ಕೋವಿಡ್ ಎರಡನೇ ಅಲೆ ಕಡಿಮೆಯಾಗುತ್ತಿದೆ.ಈ ಅಲೆಯನ್ನು ಅನೇಕರು ಮೆಟ್ಟಿನಿಂತು ಎದುರಿಸಿ ಬಂದಿದ್ದಾರೆ. ಗೆದ್ದವರ ಪಾಸಿಟಿವ್ ಕಥೆಗಳನ್ನು ಇಲ್ಲಿ ಸಾದರ ಪಡಿಸುತ್ತಿದ್ದೇವೆ. ಈ ಗೆಲವು ಇನ್ನೊಬ್ಬರಿಗೆ ಸ್ಫೂರ್ತಿಯಾಗಲಿ. ಕರೋನಾ ಒಂದೇ ಅಲ್ಲ ಯಾವ ರೋಗ ಬಂದರು ಧೈರ್ಯದಿಂದ ಎದುರಿಸಿದಾಗ ಜಯಿಸಲು ಸಾಧ್ಯ.
Nobody thought that I will get covid
ಕೋವಿಡ್ ಮೊದಲ ಅಲೆ ಬಂದಾಗಲೇ ನಾವು ಎಲ್ಲಾ ಎಚ್ಚರಿಕೆಯನ್ನೂ ತೆಗೆದುಕೊಳ್ತಾಯಿದ್ವಿ. ಕೋವಿಡ್ ಶಿಷ್ಟಾಚಾರಗಳನ್ನೆಲ್ಲಾ (protocols) ಫಾಲೋ ಮಾಡ್ತಾ ಇದ್ವಿ.ಮಾಸ್ಕ್ ಹಾಕ್ಕೊಳೋದು, ಸೋಷಿಯಲ್ ಡಿಸ್ಟೆನ್ಸಿಂಗ್ ಎಲ್ಲಾನೂ ಮಾಡ್ತಾ ಇದ್ವಿ. ಹಾಗಾಗಿ ನಾವು ಅಂದುಕೊಂಡ್ವಿ we are safe ಅಂತ.
ಅವತ್ತಿ ಏಪ್ರಿಲ್ 4 .ಭಾನುವಾರ .ಮನೆ ಸಮೀಪದ ಆಸ್ಪತ್ರೇಲೆ ವ್ಯಾಕ್ಸಿನೇಷನ್ ಹಾಕಿಸ್ಕೊಂಡೆ .ಆಮೇಲೆ ಜ್ವರ ಬರುತ್ತೆ ಅಂತ
ಗೊತ್ತಿದ್ದ ಕಾರಣ ಟ್ಯಾಬ್ಲೆಟ್ಸ್ ತಗೋತಾ ಇದ್ದೆ. ಎರಡು ದಿನವಾದ್ರೂ ಜ್ವರ ಕಮ್ಮಿನೇ ಆಗ್ಲಿಲ್ಲ . ಮೂರು ದಿನ, ನಾಲ್ಕು ದಿನ, ಐದು ದಿನವೂ ಆಯ್ತು. ಆದಿನ ಶನಿವಾರ. ನಂಗೆ ಜಾಸ್ತಿನೇ ಜ್ವರ ಇತ್ತು. ಮೈ ಕೈ ನೋವೂ ಜಾಸ್ತಿ ಇತ್ತು ಹಾಗೇ vomitting sensation ಸಹ ಇತ್ತು. ಹಾಗಾಗಿ ಹಾಸ್ಪಿಟಲ್ ಗೆ ಅಡ್ಮಿಟ್ ಆಗಿಬಿಡೋಣ, ಅಲ್ಲಿ ಡ್ರಿಪ್ಸ್ ಕೊಟ್ರೆ ಸ್ವಲ್ಪ ಸುಸ್ತು, vomiting ಎಲ್ಲಾ ಕಮ್ಮಿ ಆಗಬಹುದು ಅಂತ ಯೋಚಿಸಿ ಆಸ್ಪತ್ರೆಗೆ ಹೋದ್ವಿ.
ಅಡ್ಮಿಟ್ ಆಗೋದಾದ್ರೆ ಆಗಿ ಅಥವಾ ಕೋವಿಡ್ ಟೆಸ್ಟ್ ಮಾಡಿಸಿದ ನಂತರ ಬಂದು ಅಡ್ಮಿಟ್ ಆಗಿ. ಆದ್ರೆ ಟೆಸ್ಟ್ ರಿಪೋರ್ಟ್ ಪಾಸಿಟೀವ್ ಬಂದ್ರೆ ನಮ್ಮಲ್ಲಿ ಕೋವಿಡ್ ಗೆ ಟ್ರೀಟ್ ಮೆಂಟ್ ಕೊಡಲ್ಲ ಅಂತ ಅಲ್ಲಿನ ಡಾಕ್ಟರ್ ಹೇಳಿದ್ರು. “ನಂಗೆ ತುಂಬಾ ವೀಕ್ ನೆಸ್ ಇದೆ ಹಾಗೇ vomiting ಸಹ ಜಾಸ್ತಿ ಇದೆ ದಯವಿಟ್ಟು ಅಡ್ಮಿಟ್ ಮಾಡಿಕೊಳ್ಳಿ ಅಂತ ನಾನು ಡಾಕ್ಟರ್ ನ ರಿಕ್ವೆಸ್ಟ್ ಮಾಡಿಕೊಂಡೆ. ದೇವರ ದಯೆಯಿಂದ ಅವರು ಒಪ್ಪಿದರು. ಹಾಗಾಗಿ ಅದೇ ದಿನ ಅಡ್ಮಿಟ್ ಆದೆ. ಅವತ್ತೇ ಕೋವಿಡ್ ಟೆಸ್ಟ್ ಕೂಡ ಮಾಡಿದ್ರು, ಡ್ರಿಪ್ಸ್ ಹಾಕಿದ್ರು , chest x – ray ನೂ ತೆಗೆದರು.
ಮರುದಿನ ಬೆಳಗ್ಗೆ 10 ಗಂಟೆಗೆ ಡಾಕ್ಟರ್ ರೌಂಡ್ಸ್ ಗೆ ಬಂದಾಗ ಹೇಳಿದ್ರು ನಿಮ್ಮ ಟೆಸ್ಟ್ ರಿಪೋರ್ಟ್ ಪಾಸಿಟೀವ್ ಅಂತ!! Really it was a shock to me and to my family. Nobody thought that I will get covid. ಆಗ ಯೋಚನೆ ಶುರುವಾಯಿತು. ಹಾಸ್ಪಿಟಲ್ ನವರು ಕೋವಿಡ್ ಗೆ ಟ್ರೀಟ್ ಮೆಂಟ್ ಕೊಡೋಲ್ಲ ಡಿಸ್ಚಾರ್ಜ್ ಆಗಿ ಅಂದ್ರು. ನಮಗೆ ಸ್ವಲ್ಪ ಪ್ಯಾನಿಕ್ ಆಯ್ತು. ಹತ್ತಿರದ ಆಸ್ಪತ್ರೆಗಳನ್ನೆಲ್ಲ ಹುಡುಕಿದ್ವಿಬೆಡ್ ಸಿಗುತ್ತಾ ಅಂತ .ಎಲ್ಲೂ ಖಾಲಿ ಇರ್ಲಿಲ್ಲ. ಇಲ್ಲಿಂದ 3 – 4 ಕಿಲೋಮೀಟರ್ ದೂರದ ಒಂದು ಆಸ್ಪತ್ರೆಯಲ್ಲಿ ಬೆಡ್ ಇದೆ ಅಂತ ತಿಳಿಯಿತು. ಆದರೆ ಅಲ್ಲಿ ಮೊದಲು ಬಂದವರಿಗೆ ಆದ್ಯತೆ ಎಂದರು.
ಆ ಟೈಮ್ ನಲ್ಲಿ ನನ್ನ ಅದೃಷ್ಟ ಚೆನ್ನಾಗಿತ್ತು. ಗೌರ್ನಮೆಂಟ್ ಗೈಡ್ ಲೈನ್ಸ್ ಪ್ರಕಾರ ಕೋವಿಡ್ ಟ್ರೀಟ್ ಮೆಂಟ್ ಆ ದಿನದಿಂದಲೇ ಶುರು ಮಾಡ್ತಾ ಇದಾರೆ ಹಾಗಾಗಿ ನಾನು ದಾಖಲಾಗಿದ್ದ ಆಸ್ಪತ್ರೆಯವರೇ ಹೇಳಿದ್ರು . ಹಾಗಾಗಿ ನಾನು ಆ ದಿನವೇ ಕೋವಿಡ್ ವಾರ್ಡಿಗೆ ಅಡ್ಮಿಟ್ ಆದೆ. ರಾತ್ರಿನೇ ಟ್ರೀಟ್ಮೆಂಟ್ ಶುರು ಮಾಡಿದ್ರು. ಅಲ್ಲಿಯ ಡಾಕ್ಟರ್ಸ್, ಸ್ಟಾಫ್ ನರ್ಸ್ ಗಳೆಲ್ಲ ತುಂಬ ಸಪೋರ್ಟಿವ್ ಆಗಿದ್ರು. ರಾತ್ರಿಯಿಂದ್ಲೇ ನನಗೆ ಫ್ಯಾಬಿ ಫ್ಲೂ ಮಾತ್ರೆ ಕೊಟ್ರು, 34 ಮಾತ್ರೆಗಳ ಕೋರ್ಸ್ ಅದು. ಆಂಟಿ ಬಯಾಟಿಕ್ ಸಹ ಶುರುಮಾಡಿದರು.
ಮಾನಸಿಕವಾಗಿ ಗಟ್ಟಿ ಆಗೋಕ್ಕೆ ಪ್ರಯತ್ನ ಮಾಡ್ತಾ ಇದ್ದೆ. ಟಿವಿ ನೋಡ್ತಾ ಇರಲಿಲ್ಲ. ನನ್ನ ಮನಸ್ಸಿಗೆ ಮುದ ನೀಡುವ ಹಾಡುಗಳನ್ನು ಕೇಳ್ತಾ ಇದ್ದೆ. ಕಾಮಿಡಿ ಶೋಸ್ ನೋಡ್ತಾ ಇದ್ದೆ.
ಮೊದಲ 5 ದಿನ ಜ್ವರ ಇತ್ತು. ಪ್ಯಾರಸಿಟಮಾಲ್ ಇಂಜೆಕ್ಷನ್ ಕೊಡೋರು. ಡಾಕ್ಟರ್ಸ 2 – 3 ರೌಂಡ್ಸ್ ಬರೋರು. ಕನ್ಸಲ್ಟಿಂಗ್ ಡಾಕ್ಟರ್ ಪ್ರತಿದಿನ ಬೆಳಿಗ್ಗೆ 10 ರಿಂದ – 10.30ರ ಹೊತ್ತಿಗೆ ಬಂದು ವಿಚಾರಿಸಿಕೊಳ್ಳೋರು.
4ನೇ ದಿನದಿಂದ ನನಗೆ Remdesivir ಶುರುಮಾಡಿದರು. 7ನೇ ದಿನದಿಂದ ನನ್ನ ದೇಹ ಟ್ರೀಟ್ ಮೆಂಟ್ ಗೆ ಸ್ಪಂದಿಸಲು ಶುರುವಾಯಿತು. ಆಗ ಡಾಕ್ಟರ್ ಹೇಳಿದ್ರು improve ಆಗ್ತಾ ಇದೀರ , ಸ್ವಲ್ಪ ನಿಧಾನ ಅಷ್ಟೆ ಅಂತ. ಆರು ದಿನದ ಮೇಲೆ remdesivir ಜೊತೆ ಆಂಟಿ ಬಯಾಟಿಕ್ ನಿಲ್ಲಿಸಿದರು. ನಿಧಾನವಾಗಿ ನಾನು ಇಂಪ್ರೂವ್ ಆಗುತ್ತಿದ್ದೆ.
ಇಷ್ಟು ಮೆಡಿಸಿನ್ ತಗೋತಾ ಇದ್ನಲ್ಲ ತುಂಬಾನೇ ಹಸಿವು ಆಗೋದು. ಸಮತೋಲನ ಆಹಾರ ದೇಹಕ್ಕೆ ಬೇಕಾಗಿತ್ತು . ಅದನ್ನು ಆಸ್ಪತ್ರೆಯವರೇ ಅರೇಂಜ್ ಮಾಡಿದ್ರು. ಬೆಳಿಗ್ಗೆ ಬ್ರೇಕ್ ಫಾಸ್ಟ್ ,ಮಧ್ಯಾಹ್ನ, ರಾತ್ರಿ, ಚಪಾತಿ , ಪಲ್ಯ, ಅನ್ನ, ರಸಂ , ಸಾಯಂಕಾಲ ಫ್ರೂಟ್ಸ್ ಹೀಗೆ ಒಳ್ಳೆಯ ಆಹಾರ ಕೊಟ್ಟರು.
ಹತ್ತರಿಂದ ಹನ್ನೊಂದು ದಿನ ಇದ್ದೆ ಆಸ್ಪತ್ರೆಯಲ್ಲಿ. ಮೊದಲು ನಾನು 4 ಲೀಟರ್ ಆಕ್ಸಿಜನ್ ಮೇಲಿದ್ದೆ. Almost 7 ದಿನ ಆಕ್ಸಿಜನ್ ಮೇಲೇ ಇದ್ದೆ . ಆಮೇಲೆ ನಿಧಾನವಾಗಿ 2 ಗಂಟೆಗಳ ಕಾಲ ಆಕ್ಸಿಜನ್ ಕೊಡೋದು ಮತ್ತೆ ತೆಗೆಯುವುದು ಹೀಗೆ ಮಾಡೋರು. ನಂತರ 2 ಲೀಟರ್ ಗೆ ಇಳಿಸಿದರು. ಕೊನೆಯ ಮೂರು ದಿನ ಆಕ್ಸಿಜನ್ ಇಲ್ಲದೆ ಟ್ರೀಟ್ ಮಾಡಿದ್ರು.
ದಿನವೂ ನನ್ನ ಕುಟುಂಬದವರ ಜೊತೆ ಮಾತನಾಡುತ್ತಿದ್ದೆ, ಹಾಗಾಗಿ ಮನೋಧೈರ್ಯ, ಮನೋಬಲ ಜಾಸ್ತಿ ಆಗ್ತಾ ಇತ್ತು.
ಈ ಕೋವಿಡ್ ಬಗ್ಗೆ ನಾವು ಮಾತೇ ಆಡ್ತಿರಲಿಲ್ಲ. ಕಾರಣ ಆಸ್ಪತ್ರೆಯ ವಾತಾವರಣ ಸ್ವಲ್ಪ ಹೆದರಿಕೆ ಹುಟ್ಟಿಸುತ್ತಿತ್ತು.
ಅಂತೂ ಎಲ್ಲರ ಹಾರೈಕೆಯಿಂದ ನಾನು ಕೋವಿಡ್ ನಿಂದ ಹುಷಾರಾಗಿ ಮನೆಗೆ ಬಂದೆ. ಈಗಲೂ ಎರಡು ಮೂರು ತಿಂಗಳು ಕೇರ್ ಫುಲ್ ಆಗಿರಬೇಕು ಅಂತ ಡಾಕ್ಟರ್ ಹೇಳಿದ್ದಾರೆ.
ಒಟ್ಟಿನಲ್ಲಿ ನನ್ನ ಈ ಅನುಭವದಿಂದ ಎಲ್ರಿಗೂ ಹೇಳುವುದು ಏನಂದ್ರೆ ಕೋವಿಡ್ ಬಂದ ತಕ್ಷಣ ಹೆದರಬೇಡಿ. ಡಾಕ್ಟರ್ ಕೊಡೋ ಔಷಧಿಯನ್ನು ಸರಿಯಾಗಿ ತೆಗೆದುಕೊಳ್ಳಿ, ಪೂರಕ ಔಷಧಿಗಳು, ಒಳ್ಳೆಯ ಆಹಾರ ಸೇವಿಸಿ, ಹಣ್ಣು ತರಕಾರಿಗಳನ್ನು ಜಾಸ್ತಿ ಬಳಸಿ.
14 ದಿನಗಳು ಮುಗಿದು ಮನೆಗೆ ಬಂದ ಮೇಲೂ ಡಾಕ್ಟರ್ ಅಡ್ವೈಸ್ ಪ್ರಕಾರ ಸ್ವಲ್ಪ ದಿನ ಕ್ವಾರನ್ಟೈನ್ / ಪ್ರತ್ಯೇಕವಾಗಿ ಇರಬೇಕಾಗುತ್ತದೆ. ಈಗ ನಾನು ಆರೋಗ್ಯವಾಗಿದ್ದೇನೆ. ಇಲ್ಲಿಗೆ ನನ್ನ ಕೋವಿಡ್ ಅನುಭವದ ಲೇಖನ ಮುಗಿಸುತ್ತಿರುವೆ.
ಕೊರೋನಾ ಗೆದ್ದವರು ತಮ್ಮ ಅನುಭವದ ಕಥೆಯನ್ನು [email protected] ಗೆ ಇ ಮೇಲ್ ಮಾಡಿ. ಸೂಕ್ತವಾದುವನ್ನು ಪ್ರಕಟಿಸಲಾಗುವುದು
Timely information and guidance from Mr.Narasimha Murthy who has bravely faced the much feared pandemic along with his family members. He has explained the treatment and above all his psychological attitude to the illness where mortality is low compared with other diseases.