18 C
Karnataka
Sunday, November 24, 2024

    ಸಿಇಟಿ ಫಲಿತಾಂಶ 2021: ಎಲ್ಲ ವಿಭಾಗಗಳಲ್ಲೂ ಮೈಸೂರಿನ ಮೇಘನ್ ಪ್ರಥಮ

    Must read

    BENGALURU SEPT 20

    ಪರೀಕ್ಷೆ ನಡೆದ ಕೇವಲ ಇಪ್ಪತ್ತೇ ದಿನದಲ್ಲಿ ವೃತ್ತಿಪರ ಕೋರ್ಸುಗಳ ಪ್ರವೇಶ ಪರೀಕ್ಷೆ (CET)ಯ ಫಲಿತಾಂಶ ಇಂದು ಪ್ರಕಟವಾಗಿದೆ. ಮೈಸೂರಿನ ಪ್ರಮಥಿ ಹಿಲ್ ವ್ಯೂ ಅಕಾಡೆಮಿಯ ವಿದ್ಯಾರ್ಥಿ ಎಚ್ ಕೆ ಮೇಘನ್ ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಮೊದಲ ರಾಂಕ್ ಗಳಿಸಿ ಹೊಸ ದಾಖಲೆ ಬರೆದಿದ್ದಾರೆ.

    ಎಂಜಿನಿಯರಿಂಗ್, ಪಶುವೈದ್ಯ, ಬಿಎಸ್ಸಿ (ಕೃಷಿ), ಬಿ-ಫಾರ್ಮಾ, ಡಿ-ಪಾರ್ಮಾ, ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕೋರ್ಸುಗಳ ಪ್ರವೇಶಕ್ಕಾಗಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸೋಮವಾರ ಪ್ರಕಟಿಸಿದರು.

    ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ನಡೆಸಿದ ಮಾಧ್ಯಮ ಗೋಷ್ಠಿಯಲ್ಲಿ ಸಿಇಟಿ ಫಲಿತಾಂಶದ ಮಾಹಿತಿ ನೀಡಿದ ಸಚಿವರು; ಅಗಸ್ಟ್ 28-29 & 30ರಂದು ರಾಜ್ಯದ 530 ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಗೆ ಒಟ್ಟು 1,93,447  ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ  95,462 ವಿದ್ಯಾರ್ಥಿಗಳು ಹಾಗೂ 97,985 ವಿದ್ಯಾರ್ಥಿನಿಯರಿದ್ದಾರೆ ಎಂದರು.

    ಎಲ್ಲ ವಿಭಾಗದಲ್ಲಿಯೂ ಮೈಸೂರು ವಿದ್ಯಾರ್ಥಿ ಮೇಘನ್‌ ಎಚ್.ಕೆ. ಮೊದಲ ರಾಂಕ್‌ ಪಡೆದಿದ್ದು, ಈ ರೀತಿ ಒಬ್ಬನೇ ವಿದ್ಯಾರ್ಥಿ ಎಲ್ಲ ಬ್ರಾಂಚ್‌ʼಗಳಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಹೊಸ ದಾಖಲೆಯಾಗಿದೆ. ಈ ಕಾರಣಕ್ಕಾಗಿ ಮೇಘನ್‌ ಅವರನ್ನು ನಾನು ಅಭಿನಂದಿಸುತ್ತೇನೆ ಎಂದು ಸಚಿವರು ಇದೇ ವೇಳೆ ಹೇಳಿದರು.

    ವಿಭಾಗವಾರು ಅರ್ಹತೆ ಪಡೆದವರು:

    ಎಂಜಿನಿಯರಿಂಗ್ ವಿಭಾಗದಲ್ಲಿ 1,83,231, ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕೋರ್ಸು ವಿಭಾಗದಲ್ಲಿ 1,55,910, ಪಶುವೈದ್ಯಕೀಯ (ವೆಟರ್ನರಿ) ವಿಭಾಗದಲ್ಲಿ 1,52,518, ಇನ್ನು ಬಿ-ಫಾರ್ಮಾ ಕೋರ್ಸಿನಲ್ಲಿ 1,86,638 ಹಾಗೂ ಡಿ-ಪಾರ್ಮಾ ಕೋರ್ಸುಗಳಲ್ಲಿ 1,86,638 ಅಭ್ಯರ್ಥಿಗಳು ರಾಂಕ್ ಪಡೆದು ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

    31,460 ಅಭ್ಯರ್ಥಿಗಳು ಪಿಸಿಎಂ, 3,836 ಅಭ್ಯರ್ಥಿಗಳು ಪಿಸಿಬಿಯಲ್ಲಿ ಹಾಗೂ 1,58,151 ಅಭ್ಯರ್ಥಿಗಳು ಪಿಸಿಎಂ-ಪಿಸಿಬಿಯಲ್ಲಿ ಪರೀಕ್ಷೆ ಬರೆದಿದ್ದಾರೆಂದು ಸಚಿವರು ತಿಳಿಸಿದರು.

    55ಕ್ಕೂ ಹೆಚ್ಚು ಅಂಕ ಗಳಿಸಿದವರು:

    ಭೌತಶಾಸ್ತ್ರ ವಿಷಯದಲ್ಲಿ ಯಾವ ಅಭ್ಯರ್ಥಿಯೂ 55ಕ್ಕೂ ಹೆಚ್ಚಿನ ಅಂಕ ಪಡೆದಿಲ್ಲ. ಆದರೆ ರಸಾಯನಶಾಸ್ತ್ರದಲ್ಲಿ 3, ಗಣಿತದಲ್ಲಿ 6 ಹಾಗೂ ಜೀವಶಾಸ್ತ್ರ ವಿಷಯದಲ್ಲಿ 50 ವಿದ್ಯಾರ್ಥಿಗಳು 60 ಅಂಕ ಗಳಿಸಿದ್ದಾರೆಂದು ಸಚಿವರು ಮಾಹಿತಿ ನೀಡಿದರು.

    ಅಭ್ಯರ್ಥಿಗಳಿಗೆ ಸೌಲಭ್ಯ ಕೇಂದ್ರ:

    ಮೂಲ ದಾಖಲಾತಿಗಳ ಪರಿಶೀಲನೆಗಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಅನುಕೂಲಕ್ಕಾಗಿ ʼಸೌಲಭ್ಯ ಕೇಂದ್ರʼಗಳನ್ನು ತೆರೆಯಲಾಗುವುದು ಎಂದ ಸಚಿವರು, ಇದೇ ಸೆಪ್ಟೆಂಬರ್ 30ರಿಂದ ದಾಖಲಾತಿ ಪರಿಶೀಲನೆ ಆರಂಭಿಸಲಾಗುವುದು. ಅಭ್ಯರ್ಥಿಗಳು ಹತ್ತಿರದ ಸೌಲಭ್ಯ ಕೇಂದ್ರಗಳಿಗೆ ಪರಿಶೀಲನೆಗೆ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಅಗತ್ಯವಿರುವ ಎಲ್ಲ ಮೂಲ ದಾಖಲಾತಿಗಳನ್ನು ಸಿದ್ದವಾಗಿಟ್ಟುಕೊಳ್ಳಬೇಕು. ಪ್ರಾಧಿಕಾರದ ವೆಬ್ʼಸೈಟಿನಲ್ಲಿ ಮೂಲ ದಾಖಲಾತಿಗಳ ವಿವರ ನೀಡಲಾಗಿದೆ. ಈ ಸೌಲಭ್ಯ ಕೇಂದ್ರಗಳಲ್ಲಿ Online Verification Software ಮೂಲಕ ದಾಖಲಾತಿಗಳನ್ನು ಪರಿಶೀಲಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

    ರಾಂಕ್ ತಡೆಹಿಡಿಯಲ್ಪಟ್ಟಿರುವ ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ಯಥಾ ಪ್ರತಿಯನ್ನು ಕೆಇಎ ಕಚೇರಿಗೆ ಇ-ಮೇಲ್ [email protected] ಮೂಲಕ ಅಥವಾ ಖುದ್ದಾಗಿ ಸಲ್ಲಿಸಿ ತಮ್ಮ ರಾಂಕ್ʼಗಳನ್ನು ಪಡೆಯಬಹುದು. ರಾಂಕ್ ನೀಡಿದ ಮಾತ್ರಕ್ಕೆ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಿಕೊಳ್ಳುವ ಅರ್ಹತೆ ಬರುವುದಿಲ್ಲ. ದಾಖಲಾತಿ ಪರಿಶೀಲನೆಯ ನಂತರ ಅರ್ಹತೆಯನ್ನು ಪರಿಗಣಿಸಲಾಗುವುದು.

    UGNEET-2021ರ ಫಲಿತಾಂಶ ಬಂದ ನಂತರ UGNEET-2021 ಅಂಕಗಳ ಆಧಾರದ ಮೇಲೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಮತು ಭಾರತೀಯ ವೈದ್ಯ ಪದ್ಧತಿ ಹಾಗು ಹೋಮಿಯೋಪತಿ ಕೋರ್ಸುಗಳ ಪ್ರವೇಶಕ್ಕೆ ಪರಿಗಣಿಸಲಾಗುವುದು ಹಾಗೆಯೇ NATA-2021 ಅಂಕಗಳ ಆಧಾರದ ಮೇಲೆ ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶಕ್ಕೆ ರಾಂಕ್ʼನ್ನು ನಂತರ ಪ್ರಕಟಿಸಲಾಗುವುದು.

    ಯಾವುದಾದರೂ ಅರ್ಹ ಅಭ್ಯರ್ಥಿಗೆ ರಾಂಕ್ ನೀಡದೇ ಇದ್ದ ಪಕ್ಷದಲ್ಲಿ ಅಭ್ಯರ್ಥಿಯು ತನ್ನ ಎರಡನೇ ವರ್ಷದ ಪಿಯುಸಿ ಫೋಟೋ ಪ್ರತಿಯನ್ನು ಪ್ರಾಧಿಕಾರದ ಇ-ಮೇಲ್ ವಿಳಾಸಕ್ಕೆ ಕಳುಹಿಸಿ ರಾಂಕ್ ಪಡೆಯಬಹುದು ಎಂದು ಸಚಿವರು ವಿವರಿಸಿದರು.

    ರಾಂಕ್ ವಿಜೇತ ವಿದ್ಯಾರ್ಥಿಗಳು

    ಎಂಜಿನೀಯರಿಂಗ್:

    1.ಮೇಘನ್ ಎಚ್.ಕೆ.: ಪ್ರಮಥಿ ಹಿಲ್ ವ್ಯೂ ಅಕಾಡೆಮಿ, ಮೈಸೂರು
    2.ಪ್ರೇಮಂಕೂರ್ ಚಕ್ರಬರ್ತಿ: ನ್ಯಾಷನಲ್ ಪಬ್ಲಿಕ್ ಸ್ಕೂಲ್, ಯಲಹಂಕ, ಬೆಂಗಳೂರು
    3.ಬಿಎಸ್ ಅನಿರುದ್ಧ್: ಆಕ್ಸ್ʼಫರ್ಡ್ ಇಂಡಿಯಾ ಪಿಯು ಕಾಲೇಜು, ಉಲ್ಲಾಳ, ಬೆಂಗಳೂರು
    4.ನಿರಂಜನ್ ರೆಡ್ಡಿ ಬಿಎಸ್: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ವೀರಣ್ಣಪಾಳ್ಯ, ಬೆಂಗಳೂರು
    5.ಆದಿತ್ಯ ಸಿಆರ್: ನಾರಾಯಣ ಇ-ಟೆಕ್ನೋ ಸ್ಕೂಲ್, ವಿದ್ಯಾರಣ್ಯಪುರ, ಬೆಂಗಳೂರು
    6.ಕಾರ್ತೀಕ್ ಅಗರವಾಲ್: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಕೆಆರ್ ಪುರ, ಬೆಂಗಳೂರು
    7.ವೀರೇಶ್ ಬಿ.ಪಾಟೀಲ್: ಆಕ್ಸ್ʼಫರ್ಡ್ ಇಂಡಿಯಾ ಪಿಯು ಕಾಲೇಜು, ಉಲ್ಲಾಳ, ಬೆಂಗಳೂರು
    8.ಅಂಕಿತಾ ಹರ್ಷಾ ಮೂರ್ತಿ: ದಿ ಬ್ರಿಗೇಡ್ ಸ್ಕೂಲ್, ಜೆಪಿ ನಗರ, ಬೆಂಗಳೂರು
    9.ಆದಿತ್ಯ ಪ್ರಭಾಷ್: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಕೆಆರ್ ಪುರಂ, ಬೆಂಗಳೂರು
    10.ವೀನೀತ್ ಭಟ್: ಈಕ್ಯಾ ಸ್ಕೂಲ್, ಐಟಿಪಿಎಲ್, ಬೆಂಗಳೂರು

    ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ:

    1.ಮೇಘನ್ ಎಚ್.ಕೆ.: ಪ್ರಮಥಿ ಹಿಲ್ ವ್ಯೂ ಅಕಾಡೆಮಿ, ಮೈಸೂರು
    2.ವರುಣ್ ಆದಿತ್ಯ: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಮಾರತ್ʼಹಳ್ಳಿ, ಬೆಂಗಳೂರು
    3.ರೀಥಮ್ ಬಿ.: ಎಕ್ಸ್‌,ಪರ್ಟ್ ಪಿಯು ಕಾಲೇಜು, ಮಂಗಳೂರು
    5.ಮೊಹಮ್ಮದ್ ಕೈಫ್ ಕೆ. ಮುಲ್ಲಾ: ಆರ್.ಎಲ್ ಪಿಯು ವಿಜ್ಞಾನ ಕಾಲೇಜು, ಬೆಳಗಾವಿ
    6.ಹಯವದನ ಸುಬ್ರಹ್ಮಣ್ಯ: ವಿದ್ಯಾಕಿರಣ ಪಿಯು ಕಾಲೇಜು, ಬಳ್ಳಾರಿ
    7.ನಂದನಾ ಎನ್. ಹೆಗಡೆ: ಬೇಸ್ ಪಿಯು ಕಾಲೇಜು, ಬೆಂಗಳೂರು
    8.ಸಾತ್ವಿಕ್ ಜಿ.ಭಟ್: ಎಕ್ಸ್ʼಲೆಂಟ್ ವಿಜ್ಞಾನ-ವಾಣಿಜ್ಯ ಕಾಲೇಜು, ಮೂಡಬಿದರೆ
    9.ನಿಶಾತ್ ಫಾತಿಮಾ: ಶಾಹಿನ್ ಇಂಡಿಯಾ ಪಿಯು ಕಾಲೇಜು, ಬೀದರ್
    10.ಜಿ.ಶ್ರೀಸಂಜಿತ್: ವೇದಾಂತ ಕಾಲೇಜು, ಶಾರದಾ ನಗರ, ಬೆಂಗಳೂರು

    ಬಿಎಸ್ಸಿ ಅಗ್ರಿ:‌

    1.ಮೇಘನ್ ಎಚ್.ಕೆ.: ಪ್ರಮಥಿ ಹಿಲ್ ವ್ಯೂ ಅಕಾಡೆಮಿ, ಮೈಸೂರು
    2.ರೀಥಮ್ ಬಿ.: ಎಕ್ಸ್‌ʼಪರ್ಟ್‌ ಪಿಯು ಕಾಲೇಜು, ಮಂಗಳೂರು
    3.ಆದಿತ್ಯ ಪ್ರಭಾಷ್: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಕೆಆರ್ ಪುರಂ, ಬೆಂಗಳೂರು
    4.ತೇಜಸ್: ಎಕ್ಸ್ʼಪರ್ಟ್ ಪಿಯು ಕಾಲೇಜು, ಮಂಗಳೂರು
    5.ಸುಜನನ್ ಆರ್ ಶೆಟ್ಟಿ: ಆಳ್ವಾಸ್ ಪಿಯು ಕಾಲೇಜ್, ವಿದ್ಯಾಗಿರಿ, ಮೂಡಬಿದಿರೆ
    6.ಅನಿರುದ್ಧ ರಾವ್: ಶ್ರೀ ಕುಮರನ್ ಚಿಲ್ಡ್ರನ್ಸ್ ಹೋಂ, ಉತ್ತರಹಳ್ಳಿ, ಬೆಂಗಳೂರು
    7.ಸಂಜನಾ ಕಾಮತ್ ಪಂಚಮಾಲ್: ಎಕ್ಸ್‌ʼಪರ್ಟ್ ಪಿಯು ಕಾಲೇಜು, ಮಂಗಳೂರುವೀರೇಶ್ ಬಿ ಪಾಟೀಲ್: ಆಕ್ಸ್ʼಫರ್ಡ್ ಇಂಡಿಯಾ ಪಿಯು ಕಾಲೇಜು, ಉಲ್ಲಾಳ, ಬೆಂಗಳೂರು
    9.ಪೂರ್ವಿ ಎಚ್.ಸಿ.: ರಾಯಲ್ ಕಾನ್ಕಾರ್ಡ್ ಇಂಟರ್ʼನ್ಯಾಷನಲ್ ಸ್ಕೂಲ್, ಕಲ್ಯಾಣನಗರ, ಬೆಂಗಳೂರು
    10.ಕೆ.ವಿ.ಪ್ರಣವ್: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಜೆಪಿ ನಗರ, ಬೆಂಗಳೂರು

    ಪಶುವೈದ್ಯ (ವೆಟರ್ನರಿ):

    1.ಮೇಘನ್ ಎಚ್.ಕೆ.: ಪ್ರಮಥಿ ಹಿಲ್ ವ್ಯೂ ಅಕಾಡೆಮಿ, ಮೈಸೂರು
    2.ವರುಣ್ ಆದಿತ್ಯ: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಮಾರತ್ʼಹಳ್ಳಿ, ಬೆಂಗಳೂರು
    3.ರೀಥಮ್ ಬಿ.: ಎಕ್ಸ್ಪರ್ಟ್ ಪಿಯು ಕಾಲೇಜು, ಮಂಗಳೂರು
    5.ಮೊಹಮ್ಮದ್ ಕೈಫ್ ಕೆ. ಮುಲ್ಲಾ: ಆರ್.ಎಲ್ ಪಿಯು ವಿಜ್ಞಾನ ಕಾಲೇಜು, ಬೆಳಗಾವಿ
    6.ಹಯವದನ ಸುಬ್ರಹ್ಮಣ್ಯ: ವಿದ್ಯಾಕಿರಣ ಪಿಯು ಕಾಲೇಜು, ಬಳ್ಳಾರಿ
    7.ಸಾತ್ವಿಕ್ ಜಿ.ಭಟ್: ಎಕ್ಸ್ʼಲೆಂಟ್ ವಿಜ್ಞಾನ-ವಾಣಿಜ್ಯ ಕಾಲೇಜು, ಮೂಡಬಿದರೆ
    8.ನಂದನಾ ಎನ್.ಹೆಗಡೆ: ಬೇಸ್ ಪಿಯು ಕಾಲೇಜು
    9.ನಿಶಾತ್ ಫಾತಿಮಾ: ಶಾಹಿನ್ ಇಂಡಿಯಾ ಪಿಯು ಕಾಲೇಜು, ಬೀದರ್
    10.ಜಿ.ಶ್ರೀಸಂಜಿತ್: ವೇದಾಂತ ಕಾಲೇಜು, ಶಾರದಾ ನಗರ, ಬೆಂಗಳೂರು

    ಬಿ ಫಾರ್ಮಾ ಮತ್ತು ಡಿ ಫಾರ್ಮಾ:

    1.ಮೇಘನ್ ಎಚ್.ಕೆ.: ಪ್ರಮಥಿ ಹಿಲ್ ವ್ಯೂ ಅಕಾಡೆಮಿ, ಮೈಸೂರು
    2.ಪ್ರೇಮಂಕೂರ್ ಚಕ್ರಬರ್ತಿ: ನ್ಯಾಷನಲ್ ಪಬ್ಲಿಕ್ ಸ್ಕೂಲ್, ಯಲಹಂಕ, ಬೆಂಗಳೂರು
    3.ಬಿ.ಎಸ್.ಅನಿರುದ್ಧ್: ಆಕ್ಸಿಫರ್ಡ್ ಇಂಡಿಯಾ ಪಿಯು ಕಾಲೇಜು, ಉಲ್ಲಾಳ, ಬೆಂಗಳೂರು
    4.ನಿರಂಜನ ರೆಡ್ಡಿ ಬಿ.ಎಸ್.: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ವಿರಣ್ಣಪಾಳ್ಯ, ಬೆಂಗಳೂರು
    5.ವರುಣ್ ಆದಿತ್ಯ: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಮಾರತ್ʼಹಳ್ಳಿ, ಬೆಂಗಳೂರು
    6.ಆದಿತ್ಯ ಸಿ.ಆರ್.: ನಾರಾಯಣ ಇ-ಟೆಕ್ನೋ ಸ್ಕೂಲ್, ವಿದ್ಯಾರಣ್ಯಪುರ, ಬೆಂಗಳೂರು
    7.ಕಾರ್ತೀಕ್ ಅಗರವಾಲ್: ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಕೆಆರ್ ಪುರಂ, ಬೆಂಗಳೂರು

    1. ಮೊಹಮ್ಮದ್ ಕೈಫ್ ಕೆ. ಮುಲ್ಲಾ: ಆರ್ ಎಲ್ ಪಿಯು ವಿಜ್ಞಾನ ಕಾಲೇಜು, ಬೆಳಗಾವಿ
    2. ರೀಥಮ್ ಬಿ.: ಎಕ್ಸ್ʼಪರ್ಟ್ ಪಿಯು ಕಾಲೇಜು, ಮಂಗಳೂರು

    ಆನ್ಲೈನ್ನಲ್ಲಿ ಫಲಿತಾಂಶ ಲಭ್ಯ:

    ಫಲಿತಾಂಶವು ಈಗ http://kea.kar.nic.in ಮತ್ತು http://karresults.nic.in ವೆಬ್‌ʼಗಳಲ್ಲಿ  ಲಭ್ಯವಿದ್ದು, ಅಭ್ಯರ್ಥಿಗಳು ವಿಷಯವಾರು ಅಂಕಗಳ ವಿವರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಸಚಿವರು ತಿಳಿಸಿದರು.

    6 ಅಂಕ ಕೃಪಾಂಕ:

    ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ಗಣಿತ ಮತ್ತು ಭೌತಶಾಸ್ತ್ರಕ್ಕೆ ತಲಾ 3 ಅಂಕಗಳನ್ನು ಕೃಪಾಂಕವನ್ನಾಗಿ ನೀಡಲಾಗಿದೆ. ಒಟ್ಟು 6 ಅಂಕಗಳು ಅಭ್ಯರ್ಥಿಗಳಿಗೆ ಸಿಕ್ಕಿವೆ.  ಇದೇ ವೇಳೆ, ಅಂಕಪಟ್ಟಿ ಕೊಡದೇ ಇರುವ 6,000 ಅಭ್ಯರ್ಥಿಗಳು ಸೇರಿ ಒಟ್ಟು 7,000 ವಿದ್ಯಾರ್ಥಿಗಳಿಗೆ ರಾಂಕ್‌ ತಡೆ ಹಿಡಿಯಲಾಗಿದೆ ಎಂದು ಸಚಿವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!