ತಮ್ಮ ಲೇಖನಗಳ ಮೂಲಕ ಕನ್ನಡಪ್ರೆಸ್ .ಕಾಮ್ ಓದುಗರಿಗೆ ಚಿರಪರಿಚಿತರಾಗಿರುವ ಶಶಿಕಲಾ ರಾವ್
ಅವರ ಚೊಚ್ಚಲ ಕೃತಿ ಪುನರಕ್ತಿ ಕಾದಂಬರಿ ಇದೇ ಜೂನ್ 18ರ ಶನಿವಾರ ಲೋಕಾರ್ಪಣೆಯಾಗುತ್ತಿದೆ. ಸುಚಿತ್ರ ಫಿಲಂ ಸೊಸೈಟಿ ಆವರಣದಲ್ಲಿ ಸಂಜೆ 4-30 ರಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ಹೆಸರಾಂತ ಕವಿ ವಿಮರ್ಶಕ ಡಾ.ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹೆಸರಾಂತ ನಿರ್ದೇಶಕ ಪಿ,ಶೇಷಾದ್ರಿ ಅವರು ಅಧ್ಯಕ್ಷತೆ ವಹಿಸಲಿದ್ದು, ಕನ್ನಡಪ್ರೆಸ್ .ಕಾಮ್ ಸಂಪಾದಕ ಶ್ರೀವತ್ಸ ನಾಡಿಗ್ ಮತ್ತು ನಿರೂಪಕಿ, ಕಲಾವಿದೆ ಅಪರ್ಣಾ ವಸ್ತಾರೆ.ಗಮುಖ್ಯ ಅತಿಥಿಯಾಗಿ ಭಾಗವಹಿಸಸಿದ್ದಾರೆ.
ಲೇಖಕಿ ಶಶಿಕಲಾ ರಾವ್ ಅವರು ಕೃತಿ ಬಿಡಗಡೆಗೂ ಮುನ್ನ ಕನ್ನಡಪ್ರೆಸ್ .ಕಾಮ್ ಜೊತೆ ಮಾತನಾಡಿ ತಮ್ಮ ಸಾಹಿತ್ಯ ಯಾತ್ರೆಯನ್ನು ವಿವರಿಸಿದ್ದಾರೆ.
ಲೇಖನ ಬರೆಯುವುದಕ್ಕೂ ಕಾದಂಬರಿ ಬರೆಯುವುದಕ್ಕೂ ಇರುವ ವ್ಯತ್ಯಾಸ
ಲೇಖನಗಳನ್ನು ಬರೆದು ಸಂಪಾದಿಸುವುದಕ್ಕು ಕಾದಂಬರಿಯನ್ನು ಸಂಪಾದಿಸುವುದಕ್ಕೂ ಅಜಗಜಾಂತರವ್ಯತ್ಯಾಸವಿದೆ. ಲೇಖನಗಳು ಪ್ರಬಂಧಗಳು ಅಥವಾ ಸಣ್ಣಕಥೆಗಳನ್ನು ಬರೆಯುವುದು ಮತ್ತು ಸಂಪಾದಿಸುವುದು ಸುಲಭ. ಇಲ್ಲಿ ಕಾಲದ ಮಿತಿ ಇರುತ್ತದೆ. ಆದರೆ ಕಾದಂಬರಿಯಲ್ಲಿ ಪಾತ್ರಗಳು ಒಂದಾದ ಮೇಲೆ ಒಂದು ಸೇರಿಕೊಂಡು ಬರುತ್ತಾ ಕಾಲದ ಮಿತಿ ಇರುವುದಿಲ್ಲ. ಹತ್ತಾರು ಪಾತ್ರವನ್ನು ಕಥೆಯಲ್ಲಿ ತಂದು ಎಲ್ಲರನ್ನೂ ಒಂದು ಸೂತ್ರದಲ್ಲಿ ಬಂಧಿಸಿ ಅವರವರ ಪಾತ್ರಗಳನ್ನು ಭೂತಕಾಲದಿಂದ ವರ್ತಮಾನಕಾಲದವರಿಗೂ ವಿಸ್ತರಿಸಿ ವಿಚಕ್ಷಣೆಯಿಂದ ಎಲ್ಲರನ್ನೂಕಥೆಯ ಅಂತ್ಯದವರಿಗೂ ಕುತೂಹಲಕಾರಿಯಾಗಿರುವಂತೆ ಬರೆಯುವುದು ಸಾಕಷ್ಟು ಕಷ್ಟದ ಕೆಲಸವೆ..
ಕಾದಂಬರಿ ಬರೆಯಲು ಪ್ರೇರಣೆ
ಪುನರುಕ್ತಿಯಲ್ಲಿ ಬಂದಿರುವ ಎಲ್ಲಾ ಪಾತ್ರಗಳು ನನ್ನ ಮನದಂಗಳದಲ್ಲಿ ಓಡಾಡುತ್ತ ಕಾಡುತ್ತಿದ್ದವು. ಒತ್ತಡದಿಂದ ಪಾತ್ರಗಳೇ ರೂಪುರೇಖೆಗಳನ್ನು ರಚಿಸಿಕೊಂಡು ಮೂರ್ತಿಸ್ವರೂಪರಾಗಿ ಅನಾವರಣಗೊಂಡಿವೆ
ಕಾದಂಬರಿಯಲ್ಲಿ ಬಂದಿರುವ ಮಹಿಳಾ ಪಾತ್ರಗಳ ಬಗ್ಗೆ
ಕಾದಂಬರಿಯಲ್ಲಿ ಬಂದಿರುವ ಡಾಕ್ಟರ್ ಭವಾನಿ, ಸೀತೆ, ಸುಜಯ, ಶ್ಯಾಮಲಬಾಯಿ(ನಿರುಪಮ) ಎಲ್ಲರೂ ಒದಗಿ ಬಂದ ಕಷ್ಟಗಳನ್ನು ಎದುರಿಸಿ, ಸೋಲದೆ ಸಾರ್ಥಕತೆ ಪಡೆಯುತ್ತಾರೆ. ಹಟದ ಸ್ವಭಾವವಿದ್ದ ಭವಾನಿ ಜೀವನದಲ್ಲಿ ಅತ್ಯಂತ ಸುಖದಲ್ಲಿದ್ದಾಗ ತನ್ನ ಗಂಡ ವಿನೋದನನ್ನು ಕಳೆದುಕೊಂಡು ಜೀವನದಲ್ಲಿ ಸಂಕಟನೋವು ಅನುಭವಿಸುತ್ತಾಳೆ. ಮುಗ್ದ ಸೀತೆಯನ್ನು ಜನ ಸಂಶಯದಿಂದ ನೋಡುತ್ತಾರೆ. ಜೀವನಪೂರ್ತಿ ತಾನೊಬ್ಬ ಕೊಲೆಗಾತಿಯೆಂದು ನರಳುತ್ತಾಳೆ.ಅತ್ಯಂತ ಬುದ್ಧಿವಂತಳಾದ ಸುಜಯ ಸಲೀಲನ ಸುಂದರ ರೂಪಕ್ಕೆ ಮೆಚ್ಚಿಕೊಂಡು ಜೀವನದಲ್ಲಿ ಮುಗ್ಗರಿಸುತ್ತಾಳೆ. ಇದರ ಮಧ್ಯೆ ಶ್ಯಾಮಲ ಬಾಯಿ ತನ್ನನ್ನು ವೇಶ್ಯಾವಾಟಿಕೆಗೆ ಮಾರುತ್ತಾನೆಂದು ಗೊತ್ತಾದ ತಕ್ಷಣ ಧೈರ್ಯ ಸಾಹಸದಿಂದ ತಪ್ಪಿಸಿಕೂಳ್ಳುತ್ತಾಳೆ. ಇಲ್ಲಿ ಹೆಣ್ಣಿಗೆ ಬಂದೊದಗಿದ ಕಷ್ಟಗಳನ್ನು ಹೀಗೆ ಧೈರ್ಯದಿಂದ ಎದುರಿಸಿ ಹೊಸ ದಾರಿ ಕಂಡುಕೊಳ್ಳುತ್ತಾರೆ. ಮುಖ್ಯ ಸ್ತ್ರೀ ಪಾತ್ರಗಳೆಲ್ಲಾ ಶಕ್ತಿ ಸ್ವರೂಪಣಿಯಾಗಿದ್ದಾರೆ.
ಪುನರುಕ್ತಿ ಎಂದು ಹೆಸರಿಡಲು ಕಾರಣ
ಮಹಿಳೆಯರೆಲ್ಲಾ ಭಾವನಾತ್ಮಕವಾಗಿ ನೊಂದಿರುವುದು ಪುನಃ ಪುನಃ ಕಾಣಿಸಿತು. ಅದ್ದರಿಂದ ಈ ಕಾದಂಬರಿಯ ಹೆಸರೂ ಪುನರುಕ್ತಿ ಆಯಿತು.
ಬೆಂಗಳೂರಿನ ಸಂಪದ ಪಬ್ಲಿಕೇಶನ್ ಪುಸ್ತಕವನ್ನು ಪ್ರಕಟಿಸಿದೆ. ಆಸಕ್ತರು 9880593349/ 08026612655 ಫೋನ್ ಮಾಡಿದರೆ ಪುಸ್ತಕ ಮನೆಗೆ ತಲುಪುತ್ತದೆ.
ಶಶಿಕಲಾ ಅವರಿಗೆ ಅಭಿನಂದನೆಗಳು
Thank u
ಪುನರುಕ್ತಿ ಕಾದಂಬರಿ ಹೆಸರೇ ಪುಸ್ತಕ ಓದಲು ಆಸಕ್ತಿಯನ್ನುಹು ಟ್ಟಿ ಸುತ್ತಿದೆ. ಅಭಿನಂದನೆಗಳು ಮೇಡಂ.👏
ವಂದನೆಗಳು.