ ಡೋಸ್ | 99,68,836 |
ಎರಡನೇ ಡೋಸ್ | 68,62,013 | |
ಮುಂಚೂಣಿ ಕಾರ್ಯಕರ್ತರು | ಮೊದಲ ಡೋಸ್ | 1,62,06,661 |
ಎರಡನೇ ಡೋಸ್ | 86,71,758 | |
18-44 ವಯೋಮಿತಿಯವರು | ಮೊದಲ ಡೋಸ್ | 2,86,18,514 |
ಎರಡನೇ ಡೋಸ್ | 1,68,302 | |
45 ರಿಂದ 60 ವಯೋಮಿತಿಯವರು | ಮೊದಲ ಡೋಸ್ | 7,10,44,966 |
ಎರಡನೇ ಡೋಸ್ | 1,13,34,356 | |
60 ವರ್ಷ ಮೀರಿದರು | ಮೊದಲ ಡೋಸ್ | 6,06,75,796 |
ಎರಡನೇ ಡೋಸ್ | 1,92,35,280 | |
ಒಟ್ಟು | 23,27,86,482 |
(ವರದಿ ಪಿಐಬಿ)