ನೀರವ್ ಮೋದಿ, ವಿಜಯ ಮಲ್ಯ ಮತ್ತು ಮೆಹುಲ್ ಚೋಕ್ಸಿ ಪ್ರಕರಣದಲ್ಲಿ 18 170.02 ಕೋಟಿ ರೂಪಾಯಿಗಳ (ಬ್ಯಾಂಕುಗಳಿಗೆ ಆದ ನಷ್ಟದ ಒಟ್ಟು ಪ್ರಮಾಣದ ಶೇಕಡ 80.45) ಆಸ್ತಿಯನ್ನು ಮುಟ್ಟಗೋಲು ಹಾಕಿಕೊಂಡಿದ್ದು ಮಾತ್ರವಲ್ಲದೆ ಅದರಲ್ಲಿ 9371.17 ಕೋಟಿ ರೂಪಾಯಿಗಳನ್ನು ಬ್ಯಾಂಕುಗಳಿಗೆ ಮತ್ತು ಕೇಂದ್ರ ಸರಕಾರಕ್ಕೆ ವಾಪಸ್ಸು ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಟ್ವೀಟ್ ಮಾಡಿದೆ.
ರಾಜ್ಯದಲ್ಲೂ ಡೆಲ್ಟಾ+ ವೈರಸ್ ಪತ್ತೆಯಾಗಿದೆ.ಮೈಸೂರಿನ ಯುವಕನಲ್ಲಿ ಪತ್ತೆಯಾಗಿರುವ ಈ ವೈರಸ್ ಮತ್ತೊಬ್ಬರಿಗೆ ಹರಡಿಲ್ಲ. ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧಾರ
ಕೋವಿಡ್ ಲಸಿಕೆ ಪಡೆದವರಿಗೆ ಪ್ರಯಾಣದರದಲ್ಲಿ ಶೇಕಡ 10ರಷ್ಟು ರಿಯಾಯತಿ ನೀಡುವುದಾಗಿ ವಿಮಾನಯಾನ ಸಂಸ್ಥೆ ಇಂಡಿಗೋ ಪ್ರಕಟಿಸಿದೆ.
ಮುಂದಿನ ಸಿಎಂ ಹುದ್ದೆಗಾಗಿ ಡಿಕೆಶಿ ಮತ್ತು ಸಿದ್ಧರಾಮಯ್ಯ ಪೈಪೋಟಿ. ಹೇಳಿಕೆ ಪ್ರತಿಹೇಳಿಕೆ ನೀಡದಂತೆ ತಡೆಯಲು ಕಾಂಗ್ರೆಸ್ ಶಿಸ್ತು ಸಮಿತಿ ಸಭೆ ನಡೆಯಲಿದೆ.
ನೂತನ ಸಂಸದೆ ಮಂಗಳಾ ಅಂಗಡಿಅವರನ್ನು ಹಡಗು ಮತ್ತು ಜಲಮಾರ್ಗ ಸಚಿವಾಲಯ ಸಲಹಾ ಸಮಿತಿಗೆ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ
ಈ ಅಂಕಣವನ್ನು ಫಾಲೋ ಮಾಡಿದರೆ ಸಾಕು. ಆ ಹೊತ್ತಿನ ಸುದ್ದಿಗಳು ಗೊತ್ತಾಗುತ್ತೆ. ಧನ್ಯವಾದ ಕನ್ನಡಪ್ರೆಸ್.