ಬಳಕೂರು ವಿ ಎಸ್ ನಾಯಕ
ಅಂದು ಕುಮಾರಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪ್ರವೇಶಿಸಿದವರಿಗೆ ಒಂದು ಕ್ಷಣ ಭಾವಪರವಶ ರನ್ನಗಿಸುವಂತಿತ್ತು. ಕಾರಣ ಪೊಲೀಸ್ ಸಂಸ್ಮರಣ ದಿನಾಚರಣೆಯ ಅಂಗವಾಗಿ ಪೋಲಿಸ್ ಅಮರವೀರ ಭಾವಚಿತ್ರ ಪ್ರದರ್ಶನ -ಸ್ಮರಣಾಂಜಲಿ -ಕಾರ್ಯಕ್ರಮ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ಒಂದು ವಿಶೇಷವಾದ ಕಲಾ ಪ್ರದರ್ಶನವಾಗಿ ಹೊರಹೊಮ್ಮಿತ್ತು.
ಕರ್ತವ್ಯ ನಿರತರಾಗಿದ್ದಾಗ ಪೊಲೀಸರು ಮಾಡಿದಸರ್ವೋಚ್ಚ ತ್ಯಾಗ ಬಲಿದಾನಗಳನ್ನು ಹೆಮ್ಮೆಯಿಂದ ಸ್ಮರಿಸಲು ಅಮರರಾದ ಪೊಲೀಸ್ ಹುತಾತ್ಮ ರ ಹೆಸರುಗಳನ್ನು ಆ ದಿನ ಈ ಪರೇಡ್ ನಲ್ಲಿ ಓದಲಾಗುತ್ತದೆ. ಮತ್ತು ಹುತಾತ್ಮರ ಗೌರವಕ್ಕಾಗಿ ಮೂರು ಬಾರಿ ಕುಶಾಲ ತೋಪುಗಳನ್ನು ಹರಿಸಲಾಗುತ್ತದೆ . ಈ ವರ್ಷ ಜಾಗತಿಕ ಪಿಡುಗಾಗಿರುವ ಕೋವಿಡ್ -19 ಮಹಾಮಾರಿಯ ವಿರುದ್ಧ ಹೋರಾಟದಲ್ಲಿ ಕರ್ನಾಟಕ ರಾಜ್ಯದಲ್ಲಿ 83 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಹಾಗೂ ಇನ್ನಿತರೆ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ 17 ಜನ ಹುತಾತ್ಮರಾಗಿರುತ್ತಾರೆ.
ಈ ವೀರರ ಕರ್ತವ್ಯನಿಷ್ಠೆ ಬಲಿದಾನಗಳನ್ನು ಗೌರವಪೂರ್ಣವಾಗಿ ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಅದಕ್ಕಾಗಿ ಪೊಲೀಸ್ ಸಂಸ್ಮರಣ ದಿನಾಚರಣೆ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಪೊಲೀಸ್ಮ ಅಮರವೀರರ ಭಾವಚಿತ್ರ ಪ್ರದರ್ಶನವನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ವಿಶಿಷ್ಟ ವಿನೂತನ ವಿಭಿನ್ನವಾಗಿ ಆಯೋಜಿಸಿರುದ್ದು ಎಲ್ಲರ ಗಮನ ಸೆಳೆಯುತ್ತಿದೆ.
ಕರ್ನಾಟಕದಲ್ಲಿ ಕರ್ತವ್ಯದ ಅವಧಿಯಲ್ಲಿ ವೀರಮರಣವನ್ನಪ್ಪಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳತ್ಯಾಗ ಹಾಗೂ ಬಲಿದಾನಗಳನ್ನು ಸ್ಮರಿಸುವ ಸ್ಮರಣಾಂಜಲಿ ಎಂಬ ಭಾವ ಚಿತ್ರ ಪ್ರದರ್ಶನ ಎರಡನೇ ಬಾರಿ ನಡೆಯುತ್ತಿದೆ. ಇದರ ಮೂಲಕ ಅವರ ತ್ಯಾಗ ಬಲಿದಾನ ಕರ್ತವ್ಯನಿಷ್ಠೆ ನಮನವನ್ನು ಸಲ್ಲಿಸುವ ಕಾರ್ಯಕ್ರಮ ಇದಾಗಿದೆ.
ಸ್ಮರಣಾಂಜಲಿಪೋಲಿಸ್ ಅಮರವೀರ ರ ಭಾವಚಿತ್ರ ಪ್ರದರ್ಶನದ ಚಿತ್ರಕಲಾ ಪರಿಷತ್ತಿನಲ್ಲಿ ಪ್ರದರ್ಶನಗೊಳ್ಳುತ್ತಿರುವ ಈ ಪ್ರದರ್ಶನವನ್ನು ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಪ್ರೊಫೆಸರ್ ಕೆಎಸ್ ಅಪ್ಪಾಜಯ್ಯ ರವರು ಡಿಸೈನ್ ಇನ್ಸ್ಟಾಲೇಷನ್ ( ಸೃಜನಾತ್ಮಕ ವಿನ್ಯಾಸ ಅನಾವರಣಗೊಳಿಸಿದ್ದಾರೆ). ಇವರು ವಿನ್ಯಾಸಗೊಳಿಸಿರುವ ಭಾವಚಿತ್ರ ಪ್ರದರ್ಶನ ಎಲ್ಲರನ್ನೂ ಭಾವಪರವಶರಾಗಿಸುತ್ತದೆ. ಇವರ ಕ್ರಿಯಾಶೀಲತೆ ಕಲಾ ಗ್ಯಾಲರಿಗೆ ಬಂದು ವೀಕ್ಷಿಸುವಂತಹ ಎಲ್ಲರಿಗೂ ಒಂದು ಕ್ಷಣ ಭಾವನಾತ್ಮಕ ಸೆಳೆತ ಸೆಳೆಯುವಂತಿದೆ.
ಬಿಆರ್ ರವಿಕಾಂತೇಗೌಡ ಜಂಟಿ ಪೊಲೀಸ್ ಆಯುಕ್ತರು( ಸಂಚಾರ ) ಇವರ ಮುಂದಾಳುತ್ವದಲ್ಲಿ ವಿಶೇಷವಾಗಿ ಈ ಪ್ರದರ್ಶನ ಬಂದಿರುವುದು ಇವರ ಉತ್ತಮ ಕಾರ್ಯಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಪೊಲೀಸ್ ಸಮರವೀರ ಭಾವಚಿತ್ರ ಪ್ರದರ್ಶನ ಸ್ಮರಣಾಂಜಲಿ ಕಾರ್ಯಕ್ರಮವು ದಿನಾಂಕ 21-10-2021 ರಿಂದ ಆರಂಭವಾಗಿ 24-10-2021 ರವರೆಗೆ ಪ್ರದರ್ಶನ ನಡೆಯಲಿದ್ದು ಪ್ರತಿಯೊಬ್ಬರೂ ಬಂದು ಪ್ರದರ್ಶನವನ್ನು ವೀಕ್ಷಿಸುವ ಸದವಕಾಶ ದೊರೆಯಲಿದೆ. ಪ್ರವೇಶ ಉಚಿತ
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿ
ಕುಮಾರಕೃಪಾ ರಸ್ತೆ ಬೆಂಗಳೂರು -1
ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.