18 C
Karnataka
Friday, November 22, 2024

    ಗೆಲವು ಸೋಲುಗಳು ಕತ್ತಲು ಬೆಳಕಿನಾಟವೇ ಸರಿ

    Must read

    ಸುಮಾ ವೀಣಾ

    ನಡೆವರೆಡಹದೆ ಕುಳಿತವರೆಡಹುವರೆ -ಹರಿಶ್ಚಂದ್ರಕಾವ್ಯದ -harishchandra kaavya-ಕಥಾರಂಭದಲ್ಲಿಯೇ  ಈ ಸಾಲನ್ನು ಕವಿ ರಾಘವಾಂಕ-Raghavanka- ಉಲ್ಲೇಖಿಸುತ್ತಾನೆ.  ನಡೆಯುವ ಕಾಲುಗಳು ಎಡವುದು ಸಹಜ  ಎಡವಿದಾಗ ಸರಿ ಹೆಜ್ಜೆಗಳನ್ನು ಹಾಕುವ ಪ್ರಯತ್ನವನ್ನು ನಾವು ಮಾಡುತ್ತೇವೆ. ನಡವಳಿಕೆ ತಪ್ಪಿದಾಗ ತಿಳಿ ಹೇಳುವವರು ಇರುತ್ತಾರೆ  ಆಗ ನಡವಳಿಕೆಯನ್ನು ತಿದ್ದಿಕೊಳ್ಳಲು ಅನುವಾಗುತ್ತದೆ. ವಿದ್ಯೆಕಲಿಯುವಾಗಲೂ ಅಷ್ಟೇ  ತಪ್ಪುಗಳು ಆಗುತ್ತವೆ  ಆ ತಪ್ಪುಗಳನ್ನು ಶಿಕ್ಷಕರು ಸಮರ್ಥವಾಗಿ ತಿದ್ದಿದ್ದೆ ಆದರೆ ಆ ವಿದ್ಯಾರ್ಥಿಯ ಬದುಕು ಹಸನಾಗುತ್ತದೆ.

    ಅಕ್ಷರ ಕಲಿಯುವಿಕೆ  ವಿದ್ಯಾರ್ಥಿಯ ಶ್ರಮವನ್ನು, ಜೀವನ ಪಾಠ ತಾಳುವಿಕೆಯನ್ನು   ಬಯಸುತ್ತದೆ. ತಪ್ಪುಗಳಾದಾಗ   ಆಗುವ ಅನುಭವಗಳು ಪಕ್ವತೆಯನ್ನು ಕಲಿಸುತ್ತವೆ,  ಇಲ್ಲಿ ‘ನಡೆವರೆಡಹದೆ ಕುಳಿತವರೆಡಹುವರೆ’ ಎಂಬ ಮಾತು  ಸಾರ್ವಕಾಲಿಕವಾದದ್ದು. 

    ಕುಳಿತಲ್ಲೆ ಕುಳಿತರೆ ಯಾವ ಕೆಲಸವೂ  ಸಾಗುವುದಿಲ್ಲ.   ಅಂದು ಕೊಂಡ ಕೆಲಸವನ್ನು ಮಾಡಲು ಪ್ರಯತ್ನ ಪಡಬೇಕು ಪ್ರಯತ್ನದ ಹಾದಿಯಲ್ಲಿ ಎಡರು ತೊಡರುಗಳು ಖಂಡಿತವಾಗಿ ಆಗುತ್ತವೆ.  ಉದಾಹರಣೆಗೆ ನಾಟಕವೊಂದನ್ನು ರಂಗದ ಮೇಲೆ ಆಡಲು  ತಾಲೀಮು ಬೇಕೇ ಬೇಕು ಆ  ತಾಲೀಮು ನಟರನ್ನು ಅವರ ಸಂಭಾಷಣೆಯನ್ನು ಹೇಳುವ ಶೈಲಿಯನ್ನು ಪಕ್ವವಾಗಿಸುತ್ತದೆ ಕಡೆಗೊಮ್ಮೆ ಪ್ರೇಕ್ಷಕ ನೋಡಿದಾಗ ಅದಕ್ಕೆ ಮೆಚ್ಚುಗೆ ಲಭ್ಯವಾಗುತ್ತದೆ.

    ತಪ್ಪುಗಳಾದಾದ ಅದು ಅವಮಾನ ಎಂದು ತಿಳಿಯದೆ  ತಪ್ಪುಗಳಿಂದ  ಹೊರಗುಳಿಯುವ ಮನಸ್ಥಿತಿ  ಯಾವಾಗಲೂ ಆಶಾದಾಯಕವಾದದ್ದು. ಈ ಮಾತನ್ನು ಅನುಸಂಧಾನಿಸಬೆಕಾದರೆ ನಾವು ಆಗತಾನೆ ನಡೆಯಲು ಕಲಿಯುತ್ತಿರುವ ಪುಟ್ಟ ಮಕ್ಕಳ ಉದಾಹರಣೆಯನ್ನು ಇಲ್ಲಿ ತೆಗೆದುಕೊಳ್ಳಬಹುದು.  ಬಿದ್ದರೂ ಎದ್ದೆದ್ದು ನಡಿಗೆಯನ್ನು  ಕಲಿಯಲು ತೊಡಗುತ್ತವೆ ಇದುವೆ ಜೀವನೋತ್ಸಾಹ . ಗೆಲವು ಸೋಲುಗಳು ಕತ್ತಲು ಬೆಳಕಿನಾಟವೇ ಸರಿ . ಕತ್ತಲು ಸರಿದ ಮೇಲೆ ಬೆಳಕು ಆವರಿಸುವಂತೆ  ಗೆಲುವಿನ ಮೂಲ ತಪ್ಪುಗಳೆ ಆಗಿರುತ್ತವೆ ಹಲವು ಎಡರುತೊಡರುಗಳ ಪ್ರತಿಫಲವಾಗಿರುತ್ತದೆ. ಹಾಗಾಗಿ ಸೋಲಿಗೆ ತಲೆಕಡಿಸಿಕೊಳ್ಳದೆ ‘ಸೋಲೆ  ಗೆಲುವಿನ ಸೋಪಾನ’  ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

    ವೃತ್ತಿಯಿಂದ  ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ  ಪತ್ರಿಕೆಗಳಲ್ಲಿ ಪ್ರಕಟವಾಗಿ  ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ  ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ  ಆಗಿವೆ.  ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ   ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.

     

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!