BENGALURU AUG 4
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ರಚನೆಗೆ ಬಿಜೆಪಿ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿದ್ದು, ಇಂದು (ಬುಧವಾರ) ಮಧ್ಯಾಹ್ನ 2.15ಕ್ಕೆ ರಾಜಭವನದಲ್ಲಿ ನಡೆಯುವ ಸರಳ ಸಮಾರಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಅವರು ನೂತನ ಸಚಿವರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ಬೋಧಿಸಲಿದ್ದಾರೆ.
ಇಂದು ಮುಂಜಾನೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇನ್ನೂ ಎರಡು ವಿಷಯಗಳು ಮಾತ್ರ ಬಾಕಿ ಇದೆ. ಅದು ಶೀಘ್ರವೇ ಬಗೆಹರಿಯಲಿದೆ. 10.30 ರಿಂದ 11ರ ಒಳಗೆ ಅಧಿಕೃತ ಹೊರಪಟ್ಟಿ ಹೊರ ಬೀಳಲಿದೆ ಎಂದರು.
ಉಪಮುಖ್ಯಮಂತ್ರಿಗಳ ಸ್ಥಾನ ಕುರಿತಂತೆ ಎಲ್ಲವೂ ಆ ಪಟ್ಟಿಯಲ್ಲೇ ಬಹಿರಂಗವಾಗಲಿದೆ ಎಂದರು.
ಕಾರ್ಯಕ್ರಮಕ್ಕೆ ಶಿಷ್ಟಾಚಾರ ವಿಭಾಗ ಸಿದ್ಧತೆ ಮಾಡಿಕೊಂಡಿದ್ದು. ಸೀಮಿತ ಗಣ್ಯರಿಗೆ ಆಹ್ವಾನ ನೀಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.ಇನ್ನು, ಯಡಿಯೂರಪ್ಪ ಸಂಪುಟದಲ್ಲಿದ್ದ ಯಾರಿಗೆಲ್ಲ ಸಚಿವ ಸ್ಥಾನ ಸಿಗುವದಿಲ್ಲ ಎಂಬ ಮಾಹಿತಿ ಬಿಜೆಪಿ ವಲಯದಲ್ಲಿ ತೀವ್ರ ಕಂಪನಗಳನ್ನೇ ಉಂಟು ಮಾಡಿದೆ. ಹಾವೇರಿ ಶಾಶಕ ನೆಹರೂ ಒಲೇಕಾರ್ ತಮ್ಮ ಅಸಮಾಧಾನವನ್ನು ಈಗಾಗಲೇ ಬಹಿರಂಗವಾಗಿಯೇ ಹೊರಹಾಕಿದ್ದಾರೆ. ಉಪಸಭಾಪತಿ ಆನಂದ ಮಾಮನಿ ಮಂತ್ರಿ ಸ್ಥಾನ ಸಿಗದಿದ್ದರೆ ಕ್ಷೇತ್ರದ ಜನರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಎನ್ನುವ ಮಾತನ್ನು ಆಡಿದ್ದಾರೆ.
ಬಿಸಿ ಪಾಟೀಲ್ ತಮಗೆ ಆಹ್ವಾನ ಬಂದಿರುವುದನ್ನು ವಾಟ್ಸಾಪ್ ಗ್ರೂಪ್ ಲ್ಲೇ ಬಹಿರಂಗ ಪಡಿಸಿದ್ದಾರೆ. ಬಿಎಸ್ ವೈ ಪುತ್ರ ವಿಜಯೇಂದ್ರ ಸಂಪುಟ ಸೇರುವ ಸಸ್ಪೆನ್ಸ್ ಇನ್ನೂ ಹಾಗೆಯೇ ಉಳಿದಿದೆ.