19.5 C
Karnataka
Friday, November 22, 2024

    ಕೃಷ್ಣಾ ನೀ ಬೇಗನೇ ಬಾರೋ

    Must read

    ನಮ್ಮ ಕೃಷ್ಣ ಮಕ್ಕಳ ಪ್ರೀತಿಯ ದೇವರು. ಬಾಲ್ಯದಲ್ಲಿ ಎಲ್ಲರೂ ಒಮ್ಮೆಯಾದರು ಕೃಷ್ಣ ರಾಧೆಯಾಗಿ ಶಾಲೆಯ ಕಾರ್ಯಕ್ರಮದಲ್ಲಿ ನಲಿದವರೆ. ಇನ್ನೂ ಶ್ರೀಕೃಷ್ಣನ ಬಾಲ ಲೀಲೆಗಳನ್ನು ಮಕ್ಕಳ ಬಾಯಿಂದ ಕೇಳಿದರಂತೂ ಅದರ ಸೊಗಸೆ ಬೇರೆ. ಹೀಗಾಗಿ ನಮ್ಮಈ ವಿಡಿಯೋದಲ್ಲಿ ನಲ್ಲಿ ಮಕ್ಕಳ ಕಲರವವನ್ನು ಕೇಳಿಸುತ್ತಿದ್ದೇವೆ. ಅವರ ತೊದಲ ನುಡಿಗಳಲ್ಲಿ ಶ್ರೀಕೃಷ್ಣ ಲೀಲಾಮೃತವನ್ನು ಕೇಳಿ ಆನಂದಿಸಿ.ಈ ಬಾರಿ ಮಕ್ಕಳ ಅಮ್ಮಂದಿರು ಅವರೊಂದಿಗೆ ಧ್ವನಿಗೂಡಿಸಿರುವುದು ವಿಶೇಷ.

    ಸಾನಿಕಾ ತೇಜಸ್ವಿ ಮತ್ತು ಅವರ ತಾಯಿ ಡಾ. ಸುಚೇತಾ ಅವರ ಸ್ವಾಗತಂ ಕೃಷ್ಣ ಗೀತೆಯಿಂದ ಆರಂಭವಾಗುವ ಈ ವಿಡಿಯೋ ಮುಂದೆ ಅಮೆರಿಕದಿಂದ ಜೊತೆಗೂಡಿರುವ ಶ್ರೀಯಶ್ ಮತ್ತು ರಮ್ಯಾ ಹರ್ಷ ಅವರು ಕೃಷ್ಣಾ ನೀ ಬೇಗನೇ ಬಾರೋ ಎಂದು ಕರೆಯುವ ಮೂಲಕ ಮುಂದುವರಿಯುತ್ತದೆ. ಮಂದೆ ಶ್ರೀಯಾ ಮತ್ತುಛಾಯಾಶ್ರೀ ಕೃಷ್ಣ ಎನ ಬಾರದೆ ಎಂದು ಭಕ್ತಿಯಿಂದ ಧ್ಯಾನಿಸುತ್ತಿದ್ದಂತೆ ಅವನಿ ಮತ್ತು ರಶ್ಮಿ ಏಕೆ ಮಮತೆ ಕೊಟ್ಟು ಎಂದು ರಂಗನಾಥನನ್ನು ಕೊಂಡಾಡುತ್ತಾರೆ. ಮುಂದೆ ಮಿಹಿರಾ ಮತ್ತು ಪ್ರಿಯಾಂಕ ನಂದ ನಂದನಾ ನೀನು ಶ್ರೀಕೃಷ್ಣ ಎಂದು ಕೃಷ್ಣನನ್ನು ಪ್ರಾರ್ಥಿಸುತ್ತಾರೆ. ಪ್ರತೀಕ್ಷ ಮತ್ತು ಸಂಹಿತ ಸಹೋದರಿಯರು ಕೃಷ್ಣಾ ಬಾರೋ ಎಂದು ಕರೆಯುವ ಮೂಲಕ ವಿಡಿಯೋವನ್ನು ಅಂತ್ಯಗೊಳಿಸಿದ್ದಾರೆ.

    ನಿರೂಪಣೆ ಭಾರತಿ ಅವರದ್ದು. ಆಲಿಸಿ ಪ್ರತಿಕ್ರಿಯಿಸಿ.

    spot_img

    More articles

    11 COMMENTS

    1. ಎಲ್ಲಾ ಮಕ್ಕಳು ತುಂಬಾ ಮುದ್ದಾಗಿ ಸೊಗಸಾಗಿ ಹಾಡಿ, ಈ ಬಾರಿಯ ಜನ್ಮಾಶ್ಟಮಿ ಗೆ ಕಳೆ ತಂದಿದ್ದಾರೆ. ಈ ಸುಸಂದರ್ಭ ಕಲ್ಪಿಸಿದ kannadapress..com ನವರಿಗೆ ಅಭಿನಂದನೆ ಗಳು. ಎಂದಿನಂತೆ ಸೊಗಸಾದ ನೀರೂಪಣೆ ಭಾರತಿ ಯವರದ್ದು.👏👏

    2. ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದೀರಿ, ಭಾರತಿ ಅವರೇ.. ನಮ್ಮನ್ನೆಲ್ಲ ಒಂದುಗೂಡಿಸಿ ಕೃಷ್ಣನ ಜೊತೆ ಕರೆದುಕೊಂಡು ಹೋಗಿದ್ದಕ್ಕೆ ಅನೇಕಾನೇಕ ಧನ್ಯವಾದಗಳು.

    3. ಅದ್ಭುತವಾದ ಹಾಡುಗಳು.ನಮ್ಮ ಜನ್ಮಾಷ್ಟಮಿ ಆಚರಣೆ ಗೆ ಮತ್ತಷ್ಟು ಮೆರಗು ನೀಡಿತು.

    4. Thank you bharathi ji
      The concept is really good. My daughter listened to your entire ನಿರೂಪಣೆ.. . She in fact enjoyed your presentation more than the songs.

    5. ಬಹಳ ಸೊಗಸಾಗಿ ಮೂಡಿ ಬಂದ ಕಾರ್ಯಕ್ರಮ. ಎಲ್ಲಾ ಮಕ್ಕಳು ಕೃಷ್ಣನ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ. ಎಂದಿನಂತೆ ಭಾರತಿ ಯು ನಿರೂಪಣೆ ಆನಂದ ಕಾಯಕವಾಗಿದೆ. ಹಾಡುಗಳ ಆಯ್ಕೆ ಸಾಂದರ್ಭಿಕ ವಾಗಿದೆ.

    6. ಮುಗ್ಧ, ಮಕ್ಕಳ ಬಾಯಲ್ಲಿ ಮುದ್ದು ಕೃಷ್ಣನ ಹಾಡುಗಳು ಇಂಪಾಗಿವೆ.ಜೊತೆಗೆ ಅಮ್ಮಂದಿರೂ ಜೊತೆಯಾಗಿ ಹಾಡಿರುವೂದು ಸೊಗಸಾಗಿದೆ. ವಿದೇಶ ದಲ್ಲಿರುವ makkalindaloo ಕಾರ್ಯಕ್ರಮ maadisirua ನಿಮಗೂ ಎಲ್ಲಾ ಮಕ್ಕಳು, ತಾಯಂದಿರಿಗೂ, ಚಂದವಾಗಿ ನಿರೂಪಿಸಿರುವ ನಿರೂಪಕ ರಿಗೂ ಧನ್ಯವಾದಗಳು.

    LEAVE A REPLY

    Please enter your comment!
    Please enter your name here

    Latest article

    error: Content is protected !!