ಇಂದು ಸಂಜೆ 6 ಗಂಟೆಗೆ ಕೇಂದ್ರದ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ. ಸಂಭವನೀಯ ಸಚಿವರು 7 ಲೋಕಲ್ಯಾಣ ಮಾರ್ಗ ಕ್ಕೆ ಆಗಮಿಸುತ್ತಿದ್ದಾರೆ. ಈ ಹಿಂದೆ ರೇಸ್ ಕೋಸ್ ರಸ್ತೆ ಎಂದು ಕರೆಯುತ್ತಿದ್ದ ಈ ರಸ್ತೆಯಲ್ಲಿ ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸ ಇದೆ. ಇಲ್ಲಿಗೆ ಬರಲು ಆಹ್ವಾನ ನೀಡಿದವರಿಗೆ ಬಹುತೇಕ ಮಂತ್ರಿಗಿರಿ ಪಕ್ಕಾ ಎನ್ನಲಾಗುತ್ತಿದೆ.
ರಾಷ್ಟ್ರೀಯ ಸುದ್ದಿ ವಾಹಿನಿಗಳ ಪ್ರಕಾರ ಕರ್ನಾಟಕ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಪ್ರಧಾನ ಮಂತ್ರಿಗಳ ಗೃಹ ಕಚೇರಿಗೆ ಆಗಮಿಸಿರುವುದರಿಂದ ಅವರು ಸಂಪುಟ ಸೇರುವುದು ಬಹುತೇಕ ಖಚಿತ ಎನ್ನಲಾಗಿದೆೆ.
ಈಗಾಗಲೇ ಪ್ರಧಾನ ಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿದವರ ಪಟ್ಟಿ
ಜ್ಯೋತಿರಾಧಿತ್ಯ ಸಿಂಧಿಯಾ
ನಾರಾಯಣ ರಾಣೆ
ಸರ್ಬಾನಂದ ಸೋನೋವಾಲ
ಅನುಪ್ರಿಯ ಪಟೇಲ್
ಕಪಿಲ್ ಪಟೇಲ್
ಮೀನಾಕ್ಷಿ ಲೇಖಿ
ಅಜಯ್ ಭಟ್
ಭೂಪೇಂದ್ರ ಯಾದವ್
ಸುನಿತಾ ದುಗ್ಗಲ್
ಹೀನಾ ಗವಿಟ್
ಶೋಭಾ ಕರಂದ್ಲಾಜೆ
ಅಜಯ್ ಮಿಶ್ರಾ
ಪಶುಪತಿ ಪರಸ್