17.6 C
Karnataka
Wednesday, January 29, 2025

    ಪರಿಷ್ಕೃತ ಪಠ್ಯಗಳಿಗೆ ಹೊಸ ಸಂಪುಟ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    Must read

    CHITRADURGA JUNE 4
    ನಮ್ಮದು ಬಸವ ಪಥದ ಸರ್ಕಾರ. ಪಠ್ಯ ಪರಿಷ್ಕರಣೆಯಲ್ಲಿ ಏನಾದರೂ ವ್ಯತ್ಯಾಸವಿದ್ದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ, ವಾಸ್ತವಾಂಶದ ಆಧಾರದ ಮೇಲೆ ಪರಿಷ್ಕರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದರು.

    ಅವರು ಇಂದು ಹಿರಿಯೂರಿನ ದೇವರಕೊಟ್ಟ ಹೆಲಿಪ್ಯಾಡ್ ಗೆ ಬಂದಿಳಿದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

    ಪಠ್ಯಪುಸ್ತಕ ಸಮಿತಿಯ ಕೆಲಸ ಪೂರ್ಣಗೊಂಡಿದ್ದರಿಂದ ಸಮಿತಿಯನ್ನು ವಿಸರ್ಜನೆ ಗೊಳಿಸಲಾಗಿದೆ. ಪರಿಷ್ಕೃತ ಪಠ್ಯದ ಬಗ್ಗೆ ಹಲವಾರು ಸ್ವಾಮೀಜಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ನೀಡಿದ್ದು, ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ನಮ್ಮದು ಬಸವಪಥ ಸರ್ಕಾರ. ಬಸವಣ್ಣನವರ ಉತ್ತಮ ವಚನಗಳಿದ್ದು, ಅವುಗಳನ್ನು ಪರಿಶೀಲಿಸಿದ್ದೇನೆ. 2015 ರಲ್ಲಿ ಕಾಂಗ್ರೆಸ್ ಸರ್ಕಾರ ಪಠ್ಯ ಪರಿಷ್ಕರಣೆ ಮಾಡಿದ ಬರಗೂರು ರಾಮಚಂದ್ರಪ್ಪ ಸಮಿತಿ ಮತ್ತು ಈಗಿನ ಸಮಿತಿಗೆ ಕೇವಲ ಒಂದು ವಾಕ್ಯದ ವ್ಯತ್ಯಾಸವಿದ್ದು, ಉಳಿದಂತೆ ಲಿಂಗದೀಕ್ಷೆ ಸೇರಿದಂತೆ ಎಲ್ಲ ವಿಷಯಗಳು ಬರಗೂರು ರಾಮಚಂದ್ರಪ್ಪ ಅವರ ಪಠ್ಯದಲ್ಲಿಯೂ ಇದೆ ಎಂದರು.

    ಒಟ್ಟಾರೆ ಬಸವಣ್ಣ ನವರ ನಿಜ ಸ್ವರೂಪ ಹಾಗೂ ವಚನ ಸಾಹಿತ್ಯ ಪರಿಚಯ ಆಗಬೇಕು ಎಂಬುದು ಲ್ಲರ ಇಚ್ಛೆ. ಅದಕ್ಕಾಗಿ ಎಲ್ಲರ ಜತೆ ಸಮಾಲೋಚನೆ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

    ಹೆಡಗೆವಾರ್ ಅವರ ಪಠ್ಯವೂ ಇರಲಿದೆ. ಪರಿಷ್ಕೃತ ಪಠ್ಯಗಳಿಗೆ ಹೊಸ ಸಂಪುಟವನ್ನು ನೀಡಲಾಗುವುದು ಎಂದು ತಿಳಿಸಿದರು.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!