ಕನ್ನಡಪ್ರೆಸ್ .ಕಾಮ್ ನ ದಸರಾ ಸಂಗೀತೋತ್ಸವ ಅಂತಿಮ ಹಂತದದತ್ತ ಬಂದಿದ್ದು ಆಯುಧ ಪೂಜೆಯಾದ ದಿನವಾದ ಇಂದು ಎರಡು ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ.
ಮೊದಲ ಕಾರ್ಯಕ್ರಮವನ್ನು ಲಕ್ಷ್ಮಿ ಶ್ರೇಯಾಂಷಿ , ಶಶಿಕಲಾ ಮತ್ತು ಆನಂದ್ ನಾಯ್ಕ್ ನಡೆಸಿಕೊಟ್ಟಿದ್ದಾರೆ.
ಶಾಸ್ತ್ರೀಯ ಮತ್ತು ಸುಗಮ ಸಂಗೀತದಲ್ಲಿ ಅತೀವ ಆಸಕ್ತಿ ಹೊಂದಿರುವ ಲಕ್ಷ್ಮಿ ಶ್ರೇಯಾಂಷಿ ಖ್ಯಾತ ಗಾಯಕಿ ಮಂಜುಳಾ ಗುರುರಾಜ್ ಅವರ ಬಳಿ ಸುಗಮ ಸಂಗೀತ ಕಲಿತ್ತಿದ್ದಾರೆ. ಶಾಸ್ತ್ತೀಯ ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ್ದಾರೆ. ಚಂದನ ವಾಹಿನಿ ಸೇರಿದಂತೆ ಹಲವು ವಾಹಿನಿಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಆರ್ ವಿ ಕಾಲೇಜಿನಲ್ಲಿ ಉದ್ಯೋಗದಲ್ಲಿರುವ ಶಶಿಕಲಾ ಅವರು ಕೂಡ ಮಂಜುಳಾ ಗುರುರಾಜ್ ಅವರ ಬಳಿ ಸುಗಮ ಸಂಗೀತ ಅಭ್ಯಾಸ ಮಾಡಿದ್ದಾರೆ. ವೃತ್ತಿಯಿಂದ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಆನಂದ್ ನಾಯ್ಕ್ ಅವರು ಹಿಂದೂಸ್ತಾನಿ ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ್ದಾರೆ. ಚಂದನ ಸೇರಿದಂತೆ ಹಲವು ವಾಹಿನಿಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ನಿನ್ನ ನಂಬಿದೆ ದೇವನೆ ದೇವರ ದೇವ
ಈ ದಿನದ ಮತ್ತೊಂದು ಕಾರ್ಯಕ್ರಮವನ್ನು ಅರುಣ್ ಕುಮಾರ್. ಶ್ಯಾಮಲಾ, ಜಯಶೀಲ , ಮಮತಾ ಮತ್ತು ಭಾರತಿ ಅವರು ನಡೆಸಿಕೊಟ್ಟಿದ್ದಾರೆ.
ಅರುಣ್ ಕುಮಾರ್ ಕರೋಕೆ ಸಂಗೀತದಲ್ಲಿ ಸುಪ್ರಸಿದ್ಧರು. ಹಿಂದೀ, ಕನ್ನಡ ಸೇರಿದಂತೆ ಎಲ್ಲಾ ಭಾಷೆಯ ಗೀತೆಗಳನ್ನು ಸೊಗಸಾಗಿ ಹಾಡಬಲ್ಲರು. ಶ್ಯಾಮಲಾ ಅವರು ಭಕ್ತಿ ಗೀತೆಗಳನ್ನು ಭಾವ ತುಂಬಿ ಹಾಡಬಲ್ಲರು. ಜಯಶೀಲ ಅವರು ಆರ್ .ಕೆ ಪದ್ಮನಾಭ ಅವರ ಬಳಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ್ದಾರೆ. ಮಮತಾ ಅವರು ದಾಸರ ಪದಗಳನ್ನು ಭಕ್ತಿ ತುಂಬಿ ಹಾಡುತ್ತಾರೆ. ಭಾರತಿ ಅವರು ಸುಗಮ ಸಂಗೀತವನ್ನು ಅಚ್ಚು ಕಟ್ಟಾಗಿ ಹಾಡುತ್ತಾರೆ,
ಆಲಿಸಿ , ವೀಕ್ಷಿಸಿ ಹಾಗೇಯೇ ನಮ್ಮ ಚಾನಲ್ ಗೆ subscribe ಆಗಿರಿ.
ನವರಾತ್ರಿ ಯ ಸಂಗೀತೋತ್ಸವದ ಎಲ್ಲಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ, ಸುಗಮವಾಗಿ ಮೂಡಿಬಂದಿದೆ. ಶ್ರೀ ಮತಿ ಭಾರತಿ ಯವರ ನಿರೂಪಣೆ ಯೂಅರ್ಥಪೂರ್ಣವಾಗಿದ್ದು ಕಾರ್ಯಕ್ರಮ ದ ಸೊಬಗನ್ನು, ಹೆಚ್ಚಿಸಿತು. ಉತ್ತಮ ಕಾರ್ಯಕ್ರಮ ಆಯೋಜಿಸಿದ ಕನ್ನಡ ಪ್ರೆಸ್. ಕಾಮ್ ಸಂಪಾದಕರಿಗೂ ಧನ್ಯವಾದಗಳು. 👏👏
Super 👌👌