21.7 C
Karnataka
Tuesday, December 3, 2024

    ಬೆಂಗಳೂರು ಸ್ಕೂಲ್ ಆಫ್ ವಿಜುಅಲ್ ಆರ್ಟ್ಸ್ ವಿದ್ಯಾರ್ಥಿಗಳ ಕಲಾಪ್ರದರ್ಶನ

    Must read

    ವಿ ಎಸ್ ನಾಯಕ

    ಕಲೆ ಎಂಬುದು ಎಂಥವರನ್ನಾದರೂ ಹೇಗಾದರೂ ಆಕರ್ಷಿಸಬಹುದು. ಚಿಕ್ಕವಯಸ್ಸಿನಿಂದ ಹುಟ್ಟಿದ ಕಲಾಪ್ರೀತಿ ನಂತರ ಹೆಮ್ಮರವಾಗಿ ಮುಂದಿನ ದಿನಗಳಲ್ಲಿ ಕಲಾವಿದನಾಗಬೇಕು ಅದ್ಭುತವಾದ ಚಿತ್ರಗಳನ್ನು ಬಿಡಿಸಬೇಕು ಎಂಬ ಹಂಬಲ ಇರುವುದು ಸಹಜ. ಕಲಾವಿದನಾಗ ಬೇಕಾದರೆ ಅದರ ಬಗ್ಗೆ ಅಪಾರವಾದ ಆಸಕ್ತಿ ಸರಿಯಾದ ಗುರಿ ಇದ್ದಾಗ ಮಾತ್ರ ಕೆಲಸವನ್ನು ಸುಲಭ ಮಾಡಿಕೊಳ್ಳಬಹುದು.

    ಅಂತಹ ರೀತಿಯ ಗುರಿಯನ್ನು ಹೊಂದಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಬೆಂಗಳೂರು ಸ್ಕೂಲ್ ಆಫ್ ವಿಜುವಲ್ ಆರ್ಟ್ ಸಂಜೆ ಕಾಲೇಜಿನಲ್ಲಿ ಕಲಿಯಬೇಕೆಂಬ ಆಸಕ್ತಿಯನ್ನು ಹೊಂದಿ ಹಲವಾರು ಕಲಾವಿದರು ಇಲ್ಲಿಗೆ ಬಂದು ಸೇರಿ ತಾವು ಎಂದು ಅರಿಯದ ವಿಭಿನ್ನವಾದ ವಿಶಿಷ್ಟವಾದ ಕಲಾವಿದರಾಗಿ ಹೊರಹೊಮ್ಮುತ್ತಿರುವ ವಿಶೇಷ. ಕಾಲೇಜಿನಲ್ಲಿ ಸೇರಿ ಅಂದಿನಿಂದ ಇಂದಿನ ವರೆಗೆ ಕಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ವಿಭಿನ್ನ ಕಲಾಪ್ರಕಾರಗಳನ್ನು ಕಲಿತು ವಿಸ್ಮಯಕಾರಿಯಾದ ಕಲಾ ಲೋಕವನ್ನೇ ಸೃಷ್ಟಿಸಿದ್ದಾರೆ. ಇಲ್ಲಿ ಇಷ್ಟು ವರ್ಷಗಳ ಕಾಲ ತಾವು ತಿಳಿದ ಕಲಿತ ಹಲವಾರು ವಿಚಾರಧಾರೆಗಳನ್ನು ವಿಭಿನ್ನ ಕಲಾಕೃತಿಗಳ ಮೂಲಕ ಕಲಾಸಕ್ತರ ಮಡಿಲಿಗೆ ಅರ್ಪಿಸಲು ಹೊರಟಿದ್ದಾರೆ. ಚಿತ್ರಕಲಾವಿದರ ಕುಂಚದಲ್ಲಿ ಮತ್ತು ಶಿಲ್ಪಗಳಲ್ಲಿ ಅದ್ಭುತವಾದ ಕಲಾಕೃತಿಗಳು ಮೂಡಿಬಂದಿರುವುದು ವಿಶೇಷ.

    ಈ ವಿದ್ಯಾರ್ಥಿಗಳ ಕಲಾಪ್ರದರ್ಶನ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ನಡೆಯಲಿದ್ದು ವಿದ್ಯಾರ್ಥಿಗಳ ಕೈಚಳಕದಲ್ಲಿ ಅರಳಿದ ವಿಭಿನ್ನವಾದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಟ್ಟಿರುವುದು ನಿಜವಾಗಿಯೂ ಶ್ಲಾಘನೀಯ. ಕಲಾ ಲೋಕವೇ ಧರೆಗಿಳಿದುಬಂದಂತೆ ಗೋಚರವಾಗುವ ಕಲಾಪ್ರದರ್ಶನ ಎಂಥವರಿಗಾದರೂ ಕೂಡ ಒಂದು ಅದ್ಭುತ ಕಲಾ ತಾಣಕ್ಕೆ ಆಡಿಯಿಟ್ಟ ಅನುಭವವಾಗುತ್ತದೆ. ಹಲವಾರು ವಿದ್ಯಾರ್ಥಿಗಳು ತಮಗೆ ಅನಿಸಿರುವ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಿದ್ದಾರೆ. ಇವರ ಅದ್ಭುತ ಕಲಾಪ್ರದರ್ಶನವನ್ನು ವೀಕ್ಷಿಸುವ ಭಾಗ್ಯ ತಮ್ಮ ಪಾಲಿಗೆ ಆಗಲಿದೆ. ತಮ್ಮ ಬಿಡುವಿನ ವೇಳೆಯನ್ನು ಚಿತ್ರಕಲಾ ಪರಿಷತ್ತಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಾ ಪ್ರದರ್ಶನವನ್ನು ವೀಕ್ಷಿಸಬಹುದು
    ದಿನಾಂಕ ಆಗಸ್ಟ್ 10 ನಿಂದ 18ವರೆಗೆ ನಡೆಯುವ ಈ ಕಲಾಪ್ರದರ್ಶನ ಉಚಿತ ಪ್ರವೇಶವಿದೆ

    ಪ್ರದರ್ಶನದ ಸ್ಥಳ:ಕರ್ನಾಟಕ ಚಿತ್ರಕಲಾ ಪರಿಷತ್ತು ಕಲಾ ಗ್ಯಾಲರಿ
    ಕುಮಾರಕೃಪಾ ರಸ್ತೆ ಬೆಂಗಳೂರು

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!