ಇಂದು ನಾಡಿನಾದ್ಯಂತ ಶ್ರೀವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ನೆರೆ ಹೊರೆಯವರೆಲ್ಲಾ ಸಂಭ್ರಮದಿಂದ ಒಬ್ಬರ ಮನೆಗೆ ಮತ್ತೊಬ್ಬರು ಹೋಗಿ ಸಡಗರದಿಂದ ಆಚರಿಸುತ್ತಿದ್ದ ಈ ಹಬ್ಬ ಕಳೆದ ಬಾರಿ ಕೋವಿಡ್ ಕಾರಣದಿಂದ ಅವರವರ ಮನೆಗೆ ಸೀಮಿತವಾಗಿತ್ತು. ಈ ಬಾರಿ ಹಬ್ಬದ ಸಂಭ್ರಮ ಮತ್ತೆ ಕಂಡಿದೆ.
ಶ್ರಾವಣ ಮಾಸವೇ ಹಾಗೆ. ಹಬ್ಬಗಳ ಸಾಲು. ಈ ಮಾಸದ ಎರಡನೇ ಶುಕ್ರವಾರ ಹೆಂಗಳೆಯರಿಗಂತೂ ಸಂಭ್ರಮದ ದಿನ. ಮನೆಯಲ್ಲಿ ಲಕ್ಶ್ಮಿ ಪೂಜೆಯ ಸಡಗರ. ನಮ್ಮ ದಾಸವರೇಣ್ಯರು ಲಕ್ಷ್ಮಿಯನ್ನು ಸ್ತುತಿಸುವುದನ್ನು ಕೇಳುವುದೇ ಸೊಗಸು. ಅದರ ಜೊತಗೆ ನಮ್ಮಲ್ಲಿ ಸಂಪ್ರದಾಯ ಗೀತೆಗಳು ಅನೇಕ. ಇವುಗಳನ್ನೆಲ್ಲಾ ಒಂದೆಡೆ ಸೇರಿಸಿ ಈ ದಿನ ನಾಡಿನ ಜತೆಗೆ ಈ ವಿಶೇಷ ಪಾಡ್ಕಾಸ್ಟ್ ಅನ್ನು ಕನ್ನಡಪ್ರೆಸ್.ಕಾಮ್ ಅರ್ಪಿಸುತ್ತಿದೆ. ಭಾರತಿ ಅವರು ಪ್ರಸ್ತುತ ಪಡಿಸಿದ ಈ ಪಾಡ್ಕಾಸ್ಚ್ ನಲ್ಲಿ ಪರಿಮಳಾ ನರಹರಿರಾವ್ ತಮ್ಮ ಗಾಯನ ಸುಧೆ ಹರಿಸಿದ್ದಾರೆ.
ಆಲಿಸಿ ಪ್ರತಿಕ್ರಿಯಿಸಿ.
ಹಾಡುಗಳು ಚೆನ್ನಾಗಿವೆ ಹಾಗೂ ಪರಿಮಳ ಅವರು ಇಂಪಾಗಿ ಹಾಡಿದ್ದಾರೆ.ಭಾರತಿಯವರು ಹಬ್ಬದ ವಿಶೇಷತೆಯನ್ನು ಸುಂದರವಾಗಿ , ಸರಳವಾಗಿ ವಿವರಿಸಿದ್ದಾರೆ.
ಪರಿಮಳ ನರಹರಿರಾವ್ ಅವರು ಭಕ್ತಿ,ಭಾವ ಪೂರ್ವಕವಾಗಿ ಸುಮದುರವಾಗಿ ಹಾಡಿರುವರು. ಶ್ರೀಮತಿ ಭಾರತಿ ಅವರ ನಿರೂಪಣೆಯೂ.ಅಷ್ಟೆ ಸೊಗಸಾಗಿದ್ದುಮುದವನ್ನು ಕೊಟ್ಟಿದೆ.ಇಬ್ಬರಿಗೂ ಧನ್ಯವಾದಗಳು.
ಪರಿಮಳ ನರಹರಿ ರಾವ್ ಅವರ ಗಾಯನ ಬಹಳ ಸುಶ್ರಾವ್ಯವಾಗಿದೆ. ಭಾರತಿಯ ನಿರೂಪಣೆ ಯೂ ಅಷ್ಟೇ ಮಧುರವಾಗಿದೆ. ಸಾಂದರ್ಭಿಕ ಕಾರ್ಯಕ್ರಮ ಗಳು ಕನ್ನಡ ಪ್ರೆಸ್.ಕಾಮ್ ನಿಂದು ಬಹಳ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು.