BENGALURU DEC 4
ತಲೆಗೆ ತೀವ್ರವಾದ ಪೆಟ್ಟು ತಗಲಿ ಕಳೆದ ಮೂರು ದಿನಗಳಿಂದ ಬೆಂಗಳೂರಿನ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶಿವರಾಂ(84) ಅವರು ಇಂದು ಮಧ್ಯಾಹ್ನ ನಿಧನರಾದರು.
ಹಾಸ್ಯನಟರಾಗಿ ಹೆಸರು ಮಾಡಿದ್ದ ಶಿವರಾಂ ಅವರು ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ಪಳಗಿದ ಕಲಾವಿದರು. ಇವರ ಸಹೋದರ ರಾಮನಾಥ್ ಅವರ ಜೊತೆ ಸೇರಿ ರಾಶಿ ಬ್ರದರ್ಸ್ ಎಂಬ ಸಂಸ್ಥೆ ಹುಟ್ಟುಹಾಕಿ ವರನಟ ಡಾ.ರಾಜ್‍ಕುಮಾರ್ ಅಭಿನಯದ ನಾನೊಬ್ಬ ಕಳ್ಳ ಚಿತ್ರವೂ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದರು.
ಶಿವರಾಮ್ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಗಡಿಯಲ್ಲಿನ ಚೂಡಸಂದ್ರ ಎಂಬ ಹಳ್ಳಿಯಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ, ಅವರು ಟೈಪ್ ರೈಟಿಂಗ್ ಇನ್ಸ್ಟಿಟ್ಯೂಟ್ ನಡೆಸುತ್ತಿದ್ದ ತಮ್ಮ ಸೋದರನ ಜೊತೆಗೆ ಬೆಂಗಳೂರಿಗೆ ಬಂದರು. ಗುಬ್ಬಿ ವೀರಣ್ಣ ಅವರ ನಾಟಕ ಪ್ರದರ್ಶನಗಳ ಪ್ರಭಾವಕ್ಕೆ ಒಳಗಾಗಿ, ಚಿತ್ರ ತಯಾರಿಕೆ ಮತ್ತು ನಟನೆಯತ್ತ ಆಸಕ್ತಿ ತಳೆದು ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು.
1958ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿ ಕು. ರಾ. ಸೀತಾರಾಮಶಾಸ್ತ್ರಿ ಯವರಂತಹ ವಿವಿಧ ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ಮಾಡಲು ಆರಂಭಿಸಿದರು . ಅವರು ಅನುಭವಿ ಛಾಯಾಗ್ರಾಹಕ ಬೊಮನ್ ಡಿ ಇರಾನಿ ಅವರಿಗೆ ಕ್ಯಾಮರಾ ಸಹಾಯಕರಾಗಿಯೂ ಕೆಲಸ ಮಾಡಿದ್ದರು. ಶಿವರಾಮ್ ಮೊದಲ ಬಾರಿ ಬೆಳ್ಳಿ ಪರದೆಯ ಮೇಲೆ 1965ರಲ್ಲಿ ಕು. ರಾ. ಸೀತಾರಾಮಶಾಸ್ತ್ರಿ ಅವರ ನಿರ್ದೇಶನದ ಮತ್ತು ಸಹ ನಿರ್ಮಾಣದ ಬೆರೆತ ಜೀವ ಚಿತ್ರದಲ್ಲಿ ನಟನಾಗಿ ಕಾಣಿಸಿಕೊಂಡರು .ಏತನ್ಮಧ್ಯೆ, ಅವರು ಕೆ ಎಸ್ ಎಲ್ ಸ್ವಾಮಿ, ಗೀತಪ್ರಿಯ, ಸಿಂಗೀತಂ ಶ್ರೀನಿವಾಸರಾವ್ ಮತ್ತು ಪುಟ್ಟಣ್ಣ ಕಣಗಾಲ್ ರಂತಹ ಹಲವಾರು ಪ್ರಮುಖ ನಿರ್ದೇಶಕರಿಗೆ ಸಹಾಯಕರಾಗಿದ್ದರು .
1958 ರಿಂದ 1965 ರ ವರೆಗೆ ಸಹಾಯಕ ನಿರ್ದೇಶಕರಾಗಿ ದುಡಿದ ನಂತರ, ಅವರಿಗೆ ಕಲ್ಯಾಣ್ ಕುಮಾರ್ ನಟಿಸಿದ ಕು. ರಾ. ಸೀತಾರಾಮಶಾಸ್ತ್ರಿ ಅವರ ಬೆರೆತ ಜೀವ ಚಿತ್ರದಲ್ಲಿ ಪೋಷಕ ಪಾತ್ರದ ಮೂಲಕ ನಟನೆಗೆ ಬ್ರೆ ಕ್ ಸಿಕ್ಕಿತು. ಆಗಿನಿಂದ ಅವರು 2000 ದ ದಶಕದವರೆಗೆ ಹೆಚ್ಚೂ ಕಡಿಮೆ ಎಲ್ಲಾ ನಿರ್ದೇಶಕರ ನಿರ್ದೇಶನದಲ್ಲಿ ನಟಿಸಿದರು. ಅವರ ಅವಿಸ್ಮರಣೀಯ ಅಭಿನಯದ ಚಿತ್ರಗಳಲ್ಲಿ ಶರಪಂಜರ , ನಾಗರಹಾವು , ಶುಭಮಂಗಳ ಸೇರಿವೆ.ಇವೆಲ್ಲವೂ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಚಿತ್ರಗಳು.
ಚಲಿಸುವ ಮೋಡಗಳು , ಶ್ರಾವಣ ಬಂತು , ಹಾಲು ಜೇನು , ಹೊಂಬಿಸಿಲು, ಹೊಸ ಬೆಳಕು, ಗುರು ಶಿಷ್ಯರು , ಸಿಂಹದಮರಿ ಸೈನ್ಯ , ಮಕ್ಕಳ ಸೈನ್ಯ ಇಂಥ ಅನೇಕ ಚಲನಚಿತ್ರಗಳಲ್ಲಿ ಅವರ ಹಾಸ್ಯ ಪಾತ್ರಗಳು ಜನರ ಮೆಚ್ಚುಗೆ ಪಡೆದವು. . ಡ್ರೈವರ್ ಹನುಮಂತು (1980) ದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.
2000 ರ ನಂತರ ವರ್ಷಗಳಲ್ಲಿ ಅವರು ಬರ ಮತ್ತು ತಾಯಿ ಸಾಹೇಬ ದಂತಹ ಸಮಾನಾಂತರ ಚಿತ್ರಗಳಲ್ಲೂ ಆಪ್ತಮಿತ್ರ ,ಹುಚ್ಚ ದಂತಹ ಪ್ರಮುಖ ಯಶಸ್ವಿ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿಯೂ ನಟಿಸಿದರು . ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಗೃಹಭಂಗ ಟೆಲಿವಿಷನ್ ಧಾರಾವಾಹಿಯಲ್ಲೂ ಮತ್ತು ರವಿಕಿರಣ್ ನಿರ್ದೇಶಿಸಿದ ಬದುಕು ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ.
ತಮ್ಮ ಸಹೋದರ ಎಸ್ ರಾಮನಾಥನ್ ಜತೆಗೂಡಿ “ರಾಶಿ ಬ್ರದರ್ಸ್” ಎಂಬ ಚಿತ್ರನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಮತ್ತು ಗೆಜ್ಜೆಪೂಜೆ (1970), ಉಪಾಸನೆ(1974), ನಾನೊಬ್ಬ ಕಳ್ಳ (1979), ಡ್ರೈವರ್ ಹನುಮಂತು(1980) ಮತ್ತು ಬಹಳ ಚೆನ್ನಾಗಿದೆ (2001) ಗಳಂತಹ ಯಶಸ್ವೀ ಚಿತ್ರಗಳನ್ನು ನಿರ್ಮಿಸಿದ್ದಾರೆ.
ಚಲನಚಿತ್ರಗಳ ಪಟ್ಟಿ
ನಿರ್ದೇಶಕರಾಗಿ
ವರ್ಷ | ಚಲನಚಿತ್ರ | ಪಾತ್ರವರ್ಗ | ಭಾಷೆ |
---|---|---|---|
1972 | ಹೃದಯಸಂಗಮ | ರಾಜ್‍ಕುಮಾರ್ | ಭಾರತಿ |
ನಿರ್ಮಾಪಕರಾಗಿ
ವರ್ಷ | ಚಲನಚಿತ್ರ | ಪಾತ್ರವರ್ಗ | ಭಾಷೆ |
---|---|---|---|
1970 | ಗೆಜ್ಜೆಪೂಜೆ | ಕಲ್ಪನಾ | ಕನ್ನಡ |
1974 | ಉಪಾಸನೆ | ಆರತಿ | ಕನ್ನಡ |
1979 | ನಾನೊಬ್ಬ ಕಳ್ಳ | ರಾಜ್ ಕುಮಾರ್ | ಕನ್ನಡ |
1980 | ಡ್ರೈವರ್ ಹನುಮಂತು | ಶಿವರಾಂ | ಕನ್ನಡ |
ನಟನಾಗಿ
- ಬೆರೆತ ಜೀವ (1965)
- ಮಾವನ ಮಗಳು (1965)
- ದುಡ್ಡೇ ದೊಡ್ಡಪ್ಪ (1966)
- ಶ್ರೀ ಪುರಂದರದಾಸರು (1967)
- ಲಗ್ನಪತ್ರಿಕೆ (1967)
- ನಮ್ಮ ಮಕ್ಕಳು (1969)
- ಅನಿರೀಕ್ಷಿತ (1970)
- ಶರಪಂಜರ (1971)
- ಮುಕ್ತಿ(1971)
- ಭಲೇ ಅದೃಷ್ಟವೋ ಅದೃಷ್ಟ(1971)
- ಸಿಪಾಯಿ ರಾಮು (1972)
- ನಾಗರಹಾವು(1972)
- ನಾ ಮೆಚ್ಚಿದ ಹುಡುಗ (1972)
- ಹೃದಯಸಂಗಮ (1972)
- ಮೂರೂವರೆ ವಜ್ರಗಳು (1973)
- ಎಡಕಲ್ಲು ಗುಡ್ಡದ ಮೇಲೆ (1973)
- ಉಪಾಸನೆ (1974)
- ಬಂಗಾರದ ಪಂಜರ(1974)
- ಹೆಣ್ಣು ಸಂಸಾರದ ಕಣ್ಣು (1975)
- ಶುಭಮಂಗಳ (1975)
- ಒಂದೇ ರೂಪ ಎರಡು ಗುಣ (1975)
- ದೇವರ ಗುಡಿ (1975)
- ಹುಡುಗಾಟದ ಹುಡುಗಿ (1976)
- ಮಾಂಗಲ್ಯ ಭಾಗ್ಯ (1976)
- ಬೆಸುಗೆ (1976)
- ಬಂಗಾರದ ಗುಡಿ (1976)
- ಬಯಸದೆ ಬಂದ ಭಾಗ್ಯ (1977)
- ನಾಗರ ಹೊಳೆ (1977)
- ಸ್ನೇಹ ಸೇಡು (1978)
- ಪ್ರೇಮಾಯಣ (1978)
- ಮುಯ್ಯಿಗೆ ಮುಯ್ಯಿ(1978)
- ಕಿಲಾಡಿ ಕಿಟ್ಟು (1978)
- ಹೊಂಬಿಸಿಲು (1978)
- ಪ್ರಿಯಾ (1979)
- ನಾನೊಬ್ಬ ಕಳ್ಳ (1979)
- ಕಾಡುಕುದುರೆ (1979)
- ಧರ್ಮಸೆರೆ(1979)
- ಡ್ರೈವರ್ ಹನುಮಂತು (1980)
- ಮಾರಿಯಾ ನನ್ನ ಡಾರ್ಲಿಂಗ್ (1980)
- ಮಕ್ಕಳ ಸೈನ್ಯ (1980)
- ಬರ (1980)
- ಬಂಗಾರದ ಜಿಂಕೆ (1980)
- ಸಿಂಹದ ಮರಿ ಸೈನ್ಯ (1981)
- ಮರೆಯದ ಹಾಡು (1981)
- ಗುರು ಶಿಷ್ಯರು (1981)
- ಗೀತಾ (1981)
- ಗರ್ಜನೆ (1981)
- ಟೋನಿ (1982)
- ಹೊಸ ಬೆಳಕು(1982)
- ಹಾಲುಜೇನು (1982)
- ಹಾಸ್ಯರತ್ನ ರಾಮಕೃಷ್ಣ (1982)
- ಚಲಿಸುವ ಮೋಡಗಳು (1982)
- ಬಾಡದ ಹೂ (1982)
- ಪಲ್ಲವಿ ಅನುಪಲ್ಲವಿ (1983)
- ಹೊಸ ತೀರ್ಪು (1983)
- ಎರಡು ನಕ್ಷತ್ರಗಳು(1983)
- ಭಕ್ತ ಪ್ರಹ್ಲಾದ (1983)
- ಬೆಕ್ಕಿನ ಕಣ್ಣು (1984)
- ಮುಗಿಲ ಮಲ್ಲಿಗೆ (1985)
- ರಾಜಾ ಕೆಂಪು ರೋಜಾ (1990)
- ಗಂಡು ಸಿಡಿಗುಂಡು (1991)
- ಹಳ್ಳಿ ರಂಭೆ ಬೆಳ್ಳಿ ಬೊಂಬೆ (1991)
- ಮಾಂಗಲ್ಯ(1991)
- ಸಾಹಸಿ (1992)
- ಕ್ಷೀರಸಾಗರ (1992)
- ಪ್ರೇಮಸಂಗಮ (1992)
- ಕೋಣ ಈದೈತೆ (1995)
- ಅಮ್ಮಾವ್ರ ಗಂಡ(1997)
- ತಾಯೀಸಾಹೇಬ (1997)
- ಪ್ರತ್ಯರ್ಥ (1999)
- ಹೃದಯವಂತ (2003)
- ರಾಜನರಸಿಂಹ (2003)
- ಆಪ್ತಮಿತ್ರ (2004)
- ನಮ್ಮಣ್ಣ (2005)
- ಬಳ್ಳಾರಿ ನಾಗ (2006)
- ಸಜನಿ(2007)
- ಗೌತಮ್(2009)
- ಬ್ರೇಕಿಂಗ್ ನ್ಯೂಸ್ (2012)
- ಬಜರಂಗಿ (2013)
- ಶಿವಂ (2015)
- ಕೇರ್ ಆಫ್ ಫುಟ್ ಪಾಥ್ 2 (2015)
- …ರೆ (2016)
- ಮುಕುಂದಮುರಾರಿ (2016)
- ಶ್ರೀ ಓಂಕಾರ ಅಯ್ಯಪ್ಪನೆ(2016)
- ಬಂಗಾರ s / O ಬಂಗಾರದ ಮನುಷ್ಯ (2017)
- ಒನ್ಸ್ ಮೋರ್ ಕೌರವ (2017)