ಬಹು ನಿರೀಕ್ಷಿತ ಎಲ್ ಐ ಸಿ ಐಪಿಒ ಗೆ ನಿರೀಕ್ಷೆ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾನುವಾರವು ಅರ್ಜಿ ಹಾಕಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ ಐ ಸಿ ಸಂಸ್ಥೆಯು ಸಂಗ್ರಹಿಸಿದ ಪ್ರೀಮಿಯಂ ಹಣವನ್ನು ಹೇಗೆ ವಿನಿಯೋಗಿಸುತ್ತದೆ ಎಂಬುದು ಗಮನಿಸಲೇಬೇಕಾದ ಅಂಶ.
ಎಲ್ ಐ ಸಿ ಆಫ್ ಇಂಡಿಯಾವು ತನ್ನ ವೈವಿಧ್ಯಮಯ ಯೋಜನೆಗಳ ಮೂಲಕ ಸಂಗ್ರಹಿಸಿದ ಪ್ರೀಮಿಯಂ ಹಣವನ್ನು ಬಳಸಿಕೊಂಡು ಅದರಿಂದ ಬಂದ ಇಳುವರಿಯನ್ನು ತನ್ನ ಪಾಲಿಸಿದಾರರಿಗೆ ಬೋನಸ್ ಮೂಲಕ ವಿತರಿಸುವುದಲ್ಲದೆ, ಪಾಲಿಸಿದಾರರಿಗೆ ಜೀವ ವಿಮೆಯನ್ನು ಒದಗಿಸಿ, ಕ್ಲೇಮ್ ಹಣವನ್ನು ವಾರಸುದಾರರಿಗೆ ತಲುಪಿಸುವ ಸಾಮಾಜಿಕ ಚಟುವಟಿಕೆಯನ್ನು ನಿರ್ವಹಿಸುತ್ತಿದೆ. ಜಾಗತೀಕರಣಕ್ಕೂ ಮುಂಚಿನದಿನಗಳಲ್ಲಿ, ಉದ್ಯಮಿಗಳಿಗೆ, ಉದ್ಯಮಗಳಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎತ್ತಿಕೊಳ್ಳುವ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಸಂಪನ್ಮೂಲವನ್ನು ಎಲ್ ಐ ಸಿ ಆಫ್ ಇಂಡಿಯಾ ಒದಗಿಸುತ್ತಿದೆ.
ಎಲ್ ಐ ಸಿಯ ಹೂಡಿಕೆಯು ಯಾವ ರೀತಿ ಹಂಚಲ್ಪಟ್ಟಿದೆ ಎಂಬುದನ್ನು ತಿಳಿಯೋಣ.
ಶೇ.37.45% ರಷ್ಟು ಹೂಡಿಕೆಯು ಕೇಂದ್ರ ಸರ್ಕಾರದ ಸೆಕ್ಯುರಿಟೀಸ್ ಗಳಲ್ಲಿ ವಿನಿಯೋಗಿಸಲ್ಪಟ್ಟರೆ,
ಶೇ.24.62% ರಷ್ಟು ರಾಜ್ಯ ಸರ್ಕಾರಗಳ ಸೆಕ್ಯುರಿಟೀಸ್ ಗಳಲ್ಲಿ ಹೂಡಿಕೆ ಮಾಡಲಾಗಿದೆ.
ಶೇ.24.78% ರಷ್ಟು ಈಕ್ವಿಟಿ ಷೇರುಗಳಲ್ಲಿ
ಶೇ.8.06% ರಷ್ಟು ಡಿಬೆಂಚರ್ ಗಳು, ಬಾಂಡ್ ಗಳು,
ಶೇ.0.78 ರಷ್ಟು ಮ್ಯುಚುಯಲ್ ಫಂಡ್, ಇ ಟಿ ಎಫ್ ಗಳಲ್ಲಿದೆ.
ಈ ಅಂಶಗಳು ಮೇಲ್ನೋಟಕ್ಕೆ ಪರಿಣಾಮಕಾರಿ ಎನಿಸುವುದಿಲ್ಲ. ಆದರೆ ಈ ಕೆಳಗಿನ ವಿವರಗಳನ್ನು ನೋಡಿದಾಗ ಓದುಗರ ಅನಿಸಿಕೆ ಖಂಡಿತಾ ಹಿತವಾಗಿರಬಹುದು.
ಎಲ್ ಐ ಸಿಯು ಶೇ.24.78 ರಷ್ಟು ಈಕ್ವಿಟಿಯಲ್ಲಿ ಹೂಡಿಕೆ ಮಾಡಿದೆ ಎಂಬ ಅಂಶವು ಹೆಚ್ಚು ಪರಿಣಾಮಕಾರಿಯಾಗಲು ಕಾರಣ ಈ ಅಂಶದಲ್ಲಿ ಅಡಕವಾಗಿರುವ ಕಂಪನಿಗಳ ಗುಣಮಟ್ಟ, ಗೌರವ, ಪ್ರತಿಷ್ಠೆ, ಸಾಧನೆ, ಕೊಡುಗೆಗಳು ಅಪಾರವಾಗಿದೆ. ಕೆಲವು ಕಂಪನಿಗಳನ್ನು ಇಲ್ಲಿ ಉದಾಹರಿಸೋಣ.
ಸಂಖ್ಯೆ | ಕಂಪನಿ | ಹೊಂದಿರುವ ಷೇರುಗಳು ಕೋಟಿ ರೂ.ಗಳಲ್ಲಿ | ಭಾಗಿತ್ವ ಪ್ರಮಾಣ |
1. | ಎನ್ ಎಂ ಡಿ ಸಿ | 41.48 | 14.16% |
2. | ಎನ್ ಟಿ ಪಿ ಸಿ | 100.42 | 10.00% |
3. | ಕೋಲ್ ಇಂಡಿಯಾ | 67.80 | 11.00% |
4. | ಆಯಿಲ್ ಇಂಡಿಯಾ | 12.70 | 11.7% |
5. | ಬಿ ಪಿ ಸಿ ಎಲ್ | 7.40 | 16.19 % |
ಇಂಡಿಯನ್ ಆಯಿಲ್ | 74.92 | 7.96% | |
7. | ಹೆಚ್ ಪಿ ಸಿ ಎಲ್ | 3.40 | 2.4% |
8 | ಒ ಎನ್ ಜಿ ಸಿ | 122.35 | 9.73% |
9 | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | 74.13 | 8.4% |
10 | ಮಾರುತಿ ಸುಜುಕಿ | 1.61 | 5.33% |
11 | ಐ ಸಿ ಐ ಸಿ ಐ ಬ್ಯಾಂಕ್ | 44.59 | 7.92% |
12 | ರಿಲಯನ್ಸ್ ಇಂಡಸ್ಟ್ರೀಸ್ | 41.35 | 6.31% |
13 | ಕೋಟಕ್ ಮಹೀಂದ್ರ ಬ್ಯಾಂಕ್ | 10.49 | 5.29% |
14 | ಟಾಟಾ ಸ್ಟೀಲ್ | 7.90 | 6.47% |
15 | ಏಶಿಯನ್ ಪೇಂಟ್ಸ್ | 1.95 | 2.04% |
16 | ಅಲ್ಟ್ರಾಟೆಕ್ ಸೀಮೆಂಟ್ | 1.27 | 4.42% |
17 | ಐ ಟಿ ಸಿ | 195.02 | 15.84% |
18 | ಮಹೀಂದ್ರ ಅಂಡ್ ಮಹೀಂದ್ರ | 8.55 | 7.1% |
19 | ಬಜಾಜ್ ಆಟೋ | 2.03 | 7.03% |
20 | ಹೆಚ್ ಡಿ ಎಫ್ ಸಿ | 7.33 | 4.05% |
21 | ಟೈಟಾನ್ ಕಂಪನಿ | 2.79 | 3.15% |
22 | ಟಿ ಸಿ ಎಸ್ | 13.51 | 3.69% |
23 | ಲಾರ್ಸನ್ ಅಂಡ್ ಟೋಬ್ರೋ | 16.69 | 12.04% |
24 | ಕೆನರಾ ಬ್ಯಾಂಕ್ | 16.02 | 8.83% |
25 | ಸನ್ ಫಾರ್ಮಸ್ಯುಟಿಕಲ್ ಇಂಡಸ್ಟ್ರೀಸ್ | 13.98 | 5.83% |
ಈ ಪಟ್ಟಿಯು ಸೀಮಿತವಾಗಿದ್ದು ಇನ್ನೂ ಭಾರಿ ಉದ್ದವಾಗಿದ್ದು ಇವೆಲ್ಲದರ ಒಟ್ಟು ಮಾರ್ಕೆಟ್ ಮೌಲ್ಯವನ್ನು ನೋಡಿದಲ್ಲಿ ಅದು ಕಲ್ಪನಾತೀತ ಮಟ್ಟದ್ದಾಗಿರುತ್ತದೆ. ಇಂತಹ ಪ್ರಮುಖ ಕಂಪನಿಗಳಲ್ಲಿ ಭಾರಿ ಮೊತ್ತವನ್ನು ಹೂಡಿಕೆ ಮಾಡಿ ಆ ಕಂಪನಿಗಳ ಶ್ರೇಯೋಭಿವೃದ್ಧಿಗೆ ಕಾರಣವಾಗಿರುವ ಈ ಸಂಸ್ಠೆಯ ಸಾಮರ್ಥ್ಯವನ್ನರಿಯಬಹುದು. ಇಂತಹ ಬಹುಮುಖ ಹೂಡಿಕೆಯುಳ್ಳ, ಸುಭದ್ರ ಆರ್ಥಿಕತೆ ಹೊಂದಿರುವ ಕಂಪನಿಯನ್ನು ಇತ್ತೀಚಿನ ಖಾಸಗಿ ವಿಮಾ ಕಂಪನಿಗಳಿಗೆ ಹೋಲಿಸಲಾಗದು. ಸಧ್ಯದ ವಾತಾವರಣದಲ್ಲಿ ಇಂತಹ ಸಾಮರ್ಥ್ಯದ ಕಂಪನಿಯ ರೂ.10 ರ ಮುಖಬೆಲೆ ಷೇರು ರೂ.949 ಕ್ಕೆ ವಿತರಣೆ ಮಾಡುತ್ತಿರುವುದು ಉತ್ತಮ ಅವಕಾಶವೇ? ಎಂಬುದನ್ನು ನಿರ್ಧರಿಸಬಹುದು.
ಇಲ್ಲಿ ಕೆಲವು ಕಂಪನಿಗಳು ವಿತರಿಸುತ್ತಿರುವ ಲಾಭಾಂಶಗಳ ವಿವರಗಳನ್ನು ಪರಿಶೀಲಿಸಬಹುದು. ಇಂತಹ ಅನೇಕ ಕಂಪನಿಗಳು ವಿತರಿಸಬಹುದಾದ ಲಾಭಾಂಶಗಳ ಪ್ರಮಾಣ ಕೋಟಿಗಟ್ಟಲೆ ಷೇರುಗಳಿಗೆ ಲಭಿಸಬಹುದಾದ ಹಣದ ಇಳುವರಿ ಕಲ್ಪನಾತೀತವಾಗಿದೆ. ಈ ಅಂಶಗಳು ಹಿಂದಿನದಾಗಿದ್ದು ಮುಂದೆ ಪೇಟೆಯ ವಾತಾವರಣವನ್ನಾಧರಿಸಿ ಬದಲಾಗಬಹುದು ಎಂಬ ಅಂಶವನ್ನು ಗಮನದಲ್ಲಿರಿಸಬಹುದಾದ ಮುಖ್ಯ ಅಂಶ.
Name of Company | Dividends | Previous year Rs. |
BPCL | 5+5+ | 79.00 |
COAL INDIA | 9+ 5 + | 16.00 |
GAIL | 4+5+ buyback | 5.00 + buyback |
H P C L | 22.75 | |
I O C | 5 + 4 + | 12.00 |
IRCON ( 2) | 0.70+0.70 | 2.15 + 1:1 BONUS |
R V N L | 1.58 | 2.72 |
IRFC | 0.77+ | 1.05 |
N M D C (1) | 9.01 +5.73+ | 7.76 + BUY BACK |
N T P C | 4.00 + | 6.15 + BUYBACK |
P F C | 2.25+2.50+6.00+ | 10.00 |
POWER GRID CORP | 7 +5.50+ | 9.00 + 1: 3 BONUS |
OIL INDIA | 3.50+5.75+ | 5.00 |
R E C | 2.50+6.00 | 8.71 |
SAIL | 4.00+2.50 | 2.80 |
BALMER LAWRI INVESTMENTS | 38.00 (37.50 ಹಿಂದಿನವರ್ಷ) | |
SANOFI | 490.00 CD | 365.00 |
ITC | 5.25+ | 10.75 |
TATA STEEL | 51 | 25 |
CANARA BANK | 6.50 | — |
Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.