ಸೆನ್ಸೆಕ್ಸ್ ಜನವರಿ 17 ರಂದು ಇದ್ದ 61,300 ರಿಂದ ನಿರಂತರವಾಗಿ ಇಳಿಕೆಯಲ್ಲಿದೆ. ಇದಕ್ಕೆ ಪ್ರಮುಖ ಕಾರಣ ವಿದೇಶಿ ವಿತ್ತೀಯ ಸಂಸ್ಥೆಗಳ ಮಾರಾಟದ ಒತ್ತಡವಾಗಿದೆ. ಹಲವಾರು ಕಂಪನಿಗಳು ಉತ್ತಮ ಫಲಿತಾಂಶ ಪ್ರಕಟಿಸಿವೆ. ಹೆಚ್ಚಿನ ಸಾರ್ವಜನಿಕ ವಲಯದ ಕಂಪನಿಗಳು ಆಕರ್ಷಕ ಲಾಭಾಂಶಗಳನ್ನು ಘೋಷಿಸಿವೆ. ಹಲವು ಕಂಪನಿಗಳು ಉತ್ತಮ ವಹಿವಾಟು ನಿರ್ವಹಿಸಿದರೂ ಹಾನಿಗೊಳಗಾಗಿವೆ. ಕೆಲವು ಕಂಪನಿಗಳು ಇತ್ತೀಚಿನ ದಿನಗಳಲ್ಲಿ ರಭಸದ ಏರಿಳಿತಗಳನ್ನು ಪ್ರದರ್ಶಿಸಿ, ಉತ್ತಮ ಫಲಿತಾಂಶಗಳನ್ನು ನೀಡಿದರೂ ಸಹ ಪೇಟೆಯಲ್ಲಿ ಹೆಚ್ಚಿನ ಕುಸಿತಕ್ಕೊಳಗಾಗುತ್ತಿವೆ.
ಕಂಪನಿಗಳಾದ ಶಾರದಾ ಕ್ರಾಪ್ ಒಂದು ತಿಂಗಳಲ್ಲಿ ಶೇಕಡ.53 ರಷ್ಟು ಏರಿಕೆ ಕಂಡರೆ, ಕ್ರೆಡಿಟ್ ಅಕ್ಸೆಸ್ ಗ್ರಾಮೀಣ್ ಶೇ.28 ರಷ್ಟು ಏರಿಕೆ ಕಂಡಿದೆ, ಟಿವಿ 18 ಬ್ರಾಡ್ ಕ್ಯಾಸ್ಟ್ ಶೇ.48 ರ ಏರಿಕೆ ಕಂಡುಕೊಂಡಿದೆ. ಹಿಂದೂಸ್ಥಾನ್ ಕನ್ಸ್ಟ್ರಕ್ಷನ್ ಕಂಪನಿ ಶೇ.21 ರಷ್ಟು, ಬ್ಯಾಂಕ್ ಆಫ್ ಬರೋಡಾ ಶೇ.21 ರಷ್ಟು ಏರಿಕೆ ಕಂಡಿವೆ. ಗೋದಾವರಿ ಪವರ್ ಅಂಡ್ ಇಸ್ಪಾಟ್ ರೂ.52 ಕ್ಕೂ ಹೆಚ್ಚಿನ ಏರಿಕೆ ಕಂಡಿದೆ. ಜಿ ಎನ್ ಎಫ್ ಸಿ, ವಿ ಐ ಪಿ ಇಂಡಸ್ಟ್ರೀಸ್ ನಂತಹ ಕಂಪನಿಗಳೂ ಏರಿಕೆ ಕಂಡಿವೆ. ಆದರೆ ಈ ಪಟ್ಟಿಯಲ್ಲಿ ಗಮನಾರ್ಹ ಎನಿಸಬಹುದಾದ ಏರಿಕೆ ಕಂಡಿರುವುದು ವೇದಾಂತ ಮತ್ತು ಬಯೋಕಾನ್ ಶೇ.12 ರಷ್ಟು ಏರಿಕೆ ಗಳಿಸಿದರೆ, ಆಕ್ಸಿಸ್ ಮತ್ತು ಕೆನರಾ ಬ್ಯಾಂಕ್ ಗಳೂ ಶೇ.10 ರಿಂದ 11 ಏರಿಕೆ ಗಳಿಸಿವೆ.
ಅಂದರೆ ಚಟುವಟಿಕೆಯು ಅಗ್ರಮಾನ್ಯ ಕಂಪನಿಗಳಿಗಿಂತ, ಅಂಚಿನ ಕಂಪನಿಗಳಲ್ಲಿಯೇ ಚುರುಕಾಗಿತ್ತು. ಡಾ ಲಾಲ್ ಪತ್ ಲ್ಯಾಬೋರೇಟರೀಸ್, ವೆಂಕೀಸ್, ಸ್ಟರ್ಲೈಟ್ ಟೆಕ್ನಾಲಜೀಸ್, ವೆಂಕೀಸ್, ಫರ್ಸ್ಟ್ ಸೋರ್ಸ್ ಗಳು ತಮ್ಮ ಕಳಪೆ ಸಾಧನೆಗಳಿಂದ ಹೆಚ್ಚಿನ ಕುಸಿತಕ್ಕೊಳಗಾದವು. ಟಿಸಿಎಸ್ ಕಂಪನಿಯು ಷೇರು ಹಿಂಕೊಳ್ಳುವಿಕೆಯ ಕಾರಣ ರೂ.4,000 ದ ಗಡಿ ದಾಟಿ ಮತ್ತೆ ರೂ.3,700 ರ ಒಳಗೆ ಕುಸಿದಿದೆ. ಮೈಂಡ್ ಟ್ರೀ ಷೇರಿನ ಬೆಲೆ ಒಂದು ತಿಂಗಳಲ್ಲಿ ರೂ.4,700 ರ ಸಮೀಪದಿಂದ ರೂ.3,500 ರವರೆಗೂ ಕುಸಿದು ಈಗ ರೂ.3,870 ರ ಸಮೀಪವಿದೆ. ಎಲ್ ಅಂಡ್ ಟಿ ಟೆಕ್ನಾಲಜೀಸ್ ಷೇರು ಒಂದೇ ತಿಂಗಳಲ್ಲಿ ರೂ.5,700 ರ ಸಮೀಪದಿಂದ ರೂ.4,311 ರ ಸಮೀಪಕ್ಕೆ ಕುಸಿದು ರೂ.4,490 ರ ಸಮೀಪವಿದೆ. ಟೆಕ್ ಮಹೀಂದ್ರ ಷೇರಿನ ಬೆಲೆ ರೂ.300 ಕ್ಕೂ ಹೆಚ್ಚು ಜಾರಿದೆ. ಇಂತಹ ವಾತಾವರಣದಲ್ಲಿ ಈ ಕೆಳಗೆ ನೀಡಿರುವ ಕಂಪನಿಗಳು ಉತ್ತಮವಾದ ಲಾಭಾಂಶಗಳನ್ನು ಘೋಷಿಸಿ ಹೂಡಿಕೆದಾರರನ್ನು ಹರ್ಷಿತಗೊಳಿಸಿ ಷೇರಿನ ಬೆಲೆಗಳನ್ನು ಸ್ವಲ್ಪಮಟ್ಟಿನ ಸ್ಥಿರತೆಯಲ್ಲಿರಿಸಿವೆ.
- NMDC : ರೂ.5.73 ಪ್ರತಿ ಷೇರಿಗೆ,
- ACC : ರೂ.58 ಪ್ರತಿ ಷೇರಿಗೆ,
- Auro Pharma : ರೂ.1.50 ಪ್ರತಿ ಷೇರಿಗೆ,
- Engineers Ind : ರೂ,2.00 ಪ್ರತಿ ಷೇರಿಗೆ,
- I R C T C : ರೂ.2.00 ಪ್ರತಿ ಷೇರಿಗೆ,
- Mahanagar Gas: ರೂ.9.50 ಪ್ರತಿ ಷೇರಿಗೆ,
- National Alum : ರೂ.3.00 ಪ್ರತಿ ಷೇರಿಗೆ,
- Power Grid : ರೂ.5.50 ಪ್ರತಿ ಷೇರಿಗೆ,
- Cochin Ship : ರೂ.7.00 ಪ್ರತಿ ಷೇರಿಗೆ,
- Oil India : ರೂ.5.75 ಪ್ರತಿ ಷೇರಿಗೆ,
- MOIL ರೂ.3.00 ಪ್ರತಿ ಷೇರಿಗೆ,
- PFC : ರೂ.6.00 ಪ್ರತಿ ಷೇರಿಗೆ,
- Akzo Ind : ರೂ.40.00 ಪ್ರತಿ ಷೇರಿಗೆ,
- SJVNL : ರೂ.1.15 ಪ್ರತಿ ಷೇರಿಗೆ,
- Bector Food : ರೂ.1.25 ಪ್ರತಿ ಷೇರಿಗೆ,
- H G S Ltd : ರೂ.28.00 ಪ್ರತಿ ಷೇರಿಗೆ,
- H A L : ರೂ.26.00 ಪ್ರತಿ ಷೇರಿಗೆ,
- First Source : ರೂ.3.50 ಪ್ರತಿ ಷೇರಿಗೆ,
- Sukhjit Starch : ರೂ.10.00 ಪ್ರತಿ ಷೇರಿಗೆ,
- Sun TV : ರೂ.2.50 ಪ್ರತಿ ಷೇರಿಗೆ,
- Cummins : ರೂ.8.00 ಪ್ರತಿ ಷೇರಿಗೆ,
- Hero Motocorp : ರೂ.60.00 ಪ್ರತಿ ಷೇರಿಗೆ,
- India Nippon Elec: ರೂ.6.25 ಪ್ರತಿ ಷೇರಿಗೆ,
- Metropolis Health : ರೂ.8.00 ಪ್ರತಿ ಷೇರಿಗೆ,
- ONGC : ರೂ.1.75 ಪ್ರತಿ ಷೇರಿಗೆ
ಲಾಭಾಂಶಗಳಿಗಿಂತ ಮುಂಚೆ ಹೆಚ್ಚಿನ ಏರಿಕೆ ಕಂಡರೆ ಷೇರುಗಳನ್ನು ಪೇಟೆಯಲ್ಲೇ ಮಾರಾಟಮಾಡಿ ಲಾಭ ಗಳಿಸಬಹುದು. ಲಾಭಾಂಶ ವಿತರಣೆಯ ನಂತರ ಮತ್ತೆ ಷೇರಿನ ಬೆಲೆ ಕುಸಿತ ಕಂಡಲ್ಲಿ ಮೌಲ್ಯಾಧಾರಿತ ಖರೀದಿಗೆ ಅವಕಾಶವಾಗುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಷೇರಿನ ಬೆಲೆಯಲ್ಲಿ ಹೆಚ್ಚಿನ ಲಾಭ ತರಲಾರದೆಂದರೆ, ಕಂಪನಿ ವಿತರಿಸುವ ಲಾಭಾಂಶದ ನಂತರ ಅವಕಾಶಕ್ಕೆ ಕಾಯಬೇಕಾಗುವುದು. ಮುಖ್ಯವಾಗಿ ಲಾಭಾಂಶ ಆಧಾರಿತ ಖರೀದಿಗೂ ಮುನ್ನ ನಿಗದಿತ ದಿನ ಮತ್ತು ಅರ್ಹತೆಗಳನ್ನು ದೃಢಪಡಿಸಿಕೊಂಡು ಮುನ್ನಡೆಯಿರಿ.
ವಿಸ್ಮಯಕಾರಿ ಬೆಳವಣಿಗೆ:
ಗುರುವಾರದಂದು ರೂ.70,899 ರವರೆಗೂ ಏರಿಕೆ ಕಂಡದ್ದ MRF Ltd, ಷೇರಿನ ಬೆಲೆಯು ಶುಕ್ರವಾರದಂದು ರೂ.68,100 ಗಳವರೆಗೂ ಕುಸಿದು ರೂ.68,265 ರಲ್ಲಿ ಕೊನೆಗೊಂಡಿದೆ. ರೂ.68,100 ವಾರ್ಷಿಕ ಕನಿಷ್ಠ ದರವಾಗಿದೆ. ಹಿಂದಿನ ವರ್ಷ ಫೆಬ್ರವರಿಯಲ್ಲಿ ರೂ.98,500 ನ್ನು ದಾಟಿದ್ದ ಈ ಕಂಪನಿ ಷೇರು ಗುರುವಾರದಂದು ತನ್ನ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿತು. ಕಂಪನಿಯ ಸಾಧನೆಯು ತೃಪ್ತಿದಾಯಕವಲ್ಲದ ಕಾರಣ ಷೇರಿನ ಬೆಲೆಯಲ್ಲಿ ಕುಸಿತ ಕಂಡಿತು. ಕೇವಲ ಎರಡೇ ದಿನಗಳಲ್ಲಿ ರೂ.2,700 ಕ್ಕೂ ಹೆಚ್ಚಿನ ಕುಸಿತಕಂಡ ಈ ಷೇರಿಗೆ ಕಂಪನಿಯು ಪ್ರತಿ ಷೇರಿಗೆ ರೂ.3 ರ ಲಾಭಾಂಶ ಪ್ರಕಟಿಸಿದೆ.
ಬೋನಸ್ ಷೇರಿನ ವಿಚಾರ:
HGS Ltd ಕಂಪನಿ ವಿತರಿಸುವ 1:1 ರ ಅನುಪಾತದ ಬೋನಸ್ ಷೇರಿಗೆ ಫೆಬ್ರವರಿ 23 ನ್ನು ನಿಗದಿತ ದಿನವನ್ನಾಗಿ ಘೋಷಿಸಿದೆ.
ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.
Very useful