ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್ ಶುಕ್ರವಾರದಂದು ಸರ್ವಕಾಲೀನ ಗರಿಷ್ಠದ ದಾಖಲೆಯಿಂದ ಮುನ್ನುಗ್ಗುತ್ತಿರುವ ವೇಗ ಎಲ್ಲೆಡೆ ಹರ್ಷವನ್ನು ತುಂಬಿದೆ. ಕೇವಲ ಎಂಟು ತಿಂಗಳಲ್ಲಿ ಹತ್ತು ಸಾವಿರ ಪಾಯಿಂಟುಗಳ ಏರಿಕೆಯನ್ನು ಪ್ರದರ್ಶಿಸಿದೆ. ಕೇವಲ ಸೆನ್ಸೆಕ್ಸ್ ಒಂದೇ ಅಲ್ಲ ಜೊತೆಗೆ ಮಧ್ಯಮ, ಕೆಳ ಮಧ್ಯಮ ಶ್ರೇಣಿಗಳ ಕಂಪನಿಗಳು, ವಿವಿಧ ವಲಯಗಳ ಸೂಚ್ಯಂಕಗಳೂ ಗಮನಾರ್ಹ ದಾಖಲೆಯನ್ನು ನಿರ್ಮಿಸಿವೆ.
ಈ ರೀತಿಯ ಏರಿಕೆಯ ಹಿಂದೆ ಅಡಕವಾಗಿರುವ ಕಾರಣಗಳು ಅನೇಕವಿವೆ. ಇದೇ ರೀತಿಯ ಏರಿಕೆಯ ಪ್ರವೃತ್ತಿಯು ಮುಂದುವರೆಯುತ್ತದೆಯೇ ಎಂಬುದನ್ನು ಕಾದುನೋಡಬೇಕಾಗಿದೆ. ಸೆನ್ಸೆಕ್ಸ್ 60 ಸಾವಿರ ಪಾಯಿಂಟುಗಳನ್ನು ತಲುಪಿದ್ದಕ್ಕೇ ಅದು ಸೀನಿಯರ್ ಸಿಟಿಜನ್ ಎಂದು ಗುರುತಿಸಲಾಗುತ್ತಿರುವುದು, ನಿವೃತ್ತಿಯಾಗುತ್ತಿದೆ ಎಂದು ತನ್ನ ಚಲನೆಯ ದಿಶೆ ಬದಲಾಗದಿದ್ದರೆ ಸಾಕು.
ಪ್ರತಿಯೊಂದು ಏರಿಕೆಯ ವಿಜೃಂಭಣೆಯ ಸಮಯದಲ್ಲಿ ಕಾರ್ಪೊರೇಟ್ ವಲಯದಲ್ಲಿ ತಮ್ಮ ವಿವಿಧ ಯೋಜನೆಗಳಿಗೆ ಸಂಪನ್ಮೂಲ ಸಂಗ್ರಹಣೆಯ ಕಾರ್ಯವೂ ಚುರುಕಾಗುತ್ತದೆ. ಅದರಂತೆ ಸಂಪನ್ಮೂಲ ಸಂಗ್ರಹಣೆಯ ಕಾರ್ಯವು ಸಾಂಗವಾಗಿ ನೆರವೇರುತ್ತಿದೆ. ಅಲ್ಲದೆ ಅನೇಕ ಕಂಪನಿಗಳು ಆರಂಭಿಕ ವಿತರಣೆಗಳ ಮೂಲಕವೂ ಪೇಟೆಯಲ್ಲಿ ವಹಿವಾಟಿಗೆ ನೋಂದಾಯಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಕೆಲವು ಯಶಸ್ವಿಯಾಗಿಯೂ ಇವೆ.
ಹೊಸ ನಾಮಕರಣ
ಈ ಮಧ್ಯೆ ಹಲವಾರು ಕಂಪನಿಗಳು ತಮ್ಮ ಹಿಂದಿನ ಹೆಸರನ್ನು ಬದಲಿಸಿಕೊಂಡು ಹೊಸ ನಾಮಕರಣದೊಂದಿಗೆ ಪೇಟೆಯಲ್ಲಿ ತಮ್ಮ ಗುರುತನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಲಿವೆ. ಹೂಡಿಕೆದಾರರು ತಮ್ಮ ಚಟುವಟಿಕೆಗೆ ಮುಂಚೆ ಈ ವಿಚಾರದಲ್ಲಿ ಗಮನಹರಿಸಿಕೊಂಡು ಕಂಪನಿಗಳ ಅಸಲಿಯತ್ತನ್ನು ಗುರುತಿಸುವುದು ಒಳಿತು. 2020ರಿಂದ ಹೆಸರು ಬದಲಿಸಿಕೊಂಡಿರುವ ಕೆಲವು ಕಂಪನಿಗಳ ಪಟ್ಟಿಯನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಕೊಟ್ಟಿರುವ ಕಂಪನಿಗಳೆಲ್ಲಾ ಕಳಪೆ ಎಂದಲ್ಲ, ಆದರೆ ಹೂಡಿಕೆಗೆ ಮುಂಚೆ ಕಂಪನಿಗಳ ಬಗ್ಗೆ ಅರಿತು ನಿರ್ಧರಿಸಿರಿ.
ಆಧುನಿಕ್ ಇಂಡಸ್ಟ್ರೀಸ್ ಲಿಮಿಟೆಡ್ ಹೆಸರನ್ನು ಇನ್ ಕ್ರೆಡಿಬಲ್ ಇಂಡಸ್ಟ್ರೀಸ್ ಎಂದು ಬದಲಿಸಿಕೊಂಡಿದೆ 2021 ರಲ್ಲಿ.
ಆಡ್ ಲ್ಯಾಬ್ ಎಂಟರ್ ಟೇನ್ಮೆಂಟ್ ಲಿಮಿಟೆಡ್ ಕಂಪನಿ ಹೆಸರನ್ನು ಇಮ್ಯಾಜಿಕಾ ವರ್ಲ್ಡ್ ಎಂಟರ್ ಟೇನ್ಮೆಂಟ್ ಲಿಮಿಟೆಡ್ ಎಂದು 2020 ರಲ್ಲಿ ಬದಲಿಸಿಕೊಂಡಿದೆ.
ಐಶ್ವರ್ಯ ಟೆಲಿಕಾಂ ಲಿಮಿಟೆಡ್ ತನ್ನ ಹೆಸರನ್ನು ಐಶ್ವರ್ಯ ಟೆಕ್ನಾಲಜೀಸ್ ಅಂಡ್ ಟೆಲಿಕಾಂ ಎಂದು 2020 ರಲ್ಲಿ ಬದಲಿಸಿಕೊಂಡಿದೆ.
ಆಕ್ಮೆ ಸ್ಟಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಹೆಸರನ್ನು ಸ್ಟಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಎಂದು 2021 ರಲ್ಲಿ ಬದಲಿಸಿಕೊಂಡಿದೆ.
ಅನಿಶಾ ಇಂಪೆಕ್ಸ್ ಲಿಮಿಟೆಡ್ ಕಂಪನಿಯ ಹೆಸರು ರೇಸ್ ಎಕೊ ಚೈನ್ ಲಿಮಿಟೆಡ್ ಎಂದು ಬದಲಾಗಿದೆ 2021 ರಲ್ಲಿ.
ಆಪಲ್ ಫೈನಾನ್ಸ್ ಲಿಮಿಟೆಡ್ ತನ್ನ ಹೆಸರನ್ನು ಯುಟಿಕ್ ಎಂಟರ್ ಪ್ರೈಸಸ್ ಲಿಮಿಟೆಡ್ ಎಂದು 2020 ರಲ್ಲಿ ಬದಲಾಗಿದೆ.
ಅಪ್ಪು ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ಹೆಸರನ್ನು ಬ್ರೆಲ್ಸ್ ಇನ್ಫೋಟೆಕ್ ಲಿಮಿಟೆಡ್ ಎಂದು 2020 ರಲ್ಲಿ ಬದಲಿಸಿಕೊಂಡಿದೆ.
ಎ ಒನ್ ಲೈಫ್ ಸೈನ್ಸಸ್ ಲಿಮಿಟೆಡ್ ಕಂಪನಿ ತನ್ನ ಹೆಸರನ್ನು 2020 ರಲ್ಲಿ ಕೊಬೊ ಬಯೋಟೆಕ್ ಲಿಮಿಟೆಡ್ ಎಂದು ಬದಲಿಸಕೊಂಡಿದೆ.
8 ಕೆ ಮೈಲ್ಸ್ ಸಾಫ್ಟ್ ವೇರ್ ಸರ್ವಿಸಸ್ ಲಿಮಿಟೆಡ್ ಕಂಪನಿಯ ಹೆಸರು 2021 ರಲ್ಲಿ ಸೆಕ್ಯೂರ್ ಕ್ಲೌಡ್ ಟೆಕ್ನಾಲಾಜೀಸ್ ಲಿಮಿಟೆಡ್ ಎಂದು ಬದಲಿಸಿಕೊಂಡಿದೆ.
ಹೊಂಡ ಸಿಯೆಲ್ ಪವರ್ ಪ್ರಾಡಕ್ಟ್ಸ್ ಲಿಮಿಟೆಡ್ 2020 ರಲ್ಲಿ ಹೊಂಡ ಇಂಡಿಯಾ ಪವರ್ ಪ್ರಾಡಕ್ಟ್ಸ್ ಲಿಮಿಟೆಡ್ ಎಂದು ಬದಲಿಸಿಕೊಂಡಿದೆ.
ಇಂಡಿಯಾ ಬುಲ್ಸ್ ವೆಂಚರ್ಸ್ ಲಿಮಿಟೆಡ್ ಕಂಪನಿ 2020 ರಲ್ಲಿ ಧನಿ ಸರ್ವಿಸಸ್ ಲಿಮಿಟೆಡ್ ಎಂದು ಬದಲಾಗಿದೆ.
ಇಂಟರ್ ನ್ಯಾಶನಲ್ ಪೇಪರ್ ಎಪಿಪಿಎಂ ಲಿಮಿಟೆಡ್ ಕಂಪನಿ ಹೆಸರು ಆಂದ್ರ ಪೇಪರ್ ಲಿಮಿಟೆಡ್ ಎಂದು ಬದಲಿಸಲಾಗಿದೆ.
ಜುಬಿಲೆಂಟ್ ಲೈಫ್ ಸೈನ್ಸಸ್ ಲಿಮಿಟೆಡ್ ಕಂಪನಿಯ ಹೆಸರು 2021 ರಲ್ಲಿ ಜುಬಿಲಂಟ್ ಫಾರ್ಮೊವ ಲಿಮಿಟೆಡ್ ಎಂದು ಬದಲಿಸಲಾಗಿದೆ.
ಜಂಕ್ಷನ್ ಫ್ಯಾಬ್ರಿಕ್ಸ್ ಅಂಡ್ ಅಪರಲ್ಸ್ ಲಿಮಿಟೆಡ್ ಕಂಪನಿಯು 2020 ರಲ್ಲಿ ಗಾರ್ಮೆಂಟ್ ಮಂತ್ರ ಲೈಫ್ ಸ್ಟೈಲ್ ಲಿಮಿಟೆಡ್ ಎಂದು ಬದಲಿಸಿಕೊಂಡಿದೆ.
ಕಾಶಿರಾಂ ಜೈನ್ ಅಂಡ್ ಕಂಪನಿ ಲಿಮಿಟೆಡ್ ಕಂಪನಿಯ ಹೆಸರು 2020 ರಲ್ಲಿ ಎಲೈಟ್ ಕಾನ್ ಇಂಟರ್ ನ್ಯಾಶನಲ್ ಲಿಮಿಟೆಡ್ ಎಂದು ಬದಲಾಗಿದೆ.
ಕವಿತಾ ಫ್ಯಾಬ್ರಿಕ್ಸ್ ಲಿಮಿಟೆಡ್ ಕಂಪನಿ 2020 ರಲ್ಲಿ ತನ್ನ ಹೆಸರನ್ನು ನಿಬೆ ಲಿಮಿಟೆಡ್ ಎಂದು ಬದಲಿಸಿಕೊಂಡಿದೆ.
ಮಹಾನ್ ಇಂಪೆಕ್ಸ್ ಲಿಮಿಟೆಡ್ ಕಂಪನಿ 2020 ರಲ್ಲಿ ಸೀಕೋಸ್ಟ್ ಶಿಪ್ಪಿಂಗ್ ಸರ್ವಿಸಸ್ ಲಿಮಿಟೆಡ್ ಎಂದು ಬದಲಿಸಿಕೊಂಡಿದೆ.
ಮನ್ವಿಜಯ್ ಡೆವೆಲಪ್ ಮೆಂಟ್ ಕಂಪನಿ ಲಿಮಿಟೆಡ್ ಕಂಪನಿ 2020 ರಲ್ಲಿ ವಾರ್ಡ್ ವಿಝರ್ಡ್ ಇನ್ನೋವೇಶನ್ಸ್ ಅಂಡ್ ಮೊಬಿಲಿಟಿ ಲಿಮಿಟೆಡ್ ಎಂದು ಬದಲಿಸಿಕೊಂಡಿದೆ.
ಮೊನ್ನೆಟ್ ಇಸ್ಪಾಟ್ ಅಂಡ್ ಎನರ್ಜಿ ಲಿಮಿಟೆಡ್ ಕಂಪನಿ 2020 ರಲ್ಲಿ ಜೆ ಎಸ್ ಡಬ್ಲು ಇಸ್ಪಾಟ್ ಸ್ಪೆಷಲ್ ಪ್ರಾಡಕ್ಟ್ಸ್ ಲಿಮಿಟೆಡ್ ಎಂದು ಬದಲಿಸಿಕೊಂಡಿದೆ.
ನರೇಂದ್ರ ಇನ್ವೆಸ್ಟ್ ಮೆಂಟ್ಸ್ (ದೆಹಲಿ) ಲಿಮಿಟೆಡ್ ಕಂಪನಿ 2020 ರಲ್ಲಿ ಐಕೊ ಲೈಫ್ ಸೈನ್ಸಸ್ ಲಿಮಿಟೆಡ್ ಎಂದು ಬದಲಿಸಿಕೊಂಡಿದೆ.
ಓಂ ಮೆಟಲ್ಸ್ ಲಿಮಿಟೆಡ್ ಲಿಮಿಟೆಡ್ ಕಂಪನಿ 2020 ರಲ್ಲಿ ಓಂ ಇನ್ಫ್ರಾ ಲಿಮಿಟೆಡ್ ಎಂದು ಬದಲಿಸಲಾಗಿದೆ.
ಪ್ರೈಮ್ ಕಸ್ಟಮರ್ಸ್ ಸರ್ವಿಸಸ್ ಲಿಮಿಟೆಡ್ ಕಂಪನಿಯ ಹೆಸರನ್ನು 2020 ರಲ್ಲಿ ಪ್ರೈಮ್ ಅರ್ಬನ್ ಡೆವೆಲಪ್ ಮೆಂಟ್ ಇಂಡಿಯಾ ಲಿಮಿಟೆಡ್ ಎಂದು ಬದಲಾಗಿದೆ.
ರೊಕ್ಸಿ ಎಕ್ಸ್ ಪೋರ್ಟ್ಸ್ ಲಿಮಿಟೆಡ್ ಕಂಪನಿಯು 2020 ರಲ್ಲಿ ರೆಮಿಡಿಯಮ್ ಲೈಫ್ ಕೇರ್ ಲಿಮಿಟೆಡ್ ಎಂದು ಬದಲಿಸಿಕೊಂಡಿದೆ.
ಸ್ವೋರ್ಡ್ ಅಂಡ್ ಶೀಲ್ಡ್ ಫಾರ್ಮ ಲಿಮಿಟೆಡ್ ಕಂಪನಿ 2020 ರಲ್ಲಿ ಪ್ರವೇಗ್ ಕಮ್ಯುನಿಕೇಷನ್ಸ್ (ಇಂಡಿಯಾ) ಲಿಮಿಟೆಡ್ ಎಂದು ಬದಲಾಗಿದೆ.
ಟಾಟಾ ಗ್ಲೋಬಲ್ ಬೆವರೇಜಸ್ ಲಿಮಿಟೆಡ್ ಕಂಪನಿಯ ಹೆಸರನ್ನು 2020 ರಲ್ಲಿ ಟಾಟಾ ಕನ್ಸೂಮರ್ಸ್ ಲಿಮಿಟೆಡ್ ಎಂದು ಬದಲಿಸಲಾಗಿದೆ.
ಅರ್ಬಕ್ ನಿಟ್ ಫ್ಯಾಬ್ಸ್ ಲಿಮಿಟೆಡ್ ಕಂಪನಿಯ ಹೆಸರು 2020 ರಲ್ಲಿ ಸಿಡಿಜಿ ಪೆಟ್ ಕೆಂ ಲಿಮಿಟೆಡ್ ಎಂದು ಬದಲಾಗಿದೆ.
ಬಗಾಡಿಯಾ ಕಲರ್ ಕೆಂ ಲಿಮಿಟೆಡ್ 2020 ರಲ್ಲಿ ಫಂಡ್ ವೈಸರ್ ಕ್ಯಾಪಿಟಲ್ ( ಇಂಡಿಯಾ) ಲಿಮಿಟೆಡ್ ಎಂದು ಬದಲಾಗಿದೆ.
ಭಾರತಿ ಇನ್ಫ್ರಾಟೆಲ್ ಲಿಮಿಟೆಡ್ ಕಂಪನಿ 2020 ರಲ್ಲಿ ಇಂಡಸ್ ಟವರ್ಸ್ ಲಿಮಿಟೆಡ್ ಎಂದು ಬದಲಿಸಿಕೊಂಡಿದೆ.
ಸಿ ಇ ಎಸ್ ಇ ವೆಂಚರ್ಸ್ ಲಿಮಿಟೆಡ್ 2021 ರಲ್ಲಿ ಆರ್ ಪಿ ಎಸ್ ಜಿ ವೆಂಚರ್ಸ್ ಲಿಮಿಟೆಡ್ ಎಂದು ಬದಲಾಗಿದೆ.
ಸಿಎಂಐ ಎಫ್ ಪಿ ಐ ಲಿಮಿಟೆಡ್ ಕಂಪನಿ ತನ್ನ ಹೆಸರನ್ನು 2020 ರಲ್ಲಿ ಜಾನ್ ಕಾಕ್ರೈಲ್ ಇಂಡಿಯಾ ಲಿಮಿಟೆಡ್ ಎಂದು ಬದಲಾಗಿದೆ.
ಸೈಬರ್ ಮೇಟ್ ಇನ್ಫೋ ಟೆಕ್ ಲಿಮಿಟೆಡ್ 2021 ರಲ್ಲಿ ಆರ್ಚಾಸ್ಪ್ ಲಿಮಿಟೆಡ್ ಎಂದು ಬದಲಾಗಿದೆ.
ದೀಪ್ ಇಂಡಸ್ಟ್ರೀಸ್ ಲಿಮಿಟೆಡ್ 2020 ರಲ್ಲಿ ದೀಪ್ ಎನರ್ಜಿ ರಿಸೋರ್ಸಸ್ ಲಿಮಿಟೆಡ್ ಎಂದು ಬದಲಿಸಿಕೊಂಡಿದೆ.
ಎಬಿಕ್ಸ್ ಕ್ಯಾಶ್ ವರ್ಲ್ಡ್ ಮನಿ ಇಂಡಿಯಾ ಲಿಮಿಟೆಡ್ 2021 ರಲ್ಲಿ ಡೆಲ್ಫಿ ವರ್ಲ್ಡ್ ಮನಿ ಲಿಮಿಟೆಡ್ ಎಂದು ಬದಲಿಸಲಾಗಿದೆ.
ಎಸ್ಸೆಲ್ ಪ್ರೊಪ್ಯಾಕ್ ಲಿಮಿಟೆಡ್ ಕಂಪನಿ 2020 ರಲ್ಲಿ ಇಪಿಎಲ್ ಲಿಮಿಟೆಡ್ ಎಂದು ಬದಲಾಗಿದೆ.
ಫೆರ್ ಕೆಂ ಸ್ಪೆಷಾಲಿಟೀಸ್ ಲಿಮಿಟೆಡ್ 2020 ರಲ್ಲಿ ಪ್ರಿವಿ ಸೆಷಾಲಿಟಿ ಕೆಮಿಕಲ್ಸ್ ಲಿಮಿಟೆಡ್ ಎಂದು ಬದಲಾಗಿದೆ.
ಗ್ಯಾಮನ್ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ಸ್ ಲಿಮಿಟೆಡ್ 2021 ರಲ್ಲಿ ಎ ಜೆ ಆರ್ ಇನ್ಫ್ರಾ ಅಂಡ್ ಟೋಲಿಂಗ್ ಲಿಮಿಟೆಡ್ ಎಂದು ಬದಲಿಸಿಕೊಂಡಿದೆ.
ಗಾರ್ವ್ ಇಂಡಸ್ಟ್ರೀಸ್ ಲಿಮಿಟೆಡ್ 2020 ರಲ್ಲಿ ಹಾರ್ಡ್ ವಿನ್ ಇಂಡಿಯಾ ಲಿಮಿಟೆಡ್ ಎಂದು ಬದಲಾಗಿದೆ.
ಗೌರವ್ ಮರ್ಕಂಟೈಲ್ ಲಿಮಿಟೆಡ್ ಕಂಪನಿಯ ಹೆಸರನ್ನು ಕ್ವಿಂಟ್ ಡಿಜಿಟಲ್ ಮೀಡಿಯಾ ಲಿಮಿಟೆಡ್ ಎಂದು 2020ರಲ್ಲಿ ಬದಲಾಗಿದೆ.
ಗ್ರೆಸೆಲ್ಸ್ ಎಜುಕೇಷನ್ ಲಿಮಿಟೆಡ್ 2021 ರಲ್ಲಿ ಐರನ್ ವುಡ್ ಎಜುಕೇಷನ್ ಲಿಮಿಟೆಡ್ ಎಂದು ಬದಲಾಗಿದೆ.
ಗ್ರೊಮೊ ಟ್ರೇಡ್ ಅಂಡ್ ಕನ್ಸಲ್ಟನ್ಸಿ ಲಿಮಿಟೆಡ್ 2020 ರಲ್ಲಿ ತನ್ನ ಹೆಸರನ್ನು ಪ್ರಿಸ್ಮ್ ಕ್ಸ್ ಗ್ಲೋಬಲ್ ವೆಂಚರ್ಸ್ ಲಿಮಿಟೆಡ್ ಎಂದು ಬದಲಿಸಿಕೊಂಡಿದೆ.
ವೈಜ್ಮನ್ ಫಾರೆಕ್ಸ್ ಲಿಮಿಟೆಡ್ ಕಂಪನಿ 2020 ರಲ್ಲಿ ಎಬಿಕ್ಸ್ ಕ್ಯಾಶ್ ವರ್ಲ್ಡ್ ಮನಿ ಇಂಡಿಯಾ ಲಿಮಿಟೆಡ್ ಎಂದು ಬದಲಿಸಲಾಗಿದೆ.
ವೆಲ್ ಕಾನ್ ಇಂಟರ್ ನ್ಯಾಶನಲ್ ಲಿಮಿಟೆಡ್ ಕಂಪನಿಯು ಮುಜಲಿ ಆರ್ಟ್ಸ್ ಲಿಮಿಟೆಡ್ ಎಂದು 2020 ರಲ್ಲಿ ಬದಲಿಸಿಕೊಂಡಿದೆ.
ಹೀಗೆ ಬದಲಾದ ಕಂಪನಿಗಳಲ್ಲಿ ಉತ್ತಮವಾದ ಕಂಪನಿಗಳಿದ್ದರೂ ಹೆಚ್ಚಿನವು ಮಧ್ಯಮ ಮತ್ತು ಕೆಳಮಧ್ಯಮ ಕಂಪನಿಗಳಿವೆ. ಅಲ್ಲದೆ ಕೆಲವು ಕಳಪೆ ಕಂಪನಿಗಳೂ ಇವೆ. ಈ ಪಟ್ಟಿಯು ಪೂರ್ಣವಾದುದಲ್ಲ. ಹೂಡಿಕೆಗೆ, ವಹಿವಾಟಿಗೆ ಆಯ್ಕೆ ಮಾಡಿಕೊಳ್ಳುವಾಗ ಕಂಪನಿಗಳ ಹಿಂದಿನ ಬೆಳವಣಿಗೆಗಳನ್ನು/ ಹೆಸರಿನ ಬದಲಾವಣೆಗಳನ್ನೂ ಅರಿತಿದ್ದರೆ ನಿರ್ಧಾರ ಸುಗಮವಾಗಿರಲು ಸಾಧ್ಯ.
ನೆನಪಿರಲಿ: ಉಳಿಸಿದ ಹಣ -ಗಳಿಸಿದ ಹಣ. ಈ ಅಂಕಣ ಷೇರು ಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.
Very educatve arrival for ivestors and also advoates proverb think before invest
Good info. A fool and his money are soon parted.