Tokyo AUG 7
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಶನಿವಾರದಂದು ಸುವರ್ಣ ಇತಿಹಾಸ ಬರೆಯಿತು.
ಜಾವಲಿನ್ ಪಟು ಹಾಗೂ ನಮ್ಮ ಹೆಮ್ಮೆಯ ಸೇನೆಯಲ್ಲಿ ಸುಬೇದಾರ್ ಆಗಿರುವ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆದ್ದಿದ್ದು, ಜಾವಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ 85.30 ಮೀಟರ್ ಎಸೆದು ಬಂಗಾರದ ಪದಕ ಗೆದ್ದುಕೊಂಡು ಭಾರತದ ಕೀರ್ತಿ ಪಾತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದರು.
ಚೋಪ್ರಾ ಗೆಲುವಿನ ಹಾದಿ ರೋಚಕವಾಗಿತ್ತು. ಮೊದಲ ಪ್ರಯತ್ನದಲ್ಲಿ ಅವರು 87.03 ಮೀಟರ್ ದೂರ ಎಸೆದು ಪ್ರಥಮ ಸುತ್ತಿನಲ್ಲೇ ಮೊದಲಿಗರಾಗಿ ಹೊರಹೊಮ್ಮಿದರಲ್ಲದೆ, ಜರ್ಮನಿಯ ಜೂಲಿಯನ್ ವೇಬರ್ ಅವರು 85.30 ಮೀಟರ್ ದೂರ ಎಸೆಯುವ ಮೂಲಕ ದ್ವಿತೀಯ ಸ್ಥಾನಕ್ಕಷ ಬಂದು ನಿಂತರು.
ವಿಶೇಷವೆಂದರೆ, ಪ್ರಥಮ ಸುತ್ತಿನಲ್ಲಿ ಯಾವ ಜಾವಲಿನ್ ಪಟು ಕೂಡ 85 ಮೀಟರ್‌ಗಿಂತ ಹೆಚ್ಚು ದೂರ ಜಾವಲಿನ್ ಎಸೆಯಲು ಸಾಧ್ಯವಾಗಲಿಲ್ಲ. ಅಲ್ಲಿಯೇ ನೀರಜ್ ತಮ್ಮ ಶಕ್ತಿ ಏನೆಂಬುದನ್ನು ತೋರಿಸಿಕೊಂಡಿದ್ದರು.
ಎರಡನೇ ಪ್ರಯತ್ನದಲ್ಲೂ ನೀರಜ್ ಮತ್ತಷ್ಟು ಬಲವಾಗಿ ಜಾವೆಲಿನ್ ಥ್ರೋ ಮಾಡಿದರು. ಈ ಪ್ರಯತ್ನದಲ್ಲಿ ಅವರು 87.58 ಮೀಟರ್ ದೂರ ಜಾವಲಿನ್ ಎಸೆದರು. ಉಳಿದಂತೆ ಈ ಪ್ರಯತ್ನದಲ್ಲಿ ವೇಬರ್ 77.90 ಮೀಟರ್ ದೂರವಷ್ಟೇ ಎಸೆದು ಹಿಂದೆ ಬಿದ್ದರು.
ನಾಲ್ಕನೇ ಪ್ರಯತ್ನಕ್ಕೆ ಬರುವಷ್ಟರಲ್ಲಿ ಇನ್ನಷ್ಟು ಹಿಂದೆ ಬಿದ್ದಂತೆ ಕಂಡ ನೀರಜ್ ಗೆರೆ ದಾಟಿಬಿಟ್ಟು ಪೌಲ್ ಮಾಡಿಕೊಂಡರಲ್ಲೆ, ಅಂತಿಮ ಸುತ್ತಿನಲ್ಲಿ 80 ಮೀಟರ್ ಮೀರಲು ಅವರಿಗೆ ಆಗಲಿಲ್ಲ.
ಗಮನಾರ್ಹ ಅಂಶವೆಂದರೆ, ಜಾವೆಲಿನ್ ಥ್ರೋ ವಿಭಾಗದಲ್ಲಿ ಜಗತ್ತಿನ ನಂ.1 ಸ್ಥಾನದಲ್ಲಿದ್ದ ಜೊಹಾನಸ್ ವೆಟ್ಟರ್ ಅವರು ಫೈನಲ್ 8ರ ಪಟ್ಟಿಗೇ ಬರಲು ಶಾಧ್ಯವಾಗಲೇ ಇಲ್ಲ.
ವೈಯಕ್ತಿಕ 96.29 ಮೀಟರ್ ದೂರ ಎಸೆದು ದಾಖಲೆ ಮಾಡಿದ್ದ ಅವರು, ನೀರಸ ಪ್ರದರ್ಶನ ತೋರಿದರು.2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್ ವಿಭಾಗದಲ್ಲಿ ಅಭಿನವ್ ಬಿಂದ್ರಾ ಬಳಿಕ ಒಲಿಂಪಿಕ್ ಕ್ರೀಡಾಕೂಟದಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಮಹೋನ್ನತ ಸಾಧನೆಯನ್ನು ನೀರಜ್ ಮಾಡಿದ್ದಾರೆ.
ಪ್ರಧಾನಿ ಅಭಿನಂದನೆ
ಟೋಕಿಯೊ ಒಲಿಂಪಿಕ್ಸ್ 2020ʼನಲ್ಲಿ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ನೀರಜ್ ಅವರು ಅದಮ್ಯ ಉತ್ಸಾಹದಿಂದ ಆಡಿದ್ದಾರೆ ಮತ್ತು ಅಪ್ರತಿಮ ದಿಟ್ಟತನ ತೋರಿದ್ದಾರೆ ಎಂದೂ ಮೋದಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು,”ಟೋಕಿಯೊದಲ್ಲಿ ಹೊಸ ಇತಿಹಾಸ ಸೃಷ್ಟಿಸಲಾಗಿದೆ! ನೀರಜ್ ಚೋಪ್ರಾ @Neeraj_chopra1 ಅವರ ಇಂದಿನ ಸಾಧನೆ ಇನ್ನು ಎಂದೆಂದಿಗೂ ನೆನಪಿನಲ್ಲಿ ಚಿರಸ್ಥಾಯಿಗಲಿದೆ. ಯುವ ನೀರಜ್ ಅವರದ್ದು ಅಸಾಧಾರಣ ಪ್ರದರ್ಶನ. ಅವರು ಅದಮ್ಯ ಉತ್ಸಾಹದಿಂದ ಆಡಿದರು ಮತ್ತು ಅಪ್ರತಿಮ ದಿಟ್ಟತನ ತೋರಿಸಿದರು. ಚಿನ್ನ ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. #ಟೋಕಿಯೋ 2020,” ಎಂದಿದ್ದಾರೆ.