21.2 C
Karnataka
Sunday, September 22, 2024

    ಮುಂದಿನ ಕೋವಿಡ್ ಅಲೆಗಳಲ್ಲಿ ಮಕ್ಕಳು ಸೋಂಕಿತರಾಗುವರು ಎಂಬುದಕ್ಕೆ ಯಾವುದೇ ಆಧಾರ ಇಲ್ಲ

    Must read

    ಕೋವಿಡ್ -19 ಸಾಂಕ್ರಾಮಿಕದ ಮುಂದಿನ ಅಲೆಗಳು ಮಕ್ಕಳಲ್ಲಿ ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತವೆ ಎನ್ನುವುದು ತಪ್ಪು ಮಾಹಿತಿಯಾಗಿದೆ. ಮುಂದಿನ ಅಲೆಗಳಲ್ಲಿ ಮಕ್ಕಳು ಗಂಭೀರವಾಗಿ ಸೋಂಕಿಗೆ ಒಳಗಾಗುತ್ತಾರೆ ಎಂಬುದನ್ನು ತೋರಿಸಲು ಭಾರತದಲ್ಲಿ ಅಥವಾ ಜಾಗತಿಕವಾಗಿ ಯಾವುದೇ ದತ್ತಾಂಶಗಳ ಆಧಾರಗಳು ಇಲ್ಲ.

    ಪಿಐಬಿ ದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಕೋವಿಡ್ -19 ಕುರಿತ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ದೆಹಲಿಯ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಈ ವಿಷಯವನ್ನು ತಿಳಿಸಿದರು.

    ಭಾರತದ ಎರಡನೇ ಅಲೆಯ ಸಂದರ್ಭದಲ್ಲಿ ಸೋಂಕಿಗೆ ಒಳಗಾದ ಮತ್ತು ಆಸ್ಪತ್ರೆಗಳಲ್ಲಿ ದಾಖಲಾದ ಶೇಕಡ 60 ರಿಂದ 70 ಮಕ್ಕಳು ಬೇರೆ ರೋಗದಿಂದ ಬಳಲುತ್ತಿದ್ದರು ಇಲ್ಲವೇ ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದವರು ಎಂದು ಡಾ. ಗುಲೇರಿಯಾ ಉಲ್ಲೇಖಿಸಿದ್ದಾರೆ; ಆರೋಗ್ಯವಂತ ಮಕ್ಕಳು ಆಸ್ಪತ್ರೆಗೆ ದಾಖಲಾಗದ ಅವಶ್ಯಕತೆಯಿಲ್ಲದೆ ಸೌಮ್ಯ ಕಾಯಿಲೆಯಿಂದ ಚೇತರಿಸಿಕೊಂಡರು.

    ಭವಿಷ್ಯದ ಅಲೆಗಳನ್ನು ತಡೆಗಟ್ಟುವಲ್ಲಿ ಕೋವಿಡ್ ಸೂಕ್ತ ವರ್ತನೆ ಮುಖ್ಯವಾಗಿದೆ

    ಉಸಿರಾಟ ಸಂಬಂಧಿ ವೈರಾಣುಳಿಂದ ಉಂಟಾಗುವ ಸಾಂಕ್ರಾಮಿಕ ರೋಗಗಳಲ್ಲಿ ಅಲೆಗಳು ಸಾಮಾನ್ಯವಾಗಿ ಸಂಭವಿಸುತ್ತವೆ. 1918 ರ ಸ್ಪ್ಯಾನಿಷ್ ಜ್ವರ, ಎಚ್ 1 ಎನ್ 1 (ಹಂದಿ) ಜ್ವರ ಇದಕ್ಕೆ ಉದಾಹರಣೆಗಳಾಗಿವೆ ಎಂದು ಡಾ. ಗುಲೇರಿಯಾ ಹೇಳಿದರು. “1918 ರ ಸ್ಪ್ಯಾನಿಷ್ ಜ್ವರದ ಎರಡನೇ ಅಲೆ ದೊಡ್ಡದಾಗಿತ್ತು, ಅದರ ನಂತರ ಸಣ್ಣ ಮೂರನೇ ಅಲೆ ಇತ್ತು ಎಂದೂ ಅವರು ವಿವರಿಸಿದರು.

    ವೈರಸ್ ಗೆ ಸುಲಭವಾಗಿ ತುತ್ತಾಗುವ ಜನಸಂಖ್ಯೆ ಇರುವಾಗ ಆ ಸೋಂಕಿನ ಬಹು ಅಲೆಗಳು ಸಂಭವಿಸುತ್ತವೆ.ಜನಸಂಖ್ಯೆಯ ಬಹುಪಾಲು ಭಾಗವು ಸೋಂಕಿನ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಪಡೆದಾಗ, ವೈರಸ್ ಹರಡುವುದು ಕಡಿಮೆಯಾಗುತ್ತದೆ ಮತ್ತು ಸೋಂಕು ನಿರ್ದಿಷ್ಟ ಋತುವಿಗೆ ಸೀಮಿತವಾಗುತ್ತದೆ. ಉದಾಹರಣೆಗೆ H1N1 ಸಾಮಾನ್ಯವಾಗಿ ಮಾನ್ಸೂನ್ ಅಥವಾ ಚಳಿಗಾಲದಲ್ಲಿ ಹರಡುತ್ತದೆ.

    ವೈರಸ್ ನ ಬದಲಾವಣೆಯಿಂದಾಗಿ ಅಲೆಗಳು ಸಂಭವಿಸಬಹುದು.(ಉದಾಹರಣೆಗೆ ಹೊಸ ರೂಪಾಂತರಗಳು)ಹೊಸ ರೂಪಾಂತರಗಳು ಹೆಚ್ಚು ಸಾಂಕ್ರಾಮಿಕವಾಗುವುದರಿಂದ, ವೈರಸ್ ಹರಡಲು ಹೆಚ್ಚಿನ ಅವಕಾಶವಿರುತ್ತದೆ.

    ಪ್ರಕರಣಗಳು ಹೆಚ್ಚಾದಾಗ, ಜನರಲ್ಲಿ ಭಯವಿರುತ್ತದೆ ಮತ್ತು ಮಾನವರ ನಡವಳಿಕೆಯು ಈ ಸಮಯದಲ್ಲಿ ಬದಲಾಗುತ್ತದೆ. ಕೋವಿಡ್ ಶಿಷ್ಟಾಚಾರವನ್ನು ಪಾಲಿಸುತ್ತಾರೆ. ಇದು ಪ್ರಸರಣ ಸರಪಳಿಯನ್ನು ಮುರಿಯಲು ಸಹಾಯ ಮಾಡುತ್ತದೆ. ಹೀಗಾಗಿ ಅನ್ಲಾಕ್ ಸಂದರ್ಭದಲ್ಲಿ ಸೋಂಕು ದೂರುವಾಗೆ ಬಿಟ್ಟಿತು ಎಂದು ಜನ ಭಾವಿಸಿ ಕೋವಿಡ್ ಸೂಕ್ತ ನಡವಳಿಕೆಯನ್ನು ಮರೆತು ಬಿಡುತ್ತಾರೆ. ಈ ಕಾರಣದಿಂದಾಗಿ, ವೈರಸ್ ಮತ್ತೆ ಸಮುದಾಯದಲ್ಲಿ ಹರಡಲು ಪ್ರಾರಂಭಿಸುತ್ತದೆ, ಇದು ಮತ್ತೊಂದು ಅಲೆಗೆ ಕಾರಣವಾಗುತ್ತದೆ. .

    ನಮ್ಮ ಜನಸಂಖ್ಯೆಯ ಹೆಚ್ಚಿನ ಭಾಗಕ್ಕೆ ಲಸಿಕೆ ಹಾಕಲಾಗಿದೆ ಮತ್ತು ಹೆಚ್ಚಿನ ಜನರಲ್ಲಿ ನೈಸರ್ಗಿಕ ರೋಗನಿರೋಧಕ ಶಕ್ತಿ ಉಂಟಾಗಿದೆ ಎಂದು ಹೇಳುವವರೆಗೂ ನಾವು ಕೋವಿಡ್ ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಾಗಿದೆ ಎಂದು ಅವರು ಹೇಳಿದರು.

    “ಸಾಕಷ್ಟು ಜನರಿಗೆ ಲಸಿಕೆ ಹಾಕಿದಾಗ ಅಥವಾ ಸೋಂಕಿನ ವಿರುದ್ಧ ನಾವು ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿಯನ್ನು ಪಡೆದಾಗ, ಈ ಅಲೆಗಳು ನಿಲ್ಲುತ್ತವೆ. ಕೋವಿಡ್ ಸೂಕ್ತವಾದ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವುದೊಂದೇ ಇದಕ್ಕೆ ಮಾರ್ಗವಾಗಿದೆ


    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!