21.5 C
Karnataka
Saturday, September 21, 2024

    ಹರ ಮುನಿದರೂ ಗುರು ಕಾಯ್ವನ್ 

    Must read

    ಸುಮಾ ವೀಣಾ

    ಗುರುಜನರಲಿ  ಮಾಡಧಿಕಭಕ್ತಿಯನು-ಪ್ರಜ್ವಾಲಿತೇ ಜ್ಞಾನಮಯೀ ದಿಲೀಪಃ ಎಂಬ ಪದಪುಂಜದನ್ವಯ  ‘ಗುರು’ ಎಂದರೆ  ಸ್ವಯಂಶಕ್ತಿಯಿಂದ  ತಾನೂ ಬೆಳಗುವುದರೊಂದಿಗೆ ಇತರ ಹಣತೆಗಳಿಗೂ ಜ್ಞಾನ ಎಂಬ ಕಿರಣವನ್ನು ವರ್ಗಾಯಿಸುವನು ಎಂದರ್ಥ.ನಾಗವರ್ಮನ  ಕರ್ಣಾಟಕ ಕಾದಂಬರಿಯ  ಎರಡನೆಯ  ಭಾಗ ಚಂದ್ರಾಪೀಡನ ಚೈತ್ರಯಾತ್ರೆ ಅಧ್ಯಾಯದ  10ನೆ ಪದ್ಯದಲ್ಲಿ ಉಲ್ಲೇಖವಾಗಿರುವ ಮಾತು. ಸಾಹಿತ್ಯದ ವಿದ್ಯಾರ್ಥಿಳಿಗೆ ಶುಕನಾಸೋಪಖ್ಯಾನ  ಎಂದೇ ಪರಿಚಿತವಾಗಿರುವ  ಈ ಭಾಗದಲ್ಲಿ ರಾಜ   ತಾರಾಪೀಡ ತನ್ನ ಮಗನಿಗೆ ಮಂತ್ರಿ ಶುಕನಾಸನ ಮೂಲಕ ಉಪದೇಶಿಸುವಂತೆ ನಾಗವರ್ಮ   ಗುರು ಭಕ್ತಿ ಎಂಬ  ಮೌಲ್ಯವನ್ನು ಬಿತ್ತುವ  ಪ್ರಯತ್ನ ಮಾಡಿದ್ದಾನೆ.

    ಹಡಗಿಗೊಬ್ಬ ನಾವಿಕ,ಗುಂಪಿಗೊಬ್ಬ ನಾಯಕ, ಆನೆಗೊಬ್ಬ ಅಂಕುಶ ಹಿಡಿದ ಮಾವುತ ಇರುವಂತೆ ಪಡ್ಡೆ ಹುಡುಗರನ್ನು ನೈತಿಕತೆ, ಸಾಮಾಜಿಕ ಜವಾಬ್ದಾರಿ, ಉತ್ತರದಾಯಿತ್ವ ಎಂಬ ಸೂತ್ರದಲ್ಲಿ ಬಂಧಿಸಲು, ಗುರುಗಳು, ಮಾರ್ಗದರ್ಶಕರು, ಹಿತೈಷಿಗಳು, ಸ್ನೇಹಿತರು ಬೇಕು ಇಲ್ಲವೆಂದರೆ ಯುವಜನತೆಯ ಬದುಕು ಸೂತ್ರ ಹರಿದ ಗಾಳಿ ಪಠದಂತೆ ಆಗುತ್ತದೆ.

    ಹರ ಮುನಿದರೂ ಗುರು ಕಾಯ್ವನ್  ಎಂಬ ಉಕ್ತಿಯಂತೆ  ಸಾಕ್ಷಾತ್ ಹರನೇ ಮುನಿದರೂ ಗುರು ಕಾರುಣ್ಯವೊಂದಿದ್ದರೆ ಸಕಲವೂ  ಸಿದ್ಧಿಸಿದಂತೆ.  ಗುರುಗಳು  ಯಾವತ್ತಿಗೂ ಶಿಷ್ಯರ ಏಳಿಗೆಯನ್ನೇ ಬಯಸುವವನು ಹಾಗಾಗಿ ಗುರುವಿನ ಸ್ಥಾನ ಹಿರಿದು.  ಅಂಥ ಗುರುವಿನಲ್ಲಿ ಶಿಷ್ಯರಾದವರು ಭಕ್ತಿಯನ್ನು ಹೊಂದಿರಬೇಕು ಅವರಿಗೆ  ಅದುವೇ ರಕ್ಷಾಕವಚ  ಎನ್ನುವುದನ್ನು ನಾಗವರ್ಮ ತನ್ನ ಕೃತಿಯಲ್ಲಿ ಶುಕನಾಸನ ಮೂಲಕ ಉಪದೇಶಿಸುವ ಪ್ರಯತ್ನ ಮಾಡಿದ್ದಾನೆ. 

    ಗುರುಗಳು ಹೇಳುವ ಬುದ್ಧಿಮಾತು ಇವತ್ತಿಗೆ ತಾಜಾತನ ಕಳೆದುಕೊಂಡ ಹಣ್ಣಿನಂತಾಗಿದೆ. ಶೈಕ್ಷಣಿಕವಾಗಿ ಅವಲೋಕಿಸಿದರೆ ನಮ್ಮ ಪಠ್ಯಗಳು ಸಾಮಾಜಿಕ ಜವಾಬ್ದಾರಿಯ ಕುರಿತು ಹೆಚ್ಚು ಮಾತನಾಡದೆ ಇರುವುದು , ಕೇವಲ ಅಂಕಗಳಗಾಗಿ ಮೀಸಲಾಗಿರುವುದೂ ಸಮಾಜವನ್ನು ವಿಕೃತಗೊಳಿಸುತ್ತಿದೆ ಎನ್ನಬಹುದು.  ಇಂಥ ದುರಿತದ ಕಾಲದಲ್ಲಿ     “ಗುರು ಜನರಲಿ ಮಾಡಧಿಕಭಕ್ತಿಯನು “ಎಂಬ ಮಾತು ಸರ್ವಕಾಲಕ್ಕೂ ಅನ್ವಯವಾಗುವಂಥದ್ದು.

    ವೃತ್ತಿಯಿಂದ ಉಪನ್ಯಾಸಕಿ ಆಗಿರುವ ಸುಮಾ ವೀಣಾ ಪ್ರವೃತ್ತಿಯಿಂದ ಲೇಖಕಿ. ಇವರ ಬರಹಗಳು ನಾಡಿನ ಪ್ರಮುಖ ಮುದ್ರಿತ ಪತ್ರಿಕೆಗಳು ಮತ್ತು ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನ ಮನ್ನಣೆ ಗಳಿಸಿವೆ. ಹತ್ತಕ್ಕೂ ಹೆಚ್ಚುಸಂಶೋಧನಾತ್ಮಕ ಬರಹಗಳು ಪ್ರಕಟವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರದ ವನಿತಾವಿಹಾರ, ಹಾಸನ ಆಕಾಶವಾಣಿಯ ಮಹಿಳಾಲೋಕ ಹಾಗೂ ಚಿಂತನ ವಿಭಾಗದಲ್ಲಿ ಇವರ ಸಾಹಿತ್ಯಾತ್ಮಕ ಭಾಷಣಗಳು ಪ್ರಸಾರವಾಗಿವೆ.’ನಲವಿನ ನಾಲಗೆ’ಎಂಬ ಪ್ರಬಂಧ ಸಂಕಲನ ಹೊರತಂದಿದ್ದಾರೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!