ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಕನ್ನಡತಿ ಶ್ರುತಿ ಕೋಡನಾಡ್ ಅವರು ಇಂದಿನ ನವರಾತ್ರಿ ಸಂಗೀತ ಸಂಜೆಯನ್ನು ನಡೆಸಿಕೊಟ್ಟಿದ್ದಾರೆ.
ಮೂಲತಃ ಚಿತ್ರದುರ್ಗದವರಾದ ಶ್ರುತಿ ಕೋಡನಾಡ್ ರವರು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಗಮಕ ಕಲೆಯನ್ನು ಗಮಕ ಕಲಾನಿಧಿ ಶ್ರೀಮತಿ ಚಂಪಕಾ ಶ್ರೀಧರ್ ಇವರಲ್ಲಿ ಅಭ್ಯಾಸ ಮಾಡಿದ್ದಾರೆ.ಚಿಕ್ಕವಯಸ್ಸಿನಲ್ಲೇ ತಮ್ಮ ತಾಯಿ ಗಮಕಿ ಶ್ರೀಮತಿ ಮಂಜುಳಾ ದತ್ತಾತ್ರೇಯ ಅವರಿಂದ ಗಮಕ ಕಲೆಗೆ ಪರಿಚಿತರಾಗಿರುತ್ತಾರೆ.
ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಹಲವಾರು ಗಮಕ ವಾಚನ ಹಾಗೂ ಹಾಗೂ ರೂಪಕ ಕಾರ್ಯಕ್ರಮಗಳನ್ನು ನೀಡಿದ್ದು, ಪ್ರಮುಖವಾಗಿ ಹೊಸಳ್ಳಿಯಲ್ಲಿ ಗಮಕ ಗಂಧರ್ವ ಶ್ರೀ ಕೇಶವಮೂರ್ತಿರವರ ಸಮ್ಮುಖದಲ್ಲಿ ಗಮಕ ವಾಚನ ಮತ್ತು ೯ನೇ ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನ(2013)ರಲ್ಲಿ ‘ಕುವೆಂಪು ರಾಮಾಯಣದರ್ಶನಂ’ ಗಮಕ ರೂಪಕದಲ್ಲಿ ಭಾಗವಹಿಸಿರುತ್ತಾರೆ.
ಹಲವೆಡೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನೀಡಿರುತ್ತಾರೆ ಮತ್ತು ಆಕಾಶವಾಣಿಯಲ್ಲೂ ಹಾಡಿರುತ್ತಾರೆ.ಇವರು ವೃತ್ತಿಯಲ್ಲಿ ವಸ್ತ್ರ ವಿನ್ಯಾಸಕಿಯಾಗಿದ್ದು ನೃತ್ಯ, ನಾಟಕ, ಕರಕುಶಲ ಕಲೆಗಳಲ್ಲಿ ಆಸಕ್ತಿ ಹೊಂದಿರುತ್ತಾರೆ.
ಪ್ರಸ್ತುತ ಶ್ರುತಿಯವರು ತಮ್ಮ ಪತಿ ಅಂಜನ್ ರಾಘವೇಂದ್ರ ಅವರೊಂದಿಗೆ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದು ಅಲ್ಲಿನ ಕನ್ನಡ ಸಂಘ ಹಾಗೂ ವಿವಿಧ ಸಂಸ್ಥೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಇಂದಿನ ಸಂಚಿಕೆಯಲ್ಲಿ ದುರ್ಗಾಷ್ಟಮಿ ಬಗ್ಗೆ ಭಾರತಿ ಅವರು ನೀಡಿರುವ ವಿವರಣೆಯೂ ಅಡಕವಾಗಿದೆ.
ಆಲಿಸಿ, ವೀಕ್ಷಿಸಿ ಹಾಗೆಯೇ ನಮ್ಮ ಯೂ ಟ್ಯೂಬ್ ಚಾನಲ್ ಗೆ subscribe ಆಗಿರಿ
ಕ್ಯಾಲಿಫೋರ್ನಿಯಾ ದಲ್ಲಿರುವ ಶ್ರೀ ಮತಿ ಶೃತಿ ಅವರ ಗಾಯನ👌👍
ಹಾಡುಗಳನ್ನು ಕೇಳಿ ಕರ್ಣಾನಂದವಾಯಿತು
ಹಾಡುಗಳನ್ನು ಕೇಳಿ ಮನಸ್ಸಿಗೆ ತುಂಬಾ ಸಂತೋಷ ಆಯಿತು. ಅವರಿಗೆ ನನ್ನ ಅಭಿನಂದನೆಗಳು.