18 C
Karnataka
Sunday, November 24, 2024
    Home Blog Page 11

    ಯಾರನ್ನೋ ಅನುಸರಿಸುವುದಕ್ಕಿಂತ ಅರಿತು ಹೂಡಿಕೆ ಮಾಡಬೇಕು

    ಷೇರುಪೇಟೆ ಹೂಡಿಕೆ ಎಂದರೆ ಹೆಚ್ಚಿನವರಿಗೆ ಬಹು ಆಕರ್ಷಣೀಯವಾಗಿರುತ್ತದೆ.  ಕಾರಣ ಹೆಚ್ಚಿನ ಶ್ರಮವಿಲ್ಲದೆ ಸುಲಭವಾಗಿ ಹಣ ಸಂಪಾದಿಸಬಹುದೆಂಬ ಭ್ರಮೆ.  ಷೇರುಪೇಟೆಯು ಸಧ್ಯದ ಮಟ್ಟಿಗೆ ಹೇಳಬೇಕಾದರೆ ಅದು ಒಂದು ರೀತಿಯ ಬ್ರಾಂತುಲೋಕವಾಗಿದೆ.  ಕಾರಣ ಹೆಚ್ಚಿನ ಬೆಳವಣಿಗೆಗಳು ಸಾಮಾನ್ಯರ ಕಲ್ಪನೆಗೂ ಎಟುಕದ ರೀತಿಯಲ್ಲಿರುತ್ತವೆ.  ಆದರೂ ಇಲ್ಲಿ ಸ್ವಲ್ಪಮಟ್ಟಿನ ಸಾಮಾನ್ಯ ಜ್ಞಾನವನ್ನು ಬಳಸಿ ಅಧ್ಯಯನಾಧಾರಿತವಾಗಿ ಚಟುವಟಿಕೆ ನಡೆಸಿದಲ್ಲಿ ಯಶಸ್ಸು ಕಾಣಬಹುದಾಗಿದೆ.  

    ಷೇರುಪೇಟೆಯ ನಿಯಂತ್ರಕರಾದ ʼ ಸೆಬಿ ʼ ಹೇಳುವಂತೆ  ಯಾರನ್ನೋ ಅನುಸರಿಸುವುದಕ್ಕಿಂತ ಅರಿತು ಹೂಡಿಕೆ ಮಾಡಬೇಕು,  ಅದೇ ಯಶಸ್ಸಿನ ಮೂಲ ಮಂತ್ರ.  ಕೇವಲ ಕೆಲವು ದಿನಗಳು,  ತಿಂಗಳು ಹೂಡಿಕೆ ಮಾಡಲಿರುವುದಕ್ಕೆ ಇಷ್ಟೆಲ್ಲಾ ಯೋಚನೆ ಏಕೆ? ಎಂದು ನಿರ್ಲಕ್ಷಿಸುವಂತಿಲ್ಲ.   ಕಾರಣ, ಹೂಡಿಕೆ ಮಾಡಲಿರುವ ಕಂಪನಿಯ ಬಗ್ಗೆ ಅರಿಯದೆ  ನಾವು ನಿರ್ಧರಿಸಿದರೆ ಯಾವ ರೀತಿಯ ಗೊಂದಲದ ಪರಿಸ್ಥಿತಿ ಉಂಟಾಗಬಹುದೆಂಬುದು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.  ಅಲ್ಪಕಾಲೀನ ಹೂಡಿಕೆ ಎಂದು ನಿರ್ಧರಿಸಿದರೂ ಕೆಲವೊಮ್ಮೆ ವರ್ಷಗಟ್ಟಲೆ ಹೂಡಿಕೆ ಮುಂದುವರೆಸಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಬಹುದು, ಕೆಲವೊಮ್ಮೆ ಕಂಪನಿ ರೋಗಗ್ರಸ್ಥವಾಗಿ ಲಿಸ್ಟಿಂಗ್‌ ನಿಂದ ನಿರ್ಗಮಿಸಿದರೆ ಶಾಶ್ವತ ಹೂಡಿಕೆದಾರರಾಗಬೇಕಾಗಬಹುದು.

    ಒಂದು ಮನೆಯನ್ನು ಖರೀದಿಸುವಾಗ ಅದು ಇರುವ ಸ್ಥಳ, ವಾತಾವರಣ, ಮಾರಾಟಗಾರರ ಮಾಲಿಕತ್ವ ದಾಖಲೆಗಳು,   ಕಟ್ಟಡದ ಗುಣಮಟ್ಟ, ಕಟ್ಟಡಕ್ಕೆ ಹಾಕಿರುವ ಬುನಾದಿ, ಎಲ್ಲಕ್ಕೂ ಮಿಗಿಲಾಗಿ ಆ ಮನೆಯನ್ನು ಯಾವ ಗಾತ್ರದ ನಿವೇಶನದಲ್ಲಿ ಕಟ್ಟಲಾಗಿದೆ, ಮುಂತಾದವುಗಳನ್ನು ಪರಿಶೀಲಿಸುತ್ತೇವೆ.  ಅದರಂತೆಯೇ ಒಂದು ಷೇರು ಖರೀದಿಗೆ ಮುನ್ನ ಆ ಕಂಪನಿಯ ಯೋಗ್ಯತಾ ಮಟ್ಟವನ್ನು ಮಾಪನಮಾಡಿ ನಿರ್ಧರಿಸುವುದು ಅತ್ಯವಶ್ಯಕ.   ಆರಂಭದಲ್ಲಿ ಕೇವಲ ಪೇಟೆಯ ಬೆಲೆಯೊಂದೇ ಮುಖ್ಯವಲ್ಲ  ಖರೀದಿಸುವ ಷೇರಿನ ಮುಖಬೆಲೆ ಏನು ಅದಕ್ಕನುಗುಣವಾಗಿ ಷೇರಿನ ಬೆಲೆಯನ್ನು ಮಾಪನ ಮಾಡಬೇಕು.   ನಂತರ ಇತರೆ ಮಾನದಂಡಗಳಾದ ಕಂಪನಿಯ ಸಾಧನೆ, ಚಟುವಟಿಕೆಯ ವಲಯ, ಆ ವಲಯಕ್ಕಿರುವ ಭವಿಷ್ಯ, ಕಂಪನಿಯ ಆಡಳಿತ ಮಂಡಳಿಯ ಗುಣಮಟ್ಟ, ಅವರು ಹೂಡಿಕೆದಾರಿ ಸ್ನೇಹ ಚಿಂತನಾ ಮನಸ್ಕರೇ ಮುಂತಾದವುಗಳನ್ನರಿಯಬೇಕು.  ಏನೂ ಅರಿಯದೆ ಕೇವಲ ಅಲಂಕಾರಿಕ ಪ್ರಚಾರ,  ವಿಚಾರಗಳ ಮೇಲೆ ನಿರ್ಧರಿಸಿದಲ್ಲಿ ಅಪಾಯಕ್ಕೆ ಆಹ್ವಾನವಿತಂತೆ.  ಹೂಡಿಕೆ ಮಾಡುವಾಗ ಕಂಪನಿಗಳ ಆಂತರಿಕ ಸದೃಢ ಗುಣಗಳ ಬಗ್ಗೆ ತಿಳಿವಳಿಕೆ ಅತ್ಯವಶ್ಯ.  ಕಂಪನಿಗಳು ಉತ್ಪಾದನಾ ವಲಯದಲ್ಲಿದ್ದು, ಉತ್ತಮ ಸ್ಥಿರ ಮತ್ತು ಚರ ಆಸ್ತಿಯನ್ನು ಹೊಂದಿರುವುದು ಉತ್ತಮ.

    ಕೆಲವು ನಿದರ್ಶನಗಳನ್ನು ಪರಿಶೀಲಿಸೋಣ:

    1.  2015: ಯು ಪಿ ಹೋಟೆಲ್ಸ್  ಲಿಮಿಟೆಡ್‌   ಕಂಪನಿಯು 2001 ರಲ್ಲಿ ಬಾಂಬೆ ಸ್ಟಾಕ್ಎಕ್ಸ್ಚೇಂಜ್  ನಲ್ಲಿ ವಹಿವಾಟಿಗೆ ಲಿಸ್ಟಿಂಗ್  ಮಾಡಿಕೊಂಡಿತು.  ಈ ಕಂಪನಿಯು 2011 ರಲ್ಲಿ ಪ್ರತಿ ಷೇರಿಗೆ ರೂ.10 ರಂತೆ, 2012 ಮತ್ತು 2013 ರಲ್ಲಿ ಪ್ರತಿ ಷೇರಿಗೆ ರೂ.5 ರಂತೆ ಲಾಭಾಂಶವನ್ನು ವಿತರಿಸಿದ ಕಂಪನಿಯಾಗಿದೆ.  ಕಾರಣಾಂತರಗಳಿಂದ  2015 ರಲ್ಲಿ ಕಂಪನಿಯ ಷೇರುಗಳನ್ನು ವಹಿವಾಟಿನಿಂದ ಅಮಾನತುಗೊಳಿಸುವ ಮೂಲಕ ಹೂಡಿಕೆದಾರರ ಹಣವು ನಿಶ್ಕ್ರಿಯಗೊಂಡಿತು.     ಆದರೆ ಸುಮಾರು 7 ವರ್ಷಗಳ ನಂತರ ಕಂಪನಿಯು ಎಲ್ಲಾ ಲೋಪಗಳನ್ನು ಸರಿಪಡಿಸಿಕೊಂಡು ಈ ವರ್ಷದ ಮಾರ್ಚ್ ನಲ್ಲಿ ಲಿಸ್ಟಿಂಗ್ ಮಾಡಿಕೊಂಡು ವಹಿವಾಟಾಗಲು  ಆರಂಭಿಸಲಾಯಿತು.  60 ವರ್ಷಗಳ ಇತಿಹಾಸವುಳ್ಳ ಈ ಕಂಪನಿ  ಈಗ  ರೂ.500 ರ ಸಮೀಪ ವಹಿವಾಟಾಗುತ್ತಿದೆ. ಅಂದರೆ ಸಂಪೂರ್ಣ ನಶಿಸಿ ಹೋಗಿದ್ದ ಮೌಲ್ಯವು ಪುಟಿದೆದ್ದು ಉತ್ತಮ ಲಾಭ ಗಳಿಸಿಕೊಟ್ಟಿರುವುದು ಕಂಪನಿಯಲ್ಲಡಗಿರುವ ಆಂತರಿಕ ಸ್ವತ್ತು ಮತ್ತು ಆಡಳಿತ ಮಂಡಳಿಯ ಚಿಂತನೆಯಾಗಿದೆ.

    2.  2001 : ಬರೋಡಾ ರೆಯಾನ್  ಕಾರ್ಪೊರೇಷನ್   ಲಿಮಿಟೆಡ್ಕಂಪನಿಯು 2001 ರಿಂದಲೂ ಕಾರಣಾಂತರಗಳಿಂದ ಅಮಾನತುಗೊಂಡಿದ್ದು, ಹೂಡಿಕೆದಾರರ ಹಣವು ನಿಶ್ಕ್ರಿಯಗೊಂಡು ಪೂರ್ತಿಯಾಗಿ ನಶಿಸಿದೆ ಎಂದು ಭಾವಿಸಿದ್ದರೆ  20 ವರ್ಷಗಳ ನಂತರ ಈ ವರ್ಷ ಜೂನ್1 ರಿಂದ  ಅಮಾನತ್ತನ್ನು ತೆರವುಗೊಳಿಸಿಕೊಂಡು  ಪುನ: ಲೀಸ್ಟಿಂಗ್  ಮಾಡಿಕೊಂಡಿತು. ಆರಂಭದ ದಿನ ರೂ.4.42 ರಲ್ಲಿದ್ದ ಷೇರಿನ ದರವು ರೂ.160 ಕ್ಕೆ ಕೇವಲ ಮೂರೇ ತಿಂಗಳ ಅಂತರದಲ್ಲಿ ಪುಟಿದೆದ್ದಿರುವ ನಿದರ್ಶನವು  ಷೇರುಪೇಟೆಯ ವಿಸ್ಮಯಕಾರಿ ಗುಣ.

    3. ಹಿಂದೂಸ್ಥಾನ್‌ಫುಡ್ಸ್‌  ಲಿಮಿಟೆಡ್‌1997 ರಲ್ಲಿ ಅಮಾನತುಗೊಂಡಿತ್ತು.  2012 ರಲ್ಲಿ ಆ ಕಂಪನಿಯು ಮತ್ತೊಮ್ಮೆ ವಹಿವಾಟಿಗೆ ಬಿಡುಗಡೆಯಾಯಿತು.    ಜುಲೈ 2022 ರಲ್ಲಿ ಷೇರಿನ ಮುಖಬೆಲೆಯನ್ನು ರೂ.10 ರಿಂದ ರೂ.2 ಕ್ಕೆ ಸೀಳಿದೆ. ಈಗಲೂ  ರೂ.460 ರ ಸಮೀಪದಲ್ಲಿ ವಹಿವಾಟಾಗುತ್ತಿದೆ.

    4. ,   ಆರ್ಟೆಕ್‌ ಪವರ್‌ ಪ್ರಾಡಕ್ಟ್ಸ್‌ ಲಿಮಿಟೆಡ್‌ ಕಂಪನಿಯು 2001 ರಲ್ಲಿ ಅಮಾನತುಗೊಂಡಿತ್ತು.  2012 ರಲ್ಲಿ ಅಮಾನತನ್ನು ತೆರವುಗೊಳಿಸಿಕೊಂಡು ಪುನ: ವಹಿವಾಟಿಗೆ ಬಿಡುಗಡೆಯಾಯಿತು.   2015 ರಲ್ಲಿ ಕಂಪನಿ ಹೆಸರನ್ನು  ಆರ್ಟೆಕ್‌ಪವರ್‌ ಅಂಡ್‌ ಟ್ರೇಡಿಂಗ್‌ ಲಿಮಿಟೆಡ್‌ಎಂದು ಬದಲಿಸಿಕೊಂಡಿತು. 2020 ರಲ್ಲಿ ಮತ್ತೆ ವಹಿವಾಟಿನಿಂದ ಅಮಾನತುಗೊಂಡಿತು.


    5.  ನೈಲೋಫಿಲ್ಸ್‌ ಲಿಮಿಟೆಡ್‌ ಕಂಪನಿಯು 2002 ರಿಂದಲೂ ವಿಧಿಸಿದ್ದ   ಅಮಾನತನ್ನು 2012 ರಲ್ಲಿ  ತೆರವುಗೊಳಿಸಿಕೊಂಡು ಪೇಟೆಯನ್ನು ಮರು ಪವೇಶಿಸಿತು.   ಈ ಕಂಪನಿಯ ಹೆಸರನ್ನು ಆರ್ವ್‌ ಇನ್‌ಫ್ರಾಟೆಲ್‌ ಲಿಮಿಟೆಡ್‌ ಎಂದು 2016 ರಲ್ಲಿ ಬದಲಾಯಿಸಿಕೊಂಡಿತು.
    6. ಐ ಎಫ್‌ಎಂ ಇಂಪೆಕ್ಸ್‌ ಗ್ಲೋಬಲ್‌ ಲಿಮಿಟೆಡ್‌ ಕಂಪನಿಯ ಮೇಲೆ 2002 ರಲ್ಲಿ ವಿಧಿಸಿದ್ದ ಅಮಾನತು  ತೆರವುಗೊಳಿಸಿಕೊಂಡು 2012 ರಲ್ಲಿ ರಿಲೀಸ್ಟಿಂಗ್‌ ಮಾಡಿಕೊಂಡಿತು.  ಈ  ಕಂಪನಿ ತನ್ನ ಹೆಸರನ್ನು 2018 ರಲ್ಲಿ ಎನ್‌ ಎಂ ಎಸ್‌ ರಿಸೋರ್ಸಸ್‌ಗ್ಲೋಬಲ್‌  ಲಿಮಿಟೆಡ್‌ಎಂದು ಬದಲಿಸಿಕೊಂಡಿದೆ.


    7. 2005 ರಲ್ಲಿ ಅಮಾನತುಗೊಂಡಿದ್ದ ಕಂಪನಿಯಾದ  ಸೀಕ್ವೆಲ್ ಇ ರೂಟರ್ಸ್ ಲಿಮಿಟೆಡ್,  2012 ರಲ್ಲಿ ಎಲ್ಲಾ ನ್ಯೂನ್ಯತೆಗಳನ್ನು ತೆರವುಗೊಳಿಸಿಕೊಂಡು ರಿಲೀಸ್ಟ್‌ ಮಾಡಿಕೊಂಡಿತು.   ಈ ಕಂಪನಿ 2017 ರಲ್ಲಿ ತನ್ನ ಹೆಸರನ್ನು ಕ್ರಾಫ್ಟನ್ಡೆವೆಲಪರ್ಸ್ಲಿಮಿಟೆಡ್( KKRRAFTON Developers Ltd) ಎಂದು ಬದಲಿಸಿಕೊಂಡು  ವಹಿವಾಟಾಗುತ್ತಿತ್ತು, ಸೆಪ್ಟೆಂಬರ್2022 ರಲ್ಲಿ ಕಂಪನಿಯು ಷೇರುವಿನಿಮಯ ಕೇಂದ್ರಕ್ಕ ಪಾವತಿಸ ಬೇಕಾದ ಲೀಸ್ಟಿಂಗ್ಫೀಸ್ಪಾವತಿಸಲು ಅಸಮರ್ಥವಾದ ಕಾರಣ ಅಮಾನತುಗೊಳಿಸಲಾಯಿತು.


    8. 1983 ರಿಂದಲೂ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನಲ್ಲಿ ಲೀಸ್ಟಿಂಗ್‌ ಮಾಡಿಕೊಂಡು ಹಲವಾರು ವರ್ಷ ಆಕರ್ಷಣೀಯ ಮಟ್ಟದಲ್ಲಿ ವಿಜೃಂಭಿಸಿದ ಓಸ್ವಾಲ್‌ ಆಗ್ರೋ ಮಿಲ್ಸ್‌ ನ ಪ್ರವರ್ತಕರಾದ  ಅಭಯ್‌ ಓಸ್ವಾಲ್‌  ರವರ ಓಸ್ವಾಲ್‌ ಗ್ರೀನ್‌ ಟೆಕ್‌ ( ಹಿಂದೆ ಈ ಕಂಪನಿ ಹೆಸರು ಬಿಂದಾಲ್‌ ಆಗ್ರೋ ಲಿಮಿಟೆಡ್‌ ಎಂದಿತ್ತು)  ಕಂಪನಿಯು 2011 ರಲ್ಲಿ 14.17% ರಷ್ಟು ಭಾಗಿತ್ವವನ್ನು ಎನ್‌ ಡಿ ಟಿ ವಿ ಕಂಪನಿಯಲ್ಲಿ ರೂ.24.4 ಕೋಟಿ ಹೂಡಿಕೆಯ ಮೂಲಕ ಪಡೆದುಕೊಂಡಿದ್ದರು.  2016 ರಲ್ಲಿ 9.75% ಭಾಗಿತ್ವವನ್ನು ರೂ.51 ಕೋಟಿಗೆ ಮಾರಾಟಮಾಡಿದರು. ಉಳಿದ 4.42% ಭಾಗಿತ್ವವನ್ನು ಶೀಘ್ರವೇ ಮಾರಾಟಮಾಡುವುದಾಗಿ ಕಂಪನಿ ತಿಳಿಸಿತ್ತು.


    ಈ ರೀತಿಯ ಅನಿರೀಕ್ಷಿತ ಬೆಳವಣಿಗೆಗಳು, ಹಲವಾರು ಬಾರಿ ಅಸಹಜಮಯ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ.   ಇದಕ್ಕೆ ಮುಖ್ಯ ಕಾರಣ ಷೇರುಪೇಟೆ ಬಗ್ಗೆ ಮಾಹಿತಿ ಇಲ್ಲದೆ, ಇತ್ತೀಚೆಗೆ ಪೇಟೆ ಪ್ರವೇಶಿಸುತ್ತಿರುವವರ ಸಂಖ್ಯೆಯು ಅತಿ ಹೆಚ್ಚಾಗುತ್ತಿದೆ.  ಕಳೆದ ಎರಡು ತಿಂಗಳುಗಳಲ್ಲಿ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ ನ ಅಂಕಿ ಅಂಶಗಳ ಪ್ರಕಾರ,  ಸುಮಾರು 46 ಲಕ್ಷ ಹೊಸ ಹೂಡಿಕೆದಾರರು ಪೇಟೆ ಪ್ರವೇಶಿಸಿದ್ದಾರೆ, ಅದಕ್ಕನುಗುಣವಾಗಿ ಹೂಡಿಕೆಗೆ ಲಭ್ಯವಿರುವ ಕಂಪನಿಗಳ ಸಂಖ್ಯೆ ಏರಿಕೆ ಕಂಡಿಲ್ಲ.  ಈ ಹೂಡಿಕೆದಾರರ ದಟ್ಟಣೆಯೂ ಸಹ ಈ ರೀತಿಯ ಅಸಹಜಮಯ ಏರಿಳಿತಗಳಿಗೆ ಕಾರಣವಾಗಿ, ಪೇಟೆಯನ್ನು ಬೇಗ ಬೇಗ ಡ್ರಾ- ಬೇಗ ಬೇಗ ಬಹುಮಾನ ಎಂಬುವ ಪರಿಸ್ಥಿತಿಗೆ ತಳ್ಳಿದೆ.  ಆದರೆ ಹೂಡಿಕೆ ಎಂದು ಪರಿಶೀಲಿಸಿದಾಗ VALUE PICK – PRAFIT BOOK ಸುಲಭ ಸಮೀಕರಣವು  RTMM ( real time market movement ) ಪದ್ಧತಿ ಮೂಲಕ ಸ್ವಲ್ಪ ಮಟ್ಟಿನ ಯಶಸ್ಸು ತಂದು ಕೊಡಬಹುದಾಗಿದೆ.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    Doll festival:ಕನ್ನಡಪ್ರೆಸ್ ಗೊಂಬೆ ಹಬ್ಬ-2022

    ನವರಾತ್ರಿ-dasara- ಬಂತೆಂದರೆ ಮನೆ ಮನೆಯಲ್ಲಿ ಗೊಂಬೆ -doll festival-ಕೂಡಿಸುವ ಸಂಭ್ರಮ. ಹಳೇ ಮೈಸೂರು ಭಾಗದಲ್ಲಿ ಇದರ ಸಂಭ್ರಮ ಹೆಚ್ಚು. ಒಂದೊಂದು ಮನೆಯಲ್ಲೂ ನೂರಾರು ಗೊಂಬೆಗಳು. ಮಹಾಭಾರತ, ರಾಮಾಯಣ, ಶ್ರೀನಿವಾಸ ಕಲ್ಯಾಣ, ಗಿರಿಜಾ ಕಲ್ಯಾಣ ಎಲ್ಲವೂ ಗೊಂಬೆ ರೂಪದಲ್ಲಿ ಜೀವ ತಾಳುವುದುಂಟು.

    ಎಲ್ಲರೂ ಎಲ್ಲರ ಮನೆಯ ಗೊಂಬೆ ಹಬ್ಬವನ್ನು ಕಣ್ತುಂಬಿಕೊಳ್ಳಲಿ ಎಂಬ ಉದ್ದೇಶದಿಂದ ಕನ್ನಡಪ್ರೆಸ್.ಕಾಮ್ ವೇದಿಕೆ ಕಲ್ಪಿಸಿದೆ. ನಿಮ್ಮ ಮನೆಯಲ್ಲಿ ಕೂಡಿಸಿರುವ ಗೊಂಬೆಗಳ ಫೋಟೋವನ್ನು ಕೆಳಗಿನ ನಂಬರಿಗೆ ವಾಟ್ಸಾಪ್ ಮಾಡಿ ಅಥವಾ ಇ ಮೇಲ್ ಮಾಡಿ. ನಾವದನ್ನು ಸುಂದರ ಆಲ್ಬಂ ಮಾಡಿ ಪ್ರಕಟಿಸುತ್ತೇವೆ. ಆ ಮೂಲಕ ನಿಮ್ಮ ಮನೆಯ ಗೊಂಬೆ ಅಲಂಕಾರ ಎಲ್ಲರ ಮನೆ ಮನವನ್ನು ಮುಟ್ಟುತ್ತದೆ. ವಾಟ್ಸಪ್ ನಂಬರ್ 7483010618 ಇ ಮೇಲ್ [email protected]

    CET RANKING ಬಿಕ್ಕಟ್ಟು ಶಮನ: ಸೆ.29ರಂದು ಪರಿಷ್ಕೃತ RANKING ಪ್ರಕಟ, ಅ.3ರಿಂದ ಕೌನ್ಸೆಲಿಂಗ್

    BENGALURU SEP 23

    ವೃತಿಪರ ಕೋರ್ಸ್ ಗಳ ಸಿಇಟಿ RANKINGಗೆ ಸಂಬಂಧಿಸಿದಂತೆ ಉಂಟಾಗಿದ್ದ ಬಿಕ್ಕಟ್ಟನ್ನು ಬಗೆಹರಿಸಲು ರಾಜ್ಯ ಸರಕಾರ ನೇಮಿಸಿದ್ದ ಸಮಿತಿಯ ವರದಿಯನ್ನು ಹೈಕೋರ್ಟ್ ಒಪ್ಪಿಕೊಂಡಿದೆ. ಇದು ಸ್ವಾಗತಾರ್ಹವಾಗಿದ್ದು, ಪರಿಷ್ಕೃತ ಸಿಇಟಿ RANKING ಪಟ್ಟಿಯನ್ನು ಇದೇ 29ರಂದು ಬಿಡುಗಡೆ ಮಾಡಲಾಗುವುದು. ಜತೆಗೆ ಅಕ್ಟೋಬರ್‌ 3ರಿಂದ ಪ್ರವೇಶಾತಿ ಮೊದಲ ಸುತ್ತಿನ ಕೌನ್ಸೆಲಿಂಗ್ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

    ಶುಕ್ರವಾರ ಈ ಬಗ್ಗೆ ಮಾತನಾಡಿರುವ ಅವರು, ಸಮಸ್ಯೆಯನ್ನು ಬಗೆಹರಿಸಲು ಒಂದು ಸಮನ್ವಯ ಸೂತ್ರ ರೂಪಿಸುವಂತೆ ಸೂಚಿಸಿತ್ತು. ಅದರಂತೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ ಐವರ ಸಮಿತಿ ರಚಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದೆವು. ನ್ಯಾಯಾಲಯವು ಸಮಿತಿ ಕೊಟ್ಟ ವರದಿಯನ್ನು ಪುರಸ್ಕರಿಸಿರುವುದು ಸಂತಸ ತಂದಿದೆ ಎಂದಿದ್ದಾರೆ.

    ರಾಣಿ  ಎರಡನೇ ಎಲಿಝೆಬೆತ್‌ – ಮುಗಿದ ಒಂದು ಅಧ್ಯಾಯ

    ಇಂಗ್ಲೆಂಡಿನ ರಾಣಿ ಎರಡನೇ ಎಲಿಜೆಬೆತ್‌ ರಿಗೆ ಈ ಆಧುನಿಕ ಕಾಲದಲ್ಲಿಯೂ ಅತಿ ಪುರಾತನ ರೀತಿಯ ಶಾಸ್ತ್ರ- ಸಂಪ್ರದಾಯ, ಮತ್ತು ರಾಜ ಮರ್ಯಾದೆಗಳೊಡನೆ ಅದ್ದೂರಿಯಾದ ಅಂತಿಮ ಸಂಸ್ಕಾರ ನಿನ್ನೆ ಲಂಡನ್ನಿನಲ್ಲಿ ನಡೆಯಿತು.  8 ನೇ ತಾರೀಖು ಸೆಪ್ಟಂಬರಿನಲ್ಲಿ ಆಕೆ ವಿಧಿವಶರಾಗಿ 10 ದಿನಗಳು ಕಳೆದಿದ್ದವಾದರೂ, ಇಷ್ಟೂ ದಿನಗಳ ಕಾಲ ಆಕೆಯ ಅಂತ್ಯಕ್ರಿಯೆಗಾಗಿ ಅದ್ದೂರಿ ಮತ್ತು ಅತ್ಯಂತ ಶಿಸ್ತಿನ ತಯಾರಿಗಳು, ವಿಧಿಗಳು ನಡೆಯುತ್ತಿದ್ದವು.

    ಈ ಹತ್ತೂ ದಿನಗಳ ಕಾಲ ಯುನೈಟೆಡ್‌ ಕಿಂಗ್ಡಮ್ಮಿನ ಜನತೆ ಆಕೆಗೆ ಗೌರವದ ಮಹಾಪೂರವನ್ನೇ ಹರಿಸಿದ್ದರು.  ಸ್ಕಾಟ್ಲೆಂಡಿನ ರಾಜಧಾನಿ ಎಡಿನ್ಬರೋದಲ್ಲಿ ಮತ್ತು ಇಂಗ್ಲೆಂಡಿನ ರಾಜಧಾನಿ ಲಂಡನ್ನಿನಲ್ಲಿ ಜನರು ಮೈಲುಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಆಕೆಗೆ ಅಂತಿಮ ಗೌರವ ಸಲ್ಲಿಸಿದ್ದರು.“

    ಎಪ್ಪತ್ತು ವರ್ಷ ನಿಸ್ವಾರ್ಥವಾಗಿ ದೇಶಕ್ಕಾಗಿ ಬದುಕಿದ ಆಕೆಗೆ ಅಂತಿಮ ಗೌರವ ಸಲ್ಲಿಸಲು ನಾವು ಇಷ್ಟು ಮಾಡುವುದೇನೂ ದೊಡ್ಡದಲ್ಲ “- ಎಂಬ ನಂಬಿಕೆಯನ್ನು ಹೊತ್ತ ಜನರು ಹಗಲೂ, ರಾತ್ರಿಯೆನ್ನದೆ ಸರತಿಯಲ್ಲಿ ನಿಂತರು. ಕಡು ಚಳಿ, ಮಳೆ, ಬಿಸಿಲು ಯಾವೊಂದೂ ಲೆಕ್ಕವಿಲ್ಲದೆ ಬೆಳೆದ ಈ ಸಾಲು ಒಂದು ಸಂದರ್ಭದಲ್ಲಿ 10 ಮೈಲಿ ( 16 ಕಿ.ಮೀ.)ಗೂ ಹೆಚ್ಚು ಉದ್ದಕ್ಕಿತ್ತು. ರಾಣಿಯ ಮುಖವನ್ನು ನೋಡಲು ಅವಕಾಶವಿಲ್ಲದಿದ್ದರೂ ಆಕೆಯ ಶವಪೆಟ್ಟಿಗೆಯನ್ನು ಕೊನೆಯ ಬಾರಿಗೆ ಕಣ್ತುಂಬಿಕೊಂಡು, ಒಮ್ಮೆ ಅಂತಿಮವಾಗಿ ನಮಸ್ಕರಿಸಲು ಇವರು ಕೆಲವೊಮ್ಮೆ 24 ಗಂಟೆಗೂ ಹೆಚ್ಚು ಕಾಲ ಈ ಸರತಿಯಲ್ಲಿ ನಡೆದು ಬಂದಿದ್ದರು.  ಭಾನುವಾರ ರಾತ್ರಿ 10.44 ಗಂಟೆಗೆ ಇನ್ನೂ ಸರತಿ ಸೇರಿಕೊಳ್ಳಲು ಆಗಮಿಸುತ್ತಿದ್ದ ಜನರನ್ನು ನಯವಾಗಿ ತಡೆದು ನಿಲ್ಲಿಸಲಾಯಿತು. ಏಕೆಂದರೆ  ಆಗಾಗಲೇ ಸರತಿಯಲ್ಲಿದ್ದವರು ವೆಸ್ಟ ಮಿನಿಷ್ಟರ್‌ ಹಾಲನ್ನು ತಲುಪಲು ಸೋಮವಾರ ಬೆಳಗಿನ 6.30 ಗಂಟೆಯಾಗುತ್ತಿತ್ತು.

     

    ಅಲ್ಲಿಂದ ಮುಂದಕ್ಕೆ ಅಂತಿಮ ದಿನದ ಕಾರ್ಯಕ್ರಮ ಶುರುಮಾಡಬೇಕಿತ್ತು.

     ಸೋಮವಾರವನ್ನು, ರಾಣಿಯ ಅಂತಿಮ ಶವ ಯಾತ್ರೆಯನ್ನು ವೀಕ್ಷಿಸಲು ಅನುಕೂಲವಾಗುವಂತೆ ರಜೆಯೆಂದು ಘೋಷಿಸಲಾಗಿತ್ತು. ಹಾಗೆಂದು ಇದು ಹೇರಿಕೆಯಾಗಿರಲಿಲ್ಲ. ಖಾಸಗೀ ವ್ಯಾಪಾರದವರು ಅವರಿಗೆ ಬೇಕಿದ್ದಲ್ಲಿ ಕೆಲಸ ಮಾಡಬಹುದು ಎಂದು ಹೇಳಲಾಗಿತ್ತು. ಆದರೆ, ಇಡೀ ದೇಶ ಸೋಮವಾರ ಈ ಅಂತಿಮ ಯಾತ್ರೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಭಾಗವಹಿಸಿತು.

    ಕಳೆದ ಹತ್ತು ದಿನಗಳಿಂದ ಇಂಗ್ಲೆಂಡಿನ ರಾಣಿ‌ ಎರಡನೇ  ಎಲಿಝಬೆತ್ ಗೆ , ಅವರ ಸಂಸಾರದವರು, ಅರಮನೆಯವರು, ಇಡೀ ದೇಶದ ಪ್ರಜೆಗಳು ಮತ್ತು ಪ್ರಪಂಚದ ಎಲ್ಲ ನಾಯಕರುಗಳು ನಾನಾ ರೀತಿಯಲ್ಲಿ   ಅಂತಿಮ  ಗೌರವ ಸಲ್ಲಿಸಿದ್ದಾರೆ. ಅದಕ್ಕಾಗಿ ಲಂಡನ್ನಿಗೆ ಬಂದಿಳಿದ ಜನರ ಸಂಖ್ಯೆ ಅಗಾಧವಾಗಿತ್ತು. ಈ ಕಾರಣ ನಡೆದ ಸಿದ್ಧತೆಗಳೂ ಬೃಹತ್‌ ಮಟ್ಟದ ಕಾರ್ಯಾಚರಣೆಗಳಾಗಿದ್ದವು. ಅಂತಿಮ ಯಾತ್ರೆಯ ಮೆರವಣಿಗೆ ನೋಡಲು ಬಂದವರಿಗಾಗಿ ಅಭೂತಪೂರ್ವ ಸಿದ್ಧತೆಗಳನ್ನು ನಡೆಸಲಾಗಿತ್ತು.

    ಸ್ಥಿರವಾಗಿ ನಿಂತ ಪ್ರತಿ ಕಂಬ, ಪೆಟ್ಟಿಗೆ ಮತ್ತು  ವಸ್ತುಗಳನ್ನು ಪೂರ್ಣವಾಗಿ ಬಿಚ್ಚಿ ಸ್ಪೋಟಕ ವಸ್ತುಗಳಿಗಾಗಿ ತಡಕಿ ಅವನ್ನು ಮತ್ತೆ ಜೋಡಿಸಲಾಗಿತ್ತು ಆಯಕಟ್ಟಿನ ಜಾಗಗಳ ತಾರಸಿಗಳಿಂದ ಬೈನಾಕ್ಯಲರ್‌ ಹಿಡಿದ ಪೋಲೀಸರು ಅಂಗುಲಂಗುಲವನ್ನೂ ತಮ್ಮ ಕಣ್ಣುಗಳಿಂದಲೇ ಸ್ಕಾನ್‌ ಮಾಡಿದ್ಧರು. ಶ್ವಾನಪಡೆ, ಅಶ್ವಪಡೆಯ ಪೋಲೀಸರು ಸಂದು -ಗೊಂದುಗಳ ಕೂಲಂಕಷ ಪರೀಕ್ಷೆಯನ್ನು ಮಾಡಲಾಯಿತು. ಸಿ.ಸಿ. ಟಿ.ವಿ ಕ್ಯಾಮರಾಗಳ ಮೂಲಕ ಇಡೀ ಲಂಡನ್ನಿನ ಪ್ರತಿ ಹಾದಿಯನ್ನೂ ಕುಳಿತು ನೋಡಬಹುದಾದ ವ್ಯವಸ್ಥೆಗಳನ್ನು ಚುರುಕುಗೊಳಿಸಲಾಗಿತ್ತು. ಪ್ರಪಂಚದ ನಾನಾ ಭಾಗಗಳಿಂದ ಮತ್ತು ದೇಶದ ಎಲ್ಲೆಡೆಗಳಿಂದ ಬಂದಿಳಿದ ಜನರಲ್ಲಿ ಅವರು ಕೇಳಬಹುದಾದ, ಕಾಣಬಹುದಾದ ಯಾವುದೇ ಸಂಶಯಾಸ್ಪದ ವಿಷಯಗಳನ್ನು ತಕ್ಷಣವೇ ಪೋಲೀಸರಿಗೆ ತಿಳಿಸಲು ಟೀವಿ ಮತ್ತಿತರ ಮಾಧ್ಯಮಗಳ ಮೂಲಕ ವಿನಂತಿಸಿಕೊಳ್ಳಲಾಯಿತು.. ಚರಿತ್ರೆಯಲ್ಲಿ ಇನ್ಯಾವತ್ತೂ ಆಗದಂತಹ ಬಿಗಿ ಭದ್ರತೆಗಳ ಎಚ್ಚರಿಕೆಗಳನ್ನು ಲಂಡನ್ನಿನಲ್ಲಿ  ನಡೆಸಲಾಯಿತು. . ಅದಕ್ಕಾಗಿ ದೇಶದ ಪ್ರತಿ ಪೋಲೀಸು ತುಕಡಿಗಳಿಂದ ಆಫೀಸರುಗಳು ಲಂಡನ್ನಿಗೆ ಬಂದಿಳಿದಿದ್ದರು. ಹತ್ತು ಸಾವಿರ ಜನ ಪೋಲೀಸರು ಒತ್ತಟ್ಟಿಗೆ ಒಂದು ಕಾರ್ಯಕ್ರಮದ ಬಗ್ಗೆ ಈ ಬೃಹತ್‌ ಮಟ್ಟದ ಎಚ್ಚರಿಕೆ ವಹಿಸಿರುವುದು ಬ್ರಿಟಿಷರ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ದಾಖಲಾಗಿರುವುದು.

    ಈ ವಿಧಿಗಳಲ್ಲಿ ಭಾಗಿಗಳಾಗಲು ಪ್ರಪಂಚದ ನಾನಾ ದೇಶಗಳ ಸರ್ವೋಚ್ಚ ನಾಯಕರುಗಳು ಲಂಡನ್ನಿಗೆ ಬಂದಿಳಿದಿದ್ದರು. ಅಮೆರಿಕಾ, ಕೆನಡಾ, ಭಾರತ, ಘಾನ, ಬಾರ್ಬಡೋಸ್‌ ಜೋರ್ಡನ್,‌ ಬ್ರೆಝಿಲ್‌, ಫಿಜಿ, ಫ್ರಾನ್ಸ್‌, ಹಾಂಗ್-ಕಾಂಗ್‌, ಜರ್ಮನಿ, ಇಟಲಿ,ನ್ಯೂಝಿಲ್ಯಾಂಡ್‌, ಆಷ್ಟ್ರೇಲಿಯ, ಸೌದಿಯ ದೊರೆಯಾದಿಯಾಗಿ ಎಲ್ಲರೂ ಅಂತ್ಯಕ್ರಿಯೆಯ ಅಂತಿಮ ಸಂಸ್ಕಾರಕ್ಕೆ ಬಂದಿಳಿದಾಗ ಲಂಡನ್‌ ನಗರ ಅತ್ಯಂತ ಕಾಳಜಿ ವಹಿಸಿ ಮೇಲಿನ ಸಿದ್ಧತೆಗಳನ್ನು ಮಾಡಿಕೊಂಡಿದ್ದರಲ್ಲಿ ಆಶ್ಚರ್ಯವೇನಿರಲಿಲ್ಲ.

    (ಪ್ರಪಂಚದ ಎಲ್ಲ ದೇಶಗಳಿಗೆ ರಾಣಿಯ ಅಂತ್ಯಕ್ರಿಯೆಗೆ ಬರುವಂತೆ ಆಮಂತ್ರಣಗಳು ಹೋದರೂ, ಸಿರಿಯಾ, ವೆನೆಝುಯೆಲ,ಆಪ್ಘಾನಿಸ್ತಾನ, ರಷಿಯಾ, ಮತ್ತು ಬೆಲರೂಸ್‌ ಗಳನ್ನು ಹೊರತುಪಡಿಸಲಾಗಿತ್ತು.  ಚೈನಾದ ಪ್ರತಿನಿಧಿಗಳು ಮತ್ತು ಸೌದಿಯ ದೊರೆಯ ಉಪಸ್ಥಿತಿಗಳನ್ನು ಇಲ್ಲಿನ ಹಲವರು ವಿರೋಧಿಸಿದ್ದರು)

    ಜೊತೆಗೆ ರಾಣಿಯ  ಮರಿಮೊಮ್ಮಕ್ಕಳುಗಳ ಸಮೇತ ಇಡೀ  ಕುಟುಂಬ ಮೆರವಣಿಗೆಯಲ್ಲಿ ನಡೆದು ಹೋದ ಕಾರಣ, ಮೆರವಣಿಗೆ ನಡೆದ ರಸ್ತೆಗೆ ಸಂಪೂರ್ಣ ಭದ್ರತೆಯನ್ನು ಒದಗಿಸಲಾಗಿತ್ತು.

    ಲಕ್ಷಕ್ಕೂ ಹೆಚು ಜನರು ಈ ಅಂತಿಮ ಯಾತ್ರೆಯನ್ನು ಸ್ವತಃ ವೀಕ್ಷಿಸಲು ಲಂಡನ್ನಿಗೆ ಬಂದಿಳಿದಿದ್ದರು.  ಈ ಕಾರಣ ಆದಷ್ಟೂ ಇದ್ದಲ್ಲೇ ವೀಕ್ಷಿಸಲು ಜನರಿಗೆ ಸರ್ಕಾರ ವಿನಂತಿಸಿಕೊಂಡಿತ್ತು. ಅದಕ್ಕೆ ಅನುಕೂಲವಾಗುವಂತೆ 125  ವೀಕ್ಷಣಾ ಮಂದಿರಗಳಲ್ಲಿ ಅಂತಿಮ ಯಾತ್ರೆಯ ನೇರ ಪ್ರಸಾರವನ್ನು ಹಮ್ಮಿಕೊಳ್ಳಲಾಗಿತ್ತು. ಚರ್ಚ್‌ ಮತ್ತು ಕ್ಯಾಥಿಡ್ರಲ್‌ ಗಳಲ್ಲಿ ಮತ್ತು ಟೀವಿ ಚಾನಲ್ಲುಗಳಲ್ಲಿ ಅದಕ್ಕೆಂದೇ 24 ತಾಸುಗಳ ಪ್ರಸಾರವನ್ನು ನೀಡಲಾಯಿತು

    ಪ್ರಪಂಚದ ಎಲ್ಲ ಮಾಧ್ಯಮಗಳೂ ರಾಣಿಯ ಅಂತಿಮ ಯಾತ್ರೆಯ ಅಭೂತಪೂರ್ವ ದೃಶ್ಯಗಳನ್ನು ಪ್ರಸಾರ ಮಾಡಿದರು. ಹಾಗಾಗಿ ವಿಶ್ವದ ಬಿಲಿಯನ್ನು ಗಟ್ಟಳೆ ಜನರು ಈ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ.ಎನ್ನಲಾಗಿದೆ.

    ರಾಣಿಯ ಶವಯಾತ್ರೆ ರಾಜ ಚಾರ್ಲ್ಸ ರ ನೇತೃತ್ವದಲ್ಲಿ  ವೆಸ್ಟ್‌ ಮಿನ್ಸ್ಟರ್‌ ಹಾಲ್‌ ನಿಂದ (ಹೌಸಸ್‌ ಆಫ್ ಪಾರ್ಲಿಮೆಂಟ್‌‌) ಹೊರಟಿತು.  123 ವರ್ಷ ಹಳೆಯದಾದ ಗನ್‌ ಹೊರುವ ಬಂಡಿಯನ್ನೇ ರಥವನ್ನಾಗಿ ಮಾಡಲಾಗಿತ್ತು. ರಾಯಲ್‌ ನೇವಿಯ 98 ಯೋಧರು ಇದನ್ನು ಶಿಸ್ತಿನ ನಡಿಗೆಯಲ್ಲಿ ಕೊಂಡೊಯ್ದರು. ಈ ರಥದ ಹಿಂದೆ ರಾಣಿಯ ಕುಟುಂಬದ ಸದಸ್ಯರು ನಡೆದು ಬಂದರು. ಸಾವಿರಾರು  ಮಿಲಿಟರಿ ಸೈನಿಕರು ತಮ್ಮ ವಿವಿಧ ವರ್ಣಗಳ ಪೋಷಾಕು ಧರಿಸಿ ಅದರ ಜೊತೆ ಪಥ ಸಂಚಲನೆ ಮಾಡಿದರು. ಆ ದೃಶ್ಯಗಳು ವರ್ಣರಂಜಿತವಾಗಿದ್ದವು. ,ಅತ್ಯಂತ ಶಿಸ್ತು ಮತ್ತು ಸಂಯಮಗಳ ಕವಾಯತುಗಳನ್ನು ಒಳಗೊಂಡಿದ್ದವು. ವಾದ್ಯಕ್ಕೆ ಸರಿಯಾದ ಹೆಜ್ಜೆ ಜೋಡಿಸಿ ನಡೆದ ಈ ಮೆರವಣಿಗೆ ಹಲವಾರು ಪ್ರಮುಖ ರಸ್ತೆಗಳಲ್ಲಿ ಹಾದು ಹೋಯಿತು.

    ರಾಣಿಯ ಶವಪೆಟ್ಟಿಗೆಯನ್ನು ವೆಸ್ಟ್‌ ಮಿನ್ಸ್ಟರ್‌ ಅಬ್ಬಿಗೆ ಗೆ ತರಲಾಯಿತು. ಇಲ್ಲಿ ದೇಶದ ಪ್ರಧಾನಿಯಾದಿಯಾಗಿ ಎಲ್ಲ ಗಣ್ಯರು, ಕಾಮನ್‌ ವೆಲ್ತ್‌ ದೇಶಗಳ ಮತ್ತು ಪ್ರಪಂಚದ ಹಲವು ದೇಶಗಳ ನಾಯಕರು ರಾಣಿಗೆ ನಮನ ಸಲ್ಲಿಸಿದರು. 100 ಕ್ಕೂ ಹೆಚ್ಚಿನ ದೇಶಗಳ ಪ್ರತಿನಿಧಿಗಳು ಒಂದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದು ಇಂಗ್ಲೆಂಡಿನ ಅರಸೊತ್ತಿಗೆಯ ಪ್ರಭಾವದ ಶಕ್ತಿಯ ಪ್ರತೀಕವಾಗಿತ್ತು. ಸಮಾಜದ ವಿವಿಧ ಸ್ತರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಹಲವಾರು ಜನರು, ಆರೋಗ್ಯ ವಿಭಾಗದಲ್ಲಿ ಸೇವೆ ಸಲ್ಲಿಸಿದ ಆಹ್ವಾನಿತ ಜನಸಾಮಾನ್ಯರು  ಕೂಡ ಈ ಸಂದರ್ಭದಲ್ಲಿ ಗೌರವದಿಂದ ಭಾಗವಹಿಸಿದ್ದರು.

     ಸುಮಾರು 2000 ಜನರು ಹನ್ನೆರಡು ಗಂಟೆಯ ವೇಳೆಗೆ ರಾಷ್ರೆಗೀತೆಯನ್ನು ಹಾಡಿ ನಮನಗಳನ್ನು ಸಲ್ಲಿಸಿದ ನಂತರ, ಇಡೀ ರಾಜಮನೆತನ ಮಂದಿ, ಮುಂದಿನ ಯಾತ್ರೆಗೆ ಸೇರಿದರು.ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಸಹೋದರಿ ಮತ್ತಿತರ ಪರಿವಾರದವರೆಲ್ಲ  ಡ್ಯೂಕ್ ಆಫ್‌ ವೆಲ್ಲಿಂಗ್ಟನ್‌ ಕಮಾನಿನೆಡೆಗೆ ಮೆರವಣಿಗೆಯ ಭಾಗವಾಗಿ ಹಒರಟರು. ಕಾಮನ್‌ ವೆಲ್ತ್‌ ದೇಶದ ಮತ್ತಿತರ ಹಲವು ದೇಶಗಳ ಸೈನಿಕ ತುಕಡಿಗಳು ಕೂಡ ಭಾಗವಹಿಸಿ ಗೌರವ ಸಲ್ಲಿಸಿದವು.

    ರಾಣಿ ಎಲಿಝೆಬೆತ್‌ ರ ಕುದುರೆ ಮತ್ತು ನಾಯಿಗಳ ಮೇಲಿನ ಪ್ರೀತಿಯೂ ಬಹಳ ಪ್ರಸಿದ್ದವೇ ಹೀಗಾಗಿ. ಆಕೆಯ ಕುದುರೆ ಎಮ್ಮಾ ಮತ್ತು ನಾಯಿಗಳಾದ  ಸ್ಯಾಂಡಿ ಮತ್ತು ಮಿಕ್‌ ಗಳಿಗೂ ಈ ಅಂತಿಮ ಯಾತ್ರೆಯನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು.

    ರಾಯಲ್‌ ನೇವಿಯವರು ಎಳೆದು ನಡೆದ  ರಥದ ಪಥಚಲನೆಯ ಶಿಸ್ತು ಮತ್ತು ಶಿಷ್ಟಾಚಾರಗಳು ರಾಜಮನೆತನದ ರೀತಿ ರಿವಾಜುಗಳು ಅದನ್ನು ವೀಕ್ಷಿಸಿದವರ ಮನದಲ್ಲಿ ಅಳಿಯದ ನೆನಪುಗಳನ್ನು ಬರೆದವು. ಆ ನಂತರ ರಾಣಿಯ ಶವಪೆಟ್ಟಿಗೆಯನ್ನು ಶವಯಾತ್ರೆಯ ಕಾರಿಗೆ (funeral hearse) ಗೆ ಹಸ್ತಾಂತರಿಸಲಾಯಿತು. ಇಲ್ಲಿಂದ ರಾಣಿಯನ್ನು ಆಕೆ ಹುಟ್ಟಿ ಬೆಳೆದ ನಯನ ಮನೋಹರ  ವಿಂಡ್ಸರ್‌ ಕ್ಯಾಸಲ್‌ ಗೆ ತರಲಾಯಿತು. ದಾರಿಯುದ್ದಕ್ಕೂ ಈ ದೃಶ್ಯವನ್ನು ನೋಡಲು ನಿಂತ ಜನರು ರಾಣಿಯ ಕಾರಿಗೆ ಹೂಗಳನ್ನು ಎಸೆದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು.

    ವಿಂಡ್ಸರ್‌ ಕ್ಯಾಸೆಲ್ಲಿನಲ್ಲಿರುವ ಸೇಂಟ್‌ ಜಾರ್ಜ್‌ನ ಚಾಪೆಲ್ಲಿಗೆ  ತಲುಪಿದ ನಂತರ ಇದುವರೆಗೆ ಪ್ರಪಂಚಕ್ಕೆಲ್ಲ ಪ್ರಸಾರವಾದ ರಾಣಿಯ ಅಂತಿಮ ಕ್ರಿಯೆಗಳನ್ನು ಆಕೆಯ ಸಂಸಾರದ ಖಾಸಗೀ ಅಂತ್ಯ ಸಂಸ್ಕಾರಕ್ಕೆ ಒಪ್ಪಿಸಲಾಯಿತು.

     ಸೇಂಟ್‌ ಜಾರ್ಜ್‌ ಚಾಪೆಲ್ಲಿನಲ್ಲಿ ಅಕೆಯ ಪತಿ ಫಿಲಿಪ್ ಮತ್ತು ಆಕೆಯ ತಂದೆ ತಾಯಿಯರ ಮತ್ತು ಸಹೋದರಿಯ ಸಮಾಧಿಯೂ ಇರುವ ಕಾರಣ ಅಲ್ಲಿಯೇ ರಾಣಿಯ ಸಮಾಧಿ ಕಾರ್ಯಕ್ರಮ ನಡೆಯಿತು.

    ರಾತ್ರಿಯ 7.30 ಗಂಟೆ (ಭಾರತದ  11.30 ) ರ ವೇಳೆಗೆ ಶುರುವಾದ ಅಂತಿಮ ಸಂಸ್ಕಾರದ ಕೊನೆಯ ಘಟ್ಟದ ನಂತರ ಆಕೆಯ  ಸಮಾಧಿ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಲಾಯಿತು.

    ಹತ್ತು ದಿನಗಳ  ಹಿಂದೆಯೇ ರಾಣಿ ವಿಧಿವಶರಾಗಿದ್ದರೂ,  ಆಕೆ ಇನ್ನೂ ತಮ್ಮ ನಡುವೆಯೇ ಇರುವರೆಂಬ ಯಾವದೋ  ಒಂದು ಭಾವಕೋಶ ತಟ್ಟನೆ ಬರಿದಾದ ಆ ಕ್ಷಣದಲ್ಲಿ ಜನರ  ದುಃಖದ ಕಟ್ಟೆಯೊಡೆದಿತ್ತು.

    ಇಂತವರಿಗೆ ಸಮಾಧಾನ ಕೊಡಲು ಅಲ್ಲಲ್ಲಿ ಅಳವಡಿಸಿದ್ದ ತೆರೆಗಳ ಮೇಲೆ ಆಕೆಯ ಬದುಕಿನ ತುಣುಕುಗಳ ಪ್ರಸಾರ ಶುರುವಾಯಿತು. ಇವೆಲ್ಲದರ ನಡುವೆ ಅರಸೊತ್ತಿಗೆಯನ್ನು ವಿರೋಧಿಸುವ ಅಲ್ಪ ಸಂಖ್ಯಾತ ಜನರ ಕೂಗು ಅತ್ಯಂತ ಕ್ಷೀಣವಾಗಿದ್ದು ಆಶ್ಚರ್ಯವೆನಿಸಲಿಲ್ಲ.

     ಎರಡು ಯುದ್ಧಗಳು, ಆಂತರಿಕ ಕಲಹಗಳು, ವಿಭಜನೆಗಳು, ಆಗಾಗ ಕದಡಿದ ಶಾಂತಿ ಈ ಎಲ್ಲ ಸಂದರ್ಭಗಳಲ್ಲಿ ಇಡೀ ದೇಶವನ್ನು ಇಡಿಯಾಗಿ ಹಿಡಿದಿಡಲು  ಸಮರ್ಥಳಾಗಿದ್ದ  ರಾಣಿಯೊಬ್ಬಳ ಕಾಲ ನಿನ್ನೆಗೆ ನಿಜಕ್ಕೂ ಮುಗಿದಿತ್ತು. ಆದರೆ, ಸಾವಿನಲ್ಲೂ ತನ್ನ ಸಾಮ್ರಾಜ್ಯವನ್ನು ಒತ್ತಟ್ಟಿಗೆ ತರುವಲ್ಲಿ  ಆಕೆ ಅಭೂತಪೂರ್ವವಾಗಿ ಯಶಸ್ವಿಯಾಗಿದ್ದಳು.

    ವ್ಯಕ್ತಿಯಾಗಿ ಆಕೆ ಬೆಳೆದದ್ದು ರಾಜಮನೆತನದಲ್ಲಿ, ಬದುಕಿದ್ದು ರಾಣಿಯಾಗಿ. ಸಾವಿನಲ್ಲಿಯೂ ಕೂಡ  ಸಂಯುಕ್ತ ರಾಷ್ಟ್ರದ ಕಣ್ಮಣಿಯಾಗಿಯೇ ಆಕೆ ಮೆರೆದರು.  ಮುಂದೆಯೂ ಹಾಗೆಯೇ ಉಳಿದುಕೊಳ್ಳುವರು ಎನ್ನುವುದರಲ್ಲಿ ಸಂಶಯವಿಲ್ಲ.

                                                                              

    ವರ್ಷದಲ್ಲಿ 30 ಐಟಿಐಗಳ ಉನ್ನತೀಕರಣ

    BENGALURU SEP 17

    ಯುವಜನರಿಗೆ ಗುಣಮಟ್ಟದ ಶಿಕ್ಷಣ ಮತ್ತು ಕೌಶಲಗಳನ್ನು ಕಲಿಸಿದರಷ್ಟೆ ಸ್ವಾವಲಂಬಿ ಭಾರತ ಕಟ್ಟಲು ಸಾಧ್ಯವಾಗುತ್ತದೆ. ಸದ್ಯ 150 ಐಟಿಐಗಳನ್ನು ಮೇಲ್ದರ್ಜೆಗೇರಿಸಿದ್ದು, ಇನ್ನೂ 30 ಸರ್ಕಾರಿ ಐಟಿಐಗಳನ್ನು ಈ ವರ್ಷ ಉನ್ನತೀಕರಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

    ಪೀಣ್ಯದಲ್ಲಿರುವ ಸರಕಾರಿ ಐಟಿಐನಲ್ಲಿ ಶನಿವಾರ ಏರ್ಪಡಿಸಿದ್ದ ಬೆಂಗಳೂರು ನಗರ ಜಿಲ್ಲಾ ಮಟ್ಟದ ಪ್ರಪ್ರಥಮ ಐಟಿಐ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

    ಪ್ರಧಾನಿ ಮೋದಿ ಅವರ ಸೂಚನೆಯಂತೆ ‘ವಿಶ್ವಕರ್ಮ ದಿನ’ವಾದ ಶನಿವಾರ ದೇಶದ ಎಲ್ಲಾ 14 ಸಾವಿರ ಐಟಿಐಗಳಲ್ಲಿ ಘಟಿಕೋತ್ಸವ ನಡೆಯಿತು.ಈ ಸಂದರ್ಭದಲ್ಲಿ ಅವರು 2021-22ರ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಪ್ರದಾನ ಮಾಡಿದರು.

    ಸರಕಾರವು ಐಟಿಐ ಶಿಕ್ಷಣವನ್ನು ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಲಿದೆ. ಜತೆಗೆ, ಇಂಗ್ಲಿಷ್ ಕಲಿಕೆಯನ್ನು ಇದರ ಭಾಗವಾಗಿ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

    ಟಾಟಾ ಸಮೂಹದ ನೆರವಿನಲ್ಲಿ ಈಗಾಗಲೇ 150 ಸರಕಾರಿ ಐಟಿಐಗಳನ್ನು ಅಭಿವೃದ್ಧಿ ಪಡಿಸಿ, ಹೊಸ ಕೋರ್ಸುಗಳನ್ನು ಆರಂಭಿಸಲಾಗಿದೆ. ಇದಕ್ಕಾಗಿ 4,500 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಅವರು ನುಡಿದರು.

    ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಂದಿನ ವರ್ಷದಿಂದ 5 ಸಾವಿರ ಕೋಟಿ ರೂ.ಗಳ ಅನುದಾನ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

    KALABURGI SEP 17

    ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಂದಿನ ವರ್ಷದಿಂದ 5000 ಕೋಟಿ ರೂ.ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಕಲಬುರ್ಗಿ ಎನ್ ವಿ ಮೈದಾನ ಸಾರ್ವಜನಿಕ ಸಮಾವೇಶದಲ್ಲಿ
    ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮ ಹಾಗೂ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಅವರು ಇಂದು ಮಾತನಾಡುತ್ತಿದ್ದರು.

    ಈ ಭಾಗದ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಕಲ್ಯಾಣ ಕರ್ನಾಟಕವನ್ನು ಮುಖ್ಯ ವಾಹಿನಿಗೆ ಸೇರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇದರ ಅಭಿವೃದ್ಧಿಗೆ ನಾವು ಸಂಕಲ್ಪ ಮಾಡಿದ್ದೇವೆ. ಹಲವಾರು ಜನರು ಭರವಸೆ ಕೊಟ್ಟು ಹೋಗಿದ್ದಾರೆ. ಆದರೆ ನಾವು ನಿರಂತರವಾಗಿ ಕೆಲಸ ಮಾಡುವ ಮೂಲಕ ಈ ಭಾಗದ ಸಂಪೂರ್ಣ ಅಭಿವೃದ್ದಿ ಮಾಡಲಾಗುವುದು ಎಂದರು.

    ಜನಸಮಸ್ಯೆಗಳೊಂದಿಗೆ ಜೀವನ ಮಾಡುತ್ತಾರೆ. ಸಮಸ್ಯೆಯ ಬಗ್ಗೆ ಚರ್ಚೆ ಮಾಡುವುದಕ್ಕೂ, ಅದರೊಂದಿಗೆ ವಾಸ ಮಾಡುವುದಕ್ಕೂ ವ್ಯತ್ಯಾಸವಿದೆ. ಸಮಸ್ಯೆಗಳ ಪರಿಹಾರ ಜನರ ನಡುವೆಯೇ ಇದೆ. ಜನರ ಮಧ್ಯ್ರ್ ಓಡಾಡಿ, ಸಮಸ್ಯೆ ಗೆ ಪರಿಹಾರ ಕಂಡುಕೊಂಡು ಅದರ ಅನುಷ್ಠಾನ ಮಾಡಬೇಕು. ಅದೇ ನಿಜವಾದ ಜನಪರ ಸರ್ಕಾರ ಎಂದರು.

    ಬದಲಾವಣೆಯ ಕಾಲ
    ಇದೀಗ ಬದಲಾವಣೆಯ ಕಾಲ ಬಂದಿದೆ. ಜನಜಾಗೃತರಾಗಿದ್ದಾರೆ. ಈ ಭಾಗದಲ್ಲಿ ಎಲ್ಲಾ ವರ್ಗದ ಜನ ವಾಸಿಸುತ್ತಾರೆ. ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಅವರೆಲ್ಲರಿಗೂ ಮನೆ, ಗ್ರಾಮಗಳಿಗೆ ರಸ್ತೆ ಸಂಪರ್ಕ, ಶಾಲೆಗಳು, ಆಸ್ಪತ್ರೆ ಗಳನ್ನು ಒಡಗಿಸಿದಾಗ ಆರೋಗ್ಯ ಕರ, ವಿಶ್ವಾಸಯುತ ಜೀವನ ನಡೆಸಲು ಸಾಧ್ಯ. ನಮ್ಮ ಸರ್ಕಾರ ಈ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಂಕಲ್ಪ ಮಾಡಿದೆ. ಕಳೆದ ಸೆಪ್ಟೆಂಬರ್ 17 ರಂದು 3000 ಕೋಟಿ ರೂ.ಗಳನ್ನು ನೀಡುವುದಾಗಿ ಭರವಸೆ ನೀಡಿದಂತೆ ಈ ಬಾರಿಯ ಬಜೆಟ್ ನಲ್ಲಿ ಅನುದಾನ ಒದಗಿಸಲಾಗಿದೆ. ಅನುಮೋದನೆ ನೀಡಿ ಕಾಮಗಾರಿಗಳಿಗೆ ಚಾಲನೆ ನೀಡಲು ಇಲ್ಲಿಗೆ ಬಂದಿರುವುದಾಗಿ ತಿಳಿಸಿದರು. ಇದು ಜನಪರ ಸರ್ಕಾರ ಎಂದು ತಿಳಿಸಿದರು.

    ಪ್ರತಿ ಮನೆಯಲ್ಲಿಯೂ ಕಲ್ಯಾಣವಾಗಬೇಕು

    ಕಲ್ಯಾಣ ಕರ್ನಾಟಕದ ಉದ್ದಗಲಕ್ಕೂ 2100 ಶಾಲಾ ಕೊಠಡಿಗಳಿಗೆ ಚಾಲನೆ ನೀಡುತ್ತಿದ್ದೇವೆ. ಕರ್ನಾಟಕ ಉದಾಯವಾದ ಮೇಲೆ ಇಷ್ಟು ಶಾಲಾ ಕೊಠಡಿಗಳು ನಿರ್ಮಾಣ ವಾಗಿರಲಿಲ್ಲ. ರಾಜ್ಯದಲ್ಲಿ ಒಟ್ಟು 8000 ಕೊಠಡಿ ಕಟ್ಟಲಾಗುತ್ತಿದೆ. ಮುಂದಿನ ಆಗಸ್ಟ್ 15 ರೊಳಗೆ ಶೇ 100 ರಷ್ಟು ಪ್ರಾಥಮಿಕ ಮತ್ತು ಪ್ರೌಢ ಶಾಲೆ ಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಆದೇಶಿಸಲಾಗಿದೆ. 2500 ಅಂಗನವಾಡಿಗಳಿಗೆ ಮಂಜೂರಾತಿ ನೀಡಿ, ಚಾಲನೆ ನೀಡಲಾಗಿದೆ. ಪೌಷ್ಟಿಕ ಆಹಾರ ಹಾಗೂ ಶಿಕ್ಷಣದ ಸಶಕ್ತೀಕರಣವನ್ನು ಮಾಡಲಾಗುತ್ತಿದೆ.

    ಸರ್ಕಾರಿ ಕಲ್ಯಾಣ ಕರ್ನಾಟಕದ ಅಭಿವೃದ್ದಿ ಮಾಡುವ ಮೂಲಕ ಈ ಭಾಗದ ಪ್ರತಿ ಮನೆಯಲ್ಲಿಯೂ ಕಲ್ಯಾಣವಾಗಬೇಕು. ರಾಜ್ಯದ ಬೇರೆ ಭಾಗಗಳು ಅಭಿವೃದ್ದಿ ಆಗುತ್ತಿರುವಂತೆಯೇ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಾಡಲಾಗುವುದು. ನವ ಕರ್ನಾಟಕದ ಮೂಲಕ ನವ ಭಾರತ ನಿರ್ಮಾಣ ಮಾಡುವುದು ನಮ್ಮ ಘೋಷವಾಕ್ಯ ಹಾಗೂ ಗುರಿ.
    ಈ ಭಾಗದ ಅಭಿವೃದ್ದಿಯೊಂದಿಗೆ ಜನರನ್ನು ಪಾಲುದಾರರನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಕಲ್ಯಾಣ ಕರ್ನಾಟಕದಲ್ಲಿ ವಿಶೇಷ ಅನುದಾನ ನೀಡಿ 1000 ಗ್ರಾಮಗಳ ಸ್ತ್ರೀ ಶಕ್ತಿ ಸಂಘಕ್ಕೆ 1.50 ಲಕ್ಷ ಅನುದಾನ ನೀಡಿ ಸ್ವಯಂ ಉದ್ಯೋಗ ನೀಡಲು ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಪ್ರಥಮ ಬಾರಿಗೆ ಮಹಿಳೆಯರಿಗಾಗಿ ಜಾರಿಗೊಳಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದ ಯುವ ಸಂಘಗಳ ಮೂಲಕ ಪ್ರತಿ ಗ್ರಾಮದಲ್ಲಿ ಯುವಕರ ಸಂಘಟನೆ ಮಾಡಲಾಗುವುದು.
    ನೀರಾವರಿ ಯೋಜನೆಯಡಿ ನಾರಾಯಣಪುರ ಬಲದಂಡೆ ಯೋಜನೆ ಅಡಿಯಲ್ಲಿ ಹಿಂದೆ ಜಲ ಸಂಪನ್ಮೂಲ ಸಚಿವನಾಗಿದ್ದಾಗ 3000 ಕೋಟಿ ಒಡಗಿಸಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಈಗ ಅದನ್ನು ಅನುಷ್ಠಾನಗೊಳಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
    5000 ಶಿಕ್ಷಕರ ನೇಮಕಾತಿ ಯನ್ನು ಮುಂದಿನ ಮಾರ್ಚ್ ಒಳಗೆ ಮಾಡಲಾಗುವುದು. 11000 ಶಿಕ್ಷಕರ ನೇಮಕ ಮಾಡುವ ಬದ್ಧತೆ ನಮ್ಮದು. ವ್ಯವಸ್ಥೆಯಲ್ಲಿ ನಂಬಿಕೆ ಪುನರ್ ಸ್ಥಾಪನೆಗೆ ಬದ್ಧತೆಯಿಂದ ಕೆಲಸ ಮಾಡಲಾಗುವುದು.

    ಬೀದರ್ ಜಿಲ್ಲೆಗೆ ನೀರು ಕೊಡುವ ಕಾಗಿಣಾ ಯೋಜನೆ, ಕಲ್ಯಾಣ ಕರ್ನಾಟಕದಲ್ಲಿ ಏತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು.
    ಕ್ರಾಂತಿಪುರುಷ ಬಸವಣ್ಣನವರ ಹೋರಾಟದ ನಾಡು ಇದು. ನಮ್ಮ ನಾಯಕರಾದ ಯಡಿಯೂರಪ್ಪ ಅವರು ಅನುಭವ ಮಂಟಪ ಸ್ಥಾಪನೆಗೆ ಚಾಲನೆ ನೀಡಿದ್ದಾರೆ. ಜಗತ್ತಿನ ಮೊದಲ ಪಾರ್ಲಿಮೆಂಟು ಅನುಭವ ಮಂಟಪವನ್ನು ಸ್ಥಾಪಿಸಿ ಜಗತ್ತಿಗೆ ಶರಣರು ಸಾರಿದ ಸಂದೇಶವನ್ನು ಸಾರುವ ಕೆಲಸವನ್ನು ಮಾಡಲಾಗುವುದು ಎಂದರು.

    ರಾಯಚೂರಿಗೆ ಒಂದು ಉನ್ನತ ಮಟ್ಟದ ಮೈದ್ಯಕೀಯ ಸಂಸ್ಥೆ:
    ಕಲಬುರ್ಗಿಯಲ್ಲಿ ಟೆಕ್ಸ್‌ಟೈಲ್ ಪಾರ್ಕ್ ರಾಯಚೂರಿನ ಜನರು ಏಮ್ಸ್ ಬಗ್ಗೆ ಕನಸು ಕಂಡಿದ್ದಾರೆ. ರಾಯಚೂರಿಗೆ ಒಂದು ಉನ್ನತ ಮಟ್ಟದ ಮೈದ್ಯಕೀಯ ಸಂಸ್ಥೆ ಸ್ಥಾಪಿಸಲಾಗುವುದು. ಕಲಬುರ್ಗಿಯಲ್ಲಿ ಸ್ಥಾಪಿಸುವ ಜಯದೇವ ಆಸ್ಪತ್ರೆಯನ್ನು ಪ್ರಧಾನಿಯವರಿಂದ ಉದ್ಘಾಟನೆ ಮಾಡಿಸಲಾಗುವುದು ಎಂದು ತಿಳಿಸಿದರು.

    ಗುಳೇ ಹೋಗುವುದನ್ನು ತಪ್ಪಿಸಲಾಗುವುದು
    ಈ ಭಾಗದಲ್ಲಿ ಗುಳೆ ಹೋಗುವುದು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾನು ಗುಳೆ ಹೋಗುವುದನ್ನು ತಡೆಯಲಾಗುವುದು. ಸ್ಥಳೀಯವಾಗಿ ಉದ್ಯೋಗ ದೊರಕಿಸಲು ಕೈಗಾರಿಕೆಗಳನ್ನು ಸ್ಥಾಪಿಸಲಾಗುವ ಕೆಲಸ ಮಾಡಲಾಗುವುದು ಎಂದರು. ಕೂಲಿ ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ವಿಸ್ತರಿಸಿದ್ದೇವೆ. ಜನರ ಕೈಗೆ ಉದ್ಯೋಗ ದೊರೆತಲ್ಲಿ ಗುಳೇ ಹೋಗುವುದನ್ನು ತಡೆಯಬಹುದು ಎಂದರು.

    Indian Stock Market: ವೈದ್ಯ ವೃತ್ತಿಯೊಂದಿಗೆ ಅರ್ಥ ವೃದ್ಧಿಯಾಗಲು ಸುಲಭ ದಾರಿ

    ಒಂದು ವೃತ್ತಿಯನ್ನು ಆರಿಸಿಕೊಂಡಾಗ ಅದಕ್ಕೆ ನ್ಯಾಯ ಸಮ್ಮತವಾದ ರೀತಿಯಲ್ಲಿ  ನಿರ್ವಹಿಸಬೇಕು.  ಕೆಲವು ವೃತ್ತಿಗಳಲ್ಲಿ ಕಾರ್ಯದ ಒತ್ತಡಗಳಿಂದ ವೃತ್ತಿಗೆ ಸಂಬಂಧಿತ ಮಾಹಿತಿಯನ್ನು ಸಂಗ್ರಹಿಸಲಾಗಲಿ, ಅರಿವು ಮೂಡಿಸಿಕೊಳ್ಳುವುದಕ್ಕಾಗಲಿ ಸಮಯಾವಕಾಶವೇ ಇರದ ರೀತಿಯಲ್ಲಿರುತ್ತದೆ.  ಮತ್ತೆ ಕೆಲವರಿಗೆ ಆಸಕ್ತಿಯೂ ಇರಲಾರದು.ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೃತ್ತಿಯವರು ಹೆಚ್ಚಿನ ಒತ್ತಡದಲ್ಲಿರುವುದು ಸಹಜವಾಗಿದೆ.  ಕಾರಣ ಸಾರ್ವಜನಿಕರಲ್ಲಿ ಉಂಟಾಗುತ್ತಿರುವ ಹೊಸ ಹೊಸ ಆರೋಗ್ಯದ ತೊಂದರೆಗಳು. 

    ಕರೋನ ನಂತರದಲ್ಲಿ ಸ್ವಲ್ಪ ಸುಧಾರಣೆ ಕಾಣುತ್ತಿರುವಾಗಲೇ, ಈ ವರ್ಷ ಸುರಿದ ಭಾರಿ ಮಳೆಯಿಂದಾಗಿ ಜನಜೀವನದ ಆರೋಗ್ಯದಲ್ಲಿ ವಿಶೇಷವಾಗಿ ಮಕ್ಕಳ ಆರೋಗ್ಯದಲ್ಲಿ ಹೆಚ್ಚಿನ ಏರುಪೇರುಗಳುಂಟಾಗುತ್ತಿದೆ.  ಈ ಎಲ್ಲದರ ನಡುವೆ ವೈದ್ಯರಿಗೆ ಸಮಯದ ಅಭಾವವಿರಬಹುದು.   ಈ ಮಧ್ಯೆ ಇಷ್ಟು ಬಿಡುವಿಲ್ಲದ ಒತ್ತಡದಲ್ಲಿ ಅವರ ವೈಯಕ್ತಿಕ ಆರ್ಥಿಕ ನಿರ್ವಹಣೆಯು ಸುಲಭ ಸಾಧ್ಯವಿಲ್ಲ.   ಇಂತಹವರಿಗೆ ಸೂಕ್ತವಾದ ವಿಧ ಎಂದರೆ ಷೇರುಪೇಟೆಯ ಹೂಡಿಕೆ. 

    ಷೇರುಪೇಟೆಯ ಹೂಡಿಕೆಗೆ ಅಗಾಧ ಹಣ ಬೇಕಾಗಬಹುದೆಂಬ ಕಲ್ಪನೆ ಹೆಚ್ಚಿನವರಲ್ಲಿರುತ್ತದೆ.  ಆದರೆ ಪರಿಸ್ಥಿತಿ ಬದಲಾಗಿದೆ.  ಷೇರುಗಳನ್ನು ಅಭೌತಿಕ ರೂಪ ಅಂದರೆ ಡಿಮ್ಯಾಟ್‌ ರೂಪದಲ್ಲಿ ಹೊಂದಬಹುದಾದ ಕಾರಣ ಹೂಡಿಕೆಯನ್ನು ಅತ್ಯಲ್ಪ ಪ್ರಮಾಣದಲ್ಲಾರಂಭಿಸಿ, ನಂತರ ಸೂಕ್ತವೆನಿಸಿದಲ್ಲಿ ಮತ್ತಷ್ಟು ಸೇರಿಸಿಕೊಳ್ಳುತ್ತಾ ಬೆಳೆಸಬಹುದು. 

    ವೈದ್ಯರು ತಮ್ಮ  ರೋಗಿಗಳಿಗೆ ಅವರ ತೊಂದರೆ, ಕಾಯಿಲೆಗಳಿಗನುಗುಣವಾಗಿ ಸೂಕ್ತವಾದ ಔಷಧಿಗಳನ್ನು ಸೂಚಿಸುತ್ತಾರೆ.  ಅವರು ಸೂಚಿಸುವ ಔಷದಿಗಳು ಮತ್ತು ಅವನ್ನು ಉತ್ಪಾದಿಸುವ ಕಂಪನಿಗಳ ಬಗ್ಗೆ ಅವರಿಗೆ ನಂಬಿಕೆ ಇರುತ್ತದೆ.  ಆ ಕಂಪನಿಗಳ ಗುಣಮಟ್ಟದ ಬಗ್ಗೆಯೂ ಖಾತ್ರಿ ಇರುತ್ತದೆ.  ಹೇಗಿದ್ದರೂ ಅವರು ಸೂಚಿಸುವ ಔಷದಿಗಳನ್ನು ಉತ್ಪಾದಿಸುವ ಕಂಪನಿಗಳ ಬಗ್ಗೆ ಮತ್ತು ಅವು ಉತ್ಪಾದಿಸುವ ವೈವಿಧ್ಯಮಯ ಉತ್ಪನ್ನಗಳ ಬಗ್ಗೆ ತಿಳಿದಿರುತ್ತಾರೆ, ಅಂತಹ ಕಂಪನಿಗಳ ಸುತ್ತ ಆಗುತ್ತಿರುವ ಘಟನಾವಳಿಗಳ ಬಗ್ಗೆ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಈ ಕಂಪನಿಗಳ ಉತ್ಪನ್ನಕ್ಕೆ ದೊರೆಯುವ ಮನ್ನಣೆ, ತಿರಸ್ಕಾರ, ಪುರಸ್ಕಾರ, ನಿಷೇದ, ಪ್ರತಿಸ್ವರ್ಧಿತ್ವ ಮುಂತಾದ ವಿಚಾರಗಳನ್ನೂ ತಿಳಿದುಕೊಂಡಲ್ಲಿ ಅವರ ವೃತ್ತಿಗೆ ಪೂರಕವಾಗುವುದರಲ್ಲಿ ಎರಡು ಮಾತಿಲ್ಲ.  ಈ ಎಲ್ಲಾ ಅಂಶಗಳನ್ನು ಅವರ ಜೀವನದಲ್ಲಿ ಜಾರಿಗೊಳಿಸಲು ಸುಲಭವಾದ ಮಾರ್ಗವೆಂದರೆ ಷೇರುಪೇಟೆ.

    ಔಷಧಿ ವಲಯದ ಪ್ರಮುಖ ಕಂಪನಿಗಳಾದ ಸಿಪ್ಲಾ, ಡಾಕ್ಟರ್‌ ರೆಡ್ಡೀಸ್‌ ಲ್ಯಾಬೊರೇಟರೀಸ್‌, ದಿವೀಸ್‌ ಲ್ಯಾಬೊರೇಟರೀಸ್‌, ಗ್ಲಾಕ್ಸೋ, ಸನೋಫಿ, ಫೈಜರ್‌, ಸನ್‌ ಫಾರ್ಮ, ಗ್ಲೆನ್‌ ಮಾರ್ಕ್‌ ಫಾರ್ಮ, ವೊಕಾರ್ಡ್‌, ಲುಪಿನ್‌, ಲೌರಸ್‌ ಲ್ಯಾಬ್‌, ನ್ಯಾಟ್ಕೋ ಫಾರ್ಮ ದಂತಹ ಅನೇಕ ಪ್ರಮುಖ ಕಂಪನಿಗಳು ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡು ದಿನ ನಿತ್ಯ ಷೇರಿನ ಬೆಲೆಗಳಲ್ಲಿ ಏರಿಳಿತಗಳನ್ನು ಪ್ರದರ್ಶಿಸುತ್ತಿರುತ್ತವೆ.  ಒಮ್ಮೊಮ್ಮೆ ಕಂಪನಿಯು ಉತ್ತಮವಾದ ಸಾಧನೆ ಪ್ರದರ್ಶಿಸಿದ್ದರೂ, ವೈವಿಧ್ಯಮಯ ಕಾರಣಗಳಿಂದ ಷೇರಿನ ಬೆಲೆಗಳು ಕುಸಿತ ಕಾಣಬಹುದು ಅಂತಹ ಸಂದರ್ಭದಲ್ಲಿ ಕಂಪನಿಗಳ ಯೋಗ್ಯತಾ ಮಟ್ಟವನ್ನರಿತು ಹೆಚ್ಚಿನ ಹಣ ಹೂಡಲು ಪ್ರಯತ್ನಿಸಬಹುದಾಗಿದೆ.  ಹಾಗೆಯೇ ಬಾಹ್ಯ ಕಾರಣಗಳಿಂದಾಗಿ ಕೆಲವು ಬಾರಿ ಅನಿರೀಕ್ಷಿತ ಮಟ್ಟದ ಏರಿಕೆಯನ್ನೂ ಸಹ ಪ್ರದರ್ಶಿಸಬಹುದು, ಅಂತಹ ಸಂದರ್ಭವನ್ನು ಬಳಸಿಕೊಂಡು ಸ್ವಲ್ಪ ಪ್ರಮಾಣದಲ್ಲಾಗಲಿ ಅಥವಾ ಪೂರ್ಣವಾಗಿ ಮಾರಾಟಮಾಡಿ ಲಾಭ ಗಳಿಸಬಹುದಾಗಿದೆ.  

    ಔಷಧಿ ಕಂಪನಿಗಳು, ವಿಶೇಷವಾಗಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರಗಳನ್ನು ಬೆಳೆಸಿಕೊಂಡಿರುವಂತಹ ಕಂಪನಿಗಳು ಹೆಚ್ಚು ಹೆಚ್ಚು ಸೂಕ್ಷ್ಮತೆಯನ್ನು ಬೆಳೆಸಿಕೊಂಡಿರುತ್ತವೆ.  ಅದಕ್ಕೆ ಮುಖ್ಯ ಪ್ರಭಾವಿ ಅಂಶ ಎಂದರೆ ಅಮೇರಿಕಾದ ʼ ಫುಡ್‌ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌ʼ  ( )ಸಂಸ್ಥೆ ಕೈಗೊಳ್ಳಬಹುದಾದ ಕ್ರಮಗಳಾಗಿವೆ.  ಕೆಲವೊಮ್ಮೆ  ಎಫ್‌  ಡಿ ಎ ಇನ್ಸ್ಪೆಕ್ಷನ್‌ ಆರಂಭಿಸಿದೆ ಎಂದರೆ ಸಾಕು ಆ ಕಂಪನಿಯ ಷೇರುಗಳು ಒತ್ತಡ ಎದುರಿಸುವ ಸಾಧ್ಯತೆ ಇದೆ.  ಅಂತಹ ಇಳಿಕೆಯ ಸಮಯ ಹಲವಾರು ಬಾರಿ ಹೂಡಿಕೆಗೆ ಅವಕಾಶಗಳನ್ನು ಸೃಷ್ಠಿಸುತ್ತದೆ.  ಈ ಹಿಂದೆ ಈ ಯು ಎಸ್‌ ಎಫ್‌ ಡಿ ಎ ಕ್ರಮದಿಂದ ಅಗಾಧವಾದ ಕುಸಿತಕ್ಕೊಳಗಾದ ಕಂಪನಿಗಳಲ್ಲಿ ಡಾಕ್ಟರ್‌ ರೆಡ್ಡೀಸ್‌ ಲ್ಯಾಬೊರೇಟರೀಸ್‌,  ಹಿಂದಿನ ರಾನ್‌ ಬಾಕ್ಸಿ ಲ್ಯಾಬೊರೇಟರೀಸ್‌, ಸನ್‌ ಫಾರ್ಮ, ಗ್ಲೆನ್‌ ಮಾರ್ಕ್‌ ಫಾರ್ಮ, ಝೈಡಸ್‌ ಲೈಫ್‌ ಸೈನ್ಸಸ್‌, ಲುಪಿನ್‌ , ಅರವಿಂದೋ ಫಾರ್ಮ, ಅಲೆಂಬಿಕ್‌ ಫಾರ್ಮ ದಂತಹ ಅನೇಕ ಕಂಪನಿಗಳು ಸೇರಿವೆ.

    ದಿವೀಸ್‌ ಲ್ಯಾಬೊರೇಟರೀಸ್‌ ಕಂಪನಿಯು 2009 ರಲ್ಲಿ, 2015 ರಲ್ಲಿ 1:1 ಅನುಪಾತದ ಬೋನಸ್‌ ನೀಡಿದ್ದಲ್ಲದೆ, ನಿರಂತರವಾಗಿ ಆಕರ್ಷಣೀಯ ಪ್ರಮಾಣದ ಲಾಭಾಂಶಗಳನ್ನು ವಿತರಿಸುತ್ತಿರುವ ಕಂಪನಿಯಾಗಿದೆ.  ಈ ಕಂಪನಿಯ ಷೇರಿನ ಬೆಲೆ 2015 ರಲ್ಲಿ ರೂ.2,480 ರ ಗರಿಷ್ಠದಲ್ಲಿತ್ತು.  2016 ರಲ್ಲಿ ರೂ.1,380 ರಲ್ಲಿತ್ತು. 2017 ರಲ್ಲಿ ಯು ಎಸ್‌ ಎಫ್‌ ಡಿ ಎ ವಾರ್ನಿಂಗ್‌ ಪತ್ರದ ಕಾರಣ ಷೇರಿನ ಬೆಲೆಯು ರೂ.534 ರವರೆಗೂ ಕುಸಿಯಿತು.  ಸುದೀರ್ಘ ಸಮಯದ ನಂತರ ಅಂದರೆ 2019 ರಲ್ಲಿ ಷೇರಿನ ಬೆಲೆ ರೂ.1,860 ನ್ನು ದಾಟಿತು, 2020 ರಲ್ಲಿ ಷೇರಿನ ಬೆಲೆ ರೂ.3,850 ನ್ನು ದಾಟಿತು.  ಈ ವರ್ಷ ಷೇರಿನ ಬೆಲೆ ರೂ.4,700 ರ ಗರಿಷ್ಠಕ್ಕೂ ಜಿಗಿತ ಕಂಡು ಸಧ್ಯ ರೂ.3,570 ರ ಸಮೀಪವಿದೆ. ಈ ನಿದರ್ಶನವು ವ್ಯಾಲ್ಯು ಪಿಕ್‌ ಗೆ ಆಯ್ಕೆ ಯಾವಾಗ ಮಾಡಿಕೊಂಡರೆ ಸೂಕ್ತ ಎಂಬುದನ್ನು ಮತ್ತು ಒಂದು ಉತ್ತಮ ಕಂಪನಿ ಯಾವ ರೀತಿ ಷೇರುದಾರರಿಗೆ ಲಾಭ ತಂದುಕೊಡಬಹುದೆಂಬುದನ್ನೂ ಸಹ ತಿಳಿಸುತ್ತದೆ.    ಗಮನವಿರಲಿ ಈ ಕಂಪನಿಯ ಷೇರಿನ ಬೆಲೆಯು 2007 ರಲ್ಲಿ ರೂ.7,000 ದ ಗಡಿ ದಾಟಿ ಬೆಳೆದಿತ್ತು ಹಾಗೆಯೇ 2009 ರಲ್ಲಿ ರೂ.455 ರ ಸಮೀಪಕ್ಕೂ ಕುಸಿದಿತ್ತು.

    ಹಲವು ಬಾರಿ ಒಂದು ಕಂಪನಿಯ ಉತ್ಪನ್ನವು ನಿಗದಿಪಡಿಸಿದ ಮಾನದಂಡಗಳಿಗನುಗುಣವಾಗಿರದೆ, ಸ್ವಲ್ಪ ಕೆಳಮಟ್ಟದ್ದಾಗಿದ್ದಲ್ಲಿ ಅದನ್ನು ಸಾರಾಸಗಟಾಗಿ ತಿರಸ್ಕರಿಸುವ ಸಾಧ್ಯತೆಯೂ ಹೆಚ್ಚಾಗಿರುವುದರಿಂದ ಗುಣಮಟ್ಟ ಕಾಪಾಡಿಕೊಂಡು, ಸ್ಫರ್ಧಾತ್ಮಕ ವ್ಯವಹಾರದಲ್ಲಿ ತನ್ನ ಉಳಿವಿಗಾಗಿ, ಸಾಧನೆಗಾಗಿ ನೀತಿಪಾಲನಾ ಮಟ್ಟವನ್ನು ಉನ್ನತ ಸ್ಥಿತಿಯಲ್ಲಿರಿಸುವುದು ಅಗ್ರಮಾನ್ಯ ಕಂಪನಿಗಳಿಗೆ ಅತ್ಯಗತ್ಯವಾಗಿದೆ.   ಕಳೆದ ಏಪ್ರಿಲ್‌ ನಲ್ಲಿ ಅರಂವಿಂದೋ ಫಾರ್ಮ ಮತ್ತು ಸನ್‌ ಫಾರ್ಮಾ ಕಂಪನಿಗಳು  ತಮ್ಮ ಉತ್ಪನ್ನವನ್ನು ಹಿಂದಕ್ಕೆ ( ರಿಕಾಲ್) ಪಡೆದುಕೊಂಡಿದೆ.‌  ಆಗಷ್ಟ್‌ ತಿಂಗಳಲ್ಲಿ ಫೈಜರ್‌ ಕಂಪನಿಯು ತನ್ನ ಉತ್ಪಾದನೆಯನ್ನು ಸ್ವಯಂ ನಿರ್ಧಾರದಿಂದ ಹಿಂದಕ್ಕೆ ಪಡೆದುಕೊಂಡಿದೆ.

    ಕೇವಲ ಅಮೇರಿಕಾದಲ್ಲಿ ಮಾತ್ರವಲ್ಲದೆ ಇತರೆ ಹೆಚ್ಚಿನ ದೇಶಗಳು ಔಷಧಿ ನಿಯಂತ್ರಕ ಸಂಸ್ಥೆ ಹೊಂದಿವೆ. ಕೆಲವು ಇಂತಿವೆ.

    ಭಾರತ :  ಸೆಂಟ್ರಲ್‌ ಡ್ರಗ್ಸ್‌ ಕಂಟ್ರೋಲ್‌ ಆರ್ಗನೈಸೇಷನ್

    ಇಂಗ್ಲೆಂಡ್ :‌  ಮೆಡಿಸಿನ್ಸ್ ಅಂಡ್ ಹೆಲ್ತ್ ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರೀ ಏಜೆನ್ಸಿ

    ಆಸ್ಟ್ರೇಲಿಯಾ : ಥೆರೋಪೆಟಿಕ್ ಗೂಡ್ಸ್ ಅಡ್ಮಿನಿಸ್ಟ್ರೇಷನ್

    ಯುರೋಪ್  : ಯುರೋಪಿನ್ ಮೆಡಿಸಿನ್ಸ್ ಏಜೆನ್ಸಿ

    ಸ್ವೀಡನ್ : ಮೆಡಿಕಲ್ ಪ್ರಾಡಕ್ಟ್ಸ್ ಏಜೆನ್ಸಿ

    ಸೌತ್ ಆಫ್ರಿಕಾ : ಮೆಡಿಸಿನ್ಸ್ ಕಂಟ್ರೋಲ್ ಕೌನ್ಸಿಲ್

    ತಾಂಜಾನಿಯಾ : ತಾಂಜಾನಿಯಾ ಡ್ರಗ್ ಅಥಾರಿಟಿ

    ಸಿಂಗಾಪುರ್ : ಸೆಂಟರ್ ಫಾರ್ ಫಾರ್ಮಸ್ಯುಟಿಕಲ್ ಅಡ್ಮಿನಿಸ್ಟ್ರೇಷನ್ ಹೆಲ್ತ್ ಸೈನ್ಸಸ್ ಅಥಾರಿಟಿ

    ಕಳೆದ ಒಂದು ವರ್ಷದಲ್ಲಿ ಹಲವು ಫಾರ್ಮಾ ಕಂಪನಿಗಳಲ್ಲುಂಟಾದ ಷೇರಿನ ದರಗಳ ಬದಲಾವಣೆಗಳು:

    ಕಂಪನಿ ಹೆಸರುಸಧ್ಯದ ಪೇಟೆ ದರವಾರ್ಷಿಕ ಗರಿಷ್ಠವಾರ್ಷಿಕ ಕನಿಷ್ಠ
    ಸಿಪ್ಲಾ1,0331,083850
    ದಿವೀಸ್‌ ಲ್ಯಾಬ್‌3,5745,4253,366
    ಡಾಕ್ಟರ್‌ ರೆಡ್ಡೀಸ್‌4,0825,0783,655
    ಲುಪಿನ್‌632985583
    ಫೈಜರ್4,1916,0364,056
    ಗ್ಲಾಕ್ಸೋ1,4311,9171,372
    ಸನೋಫಿ6,0558,4286,000
    ಗ್ಲೆನ್‌ ಮಾರ್ಕ್‌ ಫಾರ್ಮ372551349
    ಝೈಡಸ್‌ ಲೈಫ್‌360572319
    ನ್ಯಾಟ್ಕೋ ಫಾರ್ಮ611973600
    ವೊಕಾರ್ಡ್‌257492201

    ಗಮನಿಸಬೇಕು:  ಮೇಲೆ ತೋರಿಸಿದ ಕಂಪನಿಗಳಲ್ಲಿ ಒಂದೊಂದು ಕಂಪನಿ ಒಂದೊಂದು ತರಹದ ಮುಖಬೆಲೆ ಹೊಂದಿರುವುದರಿಂದ ಹೋಲಿಕೆ ಮಾಡುವಾಗ ಅದನ್ನು ಸಮತೋಗಿ ನಿರ್ಧರಿಸಿರಿ.   ಲಾಭಾಂಶವನ್ನು ಶೇಕಡಾವಾರು ನಿರ್ಧರಿಸಲು ಷೇರಿನ ಮುಖಬೆಲೆ ಮುಖ್ಯ.

    ಹೀಗೆ ಅನೇಕ ಕಂಪನಿಗಳು ಹತ್ತಾರು ಅವಕಾಶಗಳನ್ನು ಸೃಷ್ಠಿಸಿಕೊಡುತ್ತವೆ.  ಅವಶ್ಯಕತೆ ಇದ್ದಾಗ ಸುಲಭಾವಾಗಿ ಅಂದಿನ ಪೇಟೆಯ ದರದಲ್ಲಿ ಮಾರಾಟ ಮಾಡಿ ನಗದೀಕರಿಸಿಕೊಳ್ಳಬಹುದಾಗಿದೆ.  ಹೂಡಿಕೆಯಾಗಿ ಮುಂದುವರೆಸಿಕೊಂಡು ಹೋದಲ್ಲಿ ಆಕರ್ಷಣೀಯ ಮಟ್ಟದ ಲಾಭಾಂಶ ಮುಂತಾದ ಕಾರ್ಪೊರೇಟ್‌ ಫಲಗಳನ್ನು ಪಡೆದುಕೊಳ್ಳಬಹುದು. 

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ಮೋದಿ ಜನ್ಮದಿನ: ಸಸಿ ನೆಟ್ಟ ನಟ ಅನಂತನಾಗ್

    BENGALURU SEP 16

    ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬದ ಅಂಗವಾಗಿ ಹಿರಿಯ ನಟ ಮತ್ತು ಮಾಜಿ ಸಚಿವ ಅನಂತನಾಗ್ ಅವರು ಕ್ಷೇತ್ರದ ಶಾಸಕ ಮತ್ತು ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರ ಜತೆಗೂಡಿ ಸದಾಶಿವ ನಗರದ ಪೂಜಾರಿ ಲೇಔಟ್ ನಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾದರು.

    ಬಳಿಕ ಮಾತನಾಡಿದ ಅವರು, “ಮೋದಿಯವರು ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಅವರ ನಾಯಕತ್ವವು ದೇಶಕ್ಕೆ ಹೊಸ ಚೈತನ್ಯ ತಂದಿದೆ. ಭಗವಂತನು ಅವರಿಗೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ” ಎಂದು ಹಾರೈಸಿದರು.

    “ಅಶ್ವತ್ಥ ನಾರಾಯಣ ಅವರು ಮಲ್ಲೇಶ್ವರಂ ಕ್ಷೇತ್ರದ ಶಾಸಕರಾಗಿ ನಿರಂತರ ಮೂರು ಅವಧಿಯಿಂದ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರವನ್ನು ಇವರು ಮಾದರಿ ರೀತಿಯಲ್ಲಿ ಅಭಿವೃದ್ಧಿ ಪಡಿಸುತ್ತಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕಾರ್ಯಕ್ರಮದಲ್ಲಿ ಅರುಣ್, ರಾಜೀವ್ ಮುಂತಾದವರು ಭಾಗವಹಿಸಿದ್ದರು.

    Indian Stock Market:ಚಂಚಲಚಿತ್ತ ಪೇಟೆಯಲ್ಲಿ VALUE PICK ಒಂದೇ ಕ್ಷೇಮ

    ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್‌ ನಿರಂತರವಾಗಿ ಏರಿಳಿತಗಳನ್ನುಂಟುಮಾಡುತ್ತಿದ್ದು ಅನಿರೀಕ್ಷಿತ ಮಟ್ಟದ ಬದಲಾವಣೆಗಳನ್ನು ಬಿಂಬಿಸುತ್ತಿದ್ದು ಅವಕಾಶಗಳನ್ನು ಕಾಲ್ಪನಿಕವೆಂದಿನಿಸುವಂತೆ ಶೀಘ್ರವಾಗಿ ಕಣ್ಮರೆಯಾಗುವಂತೆ ಮಾಡುತ್ತಿದೆ.  ಕೊರೋನಾ ಸಮಯದ ನಂತರದಲ್ಲಿ ಪೇಟೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಕಾಣುತ್ತಿದ್ದೇವೆ.  ಈ ರೀತಿಯ ಅಸ್ಥಿರ ವಾತಾವರಣಕ್ಕೆ ಕಾರಣವೇನು? ಎಂಬುದು ಎಲ್ಲರ ಮನದಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ.

    ಈಗಿನ ಪೇಟೆಗಳ ಚಲನೆಯನ್ನು ಪರಿಶೀಲಿಸಿದಾಗ ಅರಿವಾಗುವುದು ಅವು ಸೂಜಿ ಮತ್ತು ಪಿನ್‌ ಗಳ ಮೇಲೆ ನಿಂತಂತಿದೆ ಎಂಬ ಸಿಟಿ ಬ್ಯಾಂಕ್‌ ನವರ ಹೇಳಿಕೆ ಸಹಜತೆಯಿಂದ ಕೂಡಿದೆ ಎನಿಸುತ್ತದೆ.

    ಈ ವರ್ಷದ ಏಪ್ರಿಲ್‌ 29 ರಂದು 57,060 ರಲ್ಲಿದ್ದ ಸೆನ್ಸೆಕ್ಸ್‌  ಮೇ ತಿಂಗಳ ಮಧ್ಯಂತರದಲ್ಲಿ 52,800 ರ ಸಮೀಪಕ್ಕೆ ಕುಸಿದು ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.241.34 ಲಕ್ಷ ಕೋಟಿಗೆ ಮೇ 12 ರಂದು ತಲುಪಿತು. ಅಲ್ಲಿಂದ ಸೆನ್ಸೆಕ್ಸ್‌ ಪುಟಿದೆದ್ದು ಮೇ ಅಂತ್ಯದಲ್ಲಿ 56,000 ಪಾಯಿಂಟುಗಳ ಸಮೀಪಕ್ಕೆ ಏರಿಕೆ ಕಂಡಿತು.  ಜೊತೆಗೆ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.258 ಲಕ್ಷ ಕೋಟೆ ಮೀರಿತು. 

    ಜೂನ್‌ ತಿಂಗಳ 17 ರಂದು  ಮಧ್ಯಂತರದಲ್ಲಿ ಸೆನ್ಸೆಕ್ಸ್‌  50,921 ನ್ನು ತಲುಪಿ ವಾರ್ಷಿಕ ಕನಿಷ್ಠದ ದಾಖಲೆ ಬರೆಯಿತು.  ಅಂದಿನ ಮಾರ್ಕೆಟ್‌ ಕ್ಯಾಪಿಟಲೈಸೇಷನ್‌ ರೂ.239.18 ಲಕ್ಷ ಕೋಟಿಗೆ ಕುಸಿದಿತ್ತು.  ಆದರೆ ಜುಲೈ ತಿಂಗಳ ಅಂತ್ಯದಲ್ಲಿ ಸೆನ್ಸೆಕ್ಸ್‌ 57,570 ಪಾಯಿಂಟುಗಳೊಂದಿಗೆ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.266.58 ಲಕ್ಷ ಕೋಟಿಗೆ ಜಿಗಿಯಿತು.  ಅಂದರೆ ಏಪ್ರಿಲ್‌ ತಿಂಗಳ ಅಂತ್ಯದಲ್ಲಿ 57,000 ಪಾಯಿಂಟುಗಳಲ್ಲಿದ್ದುದು ಜೂನ್‌ ತಿಂಗಳ ಮಧ್ಯಂತರದಲ್ಲಿ 50,921 ಪಾಯಿಂಟುಗಳಿಗೆ ಕುಸಿದು ಮತ್ತೆ ಜುಲೈ ಅಂತ್ಯಕ್ಕೆ 57 ಸಾವಿರದ ಗಡಿ ದಾಟಿರುವುದು  ಹೂಡಿಕೆಯೆನಿಸದು.

      ಶುಕ್ರವಾರ ಸೆಪ್ಟೆಂಬರ್‌ 9 ರಂದು ಸೆನ್ಸೆಕ್ಸ್‌ 60,000 ದ ಗಡಿ ದಾಟಿ ಮತ್ತೆ ಹಿಂದಿರುಗಿ 59,793.14 ರಲ್ಲಿ ಕೊನೆಗೊಂಡಿದೆ.  ಅಂದಿನ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.283.03 ಲಕ್ಷ ಕೋಟಿಯನ್ನು ತಲುಪಿ ಸರ್ವಕಾಲೀನ ದಾಖಲೆ ನಿರ್ಮಿಸಿದೆ.  ಇದು ಒಂದು ರೀತಿಯ ವ್ಯವಹಾರಿಕತೆಗೆ ಪುಷ್ಠಿ ನೀಡುವಂತಹುದಾಗಿದೆ.   ಇಂತಹ ವಾತಾವರಣದಲ್ಲಿ ಅನೇಕ ಕಂಪನಿಗಳ ಷೇರಿನ ಬೆಲೆ ಚಲನೆಗಳನ್ನು ಹೆಸರಿಸಬಹುದು.  

    ಜೂನ್‌ 16, 2022 ರಂದು ಅಗ್ರಮಾನ್ಯ, ಪ್ರಮುಖ ಕಂಪನಿಗಳಾದ ಬಜಾಜ್‌ ಫೈನಾನ್ಸ್‌, ಸಿಯಟ್‌, ಗ್ಲೆನ್‌ ಮಾರ್ಕ್‌ ಫಾರ್ಮ,  ಗ್ರಾಫೈಟ್‌ ಇಂಡಿಯಾ, ಗ್ರಾಸಿಂ, ಗುಜರಾತ್‌ ಗ್ಯಾಸ್‌, ಹಿಂಡಾಲ್ಕೋ, ಹಿಂದೂಸ್ಥಾನ್‌ ಝಿಂಕ್‌, ಇಂಡಸ್‌ ಇಂಡ್‌ ಬ್ಯಾಂಕ್‌, ಇನ್ಫೋಸಿಸ್‌, ಎಲ್‌ ಐ ಸಿ ಹೌಸಿಂಗ್‌, ಎನ್‌ ಎಂ ಡಿ ಸಿ, ಸೇಲ್‌, ಟಾಟಾ ಸ್ಟೀಲ್‌, ಟೆಕ್‌ ಮಹಿಂದ್ರ, ಅಲ್ಟ್ರಾಟೆಕ್‌ ಮುಂತಾದವುಗಳು ವಾರ್ಷಿಕ ಕನಿಷ್ಠ ಮಟ್ಟಕ್ಕೆ ಇಳಿದವು.  ಆದರೆ ಕೇವಲ ಎರಡು/  ಮೂರು ತಿಂಗಳುಗಳಲ್ಲೇ ಅವು ಗಳಿಸಿಕೊಟ್ಟ ಅವಕಾಶಗಳು ಹೇಗಿತ್ತೆಂದರೆ  ಷೇರುಪೇಟೆಯಲ್ಲಿ ಇಷ್ಟು ಸುಲಭವಾಗಿ ಸಂಪಾದನೆ ಮಾಡಬಹುದೆಂಬ ಚಿಂತನೆಯಿಂದ ಮತ್ತಷ್ಟು ಹಣವನ್ನು ತೊಡಗಿಸಿರಲೂಬಹುದು. ಈ ಕಂಪನಿಗಳು ಯಾವ ರೀತಿಯಲ್ಲಿ ಪುಟಿದೆದ್ದವು ಎಂಬುದಕ್ಕೆ ಈ ಕೋಷ್ಠಕದ ಮೇಲೆ ಕಣ್ಣಾಯಿಸಿರಿ.

    ಕಂಪನಿ ಹೆಸರುಪೇಟೆಯ ಕನಿಷ್ಠ ದರ 16/06/2022ಪೇಟೆಯ ಗರಿಷ್ಠ ದರ 10/09/2022ವಾರ್ಷಿಕ ಕನಿಷ್ಠ ದರ
    ಬಜಾಜ್ ಫೈನಾನ್ಸ್5,365.607,320.005,235.60( 17/06)
    ಸಿಯಟ್911.101,431.25890(20/06)
    ಗ್ಲೆನ್‌ ಮಾರ್ಕ್‌ ಫಾರ್ಮ363388348.90 (20/06)
    ಗ್ರಾಫೈಟ್382.25408350.20(20/06)
    ಗ್ರಾಸಿಂ1,278.151,797.851,276.90(17/06)
    ಗುಜರಾತ್ ಗ್ಯಾಸ್421.85519.00403.80(23/06)
    ಹಿಂಡಾಲ್ಕೊ333.00430.60309(20/06)
    ಹಿಂದೂಸ್ಥಾನ್ ಝಿಂಕ್207.25291.90242.40(06/07)
    ಇಂಡಸ್‌ ಇಂಡ್‌ ಬ್ಯಾಂಕ್‌806.001,149.50763.75(23/06)
    ಇನ್ಫೋಸಿಸ್1,392.151,519.801,367.20(17/06)
    ಎಲ್  ಸಿ ಹೌಸಿಂಗ್‌309.00439.40291.75(20/06)
    ಎನ.ಎಂಡಿಸಿ107.45125.1099.60(15/07)
    ಹೆಚ್‌ ಡಿ ಎಫ್‌ ಸಿ ಬ್ಯಾಂಕ್‌1,278.001,509.001,271.75 (17/06)
    ಸೇಲ್66.6582.7563.60 (20/06)
    ಬಿ ಪಿ ಸಿ ಎಲ್‌310.35341.55293.50(21/06)
    ಟೆಕ್ ಮಹೀಂದ್ರ971.151,131.95971.15(16/06)
    ಅಲ್ಟ್ರಾಟೆಕ್5,2807,0275,158.05(17/06)

    ಈ ಪ್ರಮಾಣದ ಏರಿಕೆಯನ್ನು ಕೇವಲ ಒಂದೇ ತ್ರೈಮಾಸಿಕದಲ್ಲಿ ಪ್ರದರ್ಶಿಸಿರುವುದು ಉಳಿತಾಯಕ್ಕಿಂತ ಹೂಡಿಕೆಯಾಗಿಯೇ ಆಯ್ಕೆ ಮಾಡಿಕೊಳ್ಳುವುದು ಸುರಕ್ಷತೆಯ ದೃಷ್ಠಿಯಿಂದ ಸೂಕ್ತವಾಗಿದೆ.   ಉಳಿತಾಯವೆಂದರೆ ದೀರ್ಘಕಾಲೀನ ಚಿಂತನೆಯೊಂದಿಗೆ ಮಾಡಿ, ಸಮಯಬದ್ಧವಾಗಿ ಮಾಸಾಶನ ಒದಗಿಸುವುದಾಗಿದೆ.  

    ಅಂದರೆ ಷೇರುಪೇಟೆಯ ದೃಷ್ಠಿಯಿಂದ ಲಾಭಾಂಶವನ್ನು ಪಡೆಯುವುದಾಗಿದೆ.  ಆದರೆ ಅಲ್ಪಕಾಲೀನ ಸಮಯದಲ್ಲಿ ಅಪೂರ್ವವಾದ ಲಾಭ ಒದಗಿಸಿದಾಗ ನಗದೀಕರಿಸಿಕೊಂಡಲ್ಲಿ ಅದು ಲಾಭಗಳಿಕೆಗಾಗಿ ಹೂಡಿಕೆಮಾಡಿದಂತಾಗುತ್ತದೆ.  ಹಲವು ಬಾರಿ ದೊರೆತ ಲಾಭ ಗಳಿಕೆ ಅವಕಾಶವನ್ನು ಕಳೆದುಕೊಂಡಲ್ಲಿ ಮುಂದೆ ಬಂಡವಾಳಕ್ಕೇ ಕುತ್ತು ಬರಲು ಸಾಧ್ಯವಿದೆ.  ಕಾರಣ ಕಂಪನಿಗಳ ಸಾಧನೆಯು ಪೇಟೆಯಲ್ಲಾಗುವ ಬದಲಾವಣೆಗಳ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಷೇರುಪೇಟೆಯಲ್ಲಿ VALUE PICK  ಅಂದರೆ ಉತ್ತಮ ಷೇರಿನ ಬೆಲೆ ಕುಸಿತ ಕಂಡಾಗ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವುದು ಕ್ಷೇಮ.  

    ಕೆಲವೊಮ್ಮೆ ಅಪೂರ್ವ ಏರಿಕೆಯಿಂದ ಲಾಭ ಗಳಿಸಿಕೊಟ್ಟಾಗ ಅದನ್ನು PROFIT BOOK ಗೆ ಅಪೂರ್ವ ಅವಕಾಶವೆಂದು ನಗದೀಕರಿಸಿಕೊಳ್ಳುವುದು.   ಉಳಿತಾಯ ಮತ್ತು ಹೂಡಿಕೆಗಳ ಮೂಲ ಉದ್ದೇಶ ನಮ್ಮ ಹಣ ಸುರಕ್ಷಿತಗೊಳಿಸುವುದರೊಂದಿಗೆ ಲಾಭ ಗಳಿಸಿಕೊಳ್ಳುವುದು.  ಇಲ್ಲಿ ಕಾರ್ಪೊರೇಟ್‌ ಗಳ ಭವಿಷ್ಯವು ಅನೇಕ ಮಾನದಂಡಗಳಿಂದ ತೂಗುವುದರಿಂದ ಷೇರಿನ ಬೆಲೆಗಳು ಅದಕ್ಕನುಗುಣವಾಗಿ ಬದಲಾಗುತ್ತಿರುತ್ತವೆ.  ಹಾಗಾಗಿ ಅವಕಾಶಗಳನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದು ಸೂಕ್ತ.

    Disclaimer: ಇದು ಷೇರುಪೇಟೆಯ ಚಟುವಟಿಕೆಯಾಧರಿತ ಸುದ್ದಿ ವಿಶ್ಲೇಷಣೆ ಮಾತ್ರ . ಅಂತಿಮವಾಗಿ ಹೂಡಿಕೆ ನಿರ್ಧಾರ ಯಾವಾಗಲು ನಿಮ್ಮದೇ ಆಗಿರುತ್ತದೆ. ಅಂಕಣಕಾರರಾಗಲಿ ,ಕನ್ನಡಪ್ರೆಸ್ .ಕಾಮ್ ಆಗಲಿ ನಿಮ್ಮ ಹೂಡಿಕೆ ನಿರ್ಧಾರಗಳಿಗೆ ಜವಾಬ್ದಾರಿ ಆಗದು.

    ರಾಣಿಯಾಗುವುದೆಂದರೆ ʼರಾಣಿಯರ ಫೇರಿಟೇಲ್‌ ʼನಷ್ಟು ಸುಲಭವಲ್ಲ ಎಂದು ಜಗತ್ತಿಗೆ ತೋರಿಸಿದ ಎರಡನೇ ಎಲಿಝೆಬೆತ್‌

    ಮುಗಿಲಿನಲ್ಲಿ ಕರಿ ಮೋಡಗಳು ದಟ್ಟಯಿಸಿ, ಸೂರ್ಯನ ಶಕ್ತಿಯನ್ನು ಕ್ಷೀಣಗೊಳಿಸಿ, ಬಿಟ್ಟೂ ಬಿಡದೆ ಕಣ್ಣೀರು ಸುರಿಸುವಂತಹ  ವಾತಾವರಣದ ಒಂದು  ಸಾಧಾರಣ ನಿನ್ನೆಯದು.

    ಜಗಮಗಿಸಿದ ವಸಂತಕಾಲದಲ್ಲಿ ಇನ್ನೂ ಹಲವು ದಿನಗಳಿವೆ ಎಂದಿರುವಾಗಲೇ ಚಳಿಗಾಲದ ಕರಿ ಬೆಳಗನ್ನು ಕಂಡ ಇಂಗ್ಲೆಂಡಿನ ಜನರು ಹೌಹಾರಿ ಎಂದಿನಂತೆ ಹವಾಮಾನದ ಬಗ್ಗೆಯೇ ಚರ್ಚಿಸುತ್ತಿದ್ದರು.

     ಕರ್ಮ ಭೂಮಿಯಲ್ಲಿ  ಶುರುವಾಗಲಿರುವ ಶರತ್ಕಾಲದ ನಿರೀಕ್ಷೆಯಲ್ಲಿ  ಎಂದಿನ ವೃತ್ತಿಕರ್ಮಗಳನ್ನು ಮಾಡುತ್ತಿರುವಾಗಲೆ ಬಂದ ವಲಸಿಗ ರೋಗಿಯೊಬ್ಬ  

    “ ಕ್ವೀನ್‌ ಇಹ ಲೋಕ ತ್ಯಜಿಸುವ ಸೂಚನೆಗಳಿವೆ .. ಯಾವಾಗ ಬೇಕಾದರೂ” ಎಂದು ನಿರಾಯಾಸವಾಗಿ ಹೇಳಿದ.

    Queen is not well you know– ಎಂದು ಆ ವೇಳೆಗಾಗಲೆ ದುಗುಡದ ಭಾವದಲ್ಲಿ ನನ್ನ ಬ್ರಿಟಿಷ್ ದಾದಿ ‌ ವೇದನೆ ಪಡುತ್ತ ಉಸುರಿದ್ದಳು.“ರಾಣಿ ಸತ್ತರೆ ಎಷ್ಟು ದಿನಗಳ ರಜಾ ಸಿಗಬಹುದು“ ಎನ್ನುವುದನ್ನು ಆಗಾಗಲೇ ನಮ್ಮ ಜೊತೆ ಕೆಲಸ ಮಾಡುವ ಹಲವರು ಕಿರಿಯರು ಗೂಗಲಿಸಿದ್ದರು.‌

    ಸಂಜೆಯ ವೇಳೆಗೆ ಮುಗಿಲು ಹರಿದು ಸುರಿದಿತ್ತು.  ಎಪ್ಪತ್ತು ವರ್ಷ ರಾಣಿಯಾಗಿದ್ದ ತೊಂಬತ್ತಾರು ವರ್ಷದ ‌ ರಾಣಿ ಎರಡನೇ ಎಲಿಝೆಬೆತ್‌ ಕೊನೆಯುಸಿರೆಳೆದಿದ್ದರು.

    ಸುಪ್ರಸಿದ್ಧ ಟೈಮ್ಸ್ ನಿಯತಕಾಲಿಕದ ಮುಖ ಪುಟದಲ್ಲಿ 1920

    ಇಡೀ ದಿನ ರಾಣಿಯ ಆರೋಗ್ಯದ ಬಗ್ಗೆ ಒಂದೇ ಸಮನೆ ವರದಿ ನೀಡುತ್ತಿದ್ದ  ಮಾಧ್ಯಮಗಳಿಗೆ ಸಾವಿನ ಸುದ್ದಿಯನ್ನು  ಅಧಿಕೃತಗೊಳಿಸಲು ಅರಮನೆಯಿಂದ ಅನುಮತಿ ಸಿಕ್ಕಿತ್ತು. ಆ ಕೂಡಲೇ ವಿಷಯ ಮಿಂಚಿನ ವೇಗದಲ್ಲಿ ಜಗತ್ತನ್ನೆಲ್ಲ ವ್ಯಾಪಿಸಿತು.

    ಸೆಪ್ಟಂಬರ್‌ ಎಂಟನೇ ತಾರೀಖು ಸೂರ್ಯ ಮುಳುಗದ ಸಾಮ್ರಾಜ್ಯವೆಂದೇ ಖ್ಯಾತಿ  ಪಡೆದ ಇಂಗ್ಲೆಂಡಿನ ರಾಜ ಮನೆತನದ ರಾಣಿಯೊಬ್ಬಳು, ಅತಿ ದೀರ್ಘ ಕಾಲ ಸಾಮ್ರಾಜ್ಯವೊಂದರ ಮುಖಂಡಳಾಗಿ ಸೇವೆ ಸಲ್ಲಿಸಿದ ಖ್ಯಾತಿಯ ಕಿರೀಟ ಧರಿಸಿ  ಜಗಮಗಿಸುತ್ತಲೆ ಮುಳುಗಿಹೋಗಿದ್ದರು.

    ಇಡೀ ಭೂಮಂಡಲದಲ್ಲಿ ರಾಣಿಯೆಂದರೆ  ʼಇಂಗ್ಲೆಂಡಿನ ರಾಣಿ ʼ ಎಂದೇ ಮನೆಮಾತಾಗಿ, ಆ ಪದಕ್ಕೊಂದು ಜೀವತುಂಬಿದ್ದ ಶತಮಾನದ ಹತ್ತಿರದ ಜೀವವೊಂದು ಕೊನೆಯುಸಿರೆಳೆದಿತ್ತು. ಜಗತ್ತನ್ನು ಅದೆಷ್ಟೋ ಬದಲಾವಣೆಗಳಲ್ಲಿ ಎಲಿಝೆಬೆತ್ ಸ್ವೀಕರಿಸಿದಂತೆಯೇ, ಅವಳ ಸಾವು ಕೂಡ ಹಲವು ತಲೆಮಾರುಗಳ ಜನರಲ್ಲಿ ವೈವಿಧ್ಯಮಯ ‌ ಸಂವೇದನೆಗಳನ್ನು ಮೂಡಿಸಿತು.

    ಪತಿ ಫಿಲಿಪ್ ಜೊತೆ 1953

    ರಾತ್ರಿಯ ವೇಳೆಗೆ ಲಂಡನ್ನಿನ ಬಕಿಂಗ್ಯಾಮ್‌ ಅರಮನೆಯ ಬಳಿ ಮಳೆಯನ್ನೂ ಲೆಕ್ಕಿಸದೆ ತಂಡೋಪ ತಂಡವಾಗಿ ಸೇರಿದ ಜನ ರಾಣಿಯ ಸಾವಿಗಾಗಿ ಅಶ್ರುಧಾರೆ ಸುರಿಸಿದರು.  ಸಾಮಾಜಿಕ ಜಾಲತಾಣಗಳಲ್ಲಿ ಎಲಿಝೆಬೆತ್‌ ತನ್ನ  ಗಂಡ ಫಿಲಿಪ್ಪನನ್ನು ಸೇರಿದ ಬಗ್ಗೆ, ಆಕೆ ದೇಶಕ್ಕಾಗಿ ತನ್ನ ಬದುಕನ್ನೇ ಮೀಸಲಿಟ್ಟು ಸೇವೆ ಮಾಡಿದ ಬಗ್ಗೆ ಕೊಂಡಾಡುವ  ಕವನಗಳು ಹರಿದುಬಂದವು. ಮಾಧ್ಯಮ, ಟೀವಿ, ಸಾಮಾಜಿಕ ಜಾಲತಾಣಗಳು, ವಾಟ್ಸಾಪ್‌ ಗುಂಪುಗಳು, ವೈಯಕ್ತಿಕ ಮಾತುಕತೆಗಳಲ್ಲಿ ರಾಣಿ ಮತ್ತೆ ಮತ್ತೆ ಹುಟ್ಟಿಬಂದಳು.

    ಎರಡು ದಿನದ ಹಿಂದಷ್ಟೆ ಪ್ರಧಾನಿಯ ಪಟ್ಟಕ್ಕೆ ಹತ್ತಿಳಿವ ಆಟದಲ್ಲಿ ಜಯಗಳಿಸಿದ್ದ ಹೊಸ ಮತ್ತು ಮೂರನೇ ಮಹಿಳಾ ಪ್ರಧಾನಿ ಲಿಝ್ ಟ್ರಸ್ ಸ್ಕಾಟ್ಲ್ಯಾಂಡಿನ ಬಲಮೋರಲ್‌ ಅರಮನೆಯಲ್ಲಿ ರಾಣಿಯಿಂದ ಸರ್ಕಾರ ರಚಿಸಲು ಆಮಂತ್ರಣ ಪಡೆದಿದ್ದರು. ಜೀವನದ ಆಟದಲ್ಲಿ ಅಧಿಕಾರ ಬರುತ್ತದೆ ಮತ್ತು ಹೋಗುತ್ತದೆ ಆದರೆ ಕರ್ತವ್ಯ ನಿಭಾಯಿಸುವುದೇ ಮುಖ್ಯ ಎನ್ನುವ ಸಂದೇಶವನ್ನು ತನ್ನ ಇಳಿವಯಸ್ಸಿನಲ್ಲಿ ಯಶಸ್ವಿಯಾಗಿ, ಮಾತಿಲ್ಲದೆ ಹೊಸ ಪ್ರಧಾನಿಗೆ ರಾಣಿ ಅರುಹಿದ್ದರು.

    ಬೋರಿಸ್‌ ಜಾನ್ಸನ್ ತನ್ನ ರಾಜೀನಾಮೆ ಸಲ್ಲಿಸಿ ರಾಣಿಯನ್ನು ನೋಡಿ ಬಂದಿದ್ದ . ಅವರೊಡನೆ ನಿಂತು ತನ್ನ ಎಂದಿನ  ಸಿದ್ಧ ನಗು ಮುಖವನ್ನು ಹೊತ್ತು  ರಾಣಿ ಫೋಟೋ ತೆಗೆಸಿಕೊಂಡಿದ್ದರು. ಆ ಬೆಳಕಿನ ಝಲಕಿನಲ್ಲೂ ಅವಳ ಮುಖದ ಬೆಳಕು ಕುಂದುತ್ತಿರುವ ಲಕ್ಷಣಗಳು ಅಲ್ಲಿ ಸ್ಪಷ್ಟವಾಗಿದ್ದವು.

    ತನ್ನ ಅಧಿಕಾರಾವಧಿಯಲ್ಲಿ ಹದಿನೈದನೇ ಪ್ರಧಾನ ಮಂತ್ರಿಗೆ ಸರ್ಕಾರ ರಚಿಸಲು ಆಂಂತ್ರಣ ನೀಡಿದ್ದ ರಾಣಿ ಬೋರಿಸನಿಗೆ,  ಹೊರಹೋಗುತ್ತಿರುವವನು ನೀನೇ ಮೊದಲಲ್ಲ, ನಾನೂ ಶಾಶ್ವತಳಲ್ಲ ಎನ್ನುವ ಭಾವ ಬರಿಸಿದ್ದರೆ ಆಶ್ಚರ್ಯವಿಲ್ಲ.

    ಏನಾದರಾಗಲಿ ಇಂಗ್ಲೆಂಡಿನಲ್ಲಿ ಇಂತಹ ಆಧ್ಯಾತ್ಮಿಕ, ಪಾರಮಾರ್ಥಿಕ ಭೋದನೆಗಳು ವ್ಯಕ್ತವಾಗುವುದು ಕಡಿಮೆ. ಕರ್ತವ್ಯ ಪ್ರಜ್ಞೆ ಗೇ ಹೆಚ್ಚು ಒತ್ತು.  

     ಏಕೆಂದರೆ, ಆ ವೇಳೆಗಾಗಲೆ ರಾಣಿಯ ಅಂತ್ಯ ದಿನಗಳ ಪರಿಪೂರ್ಣ ಸಿದ್ದತೆ ನಡೆದಿತ್ತು.  “ರಾಜ -ರಾಣಿಯರಿಗೆ ಇಂತಹ ಸೇವೆ ಸಿಗುವುದು ಅವರ ದೌರ್ಭಾಗ್ಯವೇ ಸರಿ “ ಎನ್ನುವುದು ಈ ಹೊತ್ತಿನಲ್ಲಿ ಸ್ಮಶಾನ ವೈರಾಗ್ಯದಂತೆ ಓದಿಸಿಕೊಂಡರೂ ಅಚ್ಚರಿಯಿಲ್ಲ.

    ಸಾಮ್ರಾಜ್ಯವೊಂದರ ಪಟ್ಟದ ತಲೆ ಉರುಳಿದಾಗ ಅರಾಜಕತೆಯಾಗದಂತೆ ಸಕಲ ಸಿದ್ಧತೆಗಳೂ ನಡೆದಿದ್ದವು. ಆಕೆ ರಾಣಿಯಾಗಿ ಎಪ್ಪತ್ತು ವರ್ಷಗಳು ಸಂದ ಸುಸಂಧರ್ಭವನ್ನು ಈ ವರ್ಷದ  ಮಧ್ಯದಲ್ಲಾಗಲೇ ವಿಜೃಂಭಣೆಯಿಂದ ಆಚರಿಸಲಾಗಿತ್ತು. ಆಕೆಯ ಸಾವಿನಿಂದ ಉಂಟಾಗುವ ಶೋಕ, ಅಂತಿಮ ನಮನ ಸಲ್ಲಿಸಲು ಬರುವ ಜನರ ಭಾವೋದ್ರೇಕಗಳನ್ನು  ನಿಯಂತ್ರಿಸಲು  ಮತ್ತು  ಶಾಂತಿಯನ್ನು ಕಾಪಾಡಲು ಪಡೆಗಳನ್ನು ನಿರ್ಮಿಸಲಾಗಿತ್ತು. ಈ ಪಡೆಗಳಿಗೆ ವಿಶೇಷ ಹೆಸರುಗಳನ್ನು ನೀಡಲಾಗಿತ್ತು.

    ರಾಣಿ ಸ್ಕಾಟ್ಲ್ಯಾಂಡಿನಲ್ಲಿ ಸತ್ತರೆ ಅಲ್ಲಿ ನಡೆವ ಚಟುವಟಿಕೆಗಳಿಗೆ ʼ ಆಪರೇಷನ್‌  ಯೂನಿಕಾರ್ನ್ʼ ( ಇದು ಸ್ಕಾಟ್ಲ್ಯಾಂಡಿನ  ರಾಷ್ಟ್ರ ಪ್ರಾಣಿ)‌ ಎಂದೂ ಲಂಡನ್ನಿನಲ್ಲಿ ಕೈಗೊಳ್ಳುವ ಅಂತ್ಯ ಕ್ರಿಯೆಯ ಯೋಜನೆಗಳನ್ನು ʼಆಪರೇಷನ್‌ ಲಂಡನ್‌ ಬ್ರಿಡ್ಜ್‌ ( ಲಂಡನ್ನಿನ ಪ್ರಸಿದ್ಧ ಪ್ರೇಕ್ಷಣಾ ಸ್ಥಳ) ʼ ಎಂತಲೂ ಹೆಸರು ನೀಡಲಾಗಿತ್ತು. 

    ಈಗ ಬಾಕಿ ಉಳಿದಿರುವುದೆಂದರೆ ಈ ಪಡೆಗಳು ಬ್ರಿಟಿಷ್‌ ಸ್ಟಾಂಡರ್ಸ್ ಪ್ರಕಾರ ಅದನ್ನು ನಡೆಸುವುದನ್ನು ನೋಡುವುದು.

    ಇನ್ನೂ ಹತ್ತು ದಿನಗಳ ನಂತರ ನಡೆಯಬಹುದಾದ ಅಂತ್ಯ ಕ್ರಿಯೆ ರಾಣಿಯ ಬದುಕನ್ನು ಒಟ್ಟಾಗಿ ಅರಿಯಲು ಆರಂಭಿಸುವ ಹಲವು ಹೊಸತುಗಳನ್ನು ಸೃಷ್ಟಿಸುವುದರಲ್ಲಿ ಅನುಮಾನಗಳಿಲ್ಲ.

    ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ 2015ರಲ್ಲಿ

    ರಾಣಿಯ ಗತ್ತು, ಗೈರತ್ತು, ಮುಖಂಡಳ ಕರ್ತವ್ಯ ಪ್ರಜ್ಞೆ ಸೇವಾಭಾವ , ಸಂಸಾರದ ನಾಯಕಿಯ ಸಹನೆ ಮತ್ತು ಸಂಯಮ, ದೇಶವೊಂದರ ಪರಮೋಚ್ಛ ಅಧಿಕಾರದಲ್ಲಿ ಬರುವ ಸುಖ-ದುಃಖಗಳ ಸಂಭಾಳಿಕೆ, ಕಾಲ ತರುವ ಎಲ್ಲ ವೈಚಿತ್ರ್ಯಗಳನ್ನೂ ಬೆರಗು ಗಣ್ಣುಗಳಲ್ಲಿ, ಮಗುವಿನ ಮುಗ್ಧತೆಯಲ್ಲಿ  ಅರಗಿಸಿಕೊಂಡು ರಾಜನೀತಿಗಳು, ಮಕ್ಕಳು, ಸೊಸೆಯರು, ಸಂಬಂಧಿಗಳು ತರುವ ಕಳಂಕಗಳನ್ನು ವಿಷಕಂಟನಂತೆ ಹಿಡಿದಿಟ್ಟುಕೊಂಡು, ದ್ವೇಷಿಸುವವರನ್ನು ಬಗಲಲ್ಲೇ ಇಟ್ಟುಕೊಂಡು, ಹುಟ್ಟಿನಿಂದಾಗಿ ಬಂದ ಪಟ್ಟವನ್ನು  ಸಮತೂಕವಾಗಿ, ದಾಖಲೆ ವರ್ಷಗಳ ಕಾಲ ನಿರ್ವಹಿಸಿದ ಮಹಾ ಚೇತನ ಈ ಎರಡನೇ ಎಲಿಝಬೆತ್‌ ಎನ್ನುವುದರಲ್ಲಿ ಅತಿಶಯೋಕ್ತಿಗಳಿಲ್ಲ.

     ಆಕೆಯ ಸಾವಿನಲ್ಲಿ‌ ಮೇಲಿನ ಈ ಭಾವವೊಂದು ಜಗತ್ತಿನಲ್ಲಿ ಅನುರುಣಿಸುವುದಕ್ಕೆ ಕಾರಣವೆಂದರೆ ಆಕೆ  ತನ್ನ ಜೀವನವಿಡೀ   ಅದಕ್ಕಾಗಿ  ಅವಿರತ ಶ್ರಮಿಸಿರುವುದು.  ರಾಣಿಯಾಗುವುದೆಂದರೆ    ʼರಾಣಿಯರ ಫೇರಿಟೇಲ್‌ ʼ  ನಷ್ಟು ಸುಲಭವಲ್ಲ ಎಂದು ಜಗತ್ತಿಗೆ ತೋರಿಸಿರುವುದು.

    ರಾಣಿ ಎಲಿಝಬೆತ್‌ ಳಿಗೆ ಶ್ರದ್ಧಾಂಜಲಿ.

    error: Content is protected !!