BENGALURU FEB 14
ಹಿರಿಯ ರಂಗ ಕಲಾವಿದೆ ಭಾರ್ಗವಿ ನಾರಾಯಣ್ (84) ಇಂದು ಸಂಜೆ ಸುಮಾರು 7.30ಕ್ಕೆ ನಿಧನರಾದರು. ಕಳೆದ ಕೆಲವು ದಿನಗಳಿಂದ ವಯೋ ಸಹಜ ಕಾಯಿಲೆಗೆ ತುತ್ತಾಗಿದ್ದರು.
ಭಾರ್ಗವಿ ನಾರಾಯಣ್ ಅವರು ಅನೇಕ ಚಲನ ಚಿತ್ರಗಳು ಹಾಗೂ ಮಂಥನಾ ಮತ್ತು ಮುಕ್ತಾ ಸೇರಿದಂತೆ ಕನ್ನಡದ ಅನೇಕ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಕನ್ನಡ ನಾಟಕ ಅಕಾಡೆಮಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ.
ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ಮುನ್ನ, ಭಾರ್ಗವಿ ಅವರು ಬೆಂಗಳೂರಿನ ಇಎಸ್ಐ ಕಾರ್ಪೊರೇಶನ್ ಅಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು.
ಭಾರ್ಗವಿ ಅವರು 4 ಫೆಬ್ರವರಿ 1938 ರಂದು ಮತ್ತು ನಾಮಗಿರಿಯಮ್ಮ ಮತ್ತು ಎಂ. ರಾಮಸ್ವಾಮಿಯವರಿಗೆ ಜನಿಸಿದರು. ಪ್ರಸಾದನ ಕಲಾವಿದ ಬೆಳವಾಡಿ ನಂಜುಂಡಯ್ಯ ನಾರಾಯಣ (ಮೇಕಪ್ ನಾಣಿ) ಭಾರ್ಗವಿ ಅವರ ಪತಿ. ಸುಜಾತಾ, ಪ್ರಕಾಶ್, ಪ್ರದೀಪ್ ಮತ್ತು ಸುಧಾ ಮಕ್ಕಳು. ಭಾರ್ಗವಿ ನಾರಾಯಣರ ಆತ್ಮಚರಿತ್ರೆ ‘ನಾನು, ಭಾರ್ಗವಿ’ 2012ರಲ್ಲಿ ಬಿಡುಗಡೆಯಾಯಿತು,