21.7 C
Karnataka
Thursday, November 21, 2024

    JIVA at Home : UVನೀರೇ ಆಗಲಿ ROನೀರೇ ಆಗಲಿ ಅದು JIVA ಮೂಲಕವೇ ಹಾದು ಬರಲಿ

    Must read

    ಡಾ. ಕೃಷ್ಣ ಮಾದಪ್ಪ

    ವಿಶ್ವಾದಾದ್ಯಂತ ಈಗಲೂ ಕೋಟ್ಯಂತರ ಜನರು ಕುಡಿಯಲು ಶುದ್ಧ ನೀರು ಸಿಗದೆ ಪರದಾಡುತ್ತಿದ್ದಾರೆ.  ಸರಕಾರಗಳು ಹಲವು ಹತ್ತು ಯೋಜನೆಗಳನ್ನು ರೂಪಿಸಿದ್ದರೂ  ಅವುಗಳ ಪ್ರಯೋಜನ ಎಲ್ಲರಿಗೂ ಸಿಗುತ್ತಿಲ್ಲ.

    ನೀರಿನಿಂದಲೇ ಜೀವನ. ನೀರು ಇಲ್ಲದಿದ್ದರೆ ಜೀವನವಿಲ್ಲ ಎಂದು ಹೇಳುವಷ್ಟು ನೀರಿನ ಅಗತ್ಯ ಸರ್ವ ಜೀವಿಗಳಿಗೂ ಇದೆ. ಮನುಷ್ಯನ ದೇಹದಲ್ಲಿ ಶೇ 65 ಭಾಗ ನೀರಾದರೆ, ಅಂಬಲಿ ಮೀನಿನ ದೇಹದಲ್ಲಿ ಶೇ 95 ಭಾಗ ನೀರು ಇದೆ. ಅದೇ ರೀತಿ ಜಲವಾಸದ ಸಸ್ಯಗಳಲ್ಲಿ ಶೇಕಡಾ 70 ರಿಂದ 80 ಭಾಗ ನೀರು ಇದ್ದರೆ, ಶುಷ್ಕಪ್ರದೇಶದ ಕೆಲವು ಸಸ್ಯಗಳು ಕೇವಲ ಪ್ರತಿಶತ 4 ರಿಂದ 5 ರಷ್ಟು ಮಾತ್ರ ನೀರನ್ನು ಉಳಿಸಿಕೊಂಡು ಬದುಕುತ್ತವೆ.

    ಭೂಮಿಯ ಸುಮಾರು ಶೇ 70 ಭಾಗ ನೀರಿನಿಂದ ಆವರಿಸಿಕೊಂಡಿದೆ. ಈ 70 ಶೇಕಡ ನೀರಿನಲ್ಲಿ ಶೇಕಡ 97.5ರಷ್ಟು ಭಾಗ ಸಮುದ್ರದ ಉಪ್ಪುನೀರಿನ ರೂಪದಲ್ಲಿದೆ. ಉಳಿದ ಶೇಕಡ 2.5ರಷ್ಟು ನೀರಿನಲ್ಲಿ ಶೇಕಡ 90 ರಷ್ಟು ನೀರಿನ ಪ್ರಮಾಣ ಮಂಜುಗಡ್ಡೆಯ ರೂಪದಲ್ಲಿದೆ. ಇನ್ನುಳಿದ ಶೇಕಡ 0.26 ಭಾಗ ನೀರು ಮಾತ್ರ ಭೂಚರ ಜೀವಿಗಳಿಗೆ ಬಳಸಲು ಯೋಗ್ಯವಾಗಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯ ಏನೆಂದರೆ ನೀರು ಭೂಮಿಯಲ್ಲಿ ಎಲ್ಲಾ ಕಡೆ ಸಮ ಪ್ರಮಾಣದಲ್ಲಿ ವಿತರಣೆಯಾಗಿಲ್ಲ. ಇರುವ ಪ್ರಮಾಣದ ಎಲ್ಲಾ ನೀರು ಬಳಸಲು ಯೋಗ್ಯವೂ ಅಲ್ಲ .

    ಇನ್ನು ಕೆಲವರಿಗೆ ಸುರಕ್ಷಿತ ನೀರು ಮರೀಚಿಕೆ

    ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ  ವಿಶ್ವದ ಒಟ್ಟಾರೆ ಜನಸಂಖ್ಯೆಯ ಶೇಕಡ 75 ರಷ್ಟು ಮಂದಿಗೆ (5.8 ಬಿಲಿಯನ್) ಮಾತ್ರ ಸುರಕ್ಷಿತವಾದ ನೀರು ಬಳಸಲು ಸಿಗುತ್ತಿದೆ.  ಇನ್ನುಳಿದವರು  ಕಲುಷಿತ ನೀರನ್ನೇ ಸೇವಿಸಬೇಕಾದ ಸ್ಥಿತಿ ಇದೆ. ವಿಶ್ವದಲ್ಲಿ 2 ಬಿಲಿಯನ್ ಮಂದಿ ಈಗಲೂ ಅಸುರಕ್ಷಿತ ನೀರನ್ನೇ ಬಳುಸುತ್ತಿದ್ಗಾರೆ. ಒಂದು ಅಂದಾಜಿನ ಪ್ರಕಾರ ಪ್ರತಿವರ್ಷ 4 85 000  ಮಂದಿ ಜಲ ಸಂಬಂಧೀ ರೋಗಗಳಿಗೆ ಬಲಿಯಾಗುತ್ತಿದ್ದಾರೆ.

    ಭಾರತದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಮೋದಿ ಸರಕಾರ ಬಂದ ನಂತರ ಜಲಶಕ್ತಿ ಮಿಷನ್  ಮೂಲಕ ಗ್ರಾಮೀಣ ನೀರು ಪೂರೈಕೆಗೆ ಆದ್ಯತೆ ನೀಲಾಗಿದೆಯಾದರು ಇನ್ನು  ಗುರಿ ತಲುಪಲು ಸಾಧ್ಯವಾಗಿಲ್ಲ. 2015ರ ವೇಳೆಗೆ ಭಾರತದಲ್ಲಿ ವ್ವವಸ್ಥಿತ ನೀರು ಸರಬರಾಜಿನಲ್ಲಿ ಶೇಕಡ  92 ರಷ್ಟು ಪ್ರಗತಿ ಸಾಧಿಸಲಾಗಿದೆ.  ಆದರೆ ಸುರಕ್ಷಿತ ನೀರಿನ ಬಳಕೆ  ಜನಸಂಖ್ಯೆಯ ಶೇಕಡ 50ನ್ನು ದಾಟಿಲ್ಲ.  ರಾಸಾಯನಿಕ ಯುಕ್ತ, ಫ್ಲೋರೈಡ್ ಯುಕ್ತ ನೀರಿನಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ.

    ಜನಶಕ್ತಿ ಮಿಷನ್ ಕೊಳವೆ ಮೂಲಕ ಮನೆಗಳಿಗೆ ತಲುಪುಸುತ್ತಿರುವ ನೀರಿನ ಚಿತ್ರಣ ಗಮನಿಸಿ.

    ಸುರಕ್ಷತೆಯ ಹೆಸರಲ್ಲಿ ರಸಾಯಿನಿಕ ಬಳಕೆ

    ಮನೆ ಮನೆಗೆ ನೀರನ್ನೇನೋ ನಾವು ತಲುಪಿಸುತ್ತಿದ್ದೇವೆ.ಆದರೆ ನೀರನ್ನು ಸುರಕ್ಷಿತ ಗೊಳಿಸುವ ನಿಟ್ಟಿನಲ್ಲಿ ಅನೇಕ ರಸಾಯಿನಿಕಗಳನ್ನು ಬಳಸುವ ನಾವು ಒಂದು ಪ್ರಮುಖ ಅಂಶವನ್ನು ಮರೆತು ಬಿಡುತ್ತೇವೆ.  ಪರಿಶುದ್ಧವಾದ ನೀರಿಗೆ ವಾಸನೆ , ಬಣ್ಣ ಮತ್ತು ಆಕಾರವಿಲ್ಲವೆಂದು    ವಿಜ್ಞಾನ ಹೇಳುತ್ತದೆ.  ಅದರ ಜೊತೆಗೆ ಅದರಲ್ಲಿ ಶಕ್ತಿಯೂ ಇರುತ್ತದೆ. ಆದರೆ ನಾವು ಸುರಕ್ಷತೆಯ ಹೆಸರಲ್ಲಿ ನೀರಿನ ಅಸಲಿ ಗುಣವನ್ನೇ ಕೊಲ್ಲುತ್ತಿದ್ದೇವೆ.   ಶಕ್ತಿ ಇಲ್ಲದ ನೀರು ಅನೇಕ  ರೋಗಗಳಿಗೆ ಕಾರಣವಾಗುತ್ತಿದೆ.

    ನೀರಿನ ಸುರಕ್ಷಿತ ಗೊಳಿಸುಸ ನಿಟ್ಟಿನಲ್ಲಿ ನಾವು ಅದಕ್ಕೆ ಸಾಮಾನ್ಯವಾಗಿ ಇಂದು  Reverse Osmosis ಟ್ರೀಟ್ ಮೆಂಟ್ ಕೊಡುತ್ತಿದ್ದೇವೆ. ನಗರ ಪ್ರದೇಶಗಳಲ್ಲಿ ಅನೇಕ ಕಡೆ ಸುರಕ್ಷಿತ ನೀರಿಗಾಗಿ RO ಪ್ಲಾಂಟ್ ಗಳನ್ನು ನಿರ್ಮಿಸಿರುವುದನ್ನು ಕಾಣುತ್ತಿದ್ದೇವೆ. ಆದರೆ ಇದು ಎಷ್ಟರ ಮಟ್ಟಿಗೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು ಎಂಬ ಅಧ್ಯಯನ ನಡೆದಿರಲಿಲ್ಲ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಇಂಥ ನೀರು ಆರೋಗ್ಯದ ದೃಷ್ಟಿಯಿಂದ ಉತ್ತಮ ಅಲ್ಲ ಎಂದು ಹೇಳಿರುವುದು ಅನೇಕ ಪ್ರಶ್ನೆಗಳನ್ನು ಎತ್ತಿದೆ.

    The presence of minimum/optimum concentration of calcium and magnesium in drinking water signify “energy content”. RO machines are very effective in cleaning water, but they remove calcium and magnesium, the elements responsible for producing energy….ಹೀಗೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅಂದರೆ RO ಯಂತ್ರಗಳು ನೀರನ್ನು ಶುದ್ಧ ಮಾಡುತ್ತವೆ. ಇವು ಎಷ್ಟರ ಮಟ್ಟಿಗೆ ಶುದ್ಧ ಮಾಡುತ್ತವೆ ಎಂದರೆ ನೀರಿನಲ್ಲಿ ಅಂತರ್ಗತವಾಗಿರುವ ಶಕ್ತಿಯನ್ನೇ ನಾಶ ಮಾಡಿಬಿಡುತ್ತವೆ.

    ಏನಿದು RO  ಟ್ರೀಟ್ ಮೆಂಟ್?

    RO  ಟ್ರೀಟ್ ಮೆಂಟ್ ನ ವಿಸ್ತ್ರೃತ ರೂಪ Reverse Osmosis. ಅಂದರೆ ನೀರನ್ನು  semipermeable membrane ಮೂಲಕ  ಒಂದು ನಿಗದಿತ ಒತ್ತಡದಲ್ಲಿ ಹಾಯಿಸಿದಾಗ ನೀರಿನಲ್ಲಿರುವ ಬ್ಯಾಕ್ಟೀರಿಯಾ ಸಹಿತ ಲವಣಾಂಶಗನ್ನು ಅದು ಬೇರ್ಪಡಿಸಿ ಶುದ್ಧ ನೀರನ್ನು ನೀಡುತ್ತದೆ. ಇದುವರೆವಿಗೂ ಈ ನೀರು ಅತ್ಯಂತ ಸುರಕ್ಷಿತ ಎಂದೇ ಭಾವಿಸಲಾಗಿತ್ತು. ಆದರೆ ಕಳೆದ  ಜೂನ್ ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮೇಲಿನ ಎಚ್ಚರಿಕೆ ಈ ನಂಬಿಕೆಯನ್ನು ಬುಡ ಮೇಲು ಮಾಡಿದೆ.  ಫಿಲ್ಟರ್ ಗಳು  ನೀರಿನ  ಕ್ಯಾಲ್ಯಿಯಮ್ ಮತ್ತು ಮ್ಯಾಗ್ನೇಷಿಯಂಗಳನ್ನು ಸಹ ನಾಶ ಮಾಡುವುದರಿಂದ  ನೀರಿನಿಂದ ದೇಹಕ್ಕೆ ಸಹಜವಾಗಿ ಸಿಗಬೇಕಾದ ಪೋಷಕಾಂಶಗಳು ಸಿಗುವುದೇ ಇಲ್ಲ.  ಇದು ದೀರ್ಘಕಾಲದಲ್ಲಿ ದೇಹದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ.

     ಅಮೆರಿಕ, ಜರ್ಮನಿ ಮತ್ತು ರಷ್ಯಾಗಳು  ಈಗಾಗಲೇ   RO ನೀರಿಗೆ ಗುಡ್ ಬೈ ಹೇಳಿವೆ. ಅವು ಈಗ ನೀರಿನ ಶುದ್ದತಗೆ ಆಕ್ಟಿವೇಟಡ್ ಕಾರ್ಬನ್ ಬಳಸುತ್ತಿವೆ. ಆದರೆ ಭಾರತದಂಥ ದೇಶದಲ್ಲಿ ಇನ್ನೂ ಕೈಗಾರಿಕೆ ಮತ್ತುಬಳಕೆಗ  RO  ನೀರನ್ನೇ ಬಳಸುತ್ತಿವೆ.

    ಈಗ ನಮ್ಮ ನಗರಗಳನ್ನು ನೋಡಿ ನಲ್ಲಿಯಲ್ಲಿ ಬರುವ ನೀರು ಮನೆಯ ಮೇಲಿನ ಟ್ಯಾಂಕ್ ನಲ್ಲಿ ಸಂಗ್ರಹವಾಗುತ್ತದೆ.  ಅದನ್ನು ಕುಡಿಯಲು ಯೋಗ್ಯವಾಗಬೇಗಾಕದರೆ ಅದು RO ಫಿಲ್ಟರ್ ನಿಂದಲೇ ಹಾದು ಬರಬೇಕಾದ ಸ್ಥಿತಿ ಇದೆ.  ಶೇಖರಿಸಿ ಇಟ್ಟ ನೀರು ಸಹಜವಾಗಿ ಶಕ್ತಿ ಹೀನವಾಗಿರುತ್ತದೆ. ಇನ್ನು ಇದು RO ಟ್ರೀಟ್ ಗೆ ಒಳಗಾದಗ ಇದ್ದ ಬದ್ದ ಶಕ್ತಿಯೆಲ್ಲಾ ಕಳೆದು ಹೋಗುತ್ತದೆ.   ಹುಟ್ಟಿದಾಗಿನಿಂದ ಇಂಥ  ನೀರನ್ನೇ ಕುಡಿದ ಮಕ್ಕಳ ಆರೋಗ್ಯ ಮೇಲೆ ಇದು ಖಂಡಿತವಾಗಿಯೂ  ಪರಿಣಾಮ ಬೀರುತ್ತದೆ ಎಂದು  ವೈದ್ಯರೊಬ್ಬರ ಹೇಳಿಕೆಯನ್ನು ದಿ ಟೈಮ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

    RO ನೀರಿನ ಬಗ್ಗೆ  ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೂಡ ಕೂಡ ದನಿ ಎತ್ತಿದೆ.ಪ್ರತಿ ಒಂದು ಲೀಟರ್ ನೀರಿನಲ್ಲಿ  ಟೋಟಲ್ ಡಿಸ್ಲಾವಡ್ ಸಾಲಿಡ್ 500 ಮಿಲಿಗ್ರಾಂ ಗಿಂತ ಕಡಿಮೆ ಇರುವೆಡೆ ನೀರಿಗೆ  RO ಟ್ರೀಟ್ ಮೆಂಟ್ ಅಗತ್ಯ ಇಲ್ಲ ಎಂದಿದೆ. 500 ಮಿಲಿಗ್ರಾಂಗಿಂತ ಕಡಿಮೆ ಟಿಡಿಎಸ್ ಇರುವ ಕಡೆ  RO ವಾಟರ್ ಫ್ಯೂರಿಫೈಯರ್ ಗಳ ಬಳಕೆ ನಿಷೇಧಿಸಿ ಆದೇಶ ಹೊರಡಿಸುವಂತೆ ಕೇಂದ್ರ ಪರಿಸರ  ನಿಯಂತ್ರಣ ಮಂಡಳಿಗೆ  ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೀಡಿದ್ದ ಸೂಚನೆಗೆ ತಡೆಯಾಜ್ಳೆ ನೀಡಿದೆ.

    ಕಾನೂನು ಸಮರಗಳು ಒತ್ತಟ್ಟಗಿರಲಿ. ಹಾಗಾದರೆ ಶುದ್ಧ  ಸುರಕ್ಷಿತ ನೀರು ಪಡೆಯುವುದು ಹೇಗೆ ಎಂಬ ಪ್ರಶ್ನೆ ಏಳುವುದು ಸಹಜ.  ಹಾಗೆಂದು ನಾವು  ನಲ್ಲಿಯಲ್ಲಿ ಬರುವ ನೀರನ್ನೇ ನೇರವಾಗಿ  ಸೇವಿಸಲು ಆಗುತ್ತದೆಯೇ ? ಅದು ಇನ್ನೊಂದು ರೀತಿಯ ತೊಂದರೆಯನ್ನು ಆಹ್ವಾನಿಸಿದಂತೆ ಆಗುತ್ತದೆ.  ನಗರಪಾಲಿಕೆಗಳು ಸರಬರಾಜು ಮಾಡುವ ನೀರಿನ ಕೊಳುವೆಗಳು ಸುರಕ್ಷಿತ ಎಂದು ನಾವು ಎಷ್ಟರ ಮಟ್ಟಗೆ ಭಾವಿಸಬಹುದು. ಹಲವೆಡೆ  ಡ್ರೈನೇಜ್ ಪೈಪ್ ಹಾಗೂ ನೀರು ಸರಬರಾಜು ಪೈಪ್ ಬೆಸೆದು ಕೊಂಡಿರುವುದು ಭಾರತದಂಥ ದೇಶದಲ್ಲಿ ಅಪರೂಪವೇನು ಅಲ್ಲ.  ಇಂಥ ನೀರಿನಲ್ಲಿ ಶಕ್ತಿ ಇರಬಹುದು . ಆದರೆ ಶಕ್ತಿಯ ಜೊತಗೆ ರೋಗಾಣುಗಳು ಇರುತ್ತವಲ್ಲ. ಹೀಗಾಗಿ ಇಲ್ಲಿ ಎರಡು ಪ್ರಶ್ನೆಗಳು ಎದುರಾಗುತ್ತವೆ.

    1. ನೀರು ಶುದ್ಧವಾಗಿರಬೇಕು. ಅದರಲ್ಲಿ  ರೋಗಾಣುಗಳು ಇರಬಾರದು.
    2. ರೋಗಾಣು ಮುಕ್ತ ನೀರು  ನೀರಿನ ಸಹಜ ಗುಣಗಳನ್ನು ಕಳದುಕೊಳ್ಳಬಾರದು .

    ಈ ಎರಡು ಪ್ರಶ್ನೆಗಳಿಗೆ ನಮ್ಮಲ್ಲಿರುವ ಉತ್ತರ ಒಂದೇ ಅದು ಹೊಸ ಸಂಶೋಧನೆ ಜೀವ. (JIVA WATER) ಈ ಶತಮಾನದ ಕ್ರಾಂತಿಕಾರಿ ಆಿವಿಷ್ಕಾರ ವಾದ ಜೀವನನ್ನು ಬಳಸುವುದರಿಂದ ಶುದ್ಧ ಹಾಗೂ ನೀರಿನ ಎಲ್ಲಾ ಸಹಜ ಗುಣಗಳನ್ನು ಹೊಂದಿದ ಶಕ್ತಿ ತುಂಬಿದ ನೀರನ್ನು ನಾವು ಪಡೆಯಬಹುದು. ಜೀವ-JIVA- ಎನ್ನುವುದು ಒಂದು ವಿಶಿಷ್ಟ ಸರಳ ಸಾಧನ. ನೀರನ್ನು ಹಿಡಿದಿಡದೆ ಅದನ್ನು ಸ್ವತಂತ್ರವಾಗಿ ಹರಿಯಬಿಟ್ಟಾಗ ಅದರಲ್ಲಿ ಶಕ್ತಿ ಸಂಚಯವಾಗುತ್ತದೆ ಎಂಬ ಸರಳ ಭೌತಶಾಸ್ತ್ರದ ನಿಯಮದ ಅನ್ವಯ ಸಿದ್ಧಗೊಂಡ  ಸಾಧನ. ಹಲವು ಪರೀಕ್ಷೆಗಳನ್ನು ಎದುರಿಸಿ ಅದರಲ್ಲಿ ಜಯಿಸಿದ ಚಮತ್ಕಾರಿ ಸಾಧನ. ನಮ್ಮ ವೇದಗಳಲ್ಲಿ ಅಡಗಿರುವ ಸೂತ್ರದ ಮೇಲೆ ಸಿದ್ಧಗೊಂಡ ಸಾಧನ. ( ಜೀವ ಬಗ್ಗೆ ಅರಿಯಲು ಈ ಲೇಖನವನ್ನು ಓದಿ: JIVA WATER:ನೀವು ಸೇವಿಸುವ ನೀರಿನಲ್ಲಿ ಜೀವ ಇದೆಯೇ ? ನೀರಿಗೆ ಜೀವ ತುಂಬುವ ಜೀವ )

    ಆರೋಗ್ಯದ ಸಮಸ್ಯೆಗಳಿಗೆ ಯಾಮಿ ಪರಿಹಾರ

    ಯಾಮಿ-ವಿಪಾಸ – ಜಾಹ್ನವಿ- ದಿಹಂಗ ಈ ನಾಲ್ಕು ಮಾದರಿಯಲ್ಲಿ ಸಿದ್ಧಗೊಂಡ ಜೀವ ಸಾಧನದಲ್ಲಿ ಯಾಮಿ ನಮ್ಮ ಆರೋಗ್ಯದ ಸಮಸ್ಯೆಗಳಿಗೆ ಉತ್ತರ ಹೇಳಬಲ್ಲದು. ಜೀವದಿಂದಲೇ ಸಾಗಿ ಬಂದ ನೀರಿಗೆ ಶಕ್ತಿ ಸಂಚಯವಾಗುವುದರಿಂದ ಸಹಜವಾಗಿಯೇ ಈ ನೀರಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ.

    ಯಾಮಿ

    ಬೆಂಗಳೂರಿನಂಥ ನಗರದಲ್ಲಿ ನಲ್ಲಿಯ ನೀರಿಗೆ RO ಟ್ರೀಟ್ ಮೆಂಟ್ ಅಗತ್ಯ ಇರುವುದಿಲ್ಲ. ಇಲ್ಲಿನ ನೀರಿಗೆ UV ಟ್ರೀಟ್ ಮೆಂಟ್ ಸಾಕಾಗುತ್ತದೆ. ಆದರೆ ಈ ನೀರು ಜೀವ-JIVA- ಸಾಧನದ ಮೂಲಕ ಹಾದು ಬಂದರೆ ಅದು ನೀರಿನ ಸಹಜ ಶಕ್ತಿಯನ್ನು ಸಂಪಾದಿಸುತ್ತದೆ. ಒಂದೆಡೆ UV ಟ್ರೀಟ್ ಮೆಂಟ್ ಮೂಲಕ ನೀರು ಬ್ಯಾಕ್ಟೀರಿಯಾ ಮುಕ್ತವಾಗಿದೆ. ಆದರೆ ಅದರಲ್ಲಿ ಜೀವ ಇರುವುದಿಲ್ಲ. ಆ ನೀರು ಜೀವ ಸಾಧನದ ಮೂಲಕ ಸಾಗಿದಾಗ ನೀರಿನ ಎಲ್ಲಾ ಸಹಜ ಗುಣಗಳು ಮರಳಿ ಸಂಚಯವಾಗುತ್ತದೆ. ಅಂದರೆ ಸೇವಿಸಲು ಈ ನೀರು ಫರ್ಫೆಕ್ಟ್. ಮಂಗಳೂರಿನಂಥ ಸಮುದ್ರ ತೀರದಲ್ಲಿ ನೀರಿಗೆ RO ಟ್ರೀಟ್ ಮೆಂಟ್ ಅಧಿಕವಾಗಿರುತ್ತದೆ. ಇಂಥ ನೀರನ್ನು ಎರೆಡೆರಡು ಬಾರಿ ಜೀವ ಮಾಡಿದಾಗ ನೀರಿನ ಸಹಜ ಶಕ್ತಿ ಮರುಕಳಿಸುತ್ತದೆ. ನಿಮ್ಮ ಯಾವುದೇ ನೀರಿನ ಫಿಲ್ಟರ್ ಗೆ ಯಾಮಿ ಸಾಧನ ಅಳವಡಿಸಿಕೊಳ್ಳಿ .

    ಬೆಂಗಳೂರಿನಂಥ ಊರಿನಲ್ಲಿ ಜೀವ ನೀರಿನಿಂದ ಆರೋಗ್ಯ ಸುಧಾರಿಸಿದ, ಕೂದಲು ಉದುರುವುದು ಕಡಿಮೆಯಾದ ಅನೇಕ ಉದಾಹರಣೆಗಳು ಸಿಗುತ್ತಿವೆ. ಹೀಗಾಗಿ ಜೀವ ನೀರು ಪರಿಶುದ್ಧ, ಆರೋಗ್ಯಕರ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ.

    ನಾವು ಕುಡಿಯುವ ನೀರು ಶುದ್ಧವಾಗಿರಲಿ, ಶಕ್ತಿಯುತ್ತವಾಗಿರಲಿ ಎಲ್ಲಕಿಂತ ಹೆಚ್ಚಾಗಿ ಅದರಲ್ಲಿ ಜೀವ ಇರಲಿ. ವಿಶ್ವ ಜಲದಿನದಂದು ಇದೇ ನಮ್ಮ ಸಂಕಲ್ಪವಾಗಲಿ.


    ಜೀವ ಎಲ್ಲಿ ಸಿಗುತ್ತದೆ, ಬಳಕೆ ಹೇಗೆ ಇತ್ಯಾದಿ ಮಾಹಿತಿ ಅಗತ್ಯ ವಿದ್ದಲ್ಲಿ 9945949043 ಈ ನಂಬರಿಗೆ ವಾಟ್ಸಾಪ್ ಮಾಡುವ ಮೂಲಕ ಪಡೆಯಬಹುದು


    ಡಾ.ಕೃಷ್ಣ ಮಾದಪ್ಪ ಅವರು ಮೆಕ್ಯಾನಿಕಲ್ ಮತ್ತು ಇಂಡಸ್ಟ್ರಿಯಲ್  ಎಂಜಿನಿಯರ್ . ನಿಸರ್ಗದ ಥರ್ಮೋಡೈನಮಿಕ್ಸ್ ಮತ್ತು ಕ್ವಾಂಟಂ ಆಯಾಮದಿಂದ ಸ್ಫೂರ್ತಿ ಪಡೆದ ಅವರು ಕಳೆದ 25 ವರ್ಷಗಳಿಗೂ ಮೇಲ್ಪಟ್ಟು ಜೈವಿಕ-ಶಕ್ತಿಯ ವಿಜ್ಞಾನಗಳನ್ನು ಆವಿಷ್ಕರಿಸುತ್ತಿದ್ದಾರೆ. ಯುಎಸ್‌ಎಯ ಎಸೆನ್ಸ್ ಆಫ್ ಲೈಫ್‌ನ ಸಂಸ್ಥಾಪಕ ಮತ್ತು ಸಿಇಒ ಕೂಡಾ ಆಗಿದ್ದಾರೆ ಹಾಗೂ ಯುಎಸ್‌ಎಯ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಸ್ಪಿರಿಚುಯಾಲಿಟಿ ಅಂಡ್ ಸಸ್ಟೇನಬಿಲಿಟಿಯ  ಅಧ್ಯಕ್ಷ ಹಾಗೂ ಸಹ-ಸಂಸ್ಥಾಪಕರೂ ಆಗಿದ್ದಾರೆ. ಅವರು ಸೈಕೊನ್ಯೂರೊಬಿಕ್ಸ್ ಅಥವಾ ‘ಬೆಳಕಿನ ವಿಜ್ಞಾನ’ ಮತ್ತು ಯೋಗದಲ್ಲಿ ಪಿಎಚ್.ಡಿ ಹೊಂದಿದ್ದಾರೆ. ಅರ್ಜೆಂಟೀನಾದ ರೋರಿಕ್  ಟ್ರೀಟಿಯು ಗ್ಲೋಬಲ್ ಅಂಬಾಸಡರ್ ಆಫ್ ಪೀಸ್ ಪುರಸ್ಕಾರ ನೀಡಿ ಗೌರವಿಸಿದೆ. ನೀರಿಗೆ ಜೀವ ತುಂಬುವ ಜೀವ ಸಾಧನ ಇವರದೇ ಸಂಶೋಧನೆ.

    spot_img

    More articles

    7 COMMENTS

    1. ಉಪಯುಕ್ತ ಲೇಖನ, ಸ್ಪಷ್ಟ ಅಂಕಿಅಂಶಗಳ ಮೂಲಕ ವಾಸ್ತವಾಂಶ ಬಿಚ್ಚಿಟ್ಟಿದೆ. ನಮ್ಮ ನೀರು ಎಷ್ಟು ಸುರಕ್ಷಿತ ಅನ್ನುವ ಬಗ್ಗೆ ಸಂಶೋಧನಾ ವರದಿ ನೀಡಿದೆ. ಪರಿಹಾರ ರೂಪವಾಗಿ ಜೀವಾ ಸಾಧನ ಪರಿಚಯಿಸಿದೆ. ಈ ಸಾಧನ ಎಲ್ಲರಿಗೆ ಲಭ್ಯವಾಗಲಿ ಎಂಬುದೇ ನಮ್ಮ ಆಶಯ

    2. RO ನೀರಿನ ಬಗ್ಗೆ ಕಣ್ತೆರಿಸಿದ ಲೇಖನ. ಜೊತೆಗೆ ಜೀವ ಹೇಗೆ ಉಪಯೋಗಕಾರಿ ಎಂಬುದನ್ನು ತಿಳಿಸಿದೆ.ಕೃಷ್ಣ ಮಾದಪ್ಪ ಅವರಿಗೆ ಧನ್ಯವಾದ

    3. ಆರ್ ಓ ನೀರಿನ ಬಗ್ಗೆ ತುಂಬಾ ಉಪಯುಕ್ತ ಮಾಹಿತಿ ನೀಡಿದ ಲೇಖನ.ಅಷ್ಟೇ ಅಲ್ಲದೆ ಜೀವ ಸಾಧನಾ ಎಷ್ಟು,ಹೇಗೆ ಉಪಯೋಗಕಾರಿ ಎಂಬುದನ್ನು ತಿಳಿಸಿದ್ದಾರೆ.ಆದರೆ ಇದು ಎಲ್ಲರಿಗೂ ಸಿಗುವಂತಾಗಬೇಕು. ಇಂತಹ ಉತ್ತಮ ಮಾಹಿತಿ ನೀಡಿದ ಡಾ.ಕೃಷ್ಣಮಾದಪ್ಪರವರಿಗೆ ಧನ್ಯವಾದಗಳು

    4. ಉಪಯುಕ್ತ ಲೇಖನ. ಜೀವ ಸಾಧನದ ಉಪಯೋಗ ತಿಳಿಸಿದ ಡಾ.ಕೃಷ್ಣ ಮಾದಪ್ಪನವರಿಗೆ ಧನ್ಯವಾದಗಳು.

    5. ತುಂಬಾ ಚೆನ್ನಾಗಿ ಈ ಮಾಹಿತಿಯನ್ನು ನೀಡುತ್ತದೆ ಈ‌ ಲೇಖನ.

    6. ನಗರದ ನಲ್ಲಿ ಸರಬರಾಜು ಮತ್ತು ಕರಾವಳಿ ಭಾಗದ ಲವಣಾಂಶ ಭರಿತ ನೀರಿನ ಶುದ್ಧೀಕರಣ ಹೇಗೆ ಭಿನ್ನ ಎಂಬ ಮಾಹಿತಿ ಉಪಯುಕ್ತ. ಲೇಖಕ ಕೃಷ್ಣ ಮಾದಪ್ಪ ಅವರಿಗೆ ಧನ್ಯವಾದಗಳು.
      ಅದೇ ರೀತಿ ಮಳೆ ಇಂದ ಸಂಗ್ರಹ ಮಾಡಿದ ನೀರಿನ ಶುದ್ಧೀಕರಣ ಹೇಗೆ? ro ಅಥವಾ uv ಯಾವುದು ಸೂಕ್ತ? ಅಲ್ಲಿಯೂ ‘ಜೀವ’ ಅಗತ್ಯ ಇದೆಯೇ? ಈ ಬಗ್ಗೆ ವಿವರ ನೀಡಿದ್ದರೆ ಉತ್ತಮ ಇತ್ತು.

    LEAVE A REPLY

    Please enter your comment!
    Please enter your name here

    Latest article

    error: Content is protected !!