ಸುಮಾವೀಣಾ
ಉದಾತ್ತನೊಳ್ ಪುಟ್ಟದಲ್ತೆ ನೀಲಿರಾಗಂ- ನಾಗಚಂದ್ರ ಕವಿಯ ‘ರಾಮಚಂದ್ರ ಚರಿತ ಪುರಾಣ’ದ ಹದಿನಾಲ್ಕನೆಯ ಆಶ್ವಾಸದಲ್ಲಿ ರಾವಣನನ್ನು ಉದ್ದೇಶಿಸಿ ಹೇಳಿರುವ ಮಾತಿದು. ಇದು ರಾವಣನೆ ಏಕೆ ಪರಿವರ್ತನೆಗೆ ಒಳಗಾಗಿ ತನ್ನ ವ್ಯಕ್ತಿತ್ವವನ್ನು ಹಿಗ್ಗಿಸಿಕೊಳ್ಳುವ ಪ್ರತಿಯೊಬ್ಬರಿಗೂ ಅನ್ವಯವಾಗುವಂಥ ಮಾತು.
ಕಾರಣಾಂತರಗಳಿಂದ ಪ್ರಮಾದಗಳು ಘಟಿಸಿದಾಗ ಅದನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕಿಂತ ತಪ್ಪು ಎಂದೊಪ್ಪಿ ಆದ ತಪ್ಪುಗಳನ್ನು ಸರಿ ಮಾಡಬಹುದೆ ನೋಡಬೇಕಾಗುತ್ತದೆ. ಇದು ಮಾನವಂತನ ಲಕ್ಷಣ. ಇಲ್ಲಿ ರಾವಣನಲ್ಲಿ ಈ ಗುಣ ಇರುವುದನ್ನು ಕಾಣಬಹುದು. ಸೀತೆಯ ಮೇಲಿನ ಕಾಮವ್ಯಾಮೋಹದಿಂದ ಆಕೆಯನ್ನು ಅಪಹರಿಸುತ್ತಾನೆ ಬಂಧಿಯಾಗಿಸುತ್ತಾನೆ. ಆಕೆಯನ್ನು ಎದಿರುಗೊಂಡು ಮಾತನಾಡಲೆಂದು ಹೋದಾಗ ರಾಮಲಕ್ಷ್ಮಣರ ಪ್ರಾಣದವರೆಗೂ ಬಾರದಿರು ಎಂದು ಮೂರ್ಛೆಹೋದಾಗ ರಾವಣನ ಮನಸ್ಸು ಮನಸ್ಸು ಕಾರುಣ್ಯದ ಕಡೆಗೆ ತಿರುಗುತ್ತದೆ. ಇಂಥ ಪುಣ್ಯಸತಿಯನ್ನು ನೋಯಿಸಿದೆನಲ್ಲ ಎಂದು ಪಶ್ಚಾತ್ತಾಪ ಪಡುತ್ತಾನೆ.
ರಾವಣ ತನ್ನ ಮನಸ್ಸನ್ನು ಎಲ್ಲಾ ಕ್ಷೋಭೆಗಳ ಬಂಧನದಿಂದ ಬಿಡಿಸಿಕೊಂಡು ಆಕೆಯ ಗುಣಗಾನ ಮಾಡಲು ಪ್ರಾರಂಭಿಸುತ್ತಾನೆ. ತನ್ನ ತಪ್ಪಿಗೆ ಹಳಿದುಕೊಳ್ಳುತ್ತಾನೆ. ತಪ್ಪುಗಳನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವುದೂ ಕೂಡ ಉದಾತ್ತ ನಾಯಕನ ಲಕ್ಷಣ. ಹಂಸಕ್ಷೀರ ನ್ಯಾಯ ಬಯಸುವ ನೀಡುವ ಪ್ರತಿ ನಾಯಕನೂ ತನ್ನ ತಪ್ಪುಗಳನ್ನು ತಾನೆ ಹಳಿದುಕೊಂಡು ತನ್ನಿಂದ ಆಗುತ್ತಿದ್ದ ಪ್ರಮಾದವನ್ನು ತಡೆದು ಮಂಗಳ ಬಯಸುವ ಎಲ್ಲ ಧೀರ ಮತ್ತು ಉದಾತ್ತ ನಾಯಕರನ್ನು ಈ ವಾಕ್ಯ ಸಂಕೇತಿಸುತ್ತದೆ. ಪರಿವರ್ತನೆ ಜಗದ ನಿಯಮ ಅಲ್ಲವೆ!
ವೃತ್ತಿಯಿಂದ ಉಪನ್ಯಾಸಕಿ ಪ್ರವೃತ್ತಿಯಿಂದ ಲೇಖಕಿ ಆಗಿರುವ ಸುಮಾವೀಣಾರ ಬರೆಹಗಳು ನಾಡಿನ ಪ್ರಮುಖ ಮುದ್ರಿತ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವೆ ಸಂಶೋಧನಾತ್ಕ ಬರೆಹಗಳು ಅನನ್ಯವಾಗಿದ್ದು ISBN &ISSN ಸಂಖ್ಯೆಗಳಲ್ಲಿ ಅಚ್ಚಾಗಿವೆ. ಉತ್ತಮ ವಾಗ್ಮಿಯೂ ಆಗಿರುವ ಇವರ ಸೋದಾಹರಣ ಭಾಷಣಗಳು, ಕತೆಗಳು ಆಕಾಶವಾಣಿಯಲ್ಲಿ ರಾಜ್ಯವ್ಯಾಪಿ ಪ್ರಸಾರ ಆಗಿವೆ. ಇವರ ‘ನಲಿವಿನ ನಾಲಗೆ’, ‘ಮನಸ್ಸು ಕನ್ನಡಿ’, ‘ಸೂರ್ಪನಖಿ ಅಲ್ಲ ಚಂದ್ರನಖಿ’, ಲೇಖಮಲ್ಲಿಕಾ ಕೃತಿಗಳು ಬಿಡುಗಡೆಯಾಗಿದ್ದು ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.