ರಾಜಧಾನಿ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ಭಾರಿ ಸ್ಫೋಟದ ಸದ್ದು ಕೇಳಿಬಂದಿದ್ದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅನೇಕರು ಟ್ವೀಟ್ ಮಾಡಿದ್ದಾರೆ.
ಆರ್ ಆರ್ ನಗರ,ಕತ್ತರಿಗುಪ್ಪೆ ಕೆಂಗೇರಿ, ಮಾಗಡಿ, ಎಲೆಕ್ಟ್ರಾನಿಕ್ ಸಿಟಿ, ಬಿಡದಿ, ಬನಶಂಕರಿ, ಕುಮಾರಸ್ವಾಮಿ ಲೇಔಟ್ ಸೇರಿದಂತೆ ಹಲವೆಡೆಗಳಲ್ಲಿ ಮಧ್ಯಾಹ್ನ 12:23ರರ ಸುಮಾರಿ ಭಾರಿ ಸದ್ದು ಕೇಳಿಬಂದಿದ್ದು, ಮನೆ ಕಿಟಕಿ, ಬಾಗಿಲುಗಳೇ ಅಲುಗಾಡಿದ ಅನುಭವವಾಗಿದೆ. ಕತ್ತರಿಗುಪ್ಪೆಯಲ್ಲಿ ಕಿಟಕಿ ಅಲುಗಾಡಿದ ಅನುಭವವಾಯಿತು ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ರಾಜಾಜಿನಗರ ಪ್ರದೇಶದಲ್ಲಿ ಶಬ್ದ ಕೇಳಿಸಿತಾದರು ಅದರ ಪ್ರಮಾಣ ಕಡಿಮೆ ಇತ್ತು.
ಭೂಮಿಯ ಒಳಗಿನಿಂದ ಬಂದಿರುವ ಶಬ್ಧದಂತಿದ್ದು, ಸ್ಫೋಟದ ರೀತಿ ಶಬ್ಧ ಕೇಳಿಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಬೇಕಿದೆ ಎಂದು ತಜ್ಞರು ಹೇಳಿದ್ದಾರೆ.
ಅನೇಕ ಬೆಂಗಳೂರಿಗರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಕನ್ನಡ ದಲ್ಲಿ ಸುದ್ದಿ ಪ್ರಸಾರ ಓದಲು ತುಂಬ ಖುಷಿಯಾಗಿದೆ ನನಗೆ.. ಪರ ಭಾಷಿಗರು ಕನ್ನಡ ವನ್ನು ಓದಲು ಬರೆಯಲು ಮಾತನಾಡಲು ಕಲಿತರೆ ಇನ್ನು ಚಂದ