ದೇಶಾದ್ಯಂತ ಜರುಗುತ್ತಿರುವ ಕೋವಿಡ್-19 ಬೃಹತ್ ಲಸಿಕಾ ಆಂದೋಲನದಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದ್ದು, ಲಸಿಕೆ ನೀಡಿಕೆ ಪ್ರಮಾಣದಲ್ಲಿ ಅಮೆರಿಕವನ್ನು ಹಿಂದಿಕ್ಕಿದೆ.ಇದುವರೆಗೆ ದೇಶಾದ್ಯಂತ 32.36 ಕೋಟಿ ಲಸಿಕೆ ಡೋಸ್|ಗಳನ್ನು ನೀಡಲಾಗಿದೆ.
ಭಾರತದಲ್ಲಿ ನಿನ್ನೆ ಒಂದೇ ದಿನ ಅಂದರೆ ಕಳೆದ 24 ತಾಸುಗಳಲ್ಲಿ 46,148 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಭಾರತದ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 5,72,994ಕ್ಕೆ ಇಳಿಕೆ ಕಂಡಿದ್ದು, 6 ಲಕ್ಷದ ಮಟ್ಟದಿಂದ ಕೆಳಗೆ ಕಾಯ್ದುಕೊಂಡಿದೆ.
ಸಕ್ರಿಯ ಪ್ರಕರಣಗಳ ಪ್ರಮಾಣವು ಒಟ್ಟು ಪ್ರಕರಣಗಳ 1.89% ಇದೆ.
ದೇಶಾದ್ಯಂತ ಇಲ್ಲಿಯ ತನಕ 2,93,09,607 ಸೋಂಕಿತರು ಗುಣಮುಖರಾಗಿದ್ದಾರೆ.
58,578 ರೋಗಿಗಳು ಕಳೆದ 24 ತಾಸುಗಳಲ್ಲಿ ಚೇತರಿಸಿಕೊಂಡಿದ್ದಾರೆ.
ದೈನಂದಿನ ಚೇತರಿಕೆ ಪ್ರಮಾಣ ದಿನನಿತ್ಯ ಕಾಣಿಸಿಕೊಳ್ಳುತ್ತಿರುವ ಹೊಸ ಪ್ರಕರಣಗಳನ್ನು ಹಿಂದಿಕ್ಕುತ್ತಿದ್ದು, 46ನೇ ದಿನದಲ್ಲಿ ಈ ಪ್ರವೃತ್ತಿ ಮುಂದುವರಿದಿದೆ.
ಚೇತರಿಕೆ ದರ 96.80%ಗೆ ಸುಧಾರಣೆ ಕಂಡಿದೆ.
ವಾರದ ಪಾಸಿಟಿವಿಟಿ ದರ 5% ಮಟ್ಟದ ಕೆಳಗೆ ಮುಂದುವರಿದಿದ್ದು, ಅದೀಗ 2.81%ಗೆ ಇಳಿಕೆ ಕಂಡಿದೆ.
ಸತತ 21ನೇ ದಿನದಲ್ಲಿ ದೈನಂದಿನ ಪಾಸಿಟಿವಿಟಿ ದರವೂ 5% ಮಟ್ಟದಿಂದ ಕೆಳಗಿದ್ದು, ಅದೀಗ 2.94%ಗೆ ತಗ್ಗಿದೆ.
ದೇಶಾದ್ಯಂತ ಗಂಟಲು ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದ್ದು, ಇದುವರೆಗೆ ದೇಶದಲ್ಲಿ 40.63 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.
ನಿವ್ವಳ ಸಂಖ್ಯೆ ಹೇಳುವುದು ಸರಿಯಾದ ಎಣಿಕೆ ಕ್ರಮವಲ್ಲ.. ಜನಸಂಖ್ಯೆ ಎದುರಾಗಿ ಪ್ರಮಾಣ ಹೇಳಬೇಕು. ಇಸ್ರೇಲ್ – 60%, ಅಮೆರಿಕಾ – 45%, ಜರ್ಮನಿ – 33%, ಇಟಲಿ 27.5% ಮತ್ತು ನಮ್ಮ ಭವ್ಯ ಭಾರತ 3.9% ಲಸಿಕೆ ನೀಡಿದೆ..
ಈ ವಾಸ್ತವಾಂಶ ಮರೆಮಾಡಿ ನಾವೇನೋ ಮೈಲಿಗಲ್ಲು ಸಾಧಿಸಿದ್ದೇವೆ ಎಂಬಂತೆ ಬರೆಯುವುದು ತಪ್ಪು..