26.3 C
Karnataka
Saturday, November 23, 2024

    ಉದ್ಯೋಗಗಳ ಕಣಜ ‘ಪಾಲಿಮರ್/ಪ್ಲಾಸ್ಟಿಕ್’ಲೋಕ

    Must read

    ಇಂದು ಪ್ಲಾಸ್ಟಿಕ್ ಮಾನವ ಜೀವನದ ಅವಿಭಾಜ್ಯ ನಿರ್ವಹಣೆಯಾಗಿದೆ. ಪ್ಲಾಸ್ಟಿಕ್ ಇಲ್ಲದೇ ಜೀವನ ಸಾಧ್ಯವಿಲ್ಲ ಎನ್ನುವಂತಾಗಿದೆ.  ಲೋಹದ ಬೆಲೆ ಮತ್ತು ಕೊರತೆ ಹೆಚ್ಚಿದಂತೆಲ್ಲಾ ಪ್ರತಿ ಕ್ಷೇತ್ರದಲ್ಲೂ ಪ್ಲಾಸ್ಟಿಕ್ ನ ಬಳಕೆ ದಿನೇ ದಿನೇ ಅಧಿಕಗೊಳ್ಳುತ್ತಿದೆ.  ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ಬಳಕೆಯಿಂದ ತೊಂದರೆಗಳಿಲ್ಲ.  ಈ  ಹಿನ್ನಲೆಯಲ್ಲಿ ಇಂದು ಅನೇಕ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಾಣುತ್ತಿದ್ದೇವೆ.  ಆಟೋಮೊಬೈಲ್, ಕೃಷಿ, ಆರೋಗ್ಯ, ಶಿಕ್ಷಣ , ಸಾರಿಗೆ, ವಿದ್ಯುನ್ಮಾನ  ಮುಂತಾದ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ಅಧಿಕವಾಗಿದೆ.  ಹಾಗಾಗಿ ಪ್ಲಾಸ್ಟಿಕ್ ಆಧಾರಿತ ಕೋರ್ಸ್ ಗಳಿವೆ ಎಂಬುದು ಎಷ್ಟು ಆಶ್ಚರ್ಯವೋ , ಇಂತಹ ಕೋರ್ಸ್ ಗಳು ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಿಂದಲೇ ನಡೆಯುತ್ತಿವೆ ಎಂಬುದೂ  ಸಂತಸದ ಸಂಗತಿ. ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯು ಇಂತಹ ಅನೇಕ ಕೋರ್ಸ್ ಗಳನ್ನು ನೀಡುವ ಮೂಲಕ ಯುವಕರಲ್ಲಿ ವೃತ್ತಿ ಕೌಶಲ ಹೆಚ್ಚಿಸಿ ಸ್ವಾಲಂಬಿಗಳನ್ನಾಗಿ  ಮಾಡುವ ಉದ್ದೇಶ ಹೊಂದಿದೆ. 

    ಸಿಪೆಟ್: ಕೇಂದ್ರೀಯ ಪೆಟ್ರೋಕೆಮಿಕಲ್ಸ್  ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆ (ಕೌಶಲ್ಯ ಮತ್ತು ತಾಂತ್ರಿಕ ತರಬೇತಿ  ಕೇಂದ್ರ ) ಸಿಪೆಟ್ ಸಂಸ್ಥೆಯು ಭಾರತ ಸರ್ಕಾರದ ರಸಾಯನ ಪೆಟ್ರೋರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದೆ. ಪ್ಲಾಸ್ಟಿಕ್ ಉತ್ಪನ್ನಗಳು ದೇಶದ ಪ್ರಗತಿಗೂ ತಮ್ಮದೇ ಆದ ಕೊಡುಗೆ ನೀಡುತ್ತಿವೆ.  ಹಾಗಾಗಿ ಇವುಗಳ ಉತ್ಪನ್ನಗಳ ತಯಾರಿ ಉತ್ತೇಜಿಸಲು ಕೇಂದ್ರ ಸರ್ಕಾರವು ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯನ್ನು (CIPET) ಸ್ಥಾಪಿಸಿದೆ.1968 ರಲ್ಲಿ  ಸ್ಥಾಪನೆಯಾದ ಈ ಸಂಸ್ಥೆಗೆ ಈಗ 53 ರ ಹರೆಯ.ನಮ್ಮ ರಾಜ್ಯದಲ್ಲಿ ಕರ್ನಾಟಕದಲ್ಲಿ 1991 ರಲ್ಲಿ ಮೈಸೂರಲ್ಲಿ ಆರಂಭವಾಯಿತು. ಪಾಲಿಮರ್/ ಪ್ಲಾಸ್ಟಿಕ್ ಕೈಗಾರಿಕೆ ಕುರಿತ ಕೋರ್ಸ್ ಗಳನ್ನು  ಹೊಂದಿರುವ ಏಕೈಕ ಶಿಕ್ಷಣ ಸಂಸ್ಥೆ ಇದು. ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸ್ಥಾಪಿಸಿದ ದೇಶದ 40 ಸಂಸ್ಥೆಗಳಲ್ಲಿ ಇದು ಕೂಡ ಒಂದು. ಆದರೂ ಕರ್ನಾಟಕದ ಯುವಕರಿಗೆ ಇದರ ಅರಿವೇ ಇಲ್ಲ ಆದ್ದರಿಂದ ಹೊರ ರಾಜ್ಯಗಳಿಂದ ಬರುವವರೇ ಹೆಚ್ಚು. ವಿವಿಧ ಪರಿಕರಗಳ ಉತ್ಪಾದನೆ ಹಾಗೂ ಸಂರಕ್ಷಣಾ ಘಟಕಗಳಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಿಪೆಟ್ ಸ್ವಾಯತ್ತ ಸಂಸ್ಥೆಯಾಗಿ ಬೆಳೆದಿದೆ.

    ತ್ಯಾಜ್ಯ ಸಂಸ್ಕರಣೆಗೆ ಹೊಸ ತಂತ್ರಜ್ಞಾನ ಅಭಿವೃದ್ದಿಪಡಿಸಿರುವ ಹೆಗ್ಗಳಿಕೆ ಸಿಪೆಟ್ ನದ್ದು.  ವೇಸ್ಟ್ ಸಂಸ್ಕರಣಾ ಘಟಕ ಇದಾಗಿದೆ.  ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಸಂಪೂರ್ಣ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ಮಾದರಿಯಲ್ಲಿ ತ್ಯಾಜ್ಯ ಸಂಸ್ಕರಿಸುವ ಮತ್ತು ಮರುಬಳಕೆ ಮಾಡುವ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತದೆ.   ಉದಾಹರಣೆಗೆ ಹೇಳುವುದಾದರೆ ನಾವು ದಿನನಿತ್ಯ ಉಪಯೋಗಿಸುವ ಬಿಸ್ಕೆಟ್, ಚಾಕಲೇಟ್, ಹಾಲು, ಮೊಸರು, ತುಪ್ಪ, ಎಣ್ಣೆ ಇನ್ನು ಅನೇಕ ಸೌಂದರ್ಯ ವರ್ಧಕ ಗಳ ಪ್ಯಾಕಿಂಗ್ ಗಳಿಗೆ ಪ್ಲಾಸ್ಟಿಕ್ ಬೇಕೇ ಬೇಕು.  ಈ ಎಲ್ಲಾ ಪದಾರ್ಥ ಗಳನ್ನೂ ಉಪಯೋಗಿಸಿದ ನಂತರ ಅಲ್ಲಲಿ ಬಿಸಾಡದೆ ಒಂದು ಕಡೆ ಸಂಸ್ಕರಿಸಿ ಮರುಬಳಕೆ ಮಾಡಬಹುದು.

    ನಿತ್ಯೋಪಯೋಗಿ ವಸ್ತುಗಳಾದ ಮೊಬೈಲ್ ಫೋನ್, ಫ್ರಿಡ್ಜ್, ಕಂಪ್ಯೂಟರ್ , ಟಿ.ವಿ. ವೈದ್ಯಕೀಯ ಕ್ಷೇತ್ರದಲ್ಲಿ ಟ್ಯಾಬ್ಲೆಟ್ , ಸಿರಿಂಜ್, ಸೆಂಟ್, ಕ್ರೀಮ್ ಮುಂತಾದವುಗಳ ತಯಾರಿಕೆಗೆ ವಿಜ್ಞಾನ–ತಂತ್ರಜ್ಞಾನ ಕ್ಷೇತ್ರದಲ್ಲಿ ಬಳಸುವ ಯಂತ್ರೋಪಕರಣಗಳಿಗೆ ಆಹಾರ ಪದಾರ್ಥ ಗಳಾದ ಬಿಸ್ಕೆಟ್, ಚಾಕಲೇಟ್, ಹಾಲು, ತುಪ್ಪ ಪ್ಯಾಕಿಂಗ್ ಗಳಿಗೆ… ಎಲ್ಲದರಲ್ಲೂ ಪ್ಲಾಸ್ಟಿಕ್ ಬೇಕೇ ಬೇಕು.ಆದರೆ ಎಲ್ಲಿ ಎಷ್ಟು ಉಪಯೋಗಿಸಬೇಕು, ಹೇಗೆ ಮರುಬಳಕೆ ಮಾಡಬೇಕು ಅದರ ಉದ್ಯಮ ಸ್ಥಾಪಿಸಿ ಉದ್ಯೋಗ ಸೃಷ್ಟಿ ಮಾಡುವುದು ಹೇಗೆ ಎಂಬುದರ ಅರಿವು ನಮಗಿರಬೇಕು. ಇವೆಲ್ಲವನ್ನೂ ಕಲಿಸಿಕೊಡಲಿದೆ  ‘ಸಿಪೆಟ್ ‘.

    ಮುಂದೇನು ?

    ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆ ಮುಗಿದ ನಂತರ ಬಹುದೇಕ ವಿದ್ಯಾರ್ಥಿಗಳದ್ದು ಒಂದೇ ಪ್ರಶ್ನೆ ಮುಂದೇನು ? ಎಲ್ಲರ ಚಿತ್ತವೂ ಒಳ್ಳೆಯ ಉದ್ಯೋಗ ಮಾಡುವುದೇ ಆಗಿದ್ದರೂ, ಕಣ್ಣೆದುರು ಬಂದು ನಿಲ್ಲುವುದು ಮಾತ್ರ ಪ್ರಚಲಿತದಲ್ಲಿರುವ ಕೆಲವೇ ಕೆಲವು ಕೋರ್ಸುಗಳು ಆದರೆ ನಮ್ಮ ನಡುವೆಯೇ ಇರುವ, ಬೇಗನೆ ಉದ್ಯೋಗ ದೊರಕಿಸುವ ಹಲವು ಕೋರ್ಸುಗಳು ಗಮನಕ್ಕೆ ಬಾರದೆ ಹೋಗುತ್ತಿವೆ.ಅಂಥ ಕೋರ್ಸುಗಳಲ್ಲಿ ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ(ಸಿಪೆಟ್)ನೀಡುತ್ತಿರುವ ಡಿಪ್ಲೋಮ ಕೂಡ ಒಂದು.ಶೈಕ್ಷಣಿಕ, ತಂತ್ರಜ್ಞಾನ ಮತ್ತು ಸಂಶೋಧನೆ ವ್ಯವಸ್ಥೆಯಲ್ಲಿ ಸ್ನಾತಕ ಡಿಪ್ಲೋಮಾ ಮತ್ತು ಡಿಪ್ಲೋಮಾ ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ಅಖಿಲ ಭಾರತ ತಾಂತ್ರಿಕ ಮಂಡಳಿಯಿಂದ ಮಂಜೂರಾತಿ ದೊರೆತ ಈ ಕೆಳಗಿನ ವಿಭಾಗಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ.ಈ ವೃತ್ತಿಪರ ಶಿಕ್ಷಣದ ನಂತರ ಉದ್ಯೋಗಕ್ಕೆ ವಿಪುಲ ಅವಕಾಶಗಳು ದೊರೆಯುತ್ತವೆ.  

    ಪ್ರಸ್ತುತ ಕೇಂದ್ರದಲ್ಲಿ ದೊರೆಯುವ ಕೋರ್ಸ್ ಗಳು ಕೆಳಗಿನಂತಿವೆ .

    ಡಿಪ್ಲೋಮಾ ಕೋರ್ಸ್ ನ ಹೆಸರುಪ್ರವೇಶಕ್ಕಾಗಿ ಅರ್ಹತೆ
    ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಪ್ರೊಸೆಸಿಂಗ್ & ಟೆಸ್ಟಿಂಗ್ (PGD-PPT) – 2 yearಬಿ.ಎಸ್ಸಿ
    ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್  ಟೆಕ್ನಾಲಜಿ (DPT) – 3 year10ನೇ ತರಗತಿ ಪಾಸ್
    ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ (DPMT)- 3 year10ನೇ ತರಗತಿ ಪಾಸ್

    ಎಸ್.ಎಸ್.ಎಲ್.ಸಿ , ಪಿ.ಯು.ಸಿ (ವಿಜ್ಞಾನ) ಮತ್ತು ಬಿ.ಎಸ್.ಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದವರು/ಹಾಜರಾದವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ  www.cipet.gov.in

                     ಡಿಪ್ಲೋಮಾ 2 ನೇ ವರ್ಷಕ್ಕೆ ನೇರ ಪ್ರವೇಶ (Lateral Entry for Direct 2nd year Diploma)

            ಡಿಪ್ಲೋಮಾ ಕೋರ್ಸ್ ನ ಹೆಸರು     ಪ್ರವೇಶಕ್ಕಾಗಿ ಅರ್ಹತೆ
    ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್  ಟೆಕ್ನಾಲಜಿ (DPT) – 2 yearP.U.C (PCM), ITI(Fitter,Machinist/Turner)
    ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ (DPMT)- 2 year

    ಪ್ರವೇಶ ಹೇಗೆ

    ಈ ಕೋರ್ಸ್ ಗಳಿಗೆ ಅಖಿಲ ಭಾರತ ಮಟ್ಟದಲ್ಲಿ ಪ್ರವೇಶ ಪರೀಕ್ಷೆ (ಸಿಪೆಟ್) ನಡೆಯುತ್ತದೆ. 2021 -2022 ಸಾಲಿನ  ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.

    ಎಸ್ ಎಸ್ ಎಲ್ ಸಿ ನಂತರ ಮೂರು ವರ್ಷಗಳ ಡಿಪ್ಲೋಮೋ
    Diploma in Plastics Mould Technology (DPMT)
    Diploma in Plastics Technology (DPT)
    Last date for online application 20.07.2021
    Entrance exam 29.07.2021
    www.cipet.gov.in
    Contact nos. 9141075968, 9480253024

    ಪಿಯುಸಿ ವಿಜ್ಞಾನ ಐಟಿಐ ನಂತರ ಎರಡನೇ ವರ್ಷದ ಡಿಪ್ಲೋಮೋ ನೇರ ಪ್ರವೇಶ (Lateral Entry)

    ಕೊನೆ ದಿನ : 31.07.2021

    ಮೈಸೂರಿನ ಸಿಪೆಟ್ ನ ಕೋರ್ಸ್ ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಾಗ ಕರ್ನಾಟಕ ದವರಿಗೆ ಆದ್ಯತೆ ನೀಡಲಾಗುತ್ತದೆ. 

    ದೀರ್ಘಾವಧಿ ತರಬೇತಿಯ ಜೊತೆಗೆ ಅಲ್ಪಾವಧಿ ಪ್ರಾಯೋಜಿತ ತರಬೇತಿಯನ್ನೂ ನೀಡುವುದು ಸಿಪೆಟ್ ನ ವಿಶೇಷ.   ಇಲ್ಲಿ ವ್ಯಾಸಂಗ ಮಾಡಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ಉದ್ಯೋಗ ದೊರಕಿದೆ. ಅನೇಕರು ಸ್ವಉದ್ಯೋಗ  ಆರಂಭಿಸಿದ್ದಾರೆ. ಇಲ್ಲಿ ವಿದ್ಯಾರ್ಥಿನಿಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯಿದೆ. ವಿದ್ಯಾರ್ಥಿ ವೇತನ ಸೌಲಭ್ಯವು ಇದೆ. ಪ್ರತಿ ಸೆಮಿಸ್ಟರ್ ಗೆ  ರೂ.20 ಸಾವಿರದಷ್ಟು ಖರ್ಚು ಬರುತ್ತದೆ

    ಕೋರ್ಸ್ ನಲ್ಲಿ ಏನು ಕಲಿಸುತ್ತಾರೆ?

    ಪ್ಲಾಸ್ಟಿಕ್ ವೈವಿದ್ಯಮಯ ಬಳಕೆ, ಪ್ಲಾಸ್ಟಿಕ್ ಮೌಲ್ದಿಂಗ್, ಪ್ಲಾಸ್ಟಿಕ್ ಸಂಸ್ಕರಣೆ, ಪ್ಲಾಸ್ಟಿಕ್ ನ ಗುಣಮಟ್ಟ ಪರಿಶೀಲನೆ, ಆಧುನಿಕ ವಿನ್ಯಾಸದಲ್ಲಿ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಪ್ಲಾಸ್ಟಿಕ್ ಮರುಬಳಕೆ ವಿಧಾನ , ಪ್ಲಾಸ್ಟಿಕ್ ಪೈಪ್ ಗಳು ಮತ್ತು ಇನ್ನಿತರೆ ವಸ್ತುಗಳ ತಯಾರಿಕೆ, ಮಾರುಕಟ್ಟೆ ಹಾಗೂ ದರ ಪರಿಷ್ಕರಣೆ.

    ಉದ್ಯೋಗಾವಕಾಶಗಳು:

    • ಆಟೋಮೊಬೈಲ್ಸ್ ಕೈಗಾರಿಕೆಗಳು
    • ವಾಹನದ ಬಿಡಿ  ಭಾಗಗಳನ್ನು ತಯಾರಿಸುವ ಉದ್ಯಮಗಳು  
    • ಪಿ.ವಿ.ಸಿ ಪೈಪ್ ತಯಾರಿಕಾ ಕಂಪೆನಿಗಳು ಮತ್ತು ವಿದ್ಯುನ್ಮಾನ
    • ಪ್ಲಾಸ್ಟಿಕ್ ವಸ್ತು ಉತ್ಪಾದನಾ ಕಂಪೆನಿಗಳಲ್ಲಿ
    • ಆಹಾರೋದ್ಯಮ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ
    • ಆಗ್ರೋ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ ಕ್ಷೇತ್ರ
    • ಎಲೆಕ್ಟ್ರಿಕಲ್ಸ್ ,ಎಲೆಕ್ಟ್ರಾನಿಕ್ಸ್ ಕ್ಷೇತ್ರ
    • ಆಹಾರೋದ್ಯಮ

    ಸಿಪೆಟ್ ಸಂಸ್ಥೆ ನಡೆಸುವ 3  ವರ್ಷಗಳ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್  ಟೆಕ್ನಾಲಜಿ (DPT) ಮತ್ತು ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ (DPMT) ಕೋರ್ಸ್ ನ ವಿದ್ಯಾರ್ಥಿಗಳು 3,4,5 ಮತ್ತು 6 ನೇ ಸೆಮಿಸ್ಟರ್ಗಳಲ್ಲಿ ಬ್ರಿಡ್ಜ್ ಕೋರ್ಸ್ ಗಳನ್ನು ಬಾಹ್ಯ ವಿಷಯವನ್ನಾಗಿ ಅಭ್ಯಾಸ ಮಾಡಿದರೆ ಕರ್ನಾಟಕ ತಾಂತ್ರಿಕ ಮಂಡಳಿಯು ನಡೆಸುವ ಡಿಪ್ಲೋಮಾ ಇನ್ ಪಾಲಿಮರ್ ಟೆಕ್ನಾಲಜಿ ಕೋರ್ಸ್ ಗೆ ತತ್ಸಮಾನವಾಗಿ ಮತ್ತು ಲ್ಯಾಟರಲ್ ಎಂಟ್ರಿ ಮೂಲಕ ಬಿ.ಇ. ವ್ಯಾಸಾಂಗ ಮಾಡಬಹುದಾಗಿದೆ.   ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್ ಗಳನ್ನು ಅಭ್ಯಸಿಸಲು ವಿಶೇಷ ತರಬೇತಿಯನ್ನು ನೀಡಲಾಗುತ್ತದೆ.

    ಆರ್.ಕೆ. ಬಾಲಚಂದ್ರ
    ಆರ್.ಕೆ. ಬಾಲಚಂದ್ರ
    ಕೊಡಗು ಲೀಡ್‌ ನ ಬ್ಯಾಂಕ್‌ ನ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಆರ್‌ ಕೆ ಬಾಲಚಂದ್ರ ಅವರು ಖ್ಯಾತ ತರಬೇತಿದಾರರೂ ಹೌದು. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಳೆದ 35 ವರ್ಷಗಳಿಂದ ಉಚಿತ ತರಬೇತಿ ನೀಡುತ್ತಾ ಬಂದಿರುವ ಅವರು, 30 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಪಡೆಯಲು ಕಾರಣರಾಗಿದ್ದಾರೆ. ಸರಕಾರಿ ಉದ್ಯೋಗದ ಬಗ್ಗೆ ಮಾಹಿತಿ ನೀಡುವ ʼಗೌರ್ಮೆಂಟ್‌ ಜಾಬ್‌ ಪಡೆಯುವುದು ಹೇಗೆʼ ಎಂಬ ಕೃತಿ ಬರೆದಿದ್ದಾರೆ. ಚಿಕ್ಕಮಗಳೂರಿನ ಕಾರ್ಪೋರೇಷನ್‌ ಬ್ಯಾಂಕ್‌ ಸ್ವ ಉದ್ಯೋಗ ತರಬೇತಿ ಕೇಂದ್ರವನ್ನು ಅತ್ಯುತ್ತಮ ಕೇಂದ್ರವಾಗಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಂದ ಪ್ರಶಸ್ತಿ, ಮೈಸೂರಿನ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಅಂಕಣ ಬರೆಯುತ್ತಿದ್ದಾರೆ.
    spot_img

    More articles

    1 COMMENT

    LEAVE A REPLY

    Please enter your comment!
    Please enter your name here

    Latest article

    error: Content is protected !!