26.3 C
Karnataka
Saturday, November 23, 2024

    ವೃತ್ತಿಯಲ್ಲಿ ಉಪನ್ಯಾಸಕಿ ಪ್ರವೃತ್ತಿಯಲ್ಲಿ ಚಿತ್ರಕಲಾವಿದೆ

    Must read

    ಳಕೂರು ವಿ ಎಸ್ ನಾಯಕ

    ಕಲೆಯೆಂಬುದು ಯಾವ ರೀತಿಯಲ್ಲಿ ಬೇಕಾದರೂ ಪ್ರತಿಯೊಬ್ಬರನ್ನು ಆಕರ್ಷಿಸಬಹುದು. ಅದು ಹೇಗೆ ಯಾವಾಗ ಎಂದು ಹೇಳುವುದು ಅಸಾಧ್ಯ ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ಆಸಕ್ತಿ ಗುರಿ ಮತ್ತು ಸಾಧಿಸುವ ಛಲ.

    ಕೆಲವರು ಕಲೆಯನ್ನು ನೋಡಿ ಕಲಿತರೆ ಕೆಲವರಿಗೆ ಬಾಲ್ಯದಿಂದಲೇ ಅದು ಕರಗತವಾಗಿರುತ್ತದೆ. ಚಿಕ್ಕವಯಸ್ಸಿನಲ್ಲಿ ಶಾಲೆಗೆ ಹೋದಾಗ ಅಲ್ಲಿ ಬಿಳಿಯ ಹಾಳೆಯ ಮೇಲೆ ಗೀಚಿದ ಗೆರೆಗಳಿಂದ ಹಿಡಿದು ಮುಂದಿನ ದಿನಗಳಲ್ಲಿ ತಮಗರಿವಿಲ್ಲದ ವಿಭಿನ್ನವಾದ ಕಲಾಕೃತಿಗಳ ಗುಚ್ಛವನ್ನು ಕಲಾಸಕ್ತರ ಮಡಿಲಿಗೆ ನೀಡಿದಾಗ ಅದನ್ನು ನೋಡಿ ಅಭಿನಂದನೆಗಳ ಮಹಾಪೂರ ಬಂದಾಗ ಒಂದು ಕ್ಷಣ ತಮಗೆ ತಾವೇ ಹೆಮ್ಮೆ ಪಟ್ಟು ಕೊಂಡಿದ್ದು ಇದ್ದೇ ಇರುತ್ತದೆ.

    ಹೀಗೆ ಬಾಲ್ಯದಿಂದಲೇ ಕಲೆಯ ಬಗ್ಗೆ ಅಪಾರ ಆಸಕ್ತಿ ಕೊಡ ಮೂಡಿಸಿಕೊಂಡು ಬಂದ ಕಲಾವಿದೆ ಶ್ರೀಮತಿ ಜಯಶ್ರೀ ಶರ್ಮ. ವೃತ್ತಿಯಲ್ಲಿ ಉಪನ್ಯಾಸಕರಾದರು ಕೂಡ ಕಲೆಯ ಬಲೆಗೆ ಸಿಲುಕಿ ತಮ್ಮದೇ ಆದ ಕಲಾ ಜಗತ್ತನ್ನು ಸೃಷ್ಟಿಸಿಕೊಂಡವರು ಜಯಶ್ರೀ ಶರ್ಮರವರು. ತಾನು ನೋಡಿದ್ದನ್ನು ಅನುಭವಿಸಿದ್ದನ್ನು ಕುಂಚದಲ್ಲಿ ಅರಳಿಸಿ ಎಲ್ಲರೂ ಮೆಚ್ಚುವ ಕಲಾತ್ಮಕ ಚಿತ್ರಗಳನ್ನು ನೀಡಿರುವುದು ಮೆಚ್ಚುಗೆ ವಿಷಯ.

    ಬಾಲ್ಯದಲ್ಲಿ ಶಾಲಾ ದಿನಗಳಿಂದಲೇ ಆರಂಭವಾದ ಕಲಾಪ್ರೀತಿ ಮುಂದಿನ ದಿನಗಳಲ್ಲಿ ಹೆಮ್ಮರವಾಗಿ ಬೆಳೆಯಿತು. ಅಂದಿನಿಂದಲೇ ಅಪಾರವಾದ ಕಲಾಭಿಮಾನಿ ಯಾಗಿ ಕಲೆಯ ಬಗ್ಗೆ ವಿಶೇಷವಾದ ಕಾಳಜಿ ಹೊಂದಿ ಅದ್ಭುತವಾದ ಒಂದರ ಹಿಂದೊಂದು ಕಲಾಕೃತಿಗಳ ಗುಚ್ಛವನ್ನು ರಚಿಸಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಪ್ರಸಾದ್ ಕಲಾಶಾಲೆಯಲ್ಲಿ ಚಿತ್ರಕಲೆಯ ಬಗ್ಗೆ ತರಬೇತಿಯನ್ನು ಪಡೆದುಕೊಂಡು ನಂತರ 1994 ರಿಂದ 2015 ನಡುವೆ ಕರ್ನಾಟಕದ ಪುತ್ತೂರು, ಮಡಿಕೇರಿಯಲ್ಲಿ ವಿವಿಧ ಸಂಸ್ಥೆಗಳ ಮೂಲಕ ಐದು ಬಾರಿ ಕಲಾಪ್ರದರ್ಶನವನ್ನು ನೀಡಿದ ಹಿರಿಮೆ ಇವರದು. ಜಲವರ್ಣ ಮತ್ತು ತೈಲವರ್ಣದ ಕಲಾಕೃತಿಗಳು ನಿಜಕ್ಕೂ ಕೂಡ ಕಲಾಸಕ್ತರಿಗೆ ಅದ್ಭುತವಾದ ಅನುಭವವನ್ನು ನೀಡುವುದರಲ್ಲಿ ಸಂದೇಹವಿಲ್ಲ.

    ಒಂದಕ್ಕಿಂತ ಒಂದು ವಿಭಿನ್ನ ಕಲಾಕೃತಿಗಳು ವಿಶೇಷವಾದ ಅನುಭವದ ಜೊತೆಗೆ ಅದ್ಭುತವಾದ ವಿಚಾರಗಳನ್ನು ತಿಳಿಸುವ ಕಾರ್ಯವನ್ನು ಮಾಡುತ್ತವೆ. ಮೈಕ್ರೋಬಯಾಲಜಿ ಎಲ್ಲಿ ಉಪನ್ಯಾಸಕರಾದರು ಕೂಡ ಕಲೆಯ ಬಗ್ಗೆ ಅಪಾರವಾದ ಗಮನವನ್ನು ಹೊಂದಿ ಒಂದಕ್ಕಿಂತ ಒಂದು ಅದ್ಭುತ ಕಲಾಕೃತಿಗಳನ್ನು ರಚಿಸಿರುವ ಕೀರ್ತಿ ಅವರಿಗೆ ಸಲ್ಲುತ್ತದೆ.
    ಇವರು ಮಂಗಳೂರಿನ ಪ್ರಸಾದ್ ಸ್ಕೂಲ್ ಆಪ ಆರ್ಟ್ ನಲ್ಲಿ ಭಾವನಾ ಎಂಬ ಏಕವ್ಯಕ್ತಿ ಕಲಾ ಪ್ರದರ್ಶನ. ಮೂಡಬಿದರೆಯ ಆಳ್ವಾಸ್ ನಲ್ಲಿ ಸೃಜನ ಚಿತ್ರಕಲಾ ಚಾವಡಿಯ ನೊಂದಾಯಿತ ಸದಸ್ಯರಾಗಿದ್ದಾರೆ. ರಾಜ್ಯಮಟ್ಟದ ಚಿತ್ತಾರ ಸ್ಪರ್ಧೆಯಲ್ಲಿ ಬಹುಮಾನ ವಿಜೇತರು, ಇವರು ವರ್ಣ ಸಿಂಚನ ಸಮೂಹಕಲಾಪ್ರದರ್ಶನ ಇದರ ಜೊತೆಗೆ ಹಲವಾರು ಆನ್ಲೈನ್ ಕಲಾಪ್ರದರ್ಶನದಲ್ಲಿ ಭಾಗವಹಿಸಿರುವುದು ವಿಶೇಷ.

    ಇವರ ಉತ್ತಮ ಕಲಾ ಸೇವೆಗಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ : ಡಿ. ವೀರೇಂದ್ರ ಹೆಗ್ಗಡೆಯವರಿಂದ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಇತ್ತೀಚೆಗೆ ನಡೆದ ಉತ್ತರ ಪ್ರದೇಶ ದ ಝಾನ್ಸಿಯ ಮಣಿಕರ್ಣಿಕ ಆರ್ಟ್ ಗ್ಯಾಲರಿ ಯವರು ಮಹಿಳಾ ದಿನಾಚರಣೆಯ ನಿಮಿತ್ತ ಸಿದ್ದ ರಾಷ್ಟ್ರಮಟ್ಟದ ಆನ್ಲೈನ್ ಚಿತ್ರಕಲಾ ಸ್ಪರ್ಧೆಯಲ್ಲಿ ಇವರಿಗೆ ಮಣಿಕರ್ಣಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ವೃತ್ತಿಯಲ್ಲಿ ಉಪನ್ಯಾಸಕರಾದರೂ ಇವರನ್ನು ಆಕರ್ಷಿಸಿತು ಕಲಾ ಜಗತ್ತು ಇನ್ನು ಮುಂದೆ ಇವರ ಕುಂಚದಿಂದ ಅದ್ಭುತ ಕಲಾಕೃತಿಗಳು ಹೊರಹೊಮ್ಮಲಿ ಅಂತರಾಷ್ಟ್ರೀಯ ಮಟ್ಟದ ಕಲಾವಿದರಾಗಿ ಗುರುತಿಸಿಕೊಳ್ಳಲಿ.

    ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಪನ್ಯಾಸಕರಾಗಿರುವ ವಿ. ಎಸ್ . ನಾಯಕರ ಪೂರ್ಣ ಹೆಸರು ವೆಂಕಟದಾಸ್ ಎಸ್ . ನಾಯಕ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಅನೇಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಸಂಯೋಜಕರಾಗಿಯೂ ಪರಿಚಿತರು. ದೂರದರ್ಶನದಲ್ಲಿ ಗಾಂಧೀ ವಿಚಾರಧಾರೆ ಕುರಿತು ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಂಸ್ಥೆಗಳ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.



    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!