BENGALURU NOV 27
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಇಬ್ಬರು ದಕ್ಷಿಣ ಆಫ್ರಿಕನ್ನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಅದು “ಓಮಿಕ್ರಾನ್” ರೂಪಾಂತರಿಯೇ ಎಂಬುದನ್ನು ಇನ್ನಷ್ಟೇ ಖಚಿತ ಪಡಿಸಕೊಳ್ಳಬೇಕಿದೆ.
ಇದೀಗ ಈ ಇಬ್ಬರೂ ವ್ಯಕ್ತಿಗಳನ್ನು ಐಸೊಲೇಷನ್ ಗೆ ಒಳಪಡಿಸಲಾಗಿದ್ದು, ಅವರಿಗೆ ದೃಢಪಟ್ಟಿರುವ ಸೋಂಕು ಓಮಿಕ್ರಾನ್ ರೂಪಾಂತರಿಯೇ ಅಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಗೆ ಒಳಪಡಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪರೀಕ್ಷೆ ಫಲಿತಾಂಶ ಬರುವವರೆಗೂ ಅವರನ್ನು ಪ್ರತ್ಯೇಕವಾಗಿ ಇರಿಸಲಾಗುವುದು. ಹೆಚ್ಚು ಅಪಾಯಕಾರಿ ದೇಶಗಳೆಂದು ಗುರುತಿಸಲಾಗಿರುವ 10 ರಾಷ್ಟ್ರಗಳಿಂದ ಬೆಂಗಳೂರಿಗೆ 584 ಮಂದಿ ಆಗಮಿಸಿದ್ದಾರೆ. ದಕ್ಷಿಣ ಆಫ್ರಿಕಾ ಒಂದರಿಂದಲೇ 94 ಮಂದಿ ಆಗಮಿಸಿದ್ದಾರೆ. ಓಮಿಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನದಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದಾರೆ. ಡಬ್ಲ್ಯುಹೆಚ್ಒ ಓಮಿಕ್ರಾನ್ ರೂಪಾಂತರಿಯನ್ನು ಆತಂಕಕಾರಿ ರೂಪಾಂತರಿ ತಳಿ ವಿಭಾಗಕ್ಕೆ ಸೇರಿಸಿದೆ.