ತಮ್ಮ ಪತಿ, ಹಿರಿಯ ಕಲಾವಿದ ದಿಲೀಪ್ ಕುಮಾರ್ ಅವರ ಆರೋಗ್ಯ ಸ್ಥಿರವಾಗಿದ್ದು ಆದಷ್ಟು ಬೇಗನೆ ಅವರನ್ನು ಡಿಸ್ ಚಾರ್ಜ್ ಮಾಡುವುದಾಗಿ ವೈದ್ಯರು ಭರವಸೆ ನೀಡಿದ್ದಾರೆಂದು ಸಾಹಿರಾ ಬಾನು ಈಗ್ಗೆ ಕೆಲವು ಗಂಟೆಗಳ ಹಿಂದೆ ಟ್ವೀಟ್ ಮಾಡಿದ್ದಾರೆ.

ವದಂತಿಗಳನ್ನು ನಂಬಬಾರದೆಂತಲೂ ಮತ್ತು ದಿಲೀಪ್ ಕುಮಾರ್ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಬೇಕೆಂತಲೂ ಅವರು ಮನವಿ ಮಾಡಿರುವುದರ ಜೊತೆಗೆ ದಿಲೀಪ್ ಕುಮಾರ್ ಅವರ ಇತ್ತೀಚಿನ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.
ಉಸಿರಾಟದ ತೊಂದರೆಗೆ ಒಳಗಾಗಿದ್ದ ದಿಲೀಪ್ ಕಮಾರ್ ಅವರನ್ನು ಭಾನುವಾರ ಮುಂಬೈನ ಹಿಂದೂಜ ಆಸ್ಫತ್ರೆಗೆ ಸೇರಿಸಲಾಗಿತ್ತು.