BENGALURU MAR 5
ಜನಾನುರಾಗಿ ಪ್ರಾಧ್ಯಾಪಕ , ಶಿಕ್ಷಣ ತಜ್ಞ, ಕರ್ನಾಟಕ ಶಿಕ್ಷಣ ಪರಿಷತ್ತಿನ ವಿಶೇಷಾಧಿಕಾರಿ ಡಾ. ಎಂ. ಜಯಪ್ಪನವರನ್ನು ಸೇವಾ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಅವರ ಅಭಿಮಾನಿ ಬಳಗ ಮತ್ತು ಶಿಷ್ಯ ವೃಂದ ಶನಿವಾರ ಬೆಂಗಳೂರಿನಲ್ಲಿ ಆತ್ಮೀಯವಾಗಿ ಅಭಿನಂದಿಸಿ ಸನ್ಮಾನಿಸಿತು. ಇದೇ ಸಂದರ್ಭದಲ್ಲಿ ಜಯಪಥ ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಯಿತು.
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಂ. ರಾಮಚಂದ್ರಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ. ಬಿ . ತಿಮ್ಮೇಗೌಡ ಅವರು ಜಯಪಥ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಅವರು ವಾಣಿಜ್ಯ ಶಿಕ್ಷಣ ಕ್ಷೇತ್ರಕ್ಕೆ ಡಾ. ಜಯಪ್ಪನವರು ನೀಡಿದ ಕೊಡುಗೆಯನ್ನು ಸ್ಮರಿಸಿದರು.
ಬೆಂಗಳೂರು ಉತ್ತರ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಕೆಂಪರಾಜು, ಬೆಂಗಳೂರು ವಿವಿಯ ವಿಶ್ರಾಂತ ವಾಣಿಜ್ಯ ಪ್ರಾಧ್ಯಾಪಕ ಪ್ರೊ. ಕೆ. ಈರೇಶಿ, ಸಂತೇಬೆನ್ನೂರಿನ ಹಿರಿಯ ಪತ್ರಕರ್ತ ಮತ್ತು ವಿಜಯ ಯುವಕ ಸಂಘದ ಅಧ್ಯಕ್ಷ ಸತ್ಯನಾರಾಯಣ ನಾಡಿಗ್,ಮಲ್ಲೇಶ್ವರಂ ಲೇಡಿಸ್ ಅಸೋಸಿಯೇಶನ್ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ವಿ. ಲಕ್ಷ್ಮಿ ಮತ್ತು ಕರ್ನಾಟಕ ರಾಜ್ಯ ವಾಣಿಜ್ಯ ಹಾಗೂ ನಿರ್ವಹಣಾ ಅಧ್ಯಾಪಕರುಗಳ ಪರಿಷತ್ತಿನ ಅಧ್ಯಕ್ಷ ಡಾ. ಚಂದ್ರಶೇಖರ ಗುಡುಸಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ. ಆರ್ ಕೆ ರಮೇಶ್ ಬಾಬು, ಮೌಂಟ್ ಕಾರ್ಮಲ್ ಕಾಲೇಜಿನ ಡೀನ್ ಡಾ. ಎಸ್ ರಮೇಶ್, ಬೆಂಗಳೂರು ನಗರ ವಿವಿ ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ಡಾ. ಆರ್ ಪಾರ್ವತಿ, ಗುಲ್ಬರ್ಗಾ ಕರ್ನಾಟಕ ಪೀಪಲ್ ಎಜುಕೇಶನ್ ಸೊಸೈಟಿಯ ಆಡಳಿತಾಧಿಕಾರಿ ಡಾ. ಚಂದ್ರಶೇಖರ ಶೀಲವಂತ್, ಉಜಿರೆ ಎಸ್ ಡಿ ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಸಿ ಎನ್ ಉದಯಚಂದ್ರ, ಬೆಂಗಳೂರಿನ ಕಮ್ಯುನಿಟಿ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್ ನ ಗೌರವ ಕಾರ್ಯದರ್ಶಿ ಚಿಕ್ಕಣ್ಣ, ಭಾರತೀಯ ಸಂಸ್ಕೃತಿ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ. ಕೆ ಎನ್ ಪುಷ್ಪಲತಾ,ಬುಕ್ಟಾದ ಮಾಜಿ ಅಧ್ಯಕ್ಷ ಕೆ ಎಂ ನಾಗರಾಜ್, ಮಹಾರಾಣಿ ವಾಣಿಜ್ಯ ಕಾಲೇಜಿನ ಪ್ರಿನ್ಸಿಪಾಲ್ ಡಾ. ಕೆ ರಾಮಚಂದ್ರ, ಮೈಸೂರಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಬಸವಂತ ಗುದಗತ್ತಿರ್, ಎಂ ಎಲ್ ಎ ಕಾಲೇಜಿನ ಪ್ರಿನ್ಸಿಪಾಲ್ ಡಾ ಪಿ ಪಿ ಪದ್ಮಜಾ ಅವರು ವಿಶೇಷ ಆಹ್ವಾನಿತರಾಗಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಜಯಪಥ ಅಭಿನಂದನಾ ಗ್ರಂಥದ ಸಂಪಾದಕ ಬೆಳಗಾವಿಯ ಡಾ. ಎಚ್ ಬಿ ಕೋಲ್ಕಾರ ಅವರು ಅಭಿನಂದನಾ ಪತ್ರ ವಾಚಿಸಿದರು. ಸಂಪಾದಕ ಮಂಡಳಿಯ ಡಾ.ಸಾವುಕಾರ ಎಸ್ ಕಾಂಬಳೆ, ಡಾ. ಎಸ್ ಎಸ್ ತೇರದಾಳ ಮತ್ತು ಕುಸುಮಾ ಜಯಪ್ಪ ಸೇರಿದಂತೆ ಅಸಂಖ್ಯ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಿಂಧಿ ಕಾಲೇಜಿನ ನಿರ್ದೇಶಕ ಡಾ. ಬಿ ಎಸ್ ಶ್ರೀಕಂಠ ಸ್ವಾಗತಿಸಿ ಜಯಪ್ಪನವರ ವ್ಯಕ್ತಿತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಪತ್ರಕರ್ತ ಶ್ರೀವತ್ಸ ನಾಡಿಗ್ ವಂದಿಸಿದರು.