ಪ್ರಿಯ ಓದುಗರೇ,
ಎರಡು ವರ್ಷದ ಹಿಂದೆ ಇದೇ ದಿನ. ಆಗಷ್ಟೇ ಲಾಕ್ ಡೌನ್ ತೆರವಾಗಿ ಚಟುವಟಿಕೆಗಳು ಶುರುವಾಗುತ್ತಿದ್ದ ಸಮಯ. ವರ್ಕ್ ಫ್ರಮ್ ಹೋಮ್ ಗಳು, ಆನ್ ಲೈನ್ ತರಗತಿಗಳು , ಪರೀಕ್ಷೆ ನಡೆಯುವುದೋ ಇಲ್ಲವೋ ಗೊಂದಲ. ಆದರೆ ಸ್ವಲ್ಪ ದಿನದಲ್ಲೇ ಪರಿಸ್ಥಿತಿ ಮೊದಲಿನಂತೆ ಆಗುವ ಆಶಾ ಭಾವನೆಯಂತೂ ಇತ್ತು.
ಇಂಥ ಸಂದರ್ಭದಲ್ಲೇ ವರ್ಷದ ಹಿಂದೆ -ಮೇ 29,2020- ನಾನು ಕನ್ನಡಪ್ರೆಸ್.ಕಾಮ್ ಅನ್ನು ಶುರುಮಾಡಿದ್ದು. ಹಿರಿಯ ನಿರ್ದೇಶಕ ಯೋಗರಾಜ ಭಟ್ಟರು ಲೋಕಾರ್ಪಣೆಗೊಳಿಸಿದ್ದರು. ಆ ದಿನ ಬರೆದ ಸಂಪಾದಕೀಯದಲ್ಲಿ ಬರೆದಿದ್ದ ಕೆಲ ಸಾಲು ಹೀಗಿತ್ತು….ಶುದ್ಧ ಪತ್ರಿಕೋದ್ಯಮದ ಆಶಯದೊಂದಿಗೆ ಕನ್ನಡಪ್ರೆಸ್.ಕಾಮ್ ಆರಂಭವಾಗುತ್ತಿದೆ. ನಿಮ್ಮ ಬೆಂಬಲ ಸದಾ ಇರಲಿ. ಕೋವಿಡ್ ಕಾರ್ಮೋಡ ಬೇಗ ಸರಿಯಲಿ . ಎಲ್ಲೆಡೆ ಮತ್ತೆ ಸಂತಸ ಮೂಡಲಿ ಎಂಬ ಆಶಯ ದೊಂದಿಗೆ ಕನ್ನಡಪ್ರೆಸ್ . ಕಾಮ್ ಅನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ಒಪ್ಪಿಸಿಕೊಳ್ಳಿ. ಕಳೆದ ವರ್ಷವೂ ಇದೇ ಸ್ಥಿತಿ . ಆದರೆ ನಾವು ಎರಡನೇ ವರ್ಷ ಮುಗಿಸುವಷ್ಟರಲ್ಲಿ ಕೊರೋನಾ ಮಹಾಮಾರಿ ಒಂದು ಹಂತದ ತಹಬಂದಿಗೆ ಬಂದಿದೆ. ಇದೇ ಸಂತಸದ ವಿಷಯ.
ಕಳೆದ ವರ್ಷ ಕನ್ನಡಪ್ರೆಸ್.ಕಾಮ್ ನ ಸಹೋದರ ಪೋರ್ಟಲ್ english.kannadapress.com ಕೂಡ ಆರಂಭವಾಗಿ ಜನ ಮನ್ನಣೆ ಗಳಿಸಿತು. ಅದರ ಜೊತೆಗೆ ನಮ್ಮ ಯು ಟ್ಯೂಬ್ ಚಾನಲ್ ಕನ್ನಡಪ್ರೆಸ್ ಕೂಡ ಸಕ್ರಿಯವಾಯಿತು. ಈಗ ಆ ಚಾನಲ್ ನಲ್ಲಿ ಈಗ ನೂರಕ್ಕೂ ಹೆಚ್ಚು ವಿಡಿಯೋಗಳಿವೆ. ಈ ಚಾನಲ್ ಗೂ SUBSCRIBE ಆಗುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಲು ವಿನಂತಿ.
ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಮುಂದುವರಿಯಲಿ. ನಮ್ಮ ಯಾತ್ರೆಯೆ ಮೂರನೇ ವರ್ಷದ ಮೊದಲ ದಿನವಾದ ಇಂದು ಶುದ್ಧ ಪತ್ರಿಕೋದ್ಯಮಕ್ಕೆ ನಮ್ಮನ್ನು ಪುನಃ ಸಮರ್ಪಿಸಿಕೊಳ್ಳುತ್ತಿದ್ದೇವೆ. ನಿಮ್ಮ ಪ್ರತಿಕ್ರಿಯೆಗಳಿಗೆ ಎಂದಿನಂತೆ ಸದಾ ಸ್ವಾಗತ.
–ಶ್ರೀವತ್ಸ ನಾಡಿಗ್,ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ
ಎರಡು ಸಂವತ್ಸರವನ್ನು ಸಂಭ್ರಮಿಸಿ ಓದುಗರಿಗೆ ಹರ್ಷ ಕೊಟ್ಟು ಮೂರನೆ ವರುಷಕ್ಕೆ ಅ ಣಿ ಯಾಗಿರುವ ನಿಮಗೆ, ನಿಮ್ಮ ಸಿಬ್ಬಂದಿಗ ಳಿ ಗೆ ಶುಭಾಶಯಗಳು. 🌷👍👏